320PXpx

ಕಾಫಿ ಮತ್ತು ಪಾರ್ಕಿನ್ ಸನ್

ಬದಲಾಯಿಸಿ

ಜಗತ್ತಿನಾದ್ಯಂತ ಲಕ್ಷಾಂತರ ಜನರು ತಮ್ಮ ಮನೆಯಲ್ಲಿಯೇ ಅಥವಾ ತಮ್ಮ ಪ್ರಯಾಣದಲ್ಲೋ ಅಥವಾ ಕಛೇರಿಯಲ್ಲೋ ಒಂದು ಕಪ್ ಕಾಫಿ ಗಾಗಿ ಹಾತೊರೆಯುತ್ತಿರುತ್ತಾರೆ.ನಮ್ಮ ದೈನಂದಿನ ಜೀವನದಲ್ಲಿ ಅದರ ಸುವಾಸನೆ,ಸ್ವಾದ ಹಾಗೂ ಒಂದು ಕಪ್ ಕಾಫಿಯ ನಂತರದ 'ಚೈತನ್ಯದಾಯಕ' ಭಾವನೆಯು ನಮ್ಮಲ್ಲಿ ಹಲವರಿಗೆ ಆಹ್ಲಾದವನ್ನು ನೀಡುತ್ತದೆ.ಕಾಫಿಯು ವ್ಯಾಪಕವಾಗಿ ಸಂಶೋಧಿಸಲ್ಪಡುವ ಘಟಕಗಳಲ್ಲಿ ಒಂದಾಗಿದೆ.ಬೆಳವಣಿಗೆಗೊಳಪಟ್ಟಿರುವ ವೈಜ್ಞಾನಿಕ ಸಂಶೋಧನೆಯು ತಿಳಿಸುವ ಪ್ರಕಾರ,ಕಾಫಿಯ ಮಿತವಾದ {ದಿನಕ್ಕೆ ನಿಯಮಿತವಾಗಿ ನಾಲ್ಕರಿಂದ ಐದ ಕಪ್ ಗಳು} ಸೇವನೆಯು ಪ್ರಾಪ್ತ ವಯಸ್ಕೆರ ಆರೊಗ್ಯಕ್ಕೆ ಒಳಿತು ಮತ್ತು ಆರೋಗ್ಯಕರ ಆಹಾರಕ್ರಮ ಹಾಗೂ ಕ್ರಿಯಾಶೀಲ ದೈಹಿಕ ಜೀವನಶೈಲಿಯ ಭಾಗವಾಗಿ ಪ್ರಯೋಜನಕಾರಿ ಆರೋಗ್ಯದೊಂದಿಗೆ ಸಂಪರ್ಕಹೊಂದಿದೆ.

ಜಗತ್ತಿನ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಸ್ಥೆಗಳು ಪ್ರತಿ ದಿನಕ್ಕೆ ೩೦೦ ಮಿ.ಗ್ರಾಂ ಅನ್ನು ಮೀರದ 'ಕೆಫೀನ್ ಬಳಕೆಯನ್ನು{ ಇದು ೩ ನಿಯಮಿತ ಕಪ್ ಕಾಫಿಗೆ ಸಮ} ಗರ್ಭಿಣಿ ಸ್ತ್ರೀಯರಿಗೆ ಶಿಫಾರಸ್ಸು ಮಾಡಿದೆ.

 
ಕಾಫಿ

ಪಾರ್ಕಿನ್ ಸನ್ ವ್ಯಾಧಿಯು,ಎಲ್ಲಾ ನರವ್ಯೂಹ ಅವ್ಯವಸ್ಥೆಯಲ್ಲಿಯೇ ಅತ್ಯಂತ ಪರಿಚಿತವಾದುದು,ವಿಶ‍್ವದಾದ್ಯಂತ ಇದನ್ನು ಕಾಣಬಹುದಾಗಿದ್ದು,ಸುಮಾರು ನಾಲ್ಕು ಮಿಲಿಯನ್ ಜನರು ಇದರಿಂದ ಬಾಧಿಸಲ್ಪಟ್ಟಿದ್ದಾರೆ.ಸಾಮಾನ್ಯವಾಗಿ ೫೦ವರ್ಷ ದಾಟಿದವರಲ್ಲಿ ಲಕ್ಷಣಗಳು ಗೋಚರಿಸುತ್ತದೆ ಹಾಗೂ ವಯಸ್ಸು ಹೆಚ್ಚಾಗುತ್ತಿರುವಂತೆ ಪಾರ್ಕಿನ್ ಸನ್ ವ್ರದ್ಧಿಯಾಗುವ ಸಂಭವವೂ ಹೆಚ್ಚಾಗುತ್ತದೆ.೬೫ ವಯಸ್ಸಿನ ಜನಸಂಖ್ಯೆಯ ಶೇ.೩ರಷ್ಟು ಜನರು ಇದರಿಂದ ಬಾಧಿತರಾಗಿದ್ದಾರೆ ಮತ್ತು ಇದು ೭೦ ಹಾಗೂ ೮೫ ವರ್ಷದ ನಡುವೆ ಮುಖ್ಯವಾಗಿ ಹೆಚ್ಚಾಗುತ್ತದೆ {ವ್ಯಾನ್ ಡೆನ್ ಈಡೆನ್ ಮತ್ತಿತರರು}

ಇದರ ಲಕ್ಷಣಗಳು ಯಾವುವು ?

ಬದಲಾಯಿಸಿ

ಮುಖ್ಯವಾದ ಲಕ್ಷಣಗಳೆಂದರೆ,ಸ್ನಾಯುಗಳು ಬಿಗಿಯಾಗುವಿಕೆ,ನಿಧಾನಗತಿಯ ಚಲನೆ ಮತ್ತು ಕಂಪನ,ಕೆಲವು ಜನರು ಬರವಣಿಗೆ,ಮಾತು ಮತ್ತು ಮುಖಭಾವ ಮುಂತಾದ ಸಂವಹನದಲ್ಲಿ ಹಾಗೂ ಅಸಮತೋಲನ ತೊಂದರೆಗಳನ್ನು ಅನುಭವಿಸುತ್ತಾರೆ.ಮೆದುಳಿನಲ್ಲಿ ಸಂಜ್ಞೆಗಳನ್ನು ನೀಡಲು ಕಾರಣವಾಗಿರುವ ರಾಸಾಯನಿಕ ವಸ್ತು ಡೋಪಮೈನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಮೆದುಳು ಉತ್ಪತ್ತಿ ಮಾಡಲು ಸಾಧ್ಯವಾಗದಿದ್ದಾಗ ಈ ಲಕ್ಷಣಗಳು ಗೊಚರಿಸುತ್ತವೆ.ಸಬ್ ಸ್ಟಾನ್ಷಿಯಾ ನೆಗ್ರಾ ಎಂದು ಕರೆಯಲ್ಪಡುವ ಮೆದುಳಿನ ಒಂದು ಭಾಗದಲ್ಲಿ ಡೋಪಮೈನ್ ಉತ್ಪತ್ತಿಸುವ ನರಕೋಶಗಳುಅಥವಾ ನ್ಯೂರಾನ್ ಗಳು ನಶಿಸಿದಾಗ ಮತ್ತು ನಡೆಯುವಿಕೆ ಮತ್ತು ಇತರೆ ಚಲನಾಂಗಗಳಿಗೆ ನೆರವಾಗುವ ಸ್ನಾಯುಗಳು ಹಾಗೂ ನರಗಳನ್ನು ನಿಯಂತ್ರಿಸಲು ಸಾಕಷ್ಟು ಪ್ರಮಾಣದ ಡೋಪಮೈನ್ ಉತ್ಪತ್ತಿಯಾಗದಿರುವುದರಿಂದ ಇದು ಸಂಭವಿಸುತ್ತದೆ,ದುರದೃಷ್ಟವಶಕರವಾದುದೇನೆಂದರೆ,ಇಂತಹ ವೈಶಿಷ್ಟ್ಯಪೂರ್ಣ ನರಗಳು ಶೇ.೬೦-೮೦ ರಷ್ಟು ನಾಶವಾದಾಗ ಮಾತ್ರವೇ ನಮಗೆ ನಿಖರವಾದ ಲಕ್ಷಣಗಳು ಗೋಚರಿಸುತ್ತವೆ.ಶತಮಾನಗಳಿಂದಲೂ ವಿಜ್ಞಾನಿಗಳು ಪಾರ್ಕಿನ್ ಸನ್ ವ್ಯಾಧಿಗೆ ಕಾರಣಗಳು ಮತ್ತು ಈ ನಿಗಧಿತ ನರಕೋಶಗಳ ನಶಿಸುವಿಕೆಯ ನಿಗೂಢವನ್ನು ವಿಚಾರ ಮಾಡುತ್ತಾ ಬಂದಿರುತ್ತಾರೆ.ಆದಾಗ್ಯೂ ಸಹ ಅನೇಕರು,ಜೀನ್ ಗಳ ಸಮ್ಮಿಶ್ರಣ,ಜೀವನ ಶೈಲಿ ಮತ್ತು ಪ್ರಕ್ಋತಿಯ ಅಂಶಗಳು ಈ ವ್ಯಾಧಿಗೆ ಕಾರಣವಾಗಿವೆ ಎಂಬುದನ್ನು ಒಪ್ಪುತ್ತಾರೆ.ಕಾಫಿ,ಟೀ ಮತ್ತು ಇತರೆ ಕೆಫಿನ್ ಯುಕ್ತ ಪಾನೀಯಗಳು ಪಾರ್ಕಿನ್ ಸನ್ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಸಹಾಯಕವಾಗಿವೆ.ನ್ಯೂರಾನ್ ಗಳ ನಶಿಸುವಿಕೆಯನ್ನು ಇಳಿಮುಖವಾಗಿಸುವುದರಿಂದ ಪಾರ್ಕಿನ್ ಸನ್ ಅಪಾಯವನ್ನು ಇದು ಕಡಿಮೆಗೊಳಿಸುತ್ತದೆ ಎಂದು ಭಾವಿಸಲಾಗಿದೆ.{ಶ‍್ವಾರ್ಟ್ ಚೈಲ್ಡ್ ಮತ್ತಿತರರು ೨೦೦೨}

ಸಂಶೋಧನೆಗಳಿಂದ ತಿಳಿದುಬಂದ ಅಂಶಗಳು

ಬದಲಾಯಿಸಿ

ಸಂಶೋಧಕರು ಕೆಲವು ಸಮಯದಲ್ಲಿ,ಕಾಫಿ ಮತ್ತು ಕೆಫಿನ್ ನ ಸೇವನೆಯು ಪರೋಕ್ಷವಾಗಿ ಪಾರ್ಕಿನ್ ಸನ್ ನ ಬೆಳವಣಿಗೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ .೧೯೬೮ ರ ಅವಧಿಯಲ್ಲಿ,ಸಾಂಕ್ರಾಮಿಕ ರೋಗಶಾಸ್ತ್ರ ಅಧ್ಯಯನವು ವ್ಯಾಧಿಗಳೊಂದಿಗಿನ ಗುಂಪಿಗಿಂತಲೂ,ಕಂಟ್ರೋಲ್ ಗುಂಪಿನಲ್ಲಿ ಅತ್ಯಧಿಕ ಪ್ರಮಾಣದ ಕಾಫಿ ಬಳಕೆದಾರರಿದ್ದಾರೆಂದು ವರದಿ ಮಾಡಿದೆ.{ನೆಫ್ಜರ್ ಮತ್ತಿತರರು} ನಂತರದ ೨೭ ವರ್ಷಗಳ ಅವಧಿಯಲ್ಲಿ,ಹವಾಯ್ ನಲ್ಲಿ ವಾಸಿಸುತ್ತಿರುವ ಸುಮಾರು ೮೦೦೦ ಜಪಾನಿ-ಅಮೆರಿಕನ್ನರ ಅಧ್ಯಯನವು.ಪಾರ್ಕಿನ್ ಸನ್ ಮತ್ತು ಕಾಫಿಯ ನಡುವೆ ಪರೋಕ್ಷವಾದ ಸಂಬಂಧವಿದೆ ಎಂಬುದನ್ನು ವರದಿ ಮಾಡಿದೆ.ಪ್ರತಿ ದಿನವೂ ನಾಲ್ಕಕ್ಕಿಂತಲೂ ಹೆಚ್ಚು ಕಪ್ ಕಾಫಿ ಸೇವನೆ ಮಾಡುತ್ತಿದ್ದವರಲ್ಲಿ.ಕಾಫಿಯನ್ನು ಸೇವಿಸದೇ ಇರುವವರಿಗಿಂತಲೂ ವ್ಯಾಧಿಯ ಬೆಳವಣಿಗೆಯ ಸಂಭವವು ೫ ಪಟ್ಟು ಕಡಿಮೆಯಾಗಿದೆ.{ವೆಬ್ ಸ್ಟರ್-ರಾಸ್ ಮತ್ತಿತರರು ೨೦೦೦}ನರ್ಸಗಳ ಆರೋಗ್ಯ ಅಧ್ಯಯನ ಮತ್ತು ಆರೋಗ್ಯ ವೃತ್ತಿಪರರ ಫಾಲೋ-ಅಪ್ಅಧ್ಯಯನದಲ್ಲಿ ನಿಯಮಿತ ಕೆಫೀನ್ ಸೇವನೆಯು,ಪಾರ್ಕಿನ್ ಸನ್ ನ ವಿರುದ್ಧವಾಗಿ ರಕ್ಷಣಾತ್ಮಕ ಎಂದು ವರದಿ ಮಾಡಿದೆ.ನರ್ಸಗಳ ಆರೋಗ್ಯ ಅಧ್ಯಯನದ ಮುಂದುವರೆದ ವಿಶ್ಲೇಷಣೆಯು ಪೋಸ್ಟ-ಮೆನೋಪಾಸ್ ರೀಪ್ಲೇಸ್ ಮೆಂಟ್ ಥೆರಪಯನ್ನು ಬಳಸದೇ ಇರುವ ಸ್ತ್ರೀಯರಲ್ಲಿ ಕಾಫಿ ಸೇವನೆಯು ಪಾರ್ಕಿನ್ ಸನ್ ನ ಅಪಾಯವನ್ನು ಕಡಿಮೆಗೊಳಿಸಿದೆ.{ರಾಸ್ ಮತ್ತು ಪೆಟ್ರೊವಿಚ್ ೨೦೦೧}ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಗಮನಿಸುವ ಇತ್ತೀಚಿನ ಅಧ್ಯಯನಗಳು,ಕಾಫಿ ಸೇವನೆಯು ಪಾರ್ಕಿನ್ ಸನ್ ಬೆಳವಣಿಗೆಯ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸಿವೆ.{ಸಾಕ್ಸಜರ್ವಿ ಮತ್ತಿತರರು ೨೦೦೭] ಸಂಶೋಧನೆಯು,ಹಾರ್ಮೋನ್ ಥೆರಪಿಯಲ್ಲಿತೊಡಗಿರುವ ಸ್ತ್ರೀಯರನ್ನು ಹೊರತುಪಡಿಸಿ,ಕಾಫಿ ಸೇವನೆ ಮತ್ತು ಪಾರ್ಕಿನ್ ಸನ್ ನ ಬೆಳವಣಿಗೆಯಲ್ಲಿ ಪರೋಕ್ಷ ಸಂಬಂಧವಿದೆ ಎಂಬುದನ್ನು ತಿಳಸುತ್ತದೆ.

ಕಾಫಿ ಮತ್ತು ಯಕೃತ್

ಬದಲಾಯಿಸಿ

ಕಾಫಿಯ ಸಂರಕ್ಷಣಾತ್ಮಕ ಪರಿಣಾಮವು ಈ ಮುಂದಿನವುಗಳಿಗೆ ಸಂಬಂಧಿಸಿವೆ.:- > ಯಕೃತ್ತಿನ ರೋಗ, ಯಕೃತ್ತಿನ ಚರ್ಮ ಮತ್ತು ಅದರ ಕ್ರಿಯೆಯ ಮೇಲೆ ಎಡೆಬಿಡದ ಪರಿಣಾಮ ಬೀರುವ ಮತ್ತು ಗಾಯಗಳನ್ನುಂಟು ಮಾಡುವ ರೋಗ. > ಗಾಲ್ ಬ್ಲಾಡರ್ ರೋಗ,ಗ್ಯಾಲ್ ಸ್ಟೋನ್ ರೂಪುಗೊಳ್ಳುವ ಅಪಾಯವನ್ನು ಕಡಿಮೆಗೊಳಿಸುತ್ತದೆ > ರಕ್ತದಲ್ಲಿ ಯಕೃತ್ತು ಎನ್ ಜೈಮ್ ಚಟುವಟಿಕೆ: ಅಧಿಕ ಪ್ರಮಾಣದ ಯಕೃತ್ತು ಕೋಶಗಳ ಕಾರ್ಯಚಟುವಟಿಕೆಯನ್ನು ಕ್ಷೀಣಗೊಳಿಸುವ ಮತ್ತು ಸಂಭವನಾತ್ಮಕ ಯಕೃತ್ತು ರೋಗದ ಬೆಳವಣಿಗೆಯ ಸೂಚಕವಾಗಿದೆ. ==ಕಾಫಿ ಮತ್ತು ಯಕೃತ್ತು ಕಾರ್ಯಚಟುವಟಿಕೆ==-ಯಕೃತ್ತು ರೋಗ ಯಕೃತ್ ನಮ್ಮ ದೇಹದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಒಂದು ಭಾಗವಾಗಿದೆ.ದೇಹದಅತಿ ದೊಡ್ಡ ಅಂಗವು ಇದಾಗಿದೆ ಮತ್ತು ನಮ್ಮನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಅತಿ ಮುಖ್ಯವಾಗಿದೆ.ಆದ್ದರಿಂದ,ಕಾಫಿಯನ್ನು ಸೇವಿಸುವ ವ್ಯಕ್ತಿಗಳಲ್ಲಿ ಯಕೃತ್ತು ರೋಗದ ಅಪಾಯವು ಕಡಿಮೆಯಿದೆ ಎಂದು ಅಧ್ಯಯನಗಳು ತಿಳಿಸಿದಾಗ,ಅದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಬಹುದಾಗಿದೆ. ==ಕಾಫಿ ಮತ್ತು ಯಕೃತ್ತು ಕಾರ್ಯಚಟುವಟಿಕೆ==:- ಗ್ಯಾಲ್ ಸ್ಟೋನ್ ಗಳು ಗ್ಯಾಲ್ ಸ್ಟೋನ್ ರೋಗವು ಜಗತ್ತಿನೆಲ್ಲೆಡೆ ಮಿಲಿಯಾಂತರ ಜನರನ್ನು ಭಾಧಿಸುವುದಲ್ಲದೆ,ಬಿಲಿಯಾಂತರ ಡಾಲರ್ ಹಣವು ಅದರ ಚಿಕಿತ್ಸೆಗಾಗಿ ವೆಚ್ಚವಾಗುತ್ತಿದೆ. ಕಾಫಿಯಲ್ಲಿನ ಕೆಫೀನ್ ಗಾಲ್ ಬ್ಲಾಡರ್ ನಲ್ಲಿ ಸ್ಟೋನ್ ಬೆಳವಣಿಗೆಯ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಸಹಾಯಕವಾಗಿದೆ.

ಕಾಫಿ ಮತ್ತು ಯಕೃತ್(ಎನ್ ಜೈಮ್ ಗಳು)

ಅರೊಗ್ಯಕರ ಯಕೃತ್ತು ನಮ್ಮ ದೇಹವು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಹಕರಿಸುತ್ತದೆ.ಮಿತವಾದ ಕಾಫಿ ಸೇವನೆಯು ಸಂಪೂರ್ಣವಾಗಿ ಸುರಕ್ಷಿತ,ಅದರಲ್ಲಿಯೂ ಯಕೃತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿಯೂ ಸಹ ಅತಿಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ವೈಜ್ಞಾನಿಕ ದತ್ತಾಂಶಗಳು ಸೂಚಿಸುತ್ತದೆ.ರಕ್ತದಲ್ಲಿ ಅ‍ಧಿಕ ಪ್ರಮಾಣದ ಎನ್ಜೈಮ್,ಯಕೃತ್ತು ಜೀವಕೋಶಗಳ ಕಾರ್ಯಚಟುವಟಿಕೆಯ ಕ್ಷಯಿಸುವಿಕೆಯನ್ನು ತೋರುವ ಸೂಚಕವಾಗಿದೆ.

ಉಲ್ಲೇಖ

ಬದಲಾಯಿಸಿ

೧. Topik, Steven. The World That Trade Created. Routledge. Retrieved January 27, 2016. ೨.Topik, Steven. The World That Trade Created. Routledge. Retrieved January 27, 2016.