ಸತ್ಯಯುಗ
ಹಿಂದೂ ಧರ್ಮದಲ್ಲಿ ಸತ್ಯಯುಗ ಅಥವಾ ಕೃತಯುಗವು ಸತ್ಯದ ಯುಗ, ಮತ್ತು ಆಗ ಮಾನವಕುಲವು ದೇವತೆಗಳ ಆಡಳಿತದಲ್ಲಿರುತ್ತದೆ, ಮತ್ತು ಪ್ರತಿ ಅಭಿವ್ಯಕ್ತಿ ಅಥವಾ ಕೃತಿಯು ಪರಿಶುದ್ಧ ಆದರ್ಶಕ್ಕೆ ನಿಕಟವಾಗಿರುತ್ತದೆ ಮತ್ತು ಮಾನವಕುಲವು ಆಂತರಿಕ ಒಳ್ಳೆಯತನಕ್ಕೆ ಪರಮಪ್ರಧಾನವಾಗಿ ಆಳಲು ಅನುಮತಿಸುತ್ತದೆ. ಇದನ್ನು ಕೆಲವೊಮ್ಮೆ "ಸುವರ್ಣಯುಗ" ಎಂದು ಕರೆಯಲಾಗುತ್ತದೆ. ಸತ್ಯಯುಗದ ಅವಧಿ ೧,೭೨೮,೦೦೦ ವರ್ಷಗಳು.
ಪ್ರಪಂಚದ ಕಾಲಮಾನಗಳಿಗನ್ವಯಿಸುವಂತೆ ನಿಯಮಿತವಾಗಿ ಯುಗಗಳೆಂದು ನಿರ್ದಿಷ್ಟವಾಗಿರುವ ಚತುರ್ಯುಗಗಳಲ್ಲಿ ಒಂದನೆಯದು. ಇದಕ್ಕೆ ಆದಿಯುಗ, ದೇವಯುಗ, ಸ್ವರ್ಣಯುಗ ಎಂಬ ಬೇರೆ ಬೇರೆ ಹೆಸರುಗಳಿವೆ. ರವಿ, ಚಂದ್ರ, ಬೃಹಸ್ಪತಿ- ಈ ಮೂರು ಗ್ರಹಗಳೂ ಪುಷ್ಯನಕ್ಷತ್ರದಲ್ಲಿ ಸೇರಿದಾಗ ಕೃತಯುಗದ ಆರಂಭವೆಂದು ಪ್ರತೀತಿ. ಈ ಯುಗದಲ್ಲಿ ಜನ್ಮ ತಾಳಿದ್ದರಿಂದಲೇ ಕೃತಕೃತ್ಯರಾಗುವುದರಿಂದ ಇದಕ್ಕೆ ಕೃತಯುಗವೆಂಬ ಹೆಸರು ಬಂತೆಂದು ಹೇಳಿದ್ದಾರೆ. ==ಪುರಾಣಗಳಲ್ಲಿ ಯುಗವಿಚಾರಗಳನ್ನು ಪ್ರತಿಪಾದಿಸುವ ಹಲವಾರು ಪುರಾಣಾದಿ ಗ್ರಂಥಗಳ ಪ್ರಕಾರ ಕೃತಯುಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ: ಕೃತಯುಗದಲ್ಲಿ ಬೆಳೆವ ಧಾನ್ಯ ಸರ್ವಶ್ರೇಷ್ಠವಾದುದು. ಬ್ರಹ್ಮ ಇದರ ಅಧಿದೇವತೆ. ಇಲ್ಲಿ ಧರ್ಮ ನಾಲ್ಕು ಪಾದಗಳನ್ನೂ ಹೊಂದಿ ಸ್ಥಿರವಾಗಿರುತ್ತದೆ. ಆದ್ದರಿಂದ ಈ ಯುಗದ ಜನರೆಲ್ಲರೂ ಧರ್ಮನಿಷ್ಠರೂ ತಪೋವ್ರತಪರಾಯಣರೂ ಆಗಿರುತ್ತಾರೆ. ಅವರೆಲ್ಲ ನಾರಾಯಣನ ಸೇವೆಯಲ್ಲಿ ನಿರತರು ಮತ್ತು ಶೋಕವ್ಯಾಧಿರಹಿತರು. ಇದು ಸತ್ಯವಂತರ, ದಯಾಶೀಲರ, ದೀರ್ಘಜೀವಿಗಳ, ಪರೋಪಕಾರಿಗಳ, ಸರ್ವಶಾಸ್ತ್ರಪಾರಂಗತರ ಯುಗ. ಅಲ್ಲದೆ ಈ ಯುಗದಲ್ಲಿ ರಾಜರು ಧರ್ಮಗ್ರಾಹಿಗಳೂ ಪ್ರಜಾಪಾಲಕರೂ ಆಗಿದ್ದು, ಭೂಮಿಧಾನ್ಯಾದಿ ಸಂಪತ್ತಿನಿಂದ ಕೂಡಿ ಜಗತ್ತೆಲ್ಲವೂ ಸುಭಿಕ್ಷವಾಗಿರುತ್ತದೆ. ಅಹೋ ಸತ್ಯಯುಗಸ್ಯಾಸ್ತಿ ಕಃ ಸಂಖ್ಯಾತುಂ ಗುಣಾನ್ ಕ್ಷಮಃ(ಈ ಸತ್ಯಯುಗದ ಗುಣಗಳನ್ನು ಎಣಿಕೆ ಮಾಡಲು ಯಾವನು ತಾನೆ ಶಕ್ತನಾಗಿದ್ದಾನೆ) ಎಂಬ ಮಾತುಗಳಲ್ಲಿ ಯುಗದ ಮಹಿಮೆಯನ್ನು ಪದ್ಮ ಪುರಾಣ ಕೊಂಡಾಡುತ್ತದೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Hare Krishna Temple.com
- Vaikunt.org Archived 2009-02-14 ವೇಬ್ಯಾಕ್ ಮೆಷಿನ್ ನಲ್ಲಿ.
- Yugas on Themelapedia
- Salvia.us Archives Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.