ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ
(ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕರ್ಯದರ್ಶಿ ಇಂದ ಪುನರ್ನಿರ್ದೇಶಿತ)
ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಚಿವಾಲಯದ ಮುಖ್ಯಸ್ಥ. ವಾಸ್ತವಿಕವಾಗಿ ಇವರು ಇಡೀ ಸಂಸ್ಥೆಯ ಮುಂದಾಳು ಮತ್ತು ವಕ್ತಾರ.
ದಕ್ಷಿಣ ಕೋರಿಯಾದ ಬಾನ್ ಕೀ-ಮೂನ್ ಪ್ರಸಕ್ತ ಮಹಾಕಾರ್ಯದರ್ಶಿ. ಇವರು ಜನವರಿ ೧, ೨೦೦೭ರಂದು ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರದ ಅವಧಿ ಡಿಸೆಂಬರ್ ೩೧, ೨೦೧೧ಕ್ಕೆ ಮುಕ್ತಾಯವಾಗಿತ್ತು. 21 ಜೂನ್ 2011ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, 31 ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಅವಧಿ ಮುಗಿಯುವುದು.
ಗುಟೆರಸ್ ಮಹಾಕಾರ್ಯದರ್ಶಿ
ಬದಲಾಯಿಸಿ- ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗೀಸ್ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ (Antonio Guterres) ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.[೧]
- ಪ್ರಸ್ತುತ ಮಹಾಕಾರ್ಯದರ್ಶಿ ಬಾನ್ ಕಿ ಮೂನ್; ಅವರು ಜನವರಿ 2007 1 ರಂದು ಅಧಿಕಾರ ವಹಿಸಿಕೊಂಡರು. ಅವರ ಮೊದಲ ಅವಧಿಯು 31, ಡಿಸೆಂಬರ್ 2011 ಕ್ಕೆ ಮುಗಿದಿತ್ತು. 21, ಜೂನ್ 2011 ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, ಅಕ್ಟೋಬರ್ 2016 13 ರಂದು ಜನರಲ್ ಅಸೆಂಬ್ಲಿಯಲ್ಲಿ ಆಂಟೋನಿಯೊ ಗುಟೆರಸ್ರನ್ನು, 31, ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು. ಜನವರಿ 1, 2017ರಿಂದ ಗಟೆರಸ್ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.[೨]
ಅಧಿಕಅರ ಸ್ವೀಕಾರ
ಬದಲಾಯಿಸಿ2 Jan, 2017
- ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಂಟೊನಿಯೊ ಗುಟೆರಸ್ ಅವರು ಹೊಸ ವರ್ಷದ ಮೊದಲ ದಿನವಾದ 1 Jan, 2017 ಭಾನುವಾರ ಅಧಿಕಾರ ಸ್ವೀಕರಿಸಿದರು. ‘ಹೊಸ ವರ್ಷದ ಈ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜಗತ್ತಿನಾದ್ಯಂತ ಶಾಂತಿ ನೆಲೆಸಲು ಎಲ್ಲರೂ ನಿರ್ಣಯ ಕೈಗೊಳ್ಳಬೇಕು’ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಗುಟೆರಸ್ ಕರೆ ನೀಡಿದರು.
- ‘ಬಿಕ್ಕಟ್ಟು ಬಗೆಹರಿಸುವುದು ಮತ್ತು ಶಾಂತಿ ಸ್ಥಾಪಿಸಲು ಉತ್ತೇಜನ ನೀಡುವುದು ಮೊದಲ ಆದ್ಯತೆಯಾಗಿದೆ. ಆದರೆ ಈ ಕೆಲಸ ಬಲುದೊಡ್ಡ ಸವಾಲಿನಿಂದ ಕೂಡಿದೆ. ಶಾಂತಿ ನೆಲೆಸಲು ರಾಜತಾಂತ್ರಿಕ ಮಾರ್ಗವನ್ನು ಹೆಚ್ಚು ಅನುಸರಿಸಲಾಗುವುದು’ ಎಂದು ಅವರು ತಿಳಿಸಿದರು. ಮುಂದಿನ ಐದು ವರ್ಷಗಳ ಅವಧಿಗೆ ಗುಟೆರಸ್ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಿರಿಯಾ, ಯೆಮನ್, ಲಿಬಿಯಾ, ದಕ್ಷಿಣ ಸುಡಾನ್ನಲ್ಲಿನ ಪ್ರಸ್ತುತ ಬಿಕ್ಕಟ್ಟು ಬಗ್ಗೆ ಗುಟೆರಸ್ ಕೈಗೊಳ್ಳುವ ನಿರ್ಧಾರಗಳು ಮಹತ್ವ ಎನಿಸಲಿವೆ.[೩]
ಮಹಾ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ
ಬದಲಾಯಿಸಿ೨೦ ನೇ ಶತಮಾನದ ಕಾರ್ಯದರ್ಶಿಗಳು
ಬದಲಾಯಿಸಿಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಗಳು ಹುಟ್ಟಿದ ಪ್ರದೇಶಗಳು
ಬದಲಾಯಿಸಿನೋಡಿ
ಬದಲಾಯಿಸಿಆಧಾರ
ಬದಲಾಯಿಸಿ- ೧.Stout, David (26 October 1996). "Lord Gladwyn Is Dead at 96; Briton Helped Found the UN". New York Times. Retrieved 31 October 2008.
- ೨. The United Nations: Trygve Haldvan Lie (Norway). Accessed 13 December 2006.
- )೧ ರಿಂದ ೯:Former Secretaries-General
- ೧೦.ಗುಟೆರಸ್
ಉಲ್ಲೇಖ
ಬದಲಾಯಿಸಿ- ↑ ವಿಶ್ವಸಂಸ್ಥೆ: ಗುಟೆರಸ್ ಪ್ರಮಾಣವಚನ ಸ್ವೀಕಾರ;13 Dec, 2016
- ↑ New UN chief Guterres vows
- ↑ "ಆಂಟೊನಿಯೊ ಗುಟೆರಸ್ ಅಧಿಕಅರ ಸ್ವೀಕಾರ". Archived from the original on 2017-01-03. Retrieved 2017-01-03.