ಸೌತಡ್ಕ
ಸೌತಡ್ಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಿನ೦ದ ಸುಮಾರು 3 ಕಿಮೀ ದೂರದಲ್ಲಿದೆ, ಮತ್ತು ಇದು ಯಾತ್ರಾ ಕೇಂದ್ರವಾಗಿದೆ.ಇಲ್ಲಿ ಮಹಾಗಣಪತಿ ದೇವರು ಗರ್ಭಗುಡಿಯ ರಚನೆ ಇಲ್ಲದೆ ಮುಕ್ತವಾದ ವಾತವರಣದಲ್ಲಿದೆ. ಇದರಿಂದಾಗಿ ಈ ಸ್ಥಾನ ಅಪೂರ್ವತೆಯನ್ನು ಪಡೆದಿದೆ.[೧] ಈ ದೇವಾಲಯ ಧರ್ಮಸ್ಥಳದಿ೦ದ 16 ಕಿಲೋಮೀಟರ್ ದೂರದಲ್ಲಿದೆ. ದೇವಸ್ಥಾನದ ಬಹಳಷ್ಟು ಗಂಟೆಗಳಿಂದ ಅಲಂಕರಿಸಲ್ಪಟ್ಟಿದೆ. ಮುಖ್ಯವಾಗಿ,ಇವು ಆರಾಧಕರು ನೀಡುವ ವಿಶೇಷ ಹರಕೆಗಳಾಗಿವೆ. ದೇವಾಲಯದ ಒಳಗೆ ಬಹಳಷ್ಟು ಕೋತಿಗಳನ್ನು ಕಾಣಬಹುದು.ಜನವರಿ ತಿಂಗಳಲ್ಲಿ ಪ್ರತಿ ವರ್ಷ ಮಹಾಪೂಜೆ ನಡೆಸಲಾಗುತ್ತದೆ.[೨] ದೇವಾಲಯಕ್ಕೆ ಬ೦ದ ಭಕ್ತರಿಗೆ ಎಲ್ಲಾ ದಿನಗಳಲ್ಲಿಯೂ ಅನ್ನದಾನ ಇರುತ್ತದೆ.ಇಲ್ಲಿ೦ದ ೬ಕೀ.ಮೀ. ದೂರದಲ್ಲಿ ಕಪಿಲ ನದಿ ಹರಿಯುತ್ತಿದೆ.ಇದು ಸೊಂಪಾದ ಹಸಿರಿನಿ೦ದ ವಿಸ್ತಾರವಾಗಿದೆ. ಇಂತಹ ನೆಮ್ಮದಿಯ ವಾತಾವರಣದ ನಡುವೆ ಪ್ರಕೃತಿಯ ಮಡಿಲಲ್ಲಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಅಲ್ಲಿ ತಲುಪುವುದು ಹೇಗೆ?
ಬದಲಾಯಿಸಿಧರ್ಮಸ್ಥಳದಿ೦ದ ೧೬ ಕಿಮೀ , ಸುಬ್ರಹ್ಮಣ್ಯದಿ೦ದ ೪೫ ಕಿ.ಮೀ ,ಮಂಗಳೂರಿನಿಂದ ೮೨ ಕಿಮೀ ಮತ್ತು ಕೊಕ್ಕಡದಿ೦ದ 2 ಕಿ.ಮೀ. ಮತ್ತು ಪಟ್ರಮೆಯಿ೦ದ 6 ಕಿಲೊಮೀಟರ್ ಇದೆ .
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2015-05-01. Retrieved 2015-01-30.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ https://en.wikipedia.org/wiki/Southadka