ಸದಸ್ಯ:ಸಾಬಿರ ಬಾನು ಎಸ್/ನನ್ನ ಪ್ರಯೋಗಪುಟ

ಹುಟ್ಟು ; 24 ಸೆಪ್ಟೆಂಬರ್ 1861 ಸಾವು ; 13 ಆಗಸ್ಟ್ 1936 ( ವಯಸ್ಸು 74)
madam camaborn  ; 24 September 1861 navsari ,bombay presidency. british india died  ; 13 August 1936 (aged 74 ) Bumbay .bumbay presidency. british india Movement ; indian independece movement

ಮೇಡಂ ಭಿಖಾಜಿ ರುಸ್ತುಂಜಿ ಕಾಮಾ

ಬದಲಾಯಿಸಿ

ಬಾಲ್ಯ ಜೀವನ

ಬದಲಾಯಿಸಿ
        ಮೇಡಂ ಕಾಮಾ ಜನಿಸಿದ್ದು ಬಾಂಬೆ (ಈಗಿನ ಮುಂಬೈಯಿಯ) ರತ್ನಪಡಿ ವರ್ತಕರ ಪಾರ್ಸಿ ಕುಟುಂಬದಲ್ಲಿ ಜನಿಸಿದರು.ಭಿಖಾಜಿ ಕಾಮಾ ಅವರ ತಂದೆ ಸೊರಬ್ಜಿ ಪ್ರೇಮ್ಜಿ ಪಟೇಲ್ ತಾಯಿ ಜೈಜಿಬಾಯಿ ಸೊರಬ್ಜಿ ಪಟೇಲ್ ಅವರು ನಗರದಲ್ಲಿ ಚಿರಪರಿಚಿತರಾಗಿದ್ದರು.ಭಿಖಾಜಿ ಅವರು ಪಾರ್ಸಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣ ಮುಗಿಸುದರು.ಅವರು ವಿವಿಧ ವಿದೇಶೀ ಭಾಷೆಗಳಲ್ಲಿ ಪರಿಣಿತಿಯನ್ನು ಗಳಿಸಿಕೊಂಡರು.ಇದು ಮುಂದೊಂದು ದಿನ ಅವರಿಗೆ ಸಹಾಯವಾಯಿತ.ಶಿಕ್ಷಣ ಮುಗಿಸಿದ ಸ್ವಲ್ಪ ದಿನಗಳಲ್ಲಿಯೇ 1885 ಆಗಸ್ಟ 3 ಮುಂಬೈಯ ಖ್ಯಾತ ಸಾಲಿಸಿಟರ್ ಆದ ಶ್ರೀ ಭಿಖಾಜಿ ವಿಕ್ರಮ್ ಕಾಮಾರೊಂದಿಗೆ ವಿವಾಹವಾಯಿತು.ಅವರಬ್ ಪತಿ ಶ್ರೀಮಂತ ಬ್ರಿಟಿಷ್ ಪರ ವಕೀಲರಾಗಿದ್ದರು.ಅವರು ರಾಜಕೀಯ ಪ್ರವೇಶಿಸಲು ಇಚ್ಚಿಸಿದರು. ಸ್ವಲ್ಪ ಕಾಲದಲ್ಲೇ ಪತಿ-ಪತ್ನಿಯರ ನಡುವೆ ರಾಜಕೀಯ ವ್ಯತ್ಯಾಸಗಳು ತಲೆದೋರಿದವು. ಪತಿಗೆ ಸರ್ಕಾರದ ಪರ ವಹಿಸುವುದರಲ್ಲಿ ಆಸೆ-ಪತ್ನಿಗೆ ಸ್ವಾತಂತ್ರ್ಯ ಚಳುವಳಿ.ಕ್ರಾಂತಿಕಾರಿ ವಿಚಾರಗಳತ್ತ ಒಲವು.ಇದು ಸುಮಾರು ಕಾಲ ಹಾಗೆಯೇ ಮುಂದುವರೆಯಿತಾದರೂ.ಕಡೆಗೆ ಆವರು ವಿವಾಹ ವಿಚ್ಚೇದನ ಅನಿವಾರ್ಯವಾಯಿತು.ಭಿಖಾಜಿ ತನ್ನ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಲೋಕೋಪಕಾರಿ ಚಟುವಟಿಕೆಗಳು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಕಳೆದರು.[೧]

ಕ್ರೀಯಾಶೀಲತೆ

ಬದಲಾಯಿಸಿ

[೨] ಅಕ್ಟೋಬರ್ 1898 ರಲ್ಲಿ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ಲೇಗ್ ಮಾರಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತು.ಮೇಡಂ ಕಾಮಾ ಮೆಡಿಕಲ್ ಕಾಲೇಜಿನಿಂದ ಕೆಲಸ ಮಾಡುತ್ತಿರುವ ಅನೇಕ ತಂಡಗಳಲ್ಲಿ ಒಂದನ್ನು ಸೇರಿಕೊಂಡರು (ಇಧು ತರುವಾಯ ಹಾಪ್ಕೈನ್ಸ್ ಪ್ಲೇಗ್ ಲಸಿಕೆ ಸಂಶೋಧನಾ ಕೇಂದ್ರವಾಗಿ ಪರಿಣಮಿಸುತ್ತದೆ) ಭೀತಿಗೊಂಡ ಜನರು ಎಲ್ಲೆಂದರಲ್ಲಿ ಪಲಾಯನಗೈಯಲಾರಂಭಿಸಿದರು.ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮೇಡಂ ಕಾಮಾರ ಆಕರ್ಷಣೆಯೇ ಬೇರೆ ಆಗಿತ್ತು. ರೋಗಿಗಳ ದುಃಸ್ಧಿತಿಗೆಯಲ್ಲಿ ಕಂಡು ಮನಕಲಕಿತು.ತಮ್ಮ ಜೀವವನ್ನೇ ಒತ್ತೆಯಿಟ್ಟು ರೋಗಿಗಳ ಸೇವೆಗೆಂದು ಕಂಕಣ ಬದ್ಧರಾದರು.ಕಡೆಗೆ ಅವರು ಆ ಪರಿಸರದಿಂದ ಹೊರಬಂದಾಗ ಪ್ಲೇಗ್ ರೋಗಕ್ಕೆ ಬಲಿಯಾಗಲಿಲ್ಲ ನಿಜ.ಆದರೆ ಅದರ ಪರಿಣಾಮದಿಂದಾಗಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಚಿಕಿತ್ಸೆಗಾಗಿ ಅವರು '1902 ಫ್ರಾನ್ಸ್ ನ ಪ್ಯಾರಿಸ್ ಗೆ ಹೋದರು.ಅಂದಿನ ಪ್ಯಾರಿಸ್ ನಗರ ಫ್ಯಾಷನ್ ಗಾಗಿ ಜಗತ್ಪ್ರಸಿದ್ಧವಾಗಿತ್ತು.ಆದರೆ ಹಿಂದೊಮ್ಮೆ ತನ್ನ ಕ್ರಾಂತಿಕಾರಿ ಯೋಚನೆಗಳಿಗಾಗಿ ವಿಶ್ವವಿಖ್ಯಾತವಾಗಿದ್ದ ಈ ದೇಶದಲ್ಲಿ ರಾಜಕೀಯ ವಾತಾವರಣ ತಕ್ಕಮಟ್ಟಿಗೆ ತಣ್ಣಗಾಗಲಾರಂಭಿಸಿತ್ತು.ಅವರಿಗೆ ಗಮನ ಸೆಳೆದಿದ್ದು ರಾಜಕೀಯ ಚರ್ಚೆಗಳು. ಅವರನ್ನು ಆಕರ್ಷಿಸಿದ್ದು ಅಲ್ಲಿ ನೆಲೆಸಿದ್ದ ಭಾರತೀಯ ಕ್ರಾಂತಿಕಾರಿಗಳು.ಅವರ ಸಂಪರ್ಕದಿಂದಾಗಿ ಮುಂದೆ ಲಂಡನ್ನಿಗೆ ತೆರಳಿದ ಈಕೆ ಅಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಶ್ರೀ ಶ್ಯಾಮ ಕಿಶನ್ ವರ್ಮಾ ಅವರನ್ನು ಭೇಟಿಯಾದಾಗ.ಅವರ ಮೂಲಕ ಮೇಡಂ ಕಾಮಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ರಿಟಿಷ್ ಸಮಿತಿಯ ಅಧ್ಯಕ್ಷರಾಗಿದ್ದ ದಾದಾಬಾಯಿ ನವರೋಜಿ ಭೇಟಿಯಾದರು.[೩]

  ಸುಮಾರು ಇದೇ ಸಮಯಕ್ಕೆ ಅವರು ಯುರೋಪಿನ ಹಲವಾರು ದೇಶಗಳ ಕ್ರಾಂತಿಕಾರಿಗಳೊಂದಿಗೆ ಸ್ನೇಹ ಬೆಳೆಸಿದರು.ಪರಸ್ವರ ಚರ್ಚೆಗಳ ಮೂಲಕ ಅವರು ಕಂಡುಕೊಂಡ ವಿಷಯವೆಂದರೆ ಭಾರತೀಯ ಕ್ರಾಂತಿಕಾರಿಗಳಿಗೆ ಬಹು ಅಗತ್ಯವಿದ್ದದ್ದು ಕ್ರಾಂತಿಕಾರಿ ಸಾಹಿತ್ಯ ಮತ್ತು ಶಸ್ತ್ರಾಸ್ತೃಗಳು.ಮೇಡಂ ಕಾಮಾ ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಂಡರು .ಹಬ್ಬ ಹರಿದಿನಗಳಂದು ಸ್ವಾತಂತ್ರ್ಯ ಯೋಧರಿಗೆ ಕಾಣಿಕೆ, ಉಡುಗೊರೆಗಳನ್ನು ಕಳುಹಿಸಲಾರಂಭಿಸಿದರು.ಬಹಿರಂಗವಾಗಿ ಆಟದ ಸಾಮಾನು ಉಡುಗೊರೆಗಳಂತೆ ಕಾಣುವ ಈ ವಸ್ತುಗಳಲ್ಲಿ ಒಳಗೆ ನಿಷಿದ್ಧ ಸಾಹಿತ್ಯ-ಶಸ್ತ್ರಾಸ್ತ್ರಗಳನ್ನು ಅಡಗಿಸಿಡಲಾಗುತ್ತಿತ್ತು! ಬ್ರಿಟಿಷ್ ಸರ್ಕಾರ ಅದನ್ನು ಕಂಡುಹಿಡಿದು ಅವರ ಅಂಚೆಯನ್ನು ಮಧ್ಯದಲ್ಲೇ ತಪಾಸಣೆ ಮಾಡಲಾರಂಭಿಸಿದಾಗ ಅವರು ಆ ವಸ್ತುಗಳನ್ನು ಫ್ರಾನ್ಸ್ ಅಧೀನದಲ್ಲಿದ್ದ ಪಾಂಡಿಚೇರಿಯ ಮೂಲಕ ಕಳುಹಿಸಲಾರಂಭಿಸಿದ್ದರು! ಈ ಪಿಸ್ತೂಲುಗಳನ್ನು ಹೊಂದಿದ್ದ ಕ್ರಾಂತಿಕಾರಿ ನೇತಾರರನ್ನು ಬ್ರಿಟಿಷ್ ಸರ್ಕಾರ ಬಂಧಿಸಿದಾಗ ಅವರನ್ನು ಬಿಡುಗಡೆಗೊಳಿಸಿ ಈ ಶಸ್ತ್ರಾಸ್ತ್ರಗಳನ್ನು ತಾವೇ ಕಳುಹಿಸಿಕೊಟ್ಟಿದ್ದೆಂದು ಧೈರ್ಯವಾಗಿ ನುಡಿದು ತಲೆ ಎತ್ತಿನಿಂತ ಧೀರೆ ಆಕೆ!
    1907 ಆಗಸ್ಟ್ ದಲ್ಲಿ ಭಾರತದಲ್ಲಿ ಇತಿಹಾಸದಲ್ಲೇ ಅತೀ ಮಹತ್ವವಾದ ಘಟನೆಯೊಂದು ಜರ್ಮನಿಯ ಸ್ಫೂಗರ್ಟಯಲ್ಲಿ ನಡೆಯಿತು.ಅಲ್ಲಿ ನಡೆದ ವಿಶ್ವಸಮಜವಾದಿ ಸಮೇಳನ ದಲ್ಲಿ ಪ್ರತಿನಿಧಿಯಾಗಿ ಮೇಡಂ ಕಾಮಾ ಹೋಗಿದ್ದರು.ಅದು ಅತಿ ಅಪರೂಪದ ಕ್ರಾಂತಿಕಾರಿಗಳನ್ನೊಳಗೊಂಡ ಆಪರೂಪದ ಸಮಾವೇಶ.ಸಮಾಜವಾದಿ ರಷ್ಯಾದ ಶಿಲ್ಪಿ ಲೆನಿನ್,ಜರ್ಮನಿಯ ಜೆಟ್ ಕಿನ್,ಪೋಲೆಂಡಿನ್ ಹೋರಟಗಾರ್ತಿ ರೋಸಾಲುಕ್ಸೆಂಬರ್ಗ್ ಮುಂತಾದ ಮಹನೀಯರೊಡನೆ ಈ ಸಮ್ಮೇಳನದಲ್ಲಿ ಕಾಮ ಭಾಗವಹಿಸಿದ್ದರು.ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯನ್ನು ಊದಲು ಅದಕ್ಕೆ ವಿಶ್ವಬೆಂಬಲ ದೊರಕಿಸಿಕೊಳ್ಳಲು ಇದೆ ಸದವಕಾಶವೆಂದು ಮನಗಂಡು ಮೇಡಂ ಕಾಮ ಅಲ್ಲಿ ತಮ್ಮ ಭಾಷಣವನ್ನುಪ್ರಾರಂಭಿಸುವ ಮುನ್ನ ಭಾರತದ ಧ್ವಜವನ್ನು ಹಾರಿಸಿದರು.ಸೇರಿದ್ದ ಪ್ರತಿನಿಧಿಗಳಿಗೆ ಮನಮುಟ್ಟುವಂತೆ ಭಾರತದಲ್ಲಿ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯ.ಶೋಷಣೆ.ದಬ್ಬಾಳಿಕೆ ಭಾರತೀಯರ ದುಃಖದಾಯಕೆ ದಾಸ್ಯಾದ ದೃಷ್ಟಾಂತವನ್ನು ಚಿತ್ರಿಸಿದರು.ಅದರ ಬಳಿಕ ಅವರು ಎಲ್ಲೇ ಮಾತನಾಡಿದರೂ ಹಸಿರು.ಹಳದಿ.ಕೆಂಪು ಪಟ್ಟಿಗಳ ಮಧ್ಯೆ ದಪ್ಪಕ್ಷರಗಳಲ್ಲಿ ಉಲ್ಲೇಖಿತವಿದ್ದ ವಂದೇ ಮಾತರಂ ಇದ್ದ ಆ ರಾಷ್ಟ್ರಾ ಧ್ವಜದ ಕೆಳಗೆ ನಿಂತು ಮಾತನಾಡುವ ಪರಿಪಾಠವನ್ನು ಬೆಳಸಿಕೊಂಡರು.ಯೂರೋಪಿನ ವಿವಿಧ ರಾಷ್ಟ್ರಗಳಲ್ಲಿ.ಅಮೇರಿಕಾದಲ್ಲಿ ಮಾತನಾಡಿ  ಸ್ವಾತಂತ್ರ್ಯಚಳುವಳಿಗೆ ಜನ ಬೆಂಬಲ ಗಳಿಸಿಕೊಂಡರು.ತಮ್ಮದೇಶದ ಜನತೆ ಹಸಿವಿನಿಂದ ಸಾಯುತ್ತಿದ್ದರೂ ಸಹ ದೇಶದ ಸ್ವಾತಂತ್ರ್ಯ ಹೋರಾಟ ಜೀವಂತವಾಗಿದ್ದು ಸ್ವಲ್ಪದರಲ್ಲೇ ತಮ್ಮ ದೇಶದ ಸ್ವತಂತ್ರವಾಗುವುದೆಂಬ ನಂಬಿಕೆಯನ್ನು ದೃಡಪಡಿಸಿದರು.
   ಈ ಸಮಯದಲ್ಲಿ ಮೇಡಂ ಕಾಮಾ ಅವರು 1907 ರಲ್ಲಿ ಲಂಡನ್ನಿನಲ್ಲಿ ಮಾಡಿದ ಭಾಷಣವೊಂದರ ಪ್ರತಿಗಳು ಭಾರತಕ್ಕೆ ಬಂದಾಗ ಇಲ್ಲಿನ ಕ್ರಾಂತಿಕಾರಿಗಳಿಗೆ ಅದು ಸ್ಪೂರ್ತಿ ತುಂಬಿತು;ಅವರೆಲ್ಲರಿಗೆ ಪವಿತ್ರ ಗ್ರಂಥವಾಗಿ ಪರಿಣಮಿಸಿತು.ಅನ್ಯಾಯವು ಎಂದಿದ್ದರೂ ಅನ್ಯಾಯವೇ ಮತ್ತು ದೌರ್ಜನ್ಯ ಕಿರುಕುಳಗಳು,ದೌರ್ಜನ್ಯ-ಕಿರುಕುಳಗಳೇ ಹೊರತು ಬೇರೇನೂ ಅಲ್ಲ ಎನ್ನುತ್ತಕ್ರಾಂತಿಯ ಸಾಫಲ್ಯಕ್ಕಾಗಿ ಹೋರಾಡುವುದೇ ನಿಜವಾದ ದೇಶಾಭಿಮಾನದ ಅರ್ಥ ಎಂದರಾಕೆ.ಯುವಜನರಿಗೆ ಅವರು ನೀಡಿದ ಕರೆ.ಮುನ್ನುಗ್ಗು ಗೆಳೆಯ,ಅಸಹಾಯಕರಾಗಿ ಸಾಯುತ್ತಿರುವ ನಿನ್ನ ಒಲವಿನ ಮಾತೃಭೂಮಿಯ ಮಕ್ಕಳನ್ನು ನೀನು ನೈಜವಾದ ಸ್ವಾತಂತ್ರ್ಯದೆಡೆಗೆ ಕರೆದೊಯ್ಯಬೇಕು.ನೆನಪಿರಲಿಭಾರತೀಯರಿಗಾಗಿ ಭಾರತ ಇದಕ್ಕಾಗಿ ನಾವೆಲ್ಲರೂ ಹೋರಾಡಬೇಕು.ಇದೇ ನಮ್ಮ ಗುರಿ
  ಈ ರೀತಿಯಾಗಿ ಅಷ್ಟು ದೂರದಿಂದಲೇ ಭಾರತದ ನವ ಯುವಕರಿಗೆ ಸ್ಫೂರ್ತಿ ತುಂಬಿ ಅವರಿಗೆ ಮಾರ್ಗದರ್ಶಣಾ ನೀಡಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಹೋರಟ ಬೆಳೆಸುತ್ತಿರುವ ಈಕೆಯ ಮೇಲೆ ಕಡೆಗೂ ಪೋಲೀಸ್ ಹದ್ದಿನ ಕಣ್ನು ಬಿತ್ತು.ಅವರನ್ನು ನೆರಳಿನಂತೆ ಹಿಂಬಾಲಿಸಲು ಪೋಲಿಸ್ ರನ್ನು ನೇಮಿಸಲಾಯಿತು. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ.ಅಷ್ಟೇ ಧೈರ್ಯದಿಂದ ತಮ್ಮ ಭಾಷಣಗಳನ್ನು.ಇತರ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದರು.ಜತೆಗೆ 'ತಲವಾರ್'(ಖಡ್ಗ) ಮತ್ತು 'ವಂದೇ ಮಾತರಂ' ಪತ್ರಿಕೆಗಳಲ್ಲಿ ತಮ್ಮ್ಖಲೇಖನಗಳ ಮೂಲಕ ಬ್ರಿಟಿಷರ ಮೇಲೆ ತಮ್ಮ ಸತತ ದಾಳಿ ಮುಂದುವರೆಸಿದರು.ಯಾವುದೇ ನಿರ್ಬಂಧಕ್ಕೂ ಮಣಿಯದೆ ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋದರು,

  ಭಾರತದಲ್ಲಿ ಬ್ರಿಟಿಷ್ ಸರ್ಕಾರ ಕರಾಳ 'ಪತ್ರಿಕೆ ಕಾಯ್ದೆ'ಯನ್ನು ಹೊರಡಿಸಿ ಆ ಮೂಲಕ ಪತ್ರಿಕಾ ಸ್ವತಂತ್ರ್ಯವನ್ನು ಹರಣಗೊಳಿಸಲು ಪ್ರಯತ್ರಿಸಿತು.ಅನೇಕ ಖ್ಯಾತ ಪತ್ರಕರ್ತರನ್ನು. ಪತ್ರಿಕಾ ಸಂಪಾದಕರನ್ನು ಜೈಲಿಗೆ ಹಾಕಿತು. ಈ ವೇಳೆಗೆ ಸರ್ಕಾರದ. ಈ ಕೃತ್ಯದಿಂದಾಗಿ ಅನೇಕ ಖ್ಯಾತ ಪತ್ರಕರ್ತರನ್ನು.ಪತ್ರಿಕೆಗಳು ಮುಚ್ಚಿ ಹೋದವು.ಈ ಸಂದರ್ಭದಲ್ಲಿ ದೂರದ ಪ್ಯಾರಿಸ್ಸಿನಿಂದ ವಕೀಲರ ಸಹಾಯ ಕಳಿಸಿಕೊಟ್ಟು ಇಲ್ಲಿ ಕ್ರಾಂತಿಕಾರಿಗಳಿಗೆ ಸಹಾಯ ಮಾಡಿದರು ಮೇಡಂ  ಕಾಮಾ. ಸಾತಂತ್ರ್ಯಕ್ಕಾಗಿ ಹಂಬಲಿಸುತ್ತಿರುವ ಜನತೆಯ ಭಾವನೆಗಳಿಗೆ ಧ್ವನಿಕೊಡಬೇಕೆಂಬುದೇ ಅವರ ಉದೇಶವಾಗಿತ್ತು.ಆದ ಕಾರಣ ಈ ನಿಟ್ಟಿನಲ್ಲಿ ಶ್ರಮಿಸಿ ಭಾರತೀಯರಿಗೆ ಸಾಹಿತ್ಯ ಒದಗಿಸಲೆಂದು ಪ್ಯಾರಿಸ್ಸಿನಲ್ಲಿಯೇ ಒಂದು ಮುದ್ರಣಾಲಯವನ್ನು ಸ್ಧಾಪಿಸಿ ಬಡವಾಗುತ್ತಿದ್ದ ಜನರ ದನಿಗೆ ಮತ್ತೆ ಜೀವ ತುಂಬಿದರು.ಮೇಡಂ ಕಾಮಾರ ಈ ಪ್ರೀತಿ.ವಿಶ್ವಾಸ.ನೆರವು.ಸಹಕಾರಗಳಿಂದ ಮನತುಂಬಿ ಬಂದ ಜನತೆ ಆಕೆಗೆ ಭಾರತದ ಕ್ರಾಂತಿಯ ಮಾತೆ ಎಂದು ಗೌರವಿಸಿದರು.

  ಆಂದಿನ ದಿನಗಳಲ್ಲಿ ಭಾರತೀಯ ಯುವಕರನೇಕರು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.ತಾವು ದೇಶಕ್ಕಾಗಿ ಏನನ್ನು ಮಾಡಲಾಗದೇನೋ ಎಂದು ಹಲುಬಿದ ಅವರಿಗೆ ಮೇಡಂ ಕಾಮಾ ಸ್ಪೂರ್ತಿ ತುಂಬಿದರು;ನೀವು ವಿದೇಶಗಳಲ್ಲಿದ್ದಷ್ಟು ಕಾಲ ವಿವಿಧ ಶಾರೀರಿಕ ಕಸರತ್ತು ತರಬೇತಿಗಳನ್ನು ಪಡೆದುಕೊಳ್ಳಿ.ನೇರವಾಗಿ ಗುಂಡು ಹಾರಿಸುವುದನ್ನು ಕಲಿಯಿರಿ.ಸ್ವಾತಂತ್ರ್ಯಕ್ಕಾಗಿ ಸದ್ಯದಲ್ಲೇ ನಡೆಯಲ್ಲಿರುವ ಹೋರಾಟದಲ್ಲಿ ನೀವು ನಿಮ್ಮ ಮಾತೃಭೂಮಿಯನ್ನು ಸೆರೆಯಿಂದ ಬಿಡಿಸಲು ಬ್ರಿಟಿಷರ ಮೇಲೆ ಗುಂಡು ಹಾರಿಸಲು ಇದು ಉಪಯುಕ್ತವಾಗುವುದು.ಅವರ ಈ ಲೇಖನ ಯುರೋಪ್-ಅಮೇರಿಕ ಖಂಡಗಳಲ್ಲಿದ್ದ ಭಾರತೀಯರನ್ನು ಹುರಿದಂಬಿಸಿತು. 
  
  ಕೇವಲ ತಮ್ಮ ದೇಶಕ್ಕೆ ಸೀಮಿತವಾಗಿ ಉಳಿಯಲಿಲ್ಲ ಅವರ ಪ್ರೇಮ.ಕ್ರಮೇಣ ಅದು ಎಲ್ಲ ದೇಶಗಳ ಮರ್ದಿತರ ಹೋರಾಟಕ್ಕೂ ಸ್ಪಂದಿಸಲಾರಂಭಿಸಿತು.ಅವರ ಮನಸ್ಸು ಕೇವಲ ಸ್ವತಂತ್ರ ಭಾರತದ ಕನಸನ್ನು ಮಾತ್ರವಲ್ಲ ಇಡೀ ವಿಶ್ವದ ಜನತೆ ಶೋಷಣೆಯಿಂದ ಮುಕ್ತರಾಗುವ ದಿನವನ್ನು ಎದುರು ನೋಡಲಾರಂಭಿಸಿತು.`
    ಹೀಗೆ ತಮ್ಮ ಯೋಚನೆ ಹಾಗೂ ಕಾರ್ಯಚಟುವಟಿಕೆಗಳ ವರ್ತುಲವನ್ನು ಹಿರಿದುಗೊಳಿಸುತ್ತಾ ಮುನ್ನಡೆದರು ಮೇಡಂ ಕಾಮಾ.ಅವರು ಚಟುವಟಿಕೆಗಳು ಎಷ್ಟು ವ್ಯಾಪಕವಾಗಿದ್ದವೆಂದರೆ ಪೋಲಿಸ್ ಗುಪ್ತ ವರದಿಗಳಲ್ಲಿ ಉನ್ನತ ಅಧಿಕಾರಿಗಳೂ ಅಚ್ಚರಿಪಟ್ಟು ಅವರನ್ನು ಬಣ್ಣಿಸಿರುವ ರೀತಿ ಇದು; ಮೇಡಂ ಕಾಮಾರ ಉತ್ಸಾಹ-ಕ್ರಿಯಾಶೀಲತೆಗಳಿಗೆ ಈ ಇಡೀ ವಿಶ್ವವೇ ಆತಿ ಸಣ್ನದಾಗಿದೆ
   ಇಂತಹ ಅದ್ದ್ಭುತ ಮಹಿಳೆ ಅದರಲ್ಲೂ ಭಾರತೀಯ ಮಹಿಳೆಯ ಪ್ರಭಾವ ಇತರ ಮಹಿಳೆಯರ ಮೇಲೆ ಹೆಚ್ಚುತ್ತಾ ಹೋದರೆ.ಎಲ್ಲಿ ಉಳಿದಾವು ನಮ್ಮ ಆಳ್ವಿಕರ ಮಹಲುಗಳು? ಹೇಗೆ ಮರೆದಾವು ಹಳೆಯ ನಂಬಿಕೆ-ಸಂಪ್ರದಾಯಗಳು? ಮೇಡಂ ಕಾಮಾರನ್ನು ನಿಷ್ರ್ಕಿಯಗೊಳಿಸುವ ಪ್ರಯತ್ನದಲ್ಲಿ ಸರ್ಕಾರ ಅವರ ಒಂದು ಲಕ್ಷ ಬೆಲೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿತು.ಇಡೀ ವಿಶ್ವವನ್ನೇ ತನ್ನದಾಗಿಸಿಕೊಂಡಿರುವ ಜೀವಕ್ಕೆ ಒಂದು ಲಕ್ಷ ಬೆಲೆಯ ಆಸ್ತಿಯೂ ಒಂದು ಲೆಕ್ಕವೇ?ಮೇಡಂ ಕಾಮಾ ಅವರು ಕಾರ್ಯಗಳನ್ನು ಅಷ್ಟೇ ಹುಮ್ಮಸ್ಸಿನಿಂದ ಮುಂದುವರೆಸಿಕೊಂಡು ಹೋದರು.
 
        1920 ರಲ್ಲಿ ಹೆರಾಬೈ ಮತ್ತು ಮಿಥಾನ್ ಟಾಟಾ ಅವರನ್ನು ಭೇಟಿಯಾದ ನಂತರ.ಇಬ್ಬರು ಪಾರ್ಸಿ ಮಹಿಳೆಯರು ಮತದಾನದ ಹಕ್ಕಿನ ಬಗ್ಗೆ ಮಾತನಾಡುತ್ತಾ ಕಾಮಾ ದುಃಖದಿಂದ ತಲೆ ಅಲ್ಲಾಡಿಸಿದರು ಭಾರತೀಯರ ಸ್ವಾತಂತ್ರ್ಯ ಮತ್ತು ಅವಲಂಬನೆಗಾಗಿ ಕೆಲಸ ಮಾಡಿ. ಭಾರತ ಇರುವಾಗ ಸ್ವಾತಂತ್ರ ಮಹಿಳೆಯಾರಿಗೆ ಮತಧಾನ ಹಕ್ಕನ್ನು ಮತ್ತು ಇತರ ಎಲ್ಲ ಹಕ್ಕು ಬೇಕೆಂದು ಹೇಳಿದರು

ಗಡಿಪಾರು ಮತ್ತು ಸಾವು

ಬದಲಾಯಿಸಿ
  1914 ರಲ್ಲಿ ಮೊದಲನೆಯ ಮಹಾಯುದ್ಧ ಪ್ರಾರಂಭವಾದಾಗ, ಫ್ರಾನ್ಸ್ ಮತ್ತು ಬ್ರಿಟನ್ ಮಿತ್ರರಾಷ್ಟ್ರಗಳಾದವು, ಮತ್ತು ಕ್ಯಾಮಾ ಮತ್ತು ಸಿಂಗ್ ರೇವಾಭಾಯಿ ರಾಣಾ ಅವರನ್ನು ಹೊರತುಪಡಿಸಿ ಪ್ಯಾರಿಸ್ ಇಂಡಿಯಾ ಸೊಸೈಟಿಯ ಎಲ್ಲಾ ಸದಸ್ಯರು ದೇಶವನ್ನು ತೊರೆದರು (ಕ್ಯಾಮಾಗೆ ಸಹ-ಸಮಾಜವಾದಿ ಜೀನ್ ಲಾಂಗುಯೆಟ್ ಅವರು ಸಂಸದರೊಂದಿಗೆ ಸ್ಪೇನ್‌ಗೆ ಹೋಗಬೇಕೆಂದು ಸಲಹೆ ನೀಡಿದ್ದರು ತಿರುಮಲ್ ಆಚಾರ್ಯ ಮತ್ತು ರಾಣಾ ಅವರನ್ನು ಅಕ್ಟೋಬರ್ 1914 ರಲ್ಲಿ ಸಂಕ್ಷಿಪ್ತವಾಗಿ ಬಂಧಿಸಲಾಯಿತು, ಅವರು ಪಂಜಾಬ್ ರೆಜಿಮೆಂಟ್ ಪಡೆಗಳ ನಡುವೆ ಆಂದೋಲನಕ್ಕೆ ಯತ್ನಿಸಿದಾಗ ಮಾರ್ಸಿಲ್ಲೆಸ್ಗೆ ಮುಂಭಾಗಕ್ಕೆ ಆಗಮಿಸಿದ್ದರು. ಅವರು ಮಾರ್ಸೆಲ್ಲೆಸ್ ಅನ್ನು ತೊರೆಯಬೇಕಾಗಿತ್ತು, ಮತ್ತು ಕ್ಯಾಮಾ ನಂತರ ಅರ್ಕಾಚೊನ್ನಲ್ಲಿರುವ ರಾಣಾ ಅವರ ಹೆಂಡತಿಯ ಮನೆಗೆ ತೆರಳಿದರು. ಬೋರ್ಡೆಕ್ಸ್ ಬಳಿ. ಜನವರಿ 1915 ರಲ್ಲಿ, ಫ್ರೆಂಚ್ ಸರ್ಕಾರವು ರಾಣಾ ಮತ್ತು ಅವನ ಇಡೀ ಕುಟುಂಬವನ್ನು ಕೆರಿಬಿಯನ್ ದ್ವೀಪವಾದ ಮಾರ್ಟಿನಿಕ್ಗೆ ಗಡೀಪಾರು ಮಾಡಿತು, ಮತ್ತು ಕ್ಯಾಮಾ ಅವರನ್ನು ವಿಚಿಗೆ ಕಳುಹಿಸಲಾಯಿತು, ಅಲ್ಲಿ ಅವಳನ್ನು ಬಂಧಿಸಲಾಯಿತು. ಕೆಟ್ಟ ಆರೋಗ್ಯದಲ್ಲಿ, ಅವರನ್ನು ನವೆಂಬರ್ 1917 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಮರಳಲು ಅನುಮತಿ ನೀಡಲಾಯಿತು ಬೋರ್ಡೆಕ್ಸ್ ಅವರು ಸ್ಥಳೀಯ ಪೊಲೀಸರಿಗೆ ಸಾಪ್ತಾಹಿಕ ವರದಿ ನೀಡುವಂತೆ ಒದಗಿಸಿದರು. ಯುದ್ಧದ ನಂತರ, ಕ್ಯಾಮಾ ಪ್ಯಾರಿಸ್‌ನ ರೂ ಡಿ ಪೊಂಥಿಯು 25 ರಲ್ಲಿ ತನ್ನ ಮನೆಗೆ ಮರಳಿದರು.
   1914 ರಲ್ಲಿ ಪ್ರಥಮ ಜಾಗತಿಕ ಯುದ್ದ ಆರಂಭವಾದಾಗ ಯುದ್ಧದಲ್ಲಿ ಬ್ರಿಟಿಷರೊಡನಿದ್ಧ ಫ್ರಾನ್ಸ್ ಸರ್ಕಾರ ಬ್ರಿಟಿಷರ ಒತ್ತಡಕ್ಕೆ ಮಣಿದು ಮೇಡಂ ಕಾಮಾರ ಮೇಲೆ ನಿರ್ಬಂಧಗಳನ್ನು ಹೇರಿತು.ಕಡೆಗೆ ಅವರನ್ನು ಪ್ಯಾರಿಸ್ಸಿನಲ್ಲೂ ಇರಗೊಡಲಿಲ್ಲ.ಅವರನ್ನು ದೂರದ ಬೋರ್ಡೋನ ಪ್ರದೇಶಕ್ಕೆ ರವಾನಿಸಿತು ಜೊತೆಗೆ ವಾರಕ್ಕೊಮ್ಮೆ ಪೋಲಿಸ್ ಠಾಣೆಯಲ್ಲಿ ತಮ್ಮ ಹಾಜರಿಯನ್ನು ಸೂಚಿಸಬೇಕೆಂದು ಹೇಳಿ ಅವರಿಗೆ ತಾಕೀತು ಮಾಡಿತು. 

   ಮೇಡಂ ಕಾಮಾ ಈ ಬೋರ್ಡೋವಾಸದ ಅನಂತರ ಅವರ ಆರೋಗ್ಯಕ್ಕೆ ತೊಂದರೆ ಆಯಿತು.'ಗುಜರಾತಿ ಗದರ್'ಪತ್ರಿಕೆಯ ಪ್ರಪಂಚದಾದ್ಯಂತ ಹಂಚಲಾರಾಂಭಿಸಿದರು.ವಿಶ್ವದಾದ್ಯಂತ ಕ್ರಾಂತಿಕಾರಿಗಳೊಡನೆ ತಮ್ಮ ಪತ್ರ ಸಂಪರ್ಕವನ್ನು ಮುಂದುವರೆಸಿದರು.ರಷ್ಯಾದ ಕ್ರಾಂತಿಕಾರಿ ಲೆನಿನ್.ಜರ್ಮನಿಯ ರೋಸಾ ಲುಕ್ಸೆಂಬರ್ಗ್ ವಿಶ್ವವಿಖ್ಯಾತ ಸಾಹಿತಿ ಮ್ಯಾಕ್ಸಿಂಗಾರ್ಕಿ.ಇವರೆಲ್ಲ ಅವರ ಸ್ನೇಹಿತರು. ಇನ್ನು ಅವರ ಸಹಾಯ ಸಲಹೆಗಳು ಕೇವಲ ಭಾರತೀಯ ಕ್ರಾಂತಿಕಾರಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ.ಅದು ಈಜಿಪ್ಟ್.ತುರ್ಕಿಸ್ತಾನ,ಪರ್ಷಿಯಾದಿಂದ ಹಿಡಿದು ಚೀನದವರೆಗೂ ಹಬ್ಬಿತ್ತು.ಹೆಣ್ಣುಮಕ್ಕಳು ರಾಜಕೀಯದಲ್ಲಿ ಸಕ್ರಿಯಪಾತ್ರ ವಹಿಸಲಿ,ಅವರಿಗೆ ಪ್ರೇರಣೆ ದೊರಕಲಿ ಎಂಬ ಉದ್ದೇಶದಿಂದ ರಾಜಕೀಯ ಕಾರ್ಯ ಚಟುವಟಿಕೆಗಳಿಗಾಗಿ ವಿದೇಶಕ್ಕೆ ತೆರಳುವ ಭಾರತೀಯ ಹೆಣ್ಣು ಮಕ್ಕಳಿಗೆ ಒಂದು ರೂಪಾಯಿ ವಿದ್ಯಾರ್ಥಿ ವೇತನವನ್ನು ಘೋಷಿಸಿದ್ದಾರೆ ಕಾಮಾ.
  
    ತಮ್ಮ ದೇಹದಲ್ಲಿ ಕೊನೆಯುಸಿರಿರುವವರೆಗೂ ಅವಿರತವಾಗಿ ದುಡಿದರು;ಇತರರಿಗೆ ಸ್ಪೂರ್ತಿ ತುಂಬಿದರು;ಸಹಾಯ ಹಸ್ತ ನೀಡಿದರು.ತಮ್ಮ ಇಳಿವಯಸ್ಸಿನಲ್ಲಿ ಸ್ವದೇಶಕ್ಕೆ ಬರುವ ಆಸೆ ತೋರಿದಾಗ ಅವರಿಗೆ ಸರ್ಕಾರ ಒಡ್ಡಿದ ತಾಕೀತೆಂದರೆ ಅವರು ಅದುವರೆಗೂ ನಡೆಸಿದ ಚಟುವಟಿಕೆಗಳಿಗಾಗಿ ಪಶ್ಚಾತ್ತಾಪ ಪಟ್ಟು ಲಿಖಿತ ತಪ್ಪೋಪ್ಪಿಗೆ ಬರೆದುಕೊಡಬೇಕೆಂಬುದು.ಇದಕ್ಕೆ ಅವರು ಮನೆಯಲಿಲ್ಲ.ಕಡೆಗೆ ಸರ್ಕಾರವೇ ಸೋತು ಅವರನ್ನಿಲ್ಲಿಗೆ ಬರಮಾಡಿಕೊಂಡಿತು.ನಡುಗುವ ದೇಹ ಹೊತ್ತುಕೊಂಡೇ ಅವರು ಎಲ್ಲೆಡೆ ಓಡಾಡಿ ಭಾಷಣ ಮಾಡಿದರು.ಕುಸಿಯುತ್ತಿದ್ದ ಆ ಕೃಶ ದೇಹದೊಳಗೆ ಆ ಗಟ್ಟಿ ಹೃದಯ ಇನ್ನೂ ಜೋರಾಗಿ ಬಡಿಯಲಾರಂಭಿಸಿತು.ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರತಿಧ್ವನಿ ನೀಡಲಾರಂಭಿಸಿತು.ವರ್ಷಾನುಗಗಟ್ಟಲೆ ನಡೆಸಿದ ಶ್ರಮದಿಂದ ದಣಿದು ಅವರು 1936 ಆಗಸ್ಟ್ 13 ರಂದು ಮುಂಬಯಿಯ ಪಾರ್ಸಿ ಆಸ್ಪತ್ರೆಯಲ್ಲಿ ಮರಣ ಹೊಂದ್ದಿದರು.[೪]

ಉಲ್ಲೇಖನ

  1. https://www.britannica.com/biography/Bhikaiji-Cama
  2. https://en.wikipedia.org/wiki/Bhikaiji_Cama
  3. https://learn.culturalindia.net/bhikaiji-cama.html