ವಂದೇ ಮಾತರಮ್

(ವಂದೇ ಮಾತರಂ ಇಂದ ಪುನರ್ನಿರ್ದೇಶಿತ)

ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು.

Bankim Chandra Chattopadhyay
ವಂದೇ ಮಾತರಮ್

ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.

ವಂದೇ ಮಾತರಂ

ವಂದೇ ಮಾತರಂ!

ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ!

ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ

ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ!


ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ

ಕೋಟಿ-ಕೋಟಿ-ಭುಜೈರ್ದೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ

ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ!

ಸಂಪೂರ್ಣ ಗೀತೆ

ಬದಲಾಯಿಸಿ

ವಂದೇ ಮಾತರಂ

ವಂದೇ ಮಾತರಂ!

ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ!

ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ

ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ!

ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ

ಕೋಟಿ-ಕೋಟಿ-ಭುಜೈರ್ಧೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ

ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ!


ತುಮಿ ವಿದ್ಯಾ, ತುಮಿ ಧರ್ಮ, ತುಮಿ ಹೃದಿ ತುಮಿ ಮರ್ಮ, ತ್ವಂ ಹಿ ಪ್ರಾಣಾಃ ಶರೀರೇ, ಬಾಹು ತೇ ತುಮಿ ಮಾ ಶಕ್ತಿ

ಹೃದಯೇ ತುಮಿ ಮಾ ಭಕ್ತಿ, ತೋಮಾರಈ ಪ್ರತಿಮಾ-ಗಡಿ-ಮಂದಿರೇ, ಮಂದಿರೇ


ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ ಕಮಲಾ ಕಮಲಾದಲ-ವಿಹಾರಿಣೀ

ವಾಣೀ ವಿದ್ಯಾ-ದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ

ಸುಜಲಾಂ ಸುಫಲಾಂ ಮಾತರಂ, ವಂದೇ ಮಾತರಂ!


ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ! []

‘ವಂದೇ ಮಾತರಂ’ ಗೀತೆಯ ಭಾವಾರ್ಥ

ಬದಲಾಯಿಸಿ

ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ.ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ !

ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ !

ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ.

ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು.

ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.[][]

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ "ರಾಷ್ಟ್ರಗಾನ". Archived from the original on 2008-03-23. Retrieved 2006-09-29.
  2. ವಂದೇ ಮಾತರಂ’ ಗೀತೆಯ ಭಾವಾರ್ಥ