ರಾಯಚೂರು ಕೋಟೆ []

ರಾಯಚೂರು ಕೋಟೆ
ರಾಯಚೂರು ಕೋಟೆ
ರಾಯಚೂರು, ಭಾರತ
ರಾಯಚೂರು ಕೋಟೆ is located in Karnataka
ರಾಯಚೂರು ಕೋಟೆ
ರಾಯಚೂರು ಕೋಟೆ
ನಿರ್ದೇಶಾಂಕಗಳು{{|16.2|ಉ|77.37|ಪ|}}ರೀತಿ=ಕೋಟೆ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಶಿಥಿಲವಾಗಿದೆ
ಸ್ಥಳದ ಇತಿಹಾಸ
ಕಟ್ಟಿದವರು ಕಾಕತೀಯ ರಾಜವಂಶ

ಉತ್ತರ ಕರ್ನಾಟಕದ ರಾಯಚೂರು ನಗರದ ಹೃದಯಭಾಗದ ಬೆಟ್ಟದ ಮೇಲೆ ಇರುವ ಕೋಟೆಯೇ ಈ ರಾಯಚೂರು ಕೋಟೆ.

ರಾಯಚೂರು ಪ್ರಾಂತ್ಯವನ್ನು (ರಾಯಚೂರು ದೋಅಬ್) ಕಾಕತೀಯ ರಾಜವಂಶಗಳು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರು ಎಂಬ ಹಲವು ರಾಜಮನೆತನಗಳು ಆಳಿವೆ.

ಇತಿಹಾಸ

ಬದಲಾಯಿಸಿ

ಬಾದಾಮಿಯ ಚಾಲುಕ್ಯರ ಕಾಲದಿಂದಲೂ ಇಲ್ಲಿ ಕೋಟೆಯು ಅಸ್ತಿತ್ವದಲ್ಲಿದ್ದು ; ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ ಈ ಕೋಟೆಯನ್ನು ನವೀಕರಿಸಲಾಯಿತು. ಈಗಿರುವ ಕೋಟೆಯನ್ನು ಕ್ರಿ.ಶ. ೧೨೯೪ರಲ್ಲಿ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಯಿತು. ಇಲ್ಲಿರುವ ಒಂದು ಶಾಸನದ ಪ್ರಕಾರ ಈ ಕೋಟೆಯನ್ನು ರಾಣಿ ರುದ್ರಮ್ಮದೇವಿ[]ಯವರ ಮಂತ್ರಿಯಾದ ರಾಜ ಗೋರೆ ಗಂಗಯ್ಯ ರಡ್ಡಿವಾರುರವರ ಆದೇಶದಂತೆ ರಾಜ ವಿಠಲನು ನಿರ್ಮಿಸಿದನೆಂದು ಉಲ್ಲೇಖವಿದೆ.

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ, ತಮ್ಮದೊಂದು ವಿಜಯಾಚರಣೆಯ ಸಂಭ್ರಮದಲ್ಲಿ ಕೃಷ್ಣದೇವರಾಯನು ಈ ಕೋಟೆಯ ಉತ್ತರದ ಪ್ರವೇಶದ್ವಾರವನ್ನು ನಿರ್ಮಿಸಿದನು.

ಈ ಕೋಟೆಯು ಅಲ್ಲಿರುವ ಹಲವು ಭಾಷೆಗಳ, ವಿವಿಧ ಬಗೆಯ ಶಾಸನಗಳಿಗೆ ಹೆಸರುವಾಸಿಯಾಗಿದೆ.[]

ಒಮ್ಮೆ ಮಾರ್ಚ್ ೨೦೧೧ ರಲ್ಲಿ, ಎಂಜಿನಿಯರ್ ಗಳು ಈ ಕೋಟೆಯ ವಾಯುವ್ಯ ಭಾಗದ ಗೋಡೆಯನ್ನು[] ಸ್ವಚ್ಛಗೊಳಿಸುವಾಗ, ಅವರಿಗೆ ೧೩ನೇ ಶತಮಾನದ ೯೫ ಗ್ರಾನೈಟಿನ ಚೆಂಡುಗಳು ಹಾಗು ಒಂದು ಫಿರಂಗಿ ದೊರೆತಿವೆ.

ಉಲ್ಲೇಖಗಳು

ಬದಲಾಯಿಸಿ
  1. "Beautiful Raichur Fort Full Travel Guide 2020". Fort Trek (in ಇಂಗ್ಲಿಷ್). 2020-09-08. Archived from the original on 2021-04-18. Retrieved 2020-09-20.
  2. "Raichur Fort". Government of Karnataka - Department of Archaeology, Museums and Heritage (in ಅಮೆರಿಕನ್ ಇಂಗ್ಲಿಷ್). Archived from the original on 26 ಏಪ್ರಿಲ್ 2018. Retrieved 25 April 2018.
  3. "Manuscripts". Archived from the original on 10 April 2009. Retrieved 25 April 2018.
  4. Rao, D. K Kishan (5 March 2011). "95 stone balls found in Raichur fort". The Hindu (in Indian English). ISSN 0971-751X. Retrieved 25 April 2018.