ಸದಸ್ಯ:ಶ್ರೀಕೃಷ್ಣ ಭಟ್/ನನ್ನ ಪ್ರಯೋಗಪುಟ4
===ಶ್ರೀ ಕ್ಷೇತ್ರ ಸೌತಡ್ಕ===
ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಪರಿಸರ ಕೊಕ್ಕಡ. ಇಲ್ಲಿ ಅತ್ಯಂತ ಕಾರಣಿಕ ಕ್ಷೇತ್ರವೊಂದಿದೆ. ಆರಾಧನೆಗಾಗಿ ಭಗವಂತನ ವಿಶಿಷ್ಟ ಸನ್ನಿಧಾನಗಳನ್ನು ಪ್ರಾಚೀನರು ನಮಗಾಗಿ ನೀಡಿದ್ದಾರೆ. ಅಂತಹ ಸನ್ನಿಧಾನಗಳು ವಿಶಿಷ್ಟ ಕ್ಷೇತ್ರಗಳಾಗಿ ಬೆಳಗಿವೆ. ಅಂತಹ ಪ್ರಾಚೀನ ಕ್ಷೇತ್ರಗಳಲ್ಲಿ ಸೌತಡ್ಕದ ಗಣಪತಿ ಕ್ಷೇತ್ರವು ಅತ್ಯಂತ ಪ್ರಸಿದ್ಧವಾದುದು.
ಗೊಲ್ಲರು ಕಲ್ಲುಗಳ ರಾಶಿಯಲ್ಲಿ ಕಂಡ ಒಂದು ಗಣಪತಿಯ ದಿವ್ಯ ಮೂರ್ತಿಯನ್ನು ಪೂಜಿಸುತ್ತಿದ್ದರು. ಆ ಸಂದರ್ಭದಲ್ಲಿ ಭಕ್ತರು ಸೌತೆಕಾಯಿಯನ್ನು ಸಮರ್ಪಿಸುತ್ತಿದ್ದರು. ಇದೇ ಅನಂತರ ಸೌತಡ್ಕ ಕ್ಷೇತ್ರವಾಯಿತು. ಭಕ್ತರು ಬಯಸಿದ ಫಲಗಳನ್ನೆಲ್ಲಾ ಪಡೆದರು ಎಂಬುವುದಕ್ಕೆ ಸಾವಿರಾರು ನಿದರ್ಶನಗಳಿವೆ. ಗಣ ಹೋಮ, ಮೂಡಪ್ಪ ಸೇವೆ, ರಂಗಪೂಜೆ, ಅಪ್ಪ, ಪಂಚಕಜ್ಜಾಯ ಸಮರ್ಪಣೆ ಮಾಡುವುದು ಇಲ್ಲಿನ ಸೇವೆಯ ವೈಶಿಷ್ಟ್ಯ. ಅಭಿಷ್ಟ ಸಿದ್ಧಿಯನ್ನು ಹೊಂದಿದ ಭಕ್ತರು ಇಂತಹ ಸೇವೆಗಳನ್ನು ಮಾಡುವುದು ಈಗ ಅತ್ಯಂತ ಪ್ರಚಲಿತ ಪದ್ಧತಿಯಾಗಿದೆ. ಮನೋಭೀಷ್ಟ ಪ್ರದನಾದ್ದರಿಂದಲೇ ಈತನ ದರ್ಶನಕ್ಕೆ ದಿನೇ ದಿನೇ ಬರುವ ಯಾತ್ರಿಕರ ಸಂಖ್ಯೆಯು ಹೆಚ್ಚುತ್ತಿದೆ.
ನಮ್ಮೂರ ಸೌತಡ್ಕ ಗಣಪತಿ ಗೋಳವರ ಆಟದ ಮೂರ್ತಿಯಾಗಿ ನೆಲೆನಿಂತನಂತೆ. ಎರಡು ಮೂರು ಮರಗಳ ಬುಡದಲ್ಲಿ ಅಟ್ಟಿಯುಟ್ಟಿದ ಕಾಡು ಕಲ್ಲಿನ ರಾಶಿಯಲ್ಲಿ ತನ್ನ ಲೀಲೆಗಳಲ್ಲಿ ಸಂಗಾತಿಗಳಾಗಿರುವ ಶಿವ ಗಣದ ಇಬ್ಬರು ಸದಸ್ಯರೊಡನೆ ನೆಮ್ಮದಿಯಿಂದ ವಿಹರಿಸುತ್ತಿದ್ದಾನೆ. ವಿಶಾಲವಾದ ಬಯಲು ಪ್ರದೇಶದಿಂದ ತನ್ನ ನೆಲೆಯನ್ನು ಪೃಥಕ್ಕರಿಸಲು ಕಾಡು ಕಲ್ಲಿನ “ತಿಟ್ಟೆ”ಯಲ್ಲದೆ ಬೇರೆ ಏನೂ ಇಲ್ಲ. ಗಣಪತಿಯ ಈ ದುರಾವಸ್ಥೆಯನ್ನು ನೋಡಿ ಆಗಿನ ಕಾಲದ ಶ್ರೀಮಂತರೆನಿಸಿದ್ದ ಬ್ರಾಹ್ಮಣರೊಬ್ಬರಿಗೆ “ಕನಿಕರ ಬಂದು ಒಮ್ಮೆ ಒಂದು ದೇವಾಲಯ ಕಟ್ಟಬೇಕೆಂದು ಯೋಚಿಸಿದ್ದರಂತೆ. ಮರು ದಿನವೇ ಕೆಲಸ ಶುರು ಮಾಡುವುದೆಂದು ನಿಶ್ಚಯಿಸಿ ಕೆಲಸದ ವ್ಯವಸ್ಥೆಯನ್ನು ಮಾಡಿ ಬಂದಿದ್ದರಂತೆ”. ಬಡ ಗಣಪನಿಗೆ ತಾವು ಕಟ್ಟಿಸಲಿರುವ ದೇವಾಲಯದ ಶ್ರೀಮಂತ ಯೋಜನೆಯನ್ನು ಗೆಳೆಯರ ಹತ್ತಿರ ಅವರಿಗೆ ಕೇಳಲು ತಾಳ್ಮೆ ಇದ್ದಷ್ಟು ಹೊತ್ತು ಹೇಳಿ ಮತ್ತೆ ತನ್ನ ಹೆಂಡತಿಯೊಡನೆಯು ಸಾಕಷ್ಟು ಚರ್ಚಿಸಿ ಮಲಗಿದ್ದರು ಬೆಳಗ್ಗಿನ ಜಾವದಲ್ಲಿ ಒಂದು ಕನಸ ಕಂಡರಂತೆ. ಒಬ್ಬ ದನ ಕಾಯುವ ಹುಡುಗ ಒಂದು ಕೋಲು ಹಿಡಿದುಕೊಂಡು ಬೆದರಿಸಿಕೊಂಡು ಬಂದನಂತೆ. “ಏನಯ್ಯ, ನೀನು ನಮ್ಮ “ಗಂಪನನ್ನು” ಜೈಲಿನಲ್ಲಿ ಹಾಕಿಸ್ತೀಯಾ? ಎಚ್ಚರಿಕೆ! ದೇವಸ್ಥಾನ ಕಟ್ಟಿಸಲು ನಿಂಗೆ ತಾಕತ್ತಿದೆಯೇ? ಇದ್ದರೆ ಅವನ ಅಪ್ಪನಿಗೆ ಕಾಣೋ ಹಾಗೆ ಕಟ್ಟಿಸಬೇಕು, ಇಲ್ಲದೇ ಹೋದಲ್ಲಿ ನಿನ್ನ ಮಂಡೆ ಒಡೆದು ಹಾಕ್ತೀನಿ”. ಎಂದು ಕೊಂಡು ಹೊಡೆಯಲು ಬಂದನಂತೆ. ಆಗ ಭಟ್ಟರು ಕನಸಲ್ಲೇ ಹೆದರಿ ಚೀರಿಕೊಂಡು ರಭಸದಿಂದ ಹೆಂಡತಿಯ ಕೈ ಹಿಡಿದೆಳೆದು ಜಗ್ಗಲು ಅವಳ ಬಳೆಗಳೆಲ್ಲಾ ಹುಡಿಯಾದುವಂತೆ. ಗಾಬರಿಯಾಗಿ ಗಂಡನನ್ನು ಎಬ್ಬಿಸಿ ಸಮಾಚಾರವೇನೆಂದು ಕೇಳಲು ಬ್ರಾಹ್ಮಣನು ಕನಸಿನ ಲೋಕದಿಂದ ಮರಳಲು ತುಸು ಅವಕಾಶ ಪಡೆದು ಕಂಡ ಕನಸನ್ನು ವಿವರಿಸಿದರು. ಬೆಳಗಾಗುತ್ತಲೇ ಧರ್ಮಪತ್ನಿಯ ಸಲಹೆಯಂತೆ ಜೋಯಿಸರ ಮನೆಗೆ ಹೋಗಿ ಅರಿಕೆ ಮಾಡಿಕೊಳ್ಳಲು ಜೋಯಿಸರು ಕವಡೆ ತಿರುಗಿಸುತ್ತಾ “ಗೋವಳರ ನೆಚ್ಚಿನ ದೇವತೆಯಾದ ಗಣಪತಿಯೇ ಗೋವಳನ ವೇಷದಲ್ಲಿ ಕಾಣಿಸಿಕೊಂಡಿರುವನು. ಆದ್ದರಿಂದ ಆತನಿಗೆ ದೇವಾಲಯ ಕಟ್ಟಿಸುವುದು ಇಷ್ಟವಿಲ್ಲವಂದು, ಕಟ್ಟಿಸುವುದಿದ್ದರೆ ತಂದೆಯಾದ ಕಾಶಿ ವಿಶ್ವನಾಥನಿಗೆ ಕಾಣಿಸುವಂತೆ ಕಟ್ಟಬೇಕೆಂದು ಆತನ ಆಶಯವೆಂದು” ಸ್ವಪ್ನದ ವ್ಯಾಖ್ಯಾನವನ್ನು ಮಾಡಿದರು. ಗಣಪತಿಯ ಮಂದಿರದೊಂದಿಗೆ ತನ್ನ ಕೀರ್ತಿ ಶಿಖರವನ್ನು ಕಾಣಬೇಕೆಂದು ಬಯಸಿದ್ದ ಬ್ರಾಹ್ಮಣನು ಒಂದೆಡೆ ನಿರಾಶೆಗೊಂಡರೂ ಮತ್ತೊಂದೆಡೆ ತಾನು ಗಣಪತಿಯನ್ನು ಸ್ವಪ್ನದಲ್ಲಾದರೂ ಕಂಡೆನಲ್ಲಾ ಎಂದು ಹಿರಿ ಹಿರಿ ಹಿಗ್ಗಿದರು. ಪರಮಾತ್ಮನು ಭಕ್ತಾಧೀನ. ಭಕ್ತ ಗೋಪಾಲಕರಿಂದ ತನ್ನನ್ನು ದೂರವಿರಿಸುವ ಅಭದ್ರ ಮಂದಿರ ತನಗೇಕೆ ಎನಿಸಿತು. ಕಟ್ಟಿಸುವುದಿದ್ದರೆ ಕಾಶಿ ವಿಶ್ವನಾಥನಿಗೆ ತೋರುವಂತೆ ಕಟ್ಟಲಿ; ಹಾಗೆ ಕಟ್ಟುವಾಗ ಈ ಪ್ರಪಂಚವೇ ತಳಹದಿಯಾಗಬೇಕು. ಆಗ ಆ ಮಂದಿರವು ಆತನಿಗೆ ಬಂಧನವಾಗದು. ಆ ಮಂದಿರದಲ್ಲಿ ಭಕ್ತರೆಲ್ಲರೂ ಸಮಾವೇಶಗೊಳ್ಳುವರು. ಆಗ ಮಾತ್ರ ಅದು ಪ್ರಭು ಮಂದಿರ. ಗೋವಳರಿಗೆ ಒಲಿದು ಬಂದ ನಮ್ಮ ಗಂಪ ಮರದ ನೆರಳಲ್ಲಿ ನೆಲೆಯೋರಿದ ಮನಸ್ಸು ಬಂದಾಗ ಬಯಸಿದ ಹೊತ್ತಿಗೆ ಬೇಕಾದವರು ಈತನ ದರ್ಶನ ಪಡೆಯಬಹುದು. ದೇವಸ್ಥಾನಗಳಲ್ಲಿರುವಂತೆ ಇವನನ್ನು ಪೂಜಿಸಲು ವೈದಿಕ ವಿಧಾನ ತಿಳಿದಿರಬೇಕೆಂಬ ಕಟ್ಟಾಜ್ಞೆ ಇಲ್ಲ. ಪೂಜಾ ದ್ರವ್ಯಗಳು ಆಗಮದಲ್ಲೇ ತಿಳಿಸಿರುವಂತೆ ಪ್ರಮಾಣ ಪರಿಮಿತಿಯನ್ನು ಒಳಗೊಂಡಿರಬೇಕೆಂದಿಲ್ಲ. ಸೌತಡ್ಕದ ಗಣೇಶನಲ್ಲಿಗೆ ಹೋಗುವಾಗ ನಮ್ಮ ಹೃದಯವೊಂದೇ ಸಾಕು ಯಾವ ಹೊತ್ತಿಗೂ ಮುಕ್ತ ದ್ವಾರ ಇದೆ ಅಲ್ಲಿ. ಶಾಸ್ತ್ರೋಕ್ರವಾಗಿ ಮಾಡಿದ ಪೂಜೆಯನ್ನು ಸ್ವೀಕರಿಸಿದಷ್ಟೇ ಸಂತೋಷದಿಂದ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂತೋಷದಿಂದ ತಮ್ಮ ಭಕ್ತಿಯ ಮಾನಸ ಪೂಜೆಯನ್ನು ಸ್ವೀಕರಿಸುತ್ತಾನೆ. ಗಂಪನಿಗೊಬ್ಬನಿಗೆ ಬೇಸರವಾಗದಿರಲೆಂದು ಶಿವಗಣದ ಸದಸ್ಯರಿಬ್ಬರನ್ನು ಗೋವಳರೇ ಕರೆತಂದರೆಂದು ಹೇಳತ್ತಾರೆ. ಮತ್ತೆ ಕೆಲವರು ಸೌತೆಕಾಯಿ ಮೆಲ್ಲುವುದರಲ್ಲಿ ತನ್ನನ್ನೇ ಮರೆತಿದ್ದಗಂಪ ಕೈಲಾಸಕ್ಕೆ ತೆರಲಿಲ್ಲವಷ್ಟೇ. ಆಗ ಪಾರ್ವತಿ ಗಾಬರಿಯಾಗಿ ‘ದಕ್ಷಯಜ್ಞ’ದಲ್ಲಿ ಸೃಷ್ಟಿಯಾದ ವೀರಭದ್ರನನ್ನೇ ಕಳುಹಿಸಿದನಂತೆ. ಅವನು ಇಲ್ಲೇ ತಳವೂರಿದ ಎನ್ನುತ್ತಾರೆ. ಬಹುಶಃ ಇಂತಹ ಸ್ವಾತಂತ್ರ್ಯ ಅವರಿಗೆ ಕೈಲಾಸದಲ್ಲಿ ದೊರೆಯುತ್ತಿರಲಾರದೆಂದೂ, ಈ ಗೋವಳರಿತ್ತ ನಲ್ಮೆಯ ಸೌತೆಕಾಯಿಯ ಸವಿ ಆ ಕೈಲಾಸದ ಧವಲಚ್ಚನಿಯನ್ನು ಮರೆಯುವಂತೆ ಮಾಡಿತೋ ಹೇಳಲಾರೆವು. ಅಂತೂ ಈರ್ವರು ದೇವತೆಗಳೂ ಗಜಾನನ ಅತ್ತಿತ್ತ ಕತ್ತಲುಗಿಸದೆ ಭಕ್ತರಿತ್ತ ಭಾವ ಭಕ್ತಿಯ ಸುಮಗಳನ್ನು ಹೊತ್ತುಕೊಂಡು ಸುತ್ತಲೂ ಪಸರಿಸುವ ನಿರ್ನಿಮಿತ್ತ ಸುಪ್ತ–ಮತ್ತ ನಿಸರ್ಗದತ್ತ ಸೌಂದರ್ಯವನ್ನು ಆನಂದಮತ್ತವಾಗಿ ಸವಿಯುತ್ತಿರುವುದು ಮತ್ರ ಸತ್ಯ. ಸೌತಡ್ಕದಲ್ಲಿ ನೆಲೆನಿಂತ ಗಣೇಶನಿಗೆ ಮೊದಲು ಒಬ್ಬ ಕಾಯಂ ಅರ್ಚಕನಿರಲ್ಲ. ಮಾಡಿಲ್ಲ, ಮಠವಿಲ್ಲ. ಆದರೆ ಅವನಿಗೆ ಬಹುಶಃ ಪೂಜೆಯಿಲ್ಲದೆ ದಿನವಿಲ್ಲವೇ ಇಲ್ಲ. ಫೂಜೆ ಎಂದರೆ ಆತನಿಗೆ ಧೂಪ. ಧಿಪ ಮಂಗಳಾರತಿ, ನೈವೇದ್ಯಗಳು ಬೇಕಾಗಿಯೂ ಇಲ್ಲ. ದಾರಿಯಲ್ಲಿ ಹೋಗುವ ನೂರಾರು ಮಂದಿ ಭಕ್ತರನ್ನು ನಿರ್ಮಲ-ನಿರಭ್ರ ಆಕಾಶದಂತೆ, ತನ್ನೆಡೆಗೆ ಆಕರ್ಷಿಸುತ್ತಾನೆ. ಅವರ ಭಾವುಕತೆಯನ್ನು ಬೆಳಗುತ್ತಾನೆ. ಕೆಲವರು ಮೋದಕ, ಚಕ್ಕುಲಿ, ಲಾಡು, ಹೋಲಿಗೆಗಳನಿತ್ತರೆ ಕೆಲವರು ಗರಿಕೆ ಹುಲ್ಲಿನ ಮಾಲೆಯನ್ನಷ್ಟೇ ಅರ್ಪಿಸುತ್ತಾರೆ. ಇನ್ನು ಕೆಲವರು ಬರೇ ಪ್ರದಕ್ಷಿಣೆ ನಮಸ್ಕಾರಗಳನಷ್ಟೇ ಅರ್ಪಿಸುತ್ತಾರೆ. ಇನ್ನು ಕೆಲವರು ಗೆಇಕೆ ಹುಲ್ಲಿನ ಮಾಲೆಯನ್ನಷ್ಟೇ ಅರ್ಪಿಸುತ್ತಾರೆ. ಇನ್ನು ಕೆಲವರು ಬರೇ ಪ್ರದಕ್ಷಿಣೆ ನಮಸ್ಕಾರಗಳನಷ್ಟೇ ಅರ್ಪಿಸಿದರೆ ಮತ್ತೆ ಕೆಲವರು ನೂರೆಂಟು- ನೂರಿಪ್ಪತ್ತು ಎಲೆಯ ರಂಗಪೂಜೆ ಸಲ್ಲಿಸುವವರೂ ಇದ್ದಾರೆ. ವಸಂತದಲ್ಲಿ ವಿವಿದ ಭಕ್ಷ್ಯಗಳಿಂದ ಆತನನ್ನಾರಾಧಿಸಿ ಬಂಧುಬಾಂಧವರೊಡನೆ ಆತನ ಸನ್ನಿಧಿಯಲ್ಲಿ ಸಮಾರಾಧನೆ ನಡೆಸುವುದೂ ಇದೆ. ಸರ್ವಸಾಕ್ಷಿಯಾಗಿ ನಿರಾವರಣದಲ್ಲಿ ಕುಳಿತಿರುವ ಆತನೆದುರು ಕಲಾವಿದರು ತಮ್ಮ ಕಲೆಯ ಸಿದ್ದಿಗಾಗಿ ಇಡೀ ರಾತ್ರಿ ಸೇವೆ ಸಲ್ಲಿಸುವುದು ಇದೆ. ಊರಲ್ಲಿ ಏನೇ ಮದುವೆ ಹಬ್ಬ ನಡೆಯಲಿ ಸೌ.ಗಣಪಣಿಗೆ ರಂಗಪೂಜೆ ಸಲ್ಲುತ್ತದೆ. ಬೆಳೆ ಹಾಳಾಗದ ಹಾಗೆ, ಮಳೆ ಬಾರದಾಗ, ಮಳೆ ಹೆಚ್ಚಾದಾಗ ಜನರ ಯೋಗ ಕ್ಷೆಮವನ್ನು ನೋಡಿಕೊಳ್ಳಬಲ್ಲವನು ಈ ಮನೆ ಮಠವಿಲ್ಲದ ಛಯಾ ವಿಹಾರಿ. ದನಗಳಿಗೆ ಕಾಯಿಲೆ ಬರಲಿ, ಜನರಿಗೆ ಕ್ಷಾಮ ತೋರಲಿ ಆರ್ತ ತ್ರಾಣ ಪರಾಯಣನಾಗಿ ಸೌ ಗಣಪತಿಯೂ ಅಭಯದಾತನಾಗಿ ಎಲ್ಲರ ದಾರಿಗೂ ಬೆಳಕು ನೀಡುತ್ತಿರುವನು. ಅಹರ್ನಿಶಿ ಬೇಕೆಂದಾಗ ನಾವಾತನ ದರ್ಶನ ಪಡೆಯಬಲ್ಲೆವು. ಭಕ್ತಿಯಲ್ಲಿದ್ದುದನ್ನು ಅರ್ಪಿಸಬಲ್ಲೆವು. ಶಕ್ತಿಯಲ್ಲಿದ್ದುದನ್ನು ಒಪ್ಪಿಸಬಲ್ಲೆವು.ಮಳೆ ಬಿಸಿಲು ಗಾಳಿಗಳ ಪರಿವೇಯಿಲ್ಲದೆ ಕಾಲ ದೇಶಗಳ ವ್ಯಾಪ್ತಿ ಇಲ್ಲದೇ ಜಾತಿ ಖ್ಯಾತಿಗಳ ಗೊಡವೆಯೇ ಇಲ್ಲದೆ ಸರ್ವ ಸಮದರ್ಶಿತ್ವವು ಸಾರ್ಥಕವೆನಿಸುವಂತೆ ದೇವತ್ವವು ಅನವರ್ಥವಾಗಿರುವ ಈ ಮಹಾಮಹಿಮನಿಂದ ಸ್ಪೂರ್ಥಿ ಪಡೆಯದಿರಲು ಹೇಗೆ ಸಾಧ್ಯ. ಈಗ ನಮಗೆ ಸೌ. ಗಣಪತಿ ಎಂಬ ಶಿರೋನಾಮೆಯ ಅರ್ಥ ಸರಿಯಾಗಿ ತಿಳಿದಿರಬಹುದು. ಸೌ. ಎಂದಾಗ ಸೌಭಗ್ಯವತಿ ಎಂದು ಭ್ರಮಿಸಬಹುದು. ಅದು ಗಣಪತಿಯ ಜತೆಯಲ್ಲಿ ಬಂದಾಗ ಇನ್ನಷ್ಟು ಭ್ರಮೆ ಜಾಸ್ತಿ. ಪ್ರಪಂಚದಲ್ಲಿರುವ ಸ್ತ್ರಿ ವ್ಯಕ್ತಿಯಲೆಲ್ಲಾ ಮಾತೃತ್ವವನ್ನು ಕಂಡು ಮದುವೆಯಾಗದೆಯೇ ಉಳಿದ ಈತನಿಗೆ ತನ್ನ ಹೆಸರಿನ ಮುಂದೆ ಏಕೆ ಸೌ ಭಾಗ್ಯವತಿ ಎಂದು ಸೌತಡ್ಕದಲ್ಲಿನ ಸೌವನ್ನುಎಸ್ ಎಂಬುವುದಾಗಿ ಪರಿವರ್ತಿಸಲು ಆತನ ಸ್ವಾತಂತ್ರ್ಯ ಪ್ರೇಮ ವನ್ನರಿತವರು ಸರ್ವಥಾ ಒಪ್ಪಲಾರರೆಂಬುದು ನಿಜವಲ್ಲವೆ? ಹಿಂದೆ ಪುಡಿಗಲ್ಲಿನ ಕಟ್ಟೆ ಇತ್ತು. ಆ ಜಾಗಕ್ಕೆ ಮೊದಲು ಕಡಿದ ಕಗ್ಗಲ್ಲು ಬಂತು, ಬಾವಿ ಆಯಿತು, ಉಗ್ರಾಣ ಬಂತು, ಒಮ್ಮೆ ಕೋಟಿ ನಾಮಾರ್ಚನೆ ನಡೆಯಿತು. ಆಗ ಕ್ಷೇತ್ರ ಇಡೀ ನಾಡಿಗೆ ಪರಿಚಯವಾಯಿತು ಇತ್ತಿಚೇಗೆ ಕೇರಳದ ಪ್ರಸಿದ್ಧ ಜ್ಯೋತಿಷ್ಯರುಗಳಾದ ವಳಕ್ಕುಂಜ ವೆಂಕಟ್ರಮಣ ಭಟ್ ಮತ್ತು ಕಾಪಾಲಿ ನಂಬೂದ್ರಿಪಾಡ್ ಇವರುಗಳ ನೇತೃತ್ವದಲ್ಲಿ ಶ್ರೀಕ್ಷೇತ್ರದ ಬಗ್ಗೆ ಅಷ್ಟಮಂಗಳ ಪ್ರಶ್ನೆಯನ್ನು 13 ದಿನಗಳಲ್ಲಿ ಚಿಂತನೆ ಮಾಡಿದಾಗ 1.5 ಕಿ.ಮೀ ಸಮೀಪ ಹಿಂದೆ ರಾಜವಂಶ ಆಡಳಿತಕ್ಕೊಳಪಟ್ಟ ದೇವಾಲಯವು ಯುದ್ಧ ಸಮಯ ನಾಶಗೊಂಡಾಗ ಅಲ್ಲಿಯ ಉಪ ದೇವರಾಗಿರುವ ಗಣಪತಿ ಮೂರ್ತಿಯನ್ನು ಗೋಳವರ ಮಕ್ಕಳೆಲ್ಲರೂ ಸೇರಿಕೊಂಡು ಹೊತ್ತುಕೊಂಡು ಅಲ್ಲಲ್ಲಿಟ್ಟು ಪೂಜೆ ಮಾಡುತ್ತಾ ಕೊನೆಗೆ ಈಗ ಇರುವ ಸನ್ನಿಧ್ಧಿಯಲ್ಲಿ ಮರದ ಬುಡದಲ್ಲಿ ಕಾಟುಕಲ್ಲುಗಳ ರಾಶಿಯಮೇಲೆ ಇಟ್ಟು, ಬೆಳೆಸಿದ ಸೌತೆಮಿಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಪೂಜೆಮಾಡಿಕೊಂಡು ಬಂದಿರುವುದರಿಂದ ಈ ಕ್ಷೇತ್ರಕ್ಕೆ ಸೌ ತಡ್ಕ ಎಂಬ ಹೆಸರು ಬಂತೆಂದೂ, ಗಣಪತಿಗೆ ಯಾವುದೆ ಗುಡಿ ಗೋಪುರಗಳನ್ನು ಮಾಡದೆ ಬಂಧನಕ್ಕೊಳಗಾಗದೆ ಮಾನವನು ಪಶುಪಕ್ಷಿ. ಸಕಲ ಜೀವಾತ್ಮಗಳು ಸ್ವ ಇಚ್ಚೆತಂತೆ ಸೇವೆ ಮಾಡಲು ಮುಕ್ತ ಅವಕಾಶ ಸದಾ ಊರ್ಜಿತದಲ್ಲಿಡುವಂತೆ ತಿಳಿದು ಬಂದಿರುತ್ತದೆ. ಶ್ರೀ ಗಣೇಶನು ಸೌತೆತಡ್ಕದಲ್ಲಿ ಗೋವಳರ ಒಲುಮೆಯಿಂದ ಬದ್ದನಾದಾಗ ಪಾರ್ವತಿಯು ಶ್ರೀಹರಿಯರೂಪದಲ್ಲಿ ಹುಡುಕಿಕೊಂಡು ಬಂದವಳು ಬಲಗಡ್ಡೆಯಲ್ಲಿ ನಿಂತುಬಿಟ್ಟಲು. ಶಿವನಿಂದ ಕಳುಹಿಸಲ್ಪಟ್ಟ ವೀರಭದ್ರ ಎಡಗಡೆಯಲ್ಲಿ ನಿಂತನಷ್ಟೇ ! ಇವರ ಆಸರೆಯಾದ ಕಟ್ಟೆ ಏಕಶೀಲಾ ನಿರ್ಮಿತವಾದಾಗ ಬ್ರಹ್ಮಕಲಶೋತ್ಸವೂ ನಡೆಯಿತು. ಏನೇ ಆದರೂ ತಾನೂ ಎಂದೆಂದೂ ಅಪಟಲನಾಗಿಯೇ ಇರುವೆನೆಂದು ಆತನ ನಿರ್ಧಾರ ಅಚಲವೆನ್ನುವುದು ಆತನ ಭಕ್ತರಿಗೆ ಸಂತಸ ಹಾಗೂ ಹೆಮ್ಮೆಯ ವಿಷಯವಲ್ಲವೇ?
ಯಾತ್ರಿಕರ ಸೌಲಭ್ಯಕ್ಕಾಗಿ ಈಗಿನ ವಾಸುದೇವ ಶಬರಾಯರ ನೇತೃತ್ವದ ಆಡಳಿತ ಮಂಡಳಿ ತುಂಬಾ ಅಭಿವೃದ್ದಿ ಕಾರ್ಯಗಳನ್ನು ನಡೆಸಿದೆ. ಕಲ್ಯಾಣ ಮಂಟಪ, ಅನ್ನ ಛತ್ರ, ನಿತ್ಯ ಅನ್ನ ದಾನ, ರಸ್ತೆಯ ಪರಿಶ್ಕಾರ ಮುಂತಾದ ಲಕ್ಷಾಂತರ ರೂಗಳ ಮೌಲ್ಯದ ಕೆಲಸಗಳು ನಡೆದಿದೆ. ಜಗತ್ತನ್ನೇ ತಂಬಿರುವ ಗಣಪತಿ ತಾನು “ಗರ್ಭಗುಡಿಯಲ್ಲೇ ಇರಲಾರೆ” ಎಂಬ ಸಂದೇಶವನ್ನು ನೀಡಿದ್ದಾನೆ. ಇಲ್ಲಿನ ಗಣಪ ಬಯಲು ಗಣಪ. ಆದರೆ ಶಿಥಿಲವಾದ ಕಟ್ಟೆಯನ್ನು ಊರ್ಜಿತಗೊಳಿಸಿ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವವನ್ನು ಇತ್ತೀಚೆಗೆ ನಡೆಸಲಾಗಿತ್ತು.