ಬಡತನಕ್ಕೆ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಅರ್ಥವಿದೆ. ಕೆಲವರಿಗೆ ಬಡತನವೆಂದರೆ ಬರೀ ಹಣದ ಕೊರತೆ; ಇನ್ನು ಕೆಲವರಿಗೆ ಹಣದಿಂದ ಕೊಳ್ಳಲಾಗದ ವಸ್ತುಗಳ ಅಲಭ್ಯತೆ. ವ್ಯಕ್ತಿಯೊಬ್ಬನ ಆದಾಯ ದಿನಕ್ಕೆ ಒಂದು ಡಾಲರ್‌ಗಿಂತಲೂ ಕಡಿಮೆಯಿದ್ದಾಗ ಅದು ಬಡತನ ಎಂದು ವಿಶ್ವಬ್ಯಾಂಕ್ ವ್ಯಾಖ್ಯಾನಿಸುತ್ತದೆ. ಮತ್ತೆ ಕೆಲವರು ದಿನವೊಂದಕ್ಕೆ ನಿಗದಿತ ಕ್ಯಾಲೊರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ತಿನ್ನುವವರನ್ನು ಬಡವರು ಎನ್ನುತ್ತಾರೆ. ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮವು (ಯುಎನ್‌ಡಿಪಿ) ಈ ಎರಡನ್ನೂ ವಿಸ್ತರಿಸಿ, ಅದಕ್ಕೆ ಇನ್ನಷ್ಟನ್ನು ಸೇರಿಸಿ ಬಡತನದ ಆಯಾಮವನ್ನುಅರ್ಥೈಸುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಇತ್ತೀಚೆಗೆ ಬಡತನಕ್ಕೆ ಬಹು ಆಯಾಮಗಳ ಸೂಚ್ಯಂಕವೊಂದನ್ನು (ಎಂಡಿಐ) ಸಿದ್ಧಪಡಿಸಿದೆ. ನಮ್ಮ ಯೋಜನಾ ಆಯೋಗವೂ ಈ ಕುರಿತ ಚರ್ಚೆಯಲ್ಲಿ ಹಿಂದೆ ಬಿದ್ದಿಲ್ಲ. ಅದು ಸಕ್ಸೇನಾ ಸಮಿತಿ ಆಗಿರಬಹುದು ಅಥವಾ ತೆಂಡೂಲ್ಕರ್ ಸಮಿತಿಯೇ ಆಗಿರಬಹುದು. ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿಯ ಅರ್ಥಶಾಸ್ತ್ರ ಪರಿಣತರು ಮತ್ತು ಶಿಕ್ಷಣ ತಜ್ಞರು ಸಹ ತಮ್ಮದೇ ನೆಲೆಯಲ್ಲಿ ಬಡತನವನ್ನು ವಿಶ್ಲೇಷಿಸುತ್ತಾರೆ. ಆದರೆ ಇವುಗಳಲ್ಲಿ ಯಾವುದು ಅಧಿಕೃತ, ನಮ್ಮ ಯೋಜಕರು ಮತ್ತು ನೀತಿ ನಿರೂಪಕರಿಗೆ ಯಾವುದು ರಾಜಕೀಯವಾಗಿ ಸಮ್ಮತ ಎಂಬುದು ಮಾತ್ರ ನಮಗೆ ಇನ್ನೂ ಅರ್ಥವೇ ಆಗಿಲ್ಲ.

ಹಾಗಿದ್ದರೆ ಬಡತನವನ್ನು ಯಾವ ರೀತಿ ವಿಶ್ಲೇಷಿಸಬೇಕು? ನಾಳಿನ ಭರವಸೆಯ ಆಶಾಕಿರಣದ ನಿರೀಕ್ಷೆಯಲ್ಲಿ ಬೆವರು ಬಸಿದು ದುಡಿಯುತ್ತಿರುವ ಭಾರತದ ಲಕ್ಷಾಂತರ ಶ್ರಮಿಕರ ದೃಷ್ಟಿಯಲ್ಲಿ ಅದರ ಅರ್ಥ ಏನಾಗಿರಬಹುದು? ಅದು ಬರವಣಿಗೆಯ ರೂಪದಲ್ಲಿರುವ ಈ ಎಲ್ಲ ವ್ಯಾಖ್ಯಾನಗಳನ್ನೂ ಮೀರಿದ್ದೇ? ಇಂತಹ ವ್ಯಾಖ್ಯಾನಗಳ ಬದಲಾವಣೆಯಿಂದೇನಾದರೂ ಈ ಜನರ ಬದುಕು ಬದಲಾಗಬಲ್ಲದೇ?

ಕರ್ನಾಟಕದ ಬುಡಕಟ್ಟು ಮತ್ತು ಕುಗ್ರಾಮಗಳ ಜನರೊಂದಿಗೆ ನೆಲೆಸಿ ಕೆಲಸ ಮಾಡಿದ ಅನುಭವವಿರುವ ನನ್ನನ್ನು ಈ ವಿಷಯ ಸಾಕಷ್ಟು ಬಾರಿ ಕಾಡಿದೆ. ಬಡತನ ಮತ್ತು ಅದರ ಪರಿಣಾಮಗಳ ಬಗ್ಗೆ ನಾನು ಚಿಂತಿಸಿದಷ್ಟು ಪ್ರಮಾಣದಲ್ಲಿ, ನಾವೆಲ್ಲರೂ ಬಡವರೆಂದು ತಿಳಿದುಕೊಂಡಿರುವವರು ಚಿಂತಿಸುವಂತೆ ಕಾಣುವುದಿಲ್ಲ. ಬಡತನವನ್ನು ಹಲವು ಕೋನಗಳಿಂದ ವಿಶ್ಲೇಷಿಸುವ ನಾವು, ಅದನ್ನು ಖುದ್ದಾಗಿ ಅನುಭವಿಸುತ್ತಿರುವವರ ದೃಷ್ಟಿಕೋನದಿಂದ ಎಂದಿಗೂ ನೋಡ ಹೋಗುವುದಿಲ್ಲ. ಇತ್ತೀಚೆಗೆ ನಮ್ಮ ಆಸ್ಪತ್ರೆಯಲ್ಲಿ ನಡೆದ ಘಟನೆಯೊಂದು ಹಲವು ವರ್ಷಗಳಿಂದ ಬಡತನದ ಬಗ್ಗೆ ನನ್ನಲ್ಲಿದ್ದ ನಂಬಿಕೆಯ ಬುಡವನ್ನೇ ಅಲುಗಾಡಿಸಿತು.

ಕೆಲ ವರ್ಷಗಳ ಹಿಂದೆ ನನಗೆ ಪರಿಚಯವಾದ ಕುಮಾರ ಜೇನುಕುರುಬ ಪಂಗಡಕ್ಕೆ ಸೇರಿದವನು. ಆತ ನಾಚಿಕೆ ಮತ್ತು ಸೌಮ್ಯ ಸ್ವಭಾವದ ವ್ಯಕ್ತಿ. ಯುವಜನರ ಸಭೆಯೊಂದರಲ್ಲಿ ಯಾರ ಕಣ್ಣಿಗೂ ಬೀಳದಂತೆ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದ ಆತ, ಯಾರೋ ಸಭೆಯ ಛಾಯಾಚಿತ್ರ ತೆಗೆಯಲು ಮುಂದಾದಾಗ ಬೆದರಿ ಮೆಲ್ಲಗೆ ಅಲ್ಲಿಂದ ಜಾರಿಕೊಂಡಿದ್ದ.

ವಿಷದ ಗೆಡ್ಡೆ ತಿಂದು ಪ್ರಜ್ಞಾಶೂನ್ಯನಾಗಿದ್ದ ತನ್ನ ಮಾವನಿಗೆ ಚಿಕಿತ್ಸೆ ಕೊಡಿಸಲು ಇತ್ತೀಚೆಗೆ ಅವನು ನಮ್ಮ ಆಸ್ಪತ್ರೆಗೆ ಬಂದಿದ್ದ. ವಿಶೇಷ ಚಿಕಿತ್ಸೆಯ ಅಗತ್ಯ ಇದ್ದುದರಿಂದ ನಾವು ಅವನ ಮಾವನನ್ನು ದೂರದ ಮೈಸೂರಿನ ದೊಡ್ಡಾಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದೆವು. ಇದನ್ನು ಕೇಳಿದ ಕೂಡಲೇ ಕುಮಾರ ದಿಗ್ಭ್ರಾಂತನಾದ. ಯಾಕೆಂದರೆ ಅವನು ಎಂದಿಗೂ ಮೈಸೂರಿನಂತಹ ದೊಡ್ಡ ನಗರವನ್ನು ಕಂಡೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಾವನನ್ನು ಕರೆದೊಯ್ಯಲು ಬೇಕಾದ ಹಣವೂ ಅವನ ಬಳಿ ಇರಲಿಲ್ಲ. ಆದರೆ ತೀವ್ರ ಅಸ್ವಸ್ಥನಾದ ಮಾವನನ್ನು ಕರೆದೊಯ್ಯಲೇಬೇಕಾದ ಅನಿವಾರ್ಯವನ್ನು ಬಿಡಿಸಿ ಹೇಳಿದ ಕೆಲ ವೈದ್ಯರು ಅವನ ಸ್ಥಿತಿ ಕಂಡು ಮರುಗಿ ಕೂಡಲೇ ಒಂದು ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಅವನಿಗೆ ಕೊಟ್ಟರು. ಇದನ್ನು ತೆಗೆದುಕೊಂಡ ಕುಮಾರ ತಕ್ಷಣ ಮೈಸೂರಿಗೆ ಹೊರಟ.

ಕಾಲ ಕ್ರಮೇಣ ಆ ಯುವಕ ನಮ್ಮೆಲ್ಲರ ನೆನಪಿನಿಂದ ಮರೆಯಾದ. ಆದರೆ ಇದ್ದಕ್ಕಿದ್ದಂತೆ ಒಂದು ದಿನ ನಮ್ಮ ಆಸ್ಪತ್ರೆಯಲ್ಲಿ ಪ್ರತ್ಯಕ್ಷನಾದ ಆತ ವೈದ್ಯರ ತಂಡವನ್ನು ಭೇಟಿ ಮಾಡಿ, ಆ ದಿನ ಅವರೆಲ್ಲಾ ಕೊಟ್ಟಿದ್ದ ಹಣ ಹಿಂದಿರುಗಿಸಲು ಬಂದಿರುವುದಾಗಿ ತಿಳಿಸಿದ. ಕುಮಾರನಂತಹ ಸ್ಥಿತಿಯಲ್ಲಿರುವ ವ್ಯಕ್ತಿ ಮುಂದೊಂದು ದಿನ ಹೀಗೆ ಬಂದು ಹಣ ಹಿಂದಿರುಗಿಸಬಹುದು ಎಂಬುದನ್ನು ಊಹಿಸಿಯೇ ಇರದ ಅವರೆಲ್ಲರಿಗೂ ಅತೀವ ಅಚ್ಚರಿಯಾಯಿತು. ತಬ್ಬಿಬ್ಬಾದ ಒಬ್ಬರಂತೂ ಹೀಗೆ ಹಣ ಹಿಂದಿರುಗಿಸುತ್ತಿರುವ ಉದ್ದೇಶವಾದರೂ ಏನು ಎಂದು ಅವನನ್ನು ಕೇಳಿಯೇಬಿಟ್ಟರು.

ಆಗ ಕುಮಾರ ಹೇಳಿದ ಮಾತು- ಈಗ ಆತನ ಮಾವ ಚೇತರಿಸಿಕೊಂಡು ಹಾಡಿಗೆ ಮರಳಿದ್ದಾನೆ. ಇಬ್ಬರೂ ಸಮೀಪದ ಗದ್ದೆ ಕೆಲಸಕ್ಕೆ ದುಡಿಯಲು ಹೋಗುತ್ತಿದ್ದಾರೆ. ಸ್ವಲ್ಪ ಮಟ್ಟಿನ ಹಣ ಸಂಪಾದನೆ ಆಗುತ್ತಿದ್ದಂತೆಯೇ ವೈದ್ಯರು ಕೊಟ್ಟಿದ್ದ ಹಣವನ್ನು ಮರಳಿಸುವ ವಿಚಾರ ಅವನಿಗೆ ಬಂತು. ಏಕೆಂದರೆ ದಿನಾ ಆತನಂತೆಯೇ ನೂರಾರು ಬಡವರು ಆಸ್ಪತ್ರೆಗೆ ಬರುವುದರಿಂದ ಈಗ ಹಣ ಮರಳಿಸಿದರೆ ಮುಂದೊಂದು ದಿನ ತನ್ನಂತೆಯೇ ಕಷ್ಟದಲ್ಲಿರುವವರಿಗೆ ವೈದ್ಯರು ಅದನ್ನು ಕೊಡಲು ಅನುಕೂಲವಾಗುತ್ತದೆ.

ಹೀಗೆ ಹೇಳಿದ ಕುಮಾರನ ಉದ್ದೇಶ ಬರೀ ಹಣ ಹಿಂದಿರುಗಿಸುವುದಷ್ಟೇ ಆಗಿರಲಿಲ್ಲ, ಸಮಾಜದಲ್ಲಿ ತನಗಿಂತಲೂ ಬಡವರಾದವರಿಗೆ ಸಹಾಯ ಮಾಡುವ ಹಂಬಲವೂ ಅದರ ಹಿಂದಿತ್ತು. ಈ ಅಂಶ ನಮ್ಮನ್ನು ಸಾಕಷ್ಟು ಚಿಂತನೆಗೆ ಹಚ್ಚುವಂತಿತ್ತು.

ಈ ಘಟನೆಯಾದ ಬಳಿಕ ಕುಮಾರನ ಬಗೆಗಿದ್ದ ನನ್ನ ಮೆಚ್ಚುಗೆ ಮತ್ತು ಗೌರವ ನೂರ್ಮಡಿಯಾಯಿತು. ಬಡವರಾಗಿದ್ದುಕೊಂಡು ಗೌರವಯುತವಾದ ಬದುಕಿನ ಹುಡುಕಾಟದಲ್ಲಿರುವ ಕುಮಾರನಂತಹ ಜನರಿಗೆ ಸಾಮಾನ್ಯವಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ನೆರವಿನ ಅಗತ್ಯವಿರುತ್ತದೆ. ಆದರೆ ಕೆಲವೊಮ್ಮೆ ಅವರಿಗೆ ಸಹಾಯ ಮಾಡಲು ಹೊರಡುವ ಧಾವಂತದಲ್ಲಿ ನಾವು ಅವರ ಗೌರವ ಮತ್ತು ಆತ್ಮಾಭಿಮಾನವನ್ನು ಕಿತ್ತುಕೊಂಡುಬಿಡುತ್ತೇವೆ.

ಪೀಠದ ಮೇಲೆ ಕುಳಿತು ‘ಹೇ ಬಡವನೇ ತಗೋ ಈ ಕಾಸು ನಿನಗೆ’ ಎಂದು ಹೇಳುತ್ತಾ ಎಂದಿಗೂ ದಾನ ಮಾಡದಿರಿ ಎಂದು ಶತಮಾನದ ಹಿಂದೆ ಸ್ವಾಮಿ ವಿವೇಕಾನಂದರು ತಮ್ಮ ಶಿಷ್ಯರಿಗೆ ಹೇಳಿದ್ದ ಎಚ್ಚರಿಕೆಯ ಮಾತು ಈ ಸಂದರ್ಭದಲ್ಲಿ ನೆನಪಾಗುತ್ತದೆ. ಸೇವೆ ಮಾಡುವ ಅವಕಾಶವನ್ನು ಬಡವರು ನಮಗೆ ನೀಡಿದ್ದಾರೆ ಎಂದು ತಿಳಿಯಬೇಕು ಎಂಬುದು ವಿವೇಕಾನಂದರ ಇಂಗಿತವಾಗಿತ್ತು. ಕುಮಾರನಂತಹ ವ್ಯಕ್ತಿಗಳಿಗೆ ಮಾತ್ರ ಬಡತನವನ್ನು ಅರ್ಥ ಮಾಡಿಕೊಳ್ಳಲು ಮತ್ತು ತಮ್ಮ ಪಾಲಿಗೆ ಬಡತನ ಎಂದರೇನು ಎಂಬುದನ್ನು ವ್ಯಾಖ್ಯಾನಿಸಿಕೊಳ್ಳಲು ಸಾಧ್ಯ. ಬಡತನವನ್ನು ನಮ್ಮಂತಹವರು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದು.

ಆದರೆ ಕುಮಾರನ ರೀತಿಯಲ್ಲಿ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹದೊಂದು ಪ್ರಯತ್ನಕ್ಕೆ ನಾವು ಎಷ್ಟೇ ಕಷ್ಟಪಟ್ಟರೂ ನಮ್ಮ ಮೂಗಿನ ನೇರಕ್ಕೆ ಅದನ್ನು ನೋಡುತ್ತೇವೆ ಮತ್ತು ನಮ್ಮ ಅನುಭವ, ಸಂಕುಚಿತ ದೃಷ್ಟಿಕೋನದ ಮೂಲಕವಷ್ಟೇ ಅದಕ್ಕೆ ಅರ್ಥ ನೀಡುತ್ತಾ ಹೋಗುತ್ತೇವೆ. ಕುಮಾರನಾದರೆ ತನ್ನ ಬಡತನದ ನಿಜವಾದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಷ್ಟೇ ಅಲ್ಲ, ಆತನಂತಹವರನ್ನು ತಲುಪಲೂ ನಮಗೆ ನೆರವಾಗಬಲ್ಲ. ಬಡತನವನ್ನು ಸಮರ್ಥವಾಗಿ ನಿಭಾಯಿಸುವುದು ಮಾತ್ರವಲ್ಲದೆ ಅದರಿಂದ ಅವರು ಹೊರಗೆ ಬರುವಂತೆ ನೆರವಾಗಲು ಸಹ ನಮಗೆ ಉತ್ತಮ ಸಂಪರ್ಕ ಸೇತು ಆಗಬಲ್ಲ.

ಬಡವನಾಗಿದ್ದುಕೊಂಡೇ ಶ್ರೀಮಂತವಾಗಿ ಬದುಕುವುದನ್ನು ಕುಮಾರ ಕಲಿತಿದ್ದಾನೆ. ಆದರೆ ಅಭಿವೃದ್ಧಿಯ ನಿರ್ಮಾತೃಗಳಿಗೆ ಮಾತ್ರ ಇಂತಹ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ.

ಪರಿಸರ ಮಾಲಿನ್ಯ ಬದಲಾಯಿಸಿ

ಜಗತ್ತು ಇಂದು ಎದುರಿಸುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ, ಅದು ಪರಿಸರ ಮಾಲಿನ್ಯ. ಪ್ರತೀ ವರ್ಷವೂ ಹೆಚ್ಚುತ್ತಾ ಸಾಗಿರುವ ಪರಿಸರ ಮಾಲಿನ್ಯವು ಭೂಮಿಯ ಪರಿಸರವನ್ನು ಬಂಜರಾಗಿಸುತ್ತಾ ಸಾಗಿದೆ ಮತ್ತು ಭೂಮಿಯ ಮೇಲೆ ಸರಿಪಡಿಸಲಾಗದ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸರಮಾಲಿನ್ಯದಲ್ಲಿ ಮುಖ್ಯವಾಗಿ ಐದು ವಿಧಗಳು, ಅವೆಂದರೆ-

ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ವಿಕಿರಣ ಸಂಬಂಧಿತ ಮಾಲಿನ್ಯ. ಪ್ರತೀ ವರ್ಷವೂ ಜಗತ್ತಿನಲ್ಲಿ ಸುಮಾರು 2.4 ಮಿಲಿಯನ್‌ ಜನರು, ಕೇವಲ ವಾಯುಮಾಲಿನ್ಯದ ನೇರ ಪರಿಣಾಮಗಳಿಂದಾಗಿಯೇ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜು ಮಾಡಿದೆ.

ಒಂದು ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುವಂತೆ ವಿವಿಧ ಹಾನಿಕಾರಕ ಅಂಶಗಳನ್ನು ಅಥವಾ ಅನಾರೋಗ್ಯಕರ ಅಂಶಗಳನ್ನು ಆ ಪರಿಸರದ ಒಳಕ್ಕೆ ಸೇರಿಸುವುದು- ಇದು ಪರಿಸರಮಾಲಿನ್ಯಕ್ಕೆ ನಾವು ಕೊಡಬಹುದಾದ ಅತ್ಯಂತ ಸೂಕ್ತ ವಿವರಣೆ. ಬಹಳ ಸಾಮಾನ್ಯ ರೀತಿಯ ಮಾಲಿನ್ಯ ಕಾರಕಗಳು ಅಂದರೆ, ರಾಸಾಯನಿಕಗಳು, ತ್ಯಾಜ್ಯಗಳು ಮತ್ತು ಕಲುಷಿತ ನೀರು. ರಾಜಧಾನಿ ಬೀಜಿಂಗ್‌ ಸೇರಿದಂತೆ ಚೀನಾದ ನಗರಗಳು ವಾಯುಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆ. ಅತ್ಯಧಿಕ ಮಟ್ಟದಲ್ಲಿ ಕಲುಷಿತವಾಗಿರುವ ಭಾರತದ ಗಂಗಾನದಿ ಜಲಮಾಲಿನ್ಯಕ್ಕೆ ಕೊಡಬಹುದಾದ ಅತ್ಯಂತ ಉತ್ತಮ ಉದಾಹರಣೆಗಳಲ್ಲಿ ಒಂದು.

ನೈರ್ಮಲ್ಯವು ಸ್ವಾತಂತ್ರÂಕ್ಕಿಂತಲೂ ಹೆಚ್ಚಿನದು ಎಂದು ಮಹಾತ್ಮಾ ಗಾಂಧೀಜಿಯವರು ಹೇಳುತ್ತಾರೆ. ಆದರೆ ದುರದೃಷ್ಟದ ವಿಚಾರ ಅಂದರೆ, ನಾವು ಸ್ವಾತಂತ್ರÂವನ್ನು ಗಳಿಸಿ 67 ವರ್ಷಗಳನ್ನು ಕ್ರಮಿಸಿದ್ದರೂ ಸಹ, ಇಲ್ಲಿ ಶೌಚಾಲಯದ ಸೌಕರ್ಯ ದೊರೆತಿರುವುದು ಗ್ರಾಮೀಣ ನಾಗರಿಕರಲ್ಲಿ ಸುಮಾರು 30% ರ‌ಷ್ಟು ಜನರಿಗೆ ಮಾತ್ರ.

ಮನುಷ್ಯ ತನ್ನ ಜೀವನ ಸೌಕರ್ಯದ ಅತಿಲಾಲಸೆಗಾಗಿ ಪರಿಸರವನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಧಾವಂತದಲ್ಲಿ, ಸ್ವಾರ್ಥಪರನಾಗಿ ಮಾಲಿನ್ಯದ ಪರಿಣಾಮಗಳನ್ನೇ ಮರೆತುಬಿಟ್ಟಿದಾನೆ. ಕೈಗಾರಿಕಾ ಅಭಿವೃದ್ಧಿಗಳು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಇಡೀ ಜೀವಜಗತ್ತಿನ ಜೀವನಾಧಾರ ವ್ಯವಸ್ಥೆಯನ್ನು ಮನುಷ್ಯ ತನ್ನದೇ ಸ್ವಂತ ಸ್ವತ್ತು ಎಂಬಂತೆ ಬದಲಾಯಿಸಿ ಬಿಟ್ಟಿದ್ದಾನೆ. ಇದರಿಂದಾಗಿ ಪರಿಸರದ ನೈಸರ್ಗಿಕ ಸಮತೋಲನವೇ ಅಸ್ತವ್ಯಸ್ತವಾಗಿದೆ. ಅತಿಬಳಕೆ, ದುರ್ಬಳಕೆ ಮತ್ತು ಸಂಪನ್ಮೂಲಗಳನ್ನು ಸ್ವಾರ್ಥ ಸಾಧನೆಗಾಗಿ ಬಳಸುತ್ತಿರುವ ಕಾರಣದಿಂದಾಗಿ ಭೂಸವಕಳಿ ಮತ್ತು ಬರಗಾಲದಂತಹ ಗಂಭೀರ ಸಮಸ್ಯೆಗಳು ತಲೆ ಎತ್ತಿವೆ.

ಇಷ್ಟು ಮಾತ್ರ ಅಲ್ಲ, ಈಗ ಹವಾಮಾನ ಬದಲಾವಣೆ ಎನ್ನುವ ಇನ್ನೊಂಂದು ಅಪಾಯ ಎದ್ದು ನಿಂತಿದೆ. ಮಾಲಿನ್ಯವು ಜಾಗತಿಕ ತಾಪಮಾನದ ರೂಪದಲ್ಲಿ ಎದುರಾಗಿದ್ದು, ಇದು ಜಾಗತಿಕ ಹವಾಮಾನದ ಕಾರ್ಯ ವಿಧಾನಕ್ಕೆ ಅಡಚಣೆ ಉಂಟುಮಾಡುವ ಮೂಲಕ ಅಡ್ಡಿಪಡಿಸುತ್ತದೆ. ಚಳಿಗಾಲದಲ್ಲಿ ಬಿಸಿಯೇರುತ್ತಿದೆ, ಬರಗಾಲ ಮತ್ತು ಆಹಾರದ ಹಾಹಾಕಾರವು ಹೆಚ್ಚುತ್ತಿದೆ, ಮಳೆಯು ಮಳೆಗಾಲದಲ್ಲಿ ಮಾತ್ರ ಬೀಳುತ್ತದೆ ಎಂದು ಹೇಳುವುದು ಅಸಾಧ್ಯ.

ಆದರೆ ಕಾಲ ಇನ್ನೂ ಮಿಂಚಿಲ್ಲ, ನಾವು ಇನ್ನೂ ಕಾರ್ಯೋನ್ಮುಖರಾಗಬಹುದು ಎನ್ನುವುದು ಜಾnನಿಗಳ ಅಭಿಪ್ರಾಯ, ಕಾರ್ಬನ್‌ ಡೈ ಆಕ್ಸೆ„ಡ್‌ ಅನ್ನು ತಡೆಯುವ ಮೂಲಕ, ಶುದ್ಧ ಇಂಧನಗಳನ್ನು ಉಪಯೊಗಿಸುವ ಮೂಲಕ, ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ವ್ಯಾಪಕ ರೀತಿಯಲ್ಲಿ ಮರಗಿಡಗಳನ್ನು ನೆಡುವ ಮೂಲಕ, ಆಗಿರುವ ಮಾಲಿನ್ಯವನ್ನು ಇನ್ನೂ ಸರಿಪಡಿಸಬಹುದು ಎನ್ನುವುದು ವಿಜಾnನಿಗಳ ಅನಿಸಿಕೆ.

ವಾಯು ಮಾಲಿನ್ಯ ವಾಯುಮಾಲಿನ್ಯ ಅನ್ನುವುದು ಅತ್ಯಂತ ಭಯಾನಕ ರೀತಿಯ ಮಾಲಿನ್ಯ. ವಾಹನಗಳು, ಕಾರ್ಖಾನೆಗಳು, ಉಷ್ಣ ವಿದ್ಯುತ್‌ ಸ್ಥಾವರಗಳು ಉಗುಳುವ ತ್ಯಾಜ್ಯ ಅನಿಲಗಳು, ಸ್ಥಳೀಯ ದಹಿಸುವಿಕೆಗಳು, ಲೋಹದ ಧೂಳು... ಇತ್ಯಾದಿಗಳು ವಾಯುಮಾಲಿನ್ಯದ ಪ್ರಮುಖ ಕಾರಣಗಳು.

ವಾಯು ಮಾಲಿನ್ಯದ ಕಾರಣದಿಂದಾಗಿ, ಜಗತ್ತಿನಾದ್ಯಂತ ಪರಿಸರದ ಗಾಳಿಯ ಸಂತುಲನೆಯಲ್ಲಿ ವ್ಯತ್ಯಾಸವಾಗುತ್ತದೆ. ಹೆಚ್ಚಿನ ದಹನಕಾರಿ ಇಂಧನಗಳು - ಅಂದರೆ ಬರ್ನಿಂಗ್‌ ಫ‌ುÂಯೆಲ್‌ಗ‌ಳಿಂದ ವಾಯುಮಾಲಿನ್ಯ ಕಾರಕಗಳು ಬಿಡುಗಡೆಯಾಗುತ್ತವೆ. ಇದ್ದಿಲನ್ನು ಸುಡುವಾಗ ಇಂಗಾಲದ ಡೈ ಆಕ್ಸೆ„ಡ್‌ ಮತ್ತು ಸಲ#ರ್‌ ಡೈ ಆಕ್ಸೆ„ಡ್‌ ಉತ್ಪತ್ತಿಯಾಗುತ್ತದೆ. ಆಮ್ಲ ಮಳೆಗೆ ಕಾರಣ ಈ ಇಂಗಾಲದ ಡೈಆಕ್ಸೆ„ಡ್‌. ವಿಮಾನ ಮತ್ತು ರಾಕೆಟ್‌ಗಳಲ್ಲಿ ಕ್ಲೋರೋಫ್ಲೋರೋಕಾರ್ಬನ್‌ಗಳನ್ನು ಪ್ರೊಪೆಲ್ಲೇಂಟ್‌ಗಳಾಗಿ ಮತ್ತು ಶೈತ್ಯಕಾರಕಗಳಾಗಿ ಬಳಸುತ್ತಾರೆ, ಇದರಿಂದ ಓಝೊàನ್‌ ಪದರಕ್ಕೆ ಹಾನಿ ಉಂಟಾಗುತ್ತದೆ.

ವಾಯು ಮಾಲಿನ್ಯವು, ಅನೇಕ ರೀತಿಯ ಕಾಯಿಲೆಗಳಿಗೆ ಮತ್ತು ದೃಷ್ಟಿ ಮಾಂದ್ಯತೆಗೆ ಕಾರಣವಾಗುವುದಷ್ಟೇ ಅಲ್ಲ, ಇದು ಇಡಿಯ ಪರಿಸರ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸುತ್ತದೆ. ವಾಯುಮಾಲಿನ್ಯದ ಕಾರಣದಿಂದಾಗಿ ಸುರಿಯುವ ಆಮ್ಲಮಳೆಯು ಮಣ್ಣು, ಸಸ್ಯ ಸಂಕುಲ ಮತ್ತು ಆ ಪ್ರದೇಶದ ಜಲಚರಗಳ ಜೀವನ ವ್ಯವಸ್ಥೆಗೆ ಹಾನಿ ಉಂಟು ಮಾಡುತ್ತದೆ. ಪರಮಾಣು ಸ್ಫೋಟ ಮತ್ತು ಪರಮಾಣು ಪರೀಕ್ಷೆಗಳು ಗಾಳಿಯನ್ನು ಮಲಿನಗೊಳಿಸುತ್ತಿವೆ. 1952ರ ಲಂಡನ್ನಿನ ದಟ್ಟ ಧೂಮವು ಸುಮಾರು 4,000 ಜನರ ಸಾವಿಗೆ ಕಾರಣವಾಗಿತ್ತು. ಇದು ವಾಯುಮಾಲಿನ್ಯದ ಭೀಕರತೆಗೆ ಒಂದು ಉದಾಹರಣೆ.

ಆಗ್ರಾದಲ್ಲಿನ ತಾಜ್‌ ಮಹಲ್‌, ಮಥುರಾ ರಿಫೈನರಿಯ ಹೊಗೆಯ ಅಪಾಯದಲ್ಲಿದೆ. ಈ ಇಪ್ಪತ್ತು ವರ್ಷಗಳಲ್ಲಿ ಕೈಗಾರಿಕಾ ಸ್ಥಾವರಗಳಿಂದ ಮತ್ತು ರಿಫೈನರಿಗಳಿಂದ ಹೊರಸೂಸಿದ ತ್ಯಾಜ್ಯಗಳು ಮತ್ತು ಹೊಗೆಯಿಂದ ನಮ್ಮ ಪ್ರಾಚೀನ ಸ್ಮಾರಕಗಳು ಬಹುಮಟ್ಟಿಗೆ ಕಳೆ ಗುಂದುತ್ತಾ ಸಾಗಿವೆ ಎಂದು ವರದಿಗಳು ಹೇಳುತ್ತಿವೆ.

ಜಲಮಾಲಿನ್ಯ ಇಡೀ ಭೂಮಿಯ ನಾಲ್ಕನೇ ಮೂರರಷ್ಟು ಭಾಗವು ನೀರಿನಿಂದ ಆವೃತವಾಗಿದ್ದರೂ ಸಹ, ನಮ್ಮಲ್ಲಿ ಕುಡಿಯುವ ಶುದ್ಧ ನೀರಿಗೆ ಕೊರತೆ ಇದೆ. ಯಾವುದೇ ಬಾಹ್ಯ ಮೂಲದಿಂದ ನೀರು ಕಲುಷಿತಗೊಳ್ಳುವುದನ್ನು ಮತ್ತು ಅದರಿಂದ ಜೀವನಕ್ಕೆ ಅಪಾಯಕಾರಿಯಾಗುವುದನ್ನು ಜಲಮಾಲಿನ್ಯ ಎಂದು ಕರೆಯುತ್ತೇವೆ. ಕ್ಷಿಪ್ರ ಕೈಗಾರಿಕಾ ಬೆಳವಣಿಗೆಗಳು ಮತ್ತು ಆಧುನಿಕ ಅಭಿವೃದ್ಧಿಗಳ ಕಾರಣದಿಂದಾಗಿ ಜಲಮಾಲಿನ್ಯದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಾ ಸಾಗಿದೆ. ಜಲಮಾಲಿನ್ಯದ ಪ್ರಮುಖ ಕಾರಣಗಳು ಅಂದರೆ, ದಿನನಿತ್ಯ ಬಳಸುವ ನೀರಿನ ಮೂಲಗಳು, ಕೃಷಿಗಾಗಿ ಬಳಸುವ ನೀರಿನ ಮೂಲಗಳು, ತ್ಯಾಜ್ಯ ಅಂಶಗಳು, ಕಾರ್ಖಾನೆಯ ತ್ಯಾಜ್ಯಗಳು, ವಿಕಿರಣಶೀಲ ತ್ಯಾಜ್ಯಗಳು, ಎಣ್ಣೆಯ ಸೋರುವಿಕೆ, ಸಾವಯವ, ನಿರವಯವ, ಜೈವಿಕ ಅಂಶಗಳ ಇರುವಿಕೆ ಮತ್ತು ಜಲ ಮೂಲಗಳಿಗೆ ಸೇರಿಸುವಿಕೆ.

ಭಾರತದಲ್ಲಿ ನದಿಗಳು, ಜಲಾಶಯಗಳು, ಕೊಳಗಳು ಮತ್ತು ಬಾವಿಗಳು ಸೇರಿದಂತೆ ನೀರಿನ ಬಹುತೇಕ ಎಲ್ಲಾ ಮೂಲಗಳು ಕಲುಷಿತಗೊಂಡಿವೆ ಮತ್ತು ಅವು ಕುಡಿಯಲು ಯೋಗ್ಯವಾಗಿಲ್ಲ. ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆ, ನದಿಗಳು, ಸಮುದ್ರಗಳು ಮತ್ತು ಸಾಗರಗಳು, ಅಪಾಯಕಾರಿ ಮಲಿನಕಾರಕಗಳಿಂದ ಕಲುಷಿತಗೊಳುತ್ತಾ ಸಾಗಿವೆ. ಒಂದು ಅಂದಾಜಿನ ಪ್ರಕಾರ ವರ್ಷದಲ್ಲಿ 500 ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಪಾದರಸ ಸಾಗರವನ್ನು ಸೇರುತ್ತಿದೆ. ಇಂದು ಭಾರತದ ಗಂಗಾ ನದಿಯೂ ಸೇರಿದಂತೆ ಎಲ್ಲಾ ನದಿಗಳು ವಿಶೇಷವಾಗಿ ಮಲಿನಗೊಂಡಿವೆ. ಇದರಿಂದಾಗಿ ಜಲಜನ್ಯ ಕಾಯಿಲೆಗಳಾದ ಅತಿಸಾರ, ಟ್ರಾಕೋಮಾ, ಕರುಳಿನ ಹುಳಗಳು, ಹೆಪಾಟೈಟಿಸ್‌, ಕಾಮಾಲೆ... ಇತ್ಯಾದಿ ಅನೇಕ ರೀತಿಯ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು ಹೇಳುವ ಪ್ರಕಾರ, ಭಾರತದಲ್ಲಿರುವ ಎಲ್ಲಾ ಸಾಂಕ್ರಾಮಿಕ ರೋಗಗಳಲ್ಲಿ ಶೇಕಡಾ 20ರಷ್ಟು ಕಾಯಿಲೆಗಳು ನೀರಿನ ಮೂಲದ ಕಾಯಿಲೆಗಳು. ಎಣ್ಣೆಯು ಸಮುದ್ರ ನೀರನ್ನು ವಿಶೇಷವಾಗಿ ಕಲುಷಿತಗೊಳಿಸುತ್ತಿದೆ. ಬೃಹತ್‌ ಗಾತ್ರದ ಟ್ಯಾಂಕರ್‌ಗಳಿಂದ ನಿರಂತರವಾಗಿ ಸಮುದ್ರದ ನೀರಿಗೆ ಎಣ್ಣೆ ಸೋರಿಕೆಯಾಗುತ್ತಿದೆ. ವಿಷ-ಮಾಲಿನ್ಯಗಳನ್ನು ನೀರಿಗೆ ಸೇರಿಸುವ ಈ ಪ್ರಕ್ರಿಯೆಗಳಿಂದಾಗಿ ಜಲಸಸ್ಯಗಳು ಮತ್ತು ಜಲಚರಗಳ ಪ್ರಾಣಕ್ಕೆ ಕುತ್ತು ಉಂಟಾಗಿದೆ.

ಪರಿಸರ ಮಾಲಿನ್ಯ ಬದಲಾಯಿಸಿ

ಪರಿಸರ ಮಾಲಿನ್ಯ ಪರಿಸರ ಮಾಲಿನ್ಯದ ವಿಧಗಳು: ಪರಿಸರ ಮಾಲಿನ್ಯದ ದುಷ್ಪರಿಣಾಮಗಳು. ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ, ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲಿನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ. ಪರಿಸರ ಮಾಲಿನ್ಯದ ವಿಧಗಳು: ವಾಯುಮಾಲಿನ್ಯ: ವಾಯು ಜೀವಧಾತು. ಗಾಳಿಯಿಲ್ಲದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ. ಇಂತಹ ವಾಯು ವಿಷವಾಗುತ್ತಿದೆ. ಇದಕ್ಕೆ ಕಾರಣಗಳು ಹೀಗಿವೆ: ನೈಸರ್ಗಿಕ: ಕಾಡ್ಗಿಚ್ಚು,ಜ್ವಾಲಾಮುಖಿಗಳು ಮನುಷ್ಯ ನಿರ್ಮಿತ: ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ವಿಷಾನಿಲಗಳು ಗಾಳಿಯನ್ನು ಕಲುಷಿತಗೊಳಿಸುತ್ತಿವೆ. ಅಲ್ಲದೆ ಕೃಷಿ,ರಸ್ತೆ, ಜನವಸತಿಯಂತಹ ಯೋಜನೆಗಳಿಂದ ಅರಣ್ಯ ನಾಶವಾಗುತ್ತಿದೆ. ಇದರಿಂದ ನೈಸರ್ಗಿಕವಾಗಿ ವಾಯುಮಂಡಲ ಸ್ವಚ್ಛವಾಗುತ್ತಿಲ್ಲ. ಹೀಗೆ ವಾಯುವು ಮಲಿನವಾಗುತ್ತಿದೆ. ಶಬ್ದಮಾಲಿನ್ಯ: ಅತಿಯಾದ ಶಬ್ದ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತಿದೆ. ವಾಹನ ದಟ್ಟಣೆ,ಕೈಗಾರಿಕೆ,ಯಂತ್ರಗಳು,ಧ್ವನಿವರ್ಧಕಗಳು ಶಬ್ದಮಾಲಿನ್ಯಕ್ಕೆ ಮೂಲ ಕಾರಣಗಳು. ಇಂದು ಮಧುಮೇಹ,ರಕ್ತದೊತ್ತಡದಂತ ಖಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ನಮ್ಮ ಜೀವನ ಶೈಲಿ, ಆಹಾರ ಕ್ರಮಗಳ ಜೊತೆಗೆ ಅತಿಯಾದ ಶಬ್ದವೂ ಕಾರಣ. ಹೆಚ್ಚಿದ ನ ನಗರೀಕರಣದಿಂದ ವಾಹನ ದಟ್ಟಣೆ ಜಾಸ್ತಿಯಾಗುತ್ತಿದೆ. ಇದು ಶಬ್ದ ಮತ್ತು ವಾಯುಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳೂ ಸಹ ಶಬ್ದಮಾಲಿನ್ಯದಿಂದ ತೊಂದರೆಗೊಳಗಾಗುತ್ತಿವೆ. ಭೂಮಾಲಿನ್ಯ: ಭೂ ಮಾಲಿನ್ಯ ಎರಡು ಕಾರಣಗಳಿಂದ ಆಗುತ್ತಿದೆ: 1. ಅರಣ್ಯ ನಾಶ ಮತ್ತು 2. ತ್ಯಾಜ್ಯ ಪದಾರ್ಥಗಳ ಅನಿಯಮಿತ ಹೆಚ್ಚಳ. ಜಲಮಾಲಿನ್ಯ: ಕೈಗಾರಿಕೆಗಳಿಂದ ಹೊರಬರುವ ಕಲುಷಿತ ನೀರು, ಉಷ್ಣವಿದ್ಯುತ್ ಸ್ಥಾವರಗಳು, ಗಣಿಗಾರಿಕೆ, ತೈಲಬಾವಿಗಳು, ಕೃಷಿಯಲ್ಲಿ ಬಳಸುವ ರಾಸಾಯನಿಕಗಳು, ಮನುಷ್ಯ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು ಜಲಮೂಲಗಳಾದ ಕೆರೆ,ಕುಂಟೆ,ಸರೋವರ ಮತ್ತು ನದಿಗಳನ್ನು ಸೇರುತ್ತಿರುವುದು ಜಲಮಾಲಿನ್ಯಕ್ಕೆ ಮುಖ್ಯ ಕಾರಣಗಳು. ಜಲಮಾಲಿನ್ಯದಿಂದ ಮನುಷ್ಯರ ಆರೋಗ್ಯ ಹಾಳಾಗುವುದಷ್ಟೇ ಅಲ್ಲದೇ ಜಲಚರಗಳು, ನೈಸರ್ಗಿಕ ಜಲಮೂಲಗಳೂ ಸಹ ನಾಶವಾಗುತ್ತಿವೆ. ಪರಿಸರ ಮಾಲಿನ್ಯದ ದುಷ್ಪರಿಣಾಮಗಳು. ಪರಿಸರ ಮಾಲಿನ್ಯವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಆಸ್ತಮಾ,ಉಬ್ಬಸ,ಕ್ಯಾನ್ಸರ್,ಕಾಲರಾ, ಅತಿಸಾರ, ಕಾಮಾಲೆ ಮೊದಲಾದ ಖಾಯಿಲೆಗಳು ಉಲ್ಬಣಿಸುತ್ತವೆ. ಓಜೋನ್ ಪದರದ ನಾಶದಿಂದ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಚರ್ಮ ಕ್ಯಾನ್ಸರ್, ಕಣ್ಣಿನ ತೊಂದರೆಗಳಿಗೆ ಕಾರಣವಾಗುತ್ತಿದೆ. ಆಮ್ಲ ಮಳೆಯೂ ಕೂಡ ಪರಿಸರ ಮಾಲಿನ್ಯದ ಕಾರಣದಿಂದಲೇ ಆಗುತ್ತಿದೆ. ಇದರಿಂದ ಅನೇಕ ಸ್ಮಾರಕಗಳು, ಕಟ್ಟಡಗಳು, ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಕಾಡಿನ ನಾಶದಿಂದ ಹಸಿರು ಮನೆ ಪರಿಣಾಮ ಉಂಟಾಗಿ ಇಂಗಾಲದ ಡೈ ಆಕ್ಸೈಡ್ ಮತ್ತು ಮೀಥೇನ್ ಗಳು ಭೂಮಿಯ ಉಷ್ಣತೆ ಹೆಚ್ಚಲು ಕಾರಣವಾಗುತ್ತಿವೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ, ಪ್ರವಾಹ, ಸುನಾಮಿ,ಭೂಕುಸಿತ,ಭೂಕಂಪನದಂತಹ ನೈಸರ್ಗಿಕ ವಿಕೋಪಗಳೂ ಸಹ ಪರಿಸರ ಮಾಲಿನ್ಯದಿಂದ ಉಂಟಾಗುತ್ತಿವೆ. ಕಾಡುಪ್ರಾಣಿಗಳು,ಜಲಚರಗಳು, ಸರೀಸೃಪಗಳು, ಪಕ್ಷಿಗಳು ಪರಿಸರ ನಾಶದಿಂದ ತೊಂದರೆಗೊಳಗಾಗುತ್ತಿವೆ. ಅವುಗಳ ಜೀವ ಮತ್ತು ಜೀವನ ನೇರವಾಗಿ ಪ್ರಕೃತಿಯನ್ನೇ ಅವಲಂಬಿಸಿರುವುದರಿಂದ ಪರಿಸರದಲ್ಲಾಗುವ ಚಿಕ್ಕ ಬದಲಾವಣೆಯೂ ಸಹ ಅವುಗಳ ನಾಶಕ್ಕೆ ಕಾರಣವಾಗಬಲ್ಲದು. ಅಥವಾ ಅವುಗಳ ಜೀವನ ಕ್ರಮವನ್ನೇ ಬದಲಿಸಿ ಜೈವಿಕ ಸರಪಣಿಯನ್ನೇ ತುಂಡರಿಸಬಹುದು.