ಸದಸ್ಯ:ವೈದೇಹೀ ಪಿ ಎಸ್/ನನ್ನ ಪ್ರಯೋಗಪುಟ

ಎಡಕುಮೇರಿ ಸಹ್ಯಾದ್ರಿಯ ಮಡಿಲಲ್ಲಿನ ಚಾರಣತಾಣಗಳಲ್ಲೊಂದು. ಪಶ್ಚಿಮಬೆಟ್ಟಗಳ ನಡುವೆ ರೈಲ್ವೆ ಹಳಿಗಳು,ಸುರಂಗಗಳು;ಒಂದೆಡೆ ಪ್ರಕೃತಿಯ ಸೊಬಗಾದರೆ ಇನ್ನೊಂದೆಡೆಯಲ್ಲಿ ಕಂದಕಗಳು.[೧]ಬೆಟ್ಟವನ್ನು ಹತ್ತಿ ರೈಲ್ವೆ ಹಳಿಗಳನ್ನು ತಲುಪುವುದು ಚಾರಣದ ಒಂದು ಭಾಗವಾದರೆ,ಈ ರೈಲ್ವೆ ಹಳಿಗಳಲ್ಲಿ ಮುಂದುವರೆಯುತ್ತಾ ಸುರಂಗಗಳನ್ನು ದಾಟುವುದು ಚಾರಣದ ಇನ್ನೊಂದು ಭಾಗ.[೨]ಸಾಮಾನ್ಯವಾಗಿ ಚಾರಣವೆಂದರೆ ಕೇವಲ ಬೆಟ್ಟ, ಕಲ್ಲುಬಂಡೆಗಳನ್ನು ಹತ್ತುವುದು ಇತ್ಯಾದಿಯಾಗಿದ್ದರೆ,ಈ ಎಡಕುಮೇರಿ ಚಾರಣ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.ಇಲ್ಲಿ ಬರೀ ಬೆಟ್ಟ- ಗುಡ್ಡಗಳನ್ನು ಹತ್ತಿ, ನದಿಯನ್ನು ದಾಟುವುದಲ್ಲದೆ,ರೈಲ್ವೇ ಹಳಿಗಳ ಮೇಲೆ,ಸುರಂಗದೊಳಗೆ ನಡೆಯಬೇಕು.


ಮಂಗಳೂರು - ಬೆಂಗಳೂರು ರೈಲ್ವೇ ಮಾರ್ಗದಲ್ಲಿ ಸಕಲೇಶಪುರ,ಶಿರಾಡಿ ಆಸುಪಾಸಿನ ತಾಣವಿದು.ಮಂಗಳೂರಿನಿಂದ ಸುಮಾರು ೧೦೦ಕಿ.ಮೀ,ಸುಬ್ರಹ್ಮಣ್ಯದಿಂದ ಸುಮಾರು ೩೦ಕಿ.ಮೀ,ಹಾಸನದಿಂದ ೬೫ಕಿ.ಮೀ ಹಾಗೂ ಚಿಕ್ಕಮಗಳೂರಿನಿಂದ ಸುಮಾರು ೮೦ಕಿ.ಮೀ ದೂರದಲ್ಲಿದೆ.ಎಡಕುಮೇರಿಗೆ ಚಾರಣವನ್ನು ಎರಡು ತಾಣಗಳಿಂದ ಆರಂಭಿಸಬಹುದು,ಒಂದು ಸಕಲೇಶಪುರದ ಸನಿಹದ ದೋಣಿಗಲ್ ನಿಂದ ಹಾಗೂ ಶಿರಾಡಿಘಾಟ್ ಸನಿಹದ ಗುಂಡ್ಯದಿಂದ.[೩]ದೋಣಿಗಲ್ನಿಂದ ಚಾರಣವನ್ನಾರಂಭಿಸಿಸದರೆ ಎಡಕುಮೇರಿಗೆ ಸರಿಸುಮಾರು ೧೭ಕಿ.ಮೀ ಆಗುತ್ತದೆ.ಎಡಕುಮೇರಿ ರೈಲ್ವೇ ಟ್ರೆಕ್ ಅಥವಾ ಗ್ರೀನ್ ರೂಟ್ ಟ್ರೆಕ್ ಎಂದೇ ಈ ಚಾರಣ ಹೆಸರುವಾಸಿಯಾಗಿದೆ. ಬೆಟ್ಟವನ್ನು ಹತ್ತಿದ ಬಳಿಕ ರೈಲ್ವೇ ಹಳಿಗಳು ಸಿಗುವವು.ಅನೇಕ ಸುರಂಗಗಳಿಂದ ಕೂಡಿದ ಹಳಿಯಲ್ಲಿ ಚಾರಣ ಮುಂದೆಸಾಗುತ್ತದೆ.ಒಂದೆಡೆ ಬೆಟ್ಟವಾದರೆ ಇನ್ನೊಂದೆಡೆ ಕಂದಕಗಳು.ಸ್ವಲ್ಪ ಅಜಾಗರೂಕರಾದರೂ ಮರಣ ತಪ್ಪಿದ್ದಲ್ಲ.ಕತ್ತಲೆಯಲ್ಲಿ ಬೆಳಕಿನ ಸಹಾಯವಿಲ್ಲದೇ ಈ ಸುರಂಗಗಳನ್ನು ದಾಟಲಾಗದು.ಗುಂಯ್ ಎನ್ನುವ ಶಬ್ದ,ಒಟ್ಟಿಗೆ ಕತ್ತಲು.ಸುರಂಗಗಳ ದಾಟುವುದರೊಂದಿಗೆ ಪಶ್ಚಿಮಬೆಟ್ಟಗಳ ಸಾಲುಗಳನ್ನು ನೋಡುತ್ತಾ ಕಂದಕಗಳಿಗೆ ಬೀಳದಂತೆ ಜಾಗ್ರತೆ ವಹಿಸುತ್ತಾ ಮುನ್ನಡೆಯಬೇಕು.ಇಲ್ಲಿಗೆ ಚಾರಣಕ್ಕೆ ಬರುವ ಮೊದಲು ಚಾರಣಿಗರು ತಮಗೆ ಬೇಕಾದ ನೀರು-ಆಹಾರ,ಚಾರಣಕ್ಕೆ ಬೇಕಾದ ವಸ್ತುಗಳನ್ನು ತರಬೇಕಾಗುತ್ತದೆ.ಸುಬ್ರಹ್ಮಣ್ಯದಿಂದ ಸಕಲೇಶಪುರವನ್ನು ಈ ಎಡಕುಮೇರಿಯ ಮೂಲಕ ತಲುಪಲು ಸರಿಸುಮಾರು ೨-೩ಗಂಟೆಗಳು ಬೇಕಾಗುತ್ತದೆ.ಈ ಪ್ರಯಾಣವು ಒಟ್ಟಾಗಿ ೫೭ ಸುರಂಗಗಳು, ೧೧೦ ತಿರುವುಗಳು,೨೫ ಸಣ್ಣಸಣ್ಣ ಝರಿಗಳು ಹಾಗೂ ೨೪೧ ಸೇತುವೆಗಳನ್ನು ಕೂಡಿದುದಾಗಿದೆ.[೪] ಇದರೊಂದಿಗೆ ರೈಲುಗಳ ಸಂಚಾರ ಎಂದಿನಂತೆ ಇರುತ್ತವೆ.ಗೂಡ್ಸ್ ರೈಲುಗಳು ಅವಾಗವಾಗ ಹೋಗುತ್ತಿರುತ್ತವೆ[೫]ಇದರೊಂದಿಗೆ ರೈಲುಸಂಚಾರದ ಅವಧಿಯನ್ನು ರೈಲ್ವೇಇಲಾಖೆಯಿಂದ ತಿಳಿದುಕೊಳ್ಳುವುದು ಉತ್ತಮ, ಏಕೆಂದರೆ ಕೆಲಪ್ರದೇಶಗಳಲ್ಲಿ ರೈಲು ಬಂದರೆ ಚಾರಣ ಮಾಡಲು ಕಷ್ಟವಾಗುತ್ತದೆ.ಹಳಿಯನ್ನು ಬಿಟ್ಟು ನಿಲ್ಲಲು ಸ್ಥಳ ಬಹು ಕಡಿಮೆಯಿರುತ್ತದೆ.ಪ್ರಾಣಕ್ಕೆ ಅಪಾಯ ಕೂಡ. ಅದರಬದಲಿಗೆ ರೈಲ್ವೇ ಸಂಚಾರದ ಅವಧಿ ತಿಳಿದಿದ್ದರೆ ಜಾಗರೂಕತೆ ದೃಷ್ಟಿಯಿಂದಲೂ ಒಳ್ಳೆಯದು.[೬]


ಉಲ್ಲೇಖಗಳು ಬದಲಾಯಿಸಿ

  1. http://paachuprapancha.blogspot.com/2009/03/blog-post_09.html
  2. https://www.trawell.in/karnataka/mangalore/yedakumeri-green-route-trek
  3. https://books.google.co.in/books?id=mCcMCAAAQBAJ&pg=PA9&lpg=PA9&dq=%E0%B2%8E%E0%B2%A1%E0%B2%95%E0%B3%81%E0%B2%AE%E0%B3%87%E0%B2%B0%E0%B2%BF+%E0%B2%9A%E0%B2%BE%E0%B2%B0%E0%B2%A3&source=bl&ots=WDWD_jcIVV&sig=cLcOiYycNvyIv9cwe3WG8gYIDVU&hl=en&sa=X&ved=2ahUKEwj1udm_56PfAhUIv48KHc30AGwQ6AEwCnoECAkQAQ#v=onepage&q=%E0%B2%8E%E0%B2%A1%E0%B2%95%E0%B3%81%E0%B2%AE%E0%B3%87%E0%B2%B0%E0%B2%BF%20%E0%B2%9A%E0%B2%BE%E0%B2%B0%E0%B2%A3&f=false
  4. http://newsullia.blogspot.com/2009/09/blog-post.html
  5. https://vijaykarnataka.indiatimes.com/lavalavk/tourism/-/articleshow/14339943.cms
  6. http://panjumagazine.com/?p=2266