ಸಂವರ್ಧಕ ಸ್ಟೀರಾಯ್ಡ್
ಸಂವರ್ಧಕ ಸ್ಟೀರಾಯ್ಡ್‌ಗಳು, ಅಧಿಕೃತವಾಗಿ ಸಂವರ್ಧಕ-ಪುರುಷಲಕ್ಷಣ ಉತ್ಪಾದಕ ಸ್ಟೀರಾಯ್ಡ್‌ಗಳು (ಅನಬಾಲಿಕ್-ಆಂಡ್ರೋಜೆನಿಕ್ ಸ್ಟೀರಾಯ್ಡ್ - ಎಎಎಸ್) ಎಂದು ತಿಳಿಯಲಾಗುವ, ಪುರುಷ ಸ್ಟೀರಾಯ್ಡ್‌ಗಳಾದ ಟೆಸ್ಟಾಸ್ಟರೋನ್ ಮತ್ತು ಡೈಹೈಡ್ರೋಟೆಸ್ಟಾಸ್ಟರೋನ್‌ಗಳ ಪರಿಣಾಮಗಳನ್ನು ಅನುಕರಿಸುವ ಮದ್ದುಗಳು. ಅವು ಜೀವಕೋಶಗಳಲ್ಲಿ ಪ್ರೋಟೀನ್ ಸಂಶ್ಲೇಷಣೆಯನ್ನು ಹೆಚ್ಚಿಸುತ್ತವೆ, ಪರಿಣಾಮವಾಗಿ ಜೀವಕೋಶದ ಅಂಗಾಂಶದ ಶೇಖರಣೆಯಾಗುತ್ತದೆ (ಸಂವರ್ಧನ ಕ್ರಿಯೆ), ವಿಶೇಷವಾಗಿ ಸ್ನಾಯುಗಳಲ್ಲಿ. ಸಂವರ್ಧಕ ಸ್ಟೀರಾಯ್ಡ್‌ಗಳು, ಧ್ವನಿತಂತುಗಳು ಮತ್ತು ಮೈರೋಮಗಳ ಬೆಳವಣಿಗೆಯಂತಹ ಪುರುಷ ಲಕ್ಷಣಗಳ ಬೆಳವಣಿಗೆ ಮತ್ತು ನಿರ್ವಹಣೆಯನ್ನು ಒಳಗೊಂಡಂತೆ, ಪುರುಷ ಹಾರ್ಮೋನಿನ ಲಕ್ಷಣಗಳು ಮತ್ತು ಪುರುಷಲಕ್ಷಣಗಳನ್ನು ಉತ್ಪಾದಿಸುವ ಗುಣಗಳನ್ನು ಸಹ ಹೊಂದಿವೆ. ಈ ಸ್ಟೆರಾಯ್ಡ್ ಗಳನ್ನು ಉಪಯೋಗಿಸುವುದರಿಂದ ಕೆಲವು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೊಮ್ಮೆ ಈ ಸ್ಟೆರಾಯ್ಡ್ ಗಳು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
External links
ಸುಸ್ಟಾನೊನೋ ಸೈಕಲ್ Archived 2018-05-11 ವೇಬ್ಯಾಕ್ ಮೆಷಿನ್ ನಲ್ಲಿ.