ಸದಸ್ಯ:ಸಹೃದಯ ಎಂ ಸಿ/ನನ್ನ ಪ್ರಯೋಗಪುಟ೧
ಮಂಗೇರಿರ ಚಿನ್ನಪ್ಪ ಮುತ್ತಣ್ಣ
ಬದಲಾಯಿಸಿಮೇಜರ್ ಮಂಗೇರಿರ ಚಿನ್ನಪ್ಪ ಮುತ್ತಣ್ಣ ರವರು ಭಾರತದ ಯುದ್ಧ ವೀರರಾಗಿ ಮೆರೆದವರು.
ಆರಂಭಿಕ ಜೀವನ
ಬದಲಾಯಿಸಿಮಂಗೇರಿರ ಚಿನ್ನಪ್ಪ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಚೆಟ್ಟಿಮನಿ ಗ್ರಾಮದಲ್ಲಿ ೨೧ ಏಪ್ರಿಲ್ ೧೯೬೪ ರಂದು ಜನಿಸಿದರು.
ಸೇನಾ ಸೇವೆ
ಬದಲಾಯಿಸಿಇವರು ಅಕ್ಟೋಬರ್ ೧೯೮೪ ರಲ್ಲಿ OTA, ಚೆನೈಗೆ ಸೇರಿದರು ಮತ್ತು ೨೪ ಅಕ್ಟೋಬರ್ ೧೯೮೫ ರಂದು ೫ನೇ ಬೆಟಾಲಿಯನ್ ಸಿಖ್ ಲಘುಪದಾತಿ ದಳಕ್ಕೆ ನಿಯೋಜಿಸಲ್ಪಟ್ಟರು. ಅವರು ೫ ಸಿಖ್ ಲಘು ಪದಾತಿ - Hq 1 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ಗೆ ಸೇವೆ ಸಲ್ಲಿಸಿದರು. ಅವರು ೧೨ ಜನವರಿ ೨೦೦೦ ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ ೩೬ ವರ್ಷ ವಯಸ್ಸಿನಲ್ಲಿ ನಿಧನರಾದರು.
ಮರಣೋತ್ತರ ಗೌರವ
ಬದಲಾಯಿಸಿಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರದೊಂದಿಗೆ ಗೌರವಿಸಲಾಯಿತು. ಅವರ ಸ್ಮರಣಾರ್ಥ ಮಡಿಕೇರಿ ನಗರ ಪಾಲಿಕೆ (CMC) ಮುಂಭಾಗದಲ್ಲಿ ಹುತಾತ್ಮರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಮತ್ತು ಟೌನ್ ಹಾಲ್ ಮುಂಭಾಗದ ಪುರಸಭೆಯ ವೃತ್ತಕ್ಕೆ ಅವರ ಹೆಸರನನು ೯ ಡಿಸೆಂಬರ್ ೨೦೧೦ ರಂದು ಗುರುವಾರ ನಾಮಕರಣ ಮಾಡಲಾಯಿತು. ಗ್ರಾನೈಟ್ ಕಲ್ಲಿನಿಂದ ಮಾಡಿದ ಪ್ರತಿಮೆಯನ್ನು ರೂ.೮ ಲಕ್ಷ ವೆಚ್ಚದಲ್ಲಿ ಸೋಮವಾರಪೇಟೆಯ ಬೀಟಿಕಟ್ಟೆಯ ಶಿಲ್ಪಿ ಮಂಜುನಾಥ ಆಚಾರ್ಯ ಅವರಿಂದ ಕೆತ್ತನೆ ಮಾಡಲಾಯಿತು. ಆನಂತರದಲ್ಲಿ, ಯೋಧನನ್ನು ನೇಮಿಸಿದ ಅನಂತನಾಗ್ ಜಿಲ್ಲಾ ಕೇಂದ್ರದ ೧ ಸೆಕ್ಟರ್ ಆರ್ಆರ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದ ಪ್ರೌಢಶಾಲೆಯನ್ನು ಮುತ್ತಣ್ಣ ಆರ್ಮಿ ಸದ್ಭಾವನಾ ಶಾಲೆ ಎಂದು ಹೆಸರಿಸಲಾಯಿತು.