ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ

ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಸಂಯುಕ್ತ ರಾಷ್ಟ್ರ ಸಂಸ್ಥೆಸಚಿವಾಲಯದ ಮುಖ್ಯಸ್ಥ. ವಾಸ್ತವಿಕವಾಗಿ ಇವರು ಇಡೀ ಸಂಸ್ಥೆಯ ಮುಂದಾಳು ಮತ್ತು ವಕ್ತಾರ.

ಬಾನ್ ಕೀ-ಮೂನ್, ಮಹಾಕಾರ್ಯದರ್ಶಿ

ದಕ್ಷಿಣ ಕೋರಿಯಾಬಾನ್ ಕೀ-ಮೂನ್ ಪ್ರಸಕ್ತ ಮಹಾಕಾರ್ಯದರ್ಶಿ. ಇವರು ಜನವರಿ ೧, ೨೦೦೭ರಂದು ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರದ ಅವಧಿ ಡಿಸೆಂಬರ್ ೩೧, ೨೦೧೧ಕ್ಕೆ ಮುಕ್ತಾಯವಾಗಿತ್ತು. 21 ಜೂನ್ 2011ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, 31 ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಅವಧಿ ಮುಗಿಯುವುದು.

ಗುಟೆರಸ್‌ ಮಹಾಕಾರ್ಯದರ್ಶಿ

ಬದಲಾಯಿಸಿ
 
ಅಂಟೊನಿಯೊ ಗುಟೆರಸ್‌(2013) ಜನವರಿ 1,2017 ರಿಂದ
  • ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೋರ್ಚುಗೀಸ್‌ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್‌ (Antonio Guterres) ೧೨-೧೨-೨೦೧೬ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. 67 ವರ್ಷದ ಗುಟೆರಸ್‌ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿ.[]
  • ಪ್ರಸ್ತುತ ಮಹಾಕಾರ್ಯದರ್ಶಿ ಬಾನ್ ಕಿ ಮೂನ್; ಅವರು ಜನವರಿ 2007 1 ರಂದು ಅಧಿಕಾರ ವಹಿಸಿಕೊಂಡರು. ಅವರ ಮೊದಲ ಅವಧಿಯು 31, ಡಿಸೆಂಬರ್ 2011 ಕ್ಕೆ ಮುಗಿದಿತ್ತು. 21, ಜೂನ್ 2011 ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, ಅಕ್ಟೋಬರ್ 2016 13 ರಂದು ಜನರಲ್ ಅಸೆಂಬ್ಲಿಯಲ್ಲಿ ಆಂಟೋನಿಯೊ ಗುಟೆರಸ್‌‍ರನ್ನು, 31, ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು. ಜನವರಿ 1, 2017ರಿಂದ ಗಟೆರಸ್ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವರು.[]

ಅಧಿಕಅರ ಸ್ವೀಕಾರ

ಬದಲಾಯಿಸಿ

2 Jan, 2017

  • ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಂಟೊನಿಯೊ ಗುಟೆರಸ್‌ ಅವರು ಹೊಸ ವರ್ಷದ ಮೊದಲ ದಿನವಾದ 1 Jan, 2017 ಭಾನುವಾರ ಅಧಿಕಾರ ಸ್ವೀಕರಿಸಿದರು. ‘ಹೊಸ ವರ್ಷದ ಈ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಜಗತ್ತಿನಾದ್ಯಂತ ಶಾಂತಿ ನೆಲೆಸಲು ಎಲ್ಲರೂ ನಿರ್ಣಯ ಕೈಗೊಳ್ಳಬೇಕು’ ಎಂದು ಅಧಿಕಾರ ಸ್ವೀಕರಿಸಿದ ಬಳಿಕ ಗುಟೆರಸ್‌ ಕರೆ ನೀಡಿದರು.
  • ‘ಬಿಕ್ಕಟ್ಟು ಬಗೆಹರಿಸುವುದು ಮತ್ತು ಶಾಂತಿ ಸ್ಥಾಪಿಸಲು ಉತ್ತೇಜನ ನೀಡುವುದು ಮೊದಲ ಆದ್ಯತೆಯಾಗಿದೆ. ಆದರೆ ಈ ಕೆಲಸ ಬಲುದೊಡ್ಡ ಸವಾಲಿನಿಂದ ಕೂಡಿದೆ. ಶಾಂತಿ ನೆಲೆಸಲು ರಾಜತಾಂತ್ರಿಕ ಮಾರ್ಗವನ್ನು ಹೆಚ್ಚು ಅನುಸರಿಸಲಾಗುವುದು’ ಎಂದು ಅವರು ತಿಳಿಸಿದರು. ಮುಂದಿನ ಐದು ವರ್ಷಗಳ ಅವಧಿಗೆ ಗುಟೆರಸ್‌ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸಿರಿಯಾ, ಯೆಮನ್‌, ಲಿಬಿಯಾ, ದಕ್ಷಿಣ ಸುಡಾನ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟು ಬಗ್ಗೆ ಗುಟೆರಸ್‌ ಕೈಗೊಳ್ಳುವ ನಿರ್ಧಾರಗಳು ಮಹತ್ವ ಎನಿಸಲಿವೆ.[]





ಮಹಾ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ

ಬದಲಾಯಿಸಿ
ಕ್ರ.ಸಂ. ಭಾವಚಿತ್ರ ಮಹಾಕಾರ್ಯದರ್ಶಿ((ಜನನ-ಮರಣ) ಸ್ಥಾನದಲ್ಲಿ-ದಿನಾಂಕ ಮೂಲ-ದೇಶ ಯುಎನ್ ಪ್ರಾದೇಶಿಕ ಗ್ರೂಪ್ ಹಿಂತೆಗೆ ಕಾರಣ ಆಧಾರ
*   ಗ್ಲಾಡ್‍ವಿನ್ ಜೆಬ್ (1900-1996) 24 ಅಕ್ಟೋಬರ್ 1945-1 ಫೆಬ್ರವರಿ 1946 ಯುನೈಟೆಡ್ ಕಿಂಗ್ಡಮ್ ಪಶ್ಚಿಮ ಯುರೋಪ್ ಚುನಾವಣೆ ವರೆಗೆ ಉಸ್ತುವಾರಿ
2ನೇ ವಿಶ್ವ ಸಮರದ ನಂತರ, ಅವರು 1945 ರ ಆಗಸ್ಟ್ನಲ್ಲಿ ವಿಶ್ವಸಂಸ್ಥೆಯ ಪ್ರಿಪರೇಟರಿ ಆಯೋಗದ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ನಂತರ, ಮೊದಲ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಟ್ರಿಗ್ವೆ ಲೈ ನೇಮಕದ ವರೆಗೆ ಫೆಬ್ರವರಿ 1945 ರಿಂದ 1946 ಅಕ್ಟೋಬರ್ ವರೆಗೆ ಖಾಯಂ ಕಾರ್ಯದರ್ಶಿ ಟ್ರಿಗ್ವೆ ಲೈ ನೇಮಕದ ವರೆಗೆ ತತ್ಕಾಲ ಕಾರ್ಯದರ್ಶಿ ಜನರಲ್ ಆಗಿ ನೇಮಕವಾದರು.
1   ಟ್ರಿಗ್ವೆ ಲೈ(1896-1968) 2 ಫೆಬ್ರವರಿ 1946 -10 ನವೆಂಬರ್ 1952 ನಾರ್ವೆ ಪಶ್ಚಿಮ ಯುರೋಪ್ & ಇತರೆ ರಾಜೀನಾಮೆ.
ಲೈ, ಒಬ್ಬ ವಿದೇಶಾಂಗ ಸಚಿವ ಮತ್ತು ಮಾಜಿ ಕಾರ್ಮಿಕ ನಾಯಕ;ಈ ಸ್ಥಾನ ತುಂಬಲು ಸೋವಿಯತ್ ಒಕ್ಕೂಟ ಶಿಫಾರಸ್ಸು ಮಾಡಿತು. ಕೊರಿಯನ್ ಯುದ್ಧದಲ್ಲಿ ಯುಎನ್ ಒಳಗೊಳ್ಳುವಿಕೆಯ ನಂತರ, ಸೋವಿಯೆತ್ ಯುನೈಟೆಡ್ ಸ್ಟೇಟ್ಸ್ 1951 ರಲ್ಲಿ ಪುನರ್ನೇಮಾಕಾತಿ ಒಪ್ಪದೆ ವಿಟೊ ಮಾಡಿತು. ಸೋವಿಯತ್ ಒಕ್ಕೂಟದ ನಿರಾಕರಣಾಧಿಕಾರವನ್ನು ತಪ್ಪಿಸಿಕೊಂಡು 'ಯು ಎಸ್' ಮಹಾಸಭೆಯು ನೇರವಾಗಿ ಪುನರ್ನೇಮಾಕಾತಿ ಮಾಡಲು ಸೂಚಿಸಿ- ವಿರೋಧದ ವಿಟೊ ನಿಷ್ಕ್ರಿಯಗೊಳಿಸಿದರು. ಸಭೆಯಲ್ಲಿ ಎಂಟು ಅನುಪಸ್ಥಿತಿಗಳಿದ್ದು ಲೈ ಅವರು 5 ವಿರೋಧಕ್ಕೆ 46 ಪರ ಮತ ಪಡೆದು ಮರುನೇಮಕ ಮಾಡಲ್ಪಟ್ಟರು. ಸೋವಿಯತ್ ಒಕ್ಕೂಟ ಲೈಗೆ ಪ್ರತಿಕೂಲವಾಗಿ ಉಳಿದುಕೊಂಡಿತು, ಇದರಿಂದ ಅವರು 1952 ರಲ್ಲಿ ರಾಜೀನಾಮೆ ನೀಡಿದರು.
2   ಸೈನ್ ಡಾಗ್ ಹಮ್ಮರಷೀಲ್ಡ್(1905-1961) 10 ಏಪ್ರಿಲ್ 1953 -18 ಸೆಪ್ಟೆಂಬರ್ 1961 ಸ್ವೀಡನ್ ಪಶ್ಚಿಮ ಯುರೋಪ್ & ಇತರೆ ಉತ್ತರ ರೊಡೇಷಿಯಾದಲ್ಲಿ (ಈಗ ಜಾಂಬಿಯಾ) ವಿಮಾನ ಅಪಘಾತದಲ್ಲಿ ಮರಣ
ವಿಟೊ ಮೂಲಕ ಅನೇಕ ಅಭ್ಯರ್ಥಿಗಳ ಸರಣಿ ನಿಷೇಧಗಳ ನಂತರ, ಸೈನ್ ಡಾಗ್ ಹಮ್ಮರ್ ಷೀಲ್ಡ್ ರನ್ನು ಭದ್ರತಾ ಮಂಡಳಿಯ ಸ್ವೀಕಾರಾರ್ಹ ಅರ್ಭಯರ್ಥಿ ಎಂದು ಆಯ್ಕೆಯಾಯಿತು. ಹಮ್ಮರ್ ಷೀಲ್ಡ್ 1957 ರಲ್ಲಿ ಎರಡನೆಯ ಅವಧಿಗೆ ಸರ್ವಾನುಮತದಿಂದ ಮರು ಆಯ್ಕೆಯಾಯಿತು , ಕಾಂಗೋ ಬಿಕ್ಕಟ್ಟಿನ ಸಮಯದಲ್ಲಿ ಯು ಎನ್ ನ ಹಮ್ಮರ್ ಷೀಲ್ಡ್ ನಾಯಕತ್ವ ಸೋವಿಯತ್ ಒಕ್ಕೂಟದ ಕೋಪಕ್ಕೆ ತುತ್ತಾಯಿತು ಮತ್ತು ಮಹಾಕಾರ್ಯದರ್ಶಿ ಸ್ಥಾನವು ಒಬ್ಬರ ಬದಲಿಗೆ ತ್ರಯ ಸದಸ್ಯರ ಅಥವಾ ಮೂವರ ಕಾರ್ಯನಿರ್ವಾಹಕ ಮಂಡಳಿ ಮಾಡಲು ಸೂಚಿಸಲಾಯಿತು. ಪಾಶ್ಚಾತ್ಯ ರಾಷ್ಟ್ರಗಳ ತೀವ್ರ ವಿರೋಧದಿಂದ ಸೋವಿಯತ್ ಒಕ್ಕೂಟವು ತನ್ನ ಸಲಹೆ ಬಿಟ್ಟುಬಿಟ್ಟರು. ಹಮ್ಮರ್ ಷೀಲ್ಡ್ 1961 ರಲ್ಲಿ ಉತ್ತರ ರೊಡೇಷಿಯಾದಲ್ಲಿ (ಈಗ ಜಾಂಬಿಯಾ) ವಿಮಾನ ಅಪಘಾತದಲ್ಲಿ ಸತ್ತರು. ಅಮೇರಿಕಾದ ಅಧ್ಯಕ್ಷ ಜಾನ ಎಫ್ ಕೆನಡಿ ಹಮ್ಮರ್ ಷೀಲ್ಡ್ "ನಮ್ಮ ಶತಮಾನದ ಅತ್ಯುತ್ತಮ ರಾಜನೀತಿಜ್ಞ" ಎಂದು.
3   ಯು ಥಾಂಟ್ (1909-1974) 30 ನವೆಂಬರ್ 1961 -31 ಡಿಸೆಂಬರ್ 1971 ಬರ್ಮಾ ಏಷ್ಯಾ ಫೆಸಿಫಿಕ್ & ಇತರೆ ಮೂರನೇ ಚುನಾವಣೆಗೆ ನಿಲ್ಲಲು ನಿರಾಕರಿಸಿದರು.
ಎನ್ ಹ್ಯಾಮರ್ಶಿಲ್ಡ್ ಬದಲಿಗೆ ಆಯ್ಕೆ ಪ್ರಕ್ರಿಯೆಯಲ್ಲಿ, ಅಭಿವೃದ್ಧಿಶೀಲ ಪ್ರಪಂಚದ ಯುರೋಪ್ ಮತ್ತು ಅಮೆರಿಕನ್ ಅಲ್ಲದ ಮಹಾಕಾರ್ಯದರ್ಶಿ ಒತ್ತಾಯಿಸಿದರು.. ಯು ಥಾಂಟ್ ನಾಮನಿರ್ದೇಶನಗೊಂಡಿರು. ಆದರೆ, (ಥಾಂಟ್ ಅಲ್ಜೇರಿಯಾ ಸ್ವಾತಂತ್ರ್ಯದ ಮೇಲೆ ಸಮಿತಿಯೊಂದರ ಅಧ್ಯಕ್ಷತೆ ವಹಿಸಿದ್ದಾರೆ ಎಂದು) ಫ್ರೆಂಚ್ ವಿರೋಧದ ನಡುವೆ ಮತ್ತು ಅರಬ್ಬರು (ಮಯನ್ಮಾರ್ ಇಸ್ರೇಲ್ ಬೆಂಬಲ ನೀಡಿದೆ ಎಂಬ ಕಾರಣಕ್ಕೆ) ವಿರೋಧ ಮಾಡಿದರು, ಯು ಥಾಂಟ್ ಹ್ಯಾಮರ್ಶಿಲ್ಡ್ ಉಳಿದ ಅವಧಿಗೆ ಮಾತ್ರ ನೇಮಿಸಲಾಯಿತು. ಥಾಂಟ್ ಮೊದಲ ಏಷ್ಯನ್ ಕಾರ್ಯದರ್ಶಿ ಆಗಿದ್ದರು. ಮುಂದಿನ ವರ್ಷ, ನವೆಂಬರ್ 30 ರಂದು, ಥಾಂಟ್ ಸರ್ವಾನುಮತದಿಂದ, 2 ಡಿಸೆಂಬರ್ ರಂದು 3 ನವೆಂಬರ್ 1966 ಕೊನೆಗೊಳ್ಳುವ ಒಂದು ಪೂರ್ಣ 5 ವರ್ಷಗಳ ಅವಧಿಗೆ ಆರಿಸಲ್ಪಟ್ಟರು. ಪುನಃ ಹೊಸ ಅವಧಿಗೆ 2 ಡಿಸೆಂಬರ್ 1966 ರಲ್ಲಿ, ಅಂತಿಮವಾಗಿ 1971 ಡಿಸೆಂಬರ್ 31 ರಂದು ಮುಗಿಯಲಿರುವ ಅವಧಿಗೆ ಮರು ಆಯ್ಕೆಯಾದರು, ಥಾಂಟ್ ಮೂರನೇ ಚುನಾವಣೆಗಾಗಿ ಕೇಳಲಿಲ್ಲ
4   ಕರ್ಟ್ ವಾಲ್ಡ್ ಹೀಮ್ (1918-2007) ಜನವರಿ 1972 -31 ಡಿಸೆಂಬರ್ 1981 ಆಸ್ಟ್ರಿಯಾ ಪಶ್ಚಿಮ ಯುರೋಪ್ & ಇತರರು ಚೀನಾ ಮೂರನೇ ಅವಧಿಗೆ ನಿಷೇಧಿಸಿದರು 5
ವಾಲ್ಡ್ ಹೀಮ್ ಯವರು ಕಾರ್ಯದರ್ಶಿ ಜನರಲ್ ಆಗಲು ಒಂದು ವಿವೇಚನಾಯುಕ್ತ ಆದರೆ ಪರಿಣಾಮಕಾರಿ ಅಭಿಯಾನವನ್ನು ಆರಂಭಿಸಿದರು. ಚೀನಾ ಮತ್ತು ಯುನೈಟೆಡ್ ಕಿಂಗ್ಡಮ್ ಆರಂಭಿಕ ವಿಟೊ ಹೊರತಾಗಿಯೂ, ಮೂರನೇ ಸುತ್ತಿನಲ್ಲಿ, ವಾಲ್ಡ್ ಹೀಮ್-ಹೊಸ ಕಾರ್ಯದರ್ಶಿ ಜನರಲ್ ಆಗಲು ಆಯ್ಕೆಯಾದರು. 1976 ರಲ್ಲಿ, ಚೀನಾ ಆರಂಭದಲ್ಲಿ ಮರು ಚುನಾವಣೆಗೆ ವಾಲ್ಡ್ ಹೀಮ್-ರನ್ನು ನಿರ್ಬಂಧಿಸಿತು; ಆದರೆ ಎರಡನೆಯ ಮತದಾನದಲ್ಲಿ ಪಟ್ಟುಹಿಡಿದದ್ದರಿಂದ . 1981 ರಲ್ಲಿ, ಮೂರನೇ ಅವಧಿಯ ವಾಲ್ಡ್ ಹೀಮ್ ರ ಮರು-ಚುನಾವಣೆಗೆ 15 ಸುತ್ತುಗಳ ವಿಟೊ ಮೂಲಕ ಅವರ ಆಯ್ಕೆಯನ್ನು ನಿಷೇಧಿಸಿದರು. 1986 ರಿಂದ 1992 ರವರೆಗೂ ಚೀನಾ ನಿರ್ಬಂಧಿಸಿತು., ವಾಲ್ಡ್ ಹೀಮ್ ಆಸ್ಟ್ರಿಯಾ- 1985ರಲ್ಲಿ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸಿದರು. ನಾಜಿ ಜರ್ಮನಿಯ ಸೇನೆ ಜೊತೆಗಿನ ಸಂಬಂಧ ಆಧರಿಸಿ, ಇವರು ಎರಡನೇ ಮಹಾಯುದ್ಧದ ನಂತರದ ಯುಎನ್ ವಾರ್ ಕ್ರೈಮ್ಸ್ ಕಮೀಶನ್ ಇವರನ್ನು ಶಂಕಿತ ಯುದ್ಧ ಅಪರಾಧಿಯಾಗಿ ಲೇಬಲ್ ಮಾಡಿದೆ; ಇದನ್ನು ನಂತರ ಬಹಿರಂಗಪಡಿಸಲಾಯಿತು. ಕಡತಗಳನ್ನು ಯುಎನ್ ಸಂಗ್ರಹವಿಭಾಗದಲ್ಲಿ ಇಡಲಾಗಿತ್ತು.
5   ಜೇವಿಯರ್ ಪೇರೆಝ್ ಡಿ ಸೆಲ್ಲರ್(1920 ಜನನ) 1 ಜನವರಿ 1982 - 31 ಡಿಸೆಂಬರ್ 1991 ಪೆರು ಲ್ಯಾಟಿನ್ ಅಮೆರಿಕ ಕೆರಿಬಿಯನ್ ಮೂರನೇ ಅವಧಿಗೆ ನಿಲ್ಲಲಿಲ್ಲ. 6
ಮರು ಚುನಾವಣೆಯಲ್ಲಿ ಜೇವಿಯರ್ ಪೇರೆಝ್ ಡಿ ಸೆಲ್ಲರ್ ಮತ್ತು ಚೀನಾ ಅಭ್ಯರ್ಥಿ, ಸಲಿಮ್ ಅಹ್ಮದ್ ಸಲೀಂ ಟಾಂಜಾನಿಯಾದ ನಡುವೆ ಐದು ವಾರಗಳ ಕಗ್ಗಂಟು ನಡೆದು ನಂತರ ಆಯ್ಕೆಯಾದರು. ಪೆರೆಜ್ ಡಿ ಸೆಲ್ಲರ್ ಪೆರುವಿಯನ್ ರಾಯಭಾರಿ, ರಾಜಿ ಅಭ್ಯರ್ಥಿ, ಮತ್ತು ಅಮೆರಿಕಗಳ ಮೊದಲ ಪ್ರಧಾನ ಕಾರ್ಯದರ್ಶಿ ಆಯ್ಕೆಯಾದರು.. ಅವರು 1986 ರಲ್ಲಿ ಸರ್ವಾನುಮತದಿಂದ ಮರು ಆಯ್ಕೆಗೊಂಡರು
6   ಬುರ್ಟ್ರೋಸ್ ಬುಟ್ರೋಸ್-ಗಾಲಿ(1922-2016) 1 ಜನವರಿ 1992 -31 ಡಿಸೆಂಬರ್ 1996 ಈಜಿಪ್ಟ್ ಆಫ್ರಿಕನ್ & ಅರಬ್ ಯುನೈಟೆಡ್ ಸ್ಟೇಟ್ಸ್ ವಿಟೊ ಮೂಲಕ ಇವರ ಎರಡನೇ ಅವಧಿಯ ನಿಷೇಧಿಸಿದರು.
102 ಸದಸ್ಯರ ಅಲಿಪ್ತ ಚಳವಳಿ ಸಂಸ್ಥೆಯು ಮುಂದಿನ ಮಹಾಕಾರ್ಯದರ್ಶಿ ಆಫ್ರಿಕಾ ದಿಂದ ಆಗಬೇಕೆಂದು ಒತ್ತಾಯಿಸಿದರು. ಸಾಮಾನ್ಯ ಸಭೆಯಲ್ಲಿ ಬಹುಮತದಿಂದ ಮತ್ತು ಚೀನಾ ಬೆಂಬಲದಿಂದಾಗಿ ಅಲಿಪ್ತ ಚಳವಳಿಯವರು ಯಾವುದೇ ಪ್ರತಿಕೂಲವಾದ ಅಭ್ಯರ್ಥಿ ನಿರ್ಬಂಧಿಸಲು ಅವಶ್ಯಕ ಮತಗಳನ್ನು ಪಡೆದಿದ್ದರು. ಭದ್ರತಾ ಮಂಡಳಿಯ ಸಮಿತಿಯು ಮೊದಲ ಐದು ಅನಾಮಧೇಯ ಅನಧಿಕೃತ ಚುನಾವಣೆ-ನಡೆಸಿದರು ಮತ್ತು ಬುರ್ಟ್ರೋಸ್-ಗಾಲಿಗೆ ಐದನೇ ಸುತ್ತಿನಲ್ಲಿ 11 ಮತಗಳನ್ನು ಬಂದವು. 1996 ರಲ್ಲಿ, ಯುನೈಟೆಡ್ ಸ್ಟೇಟ್ಸ್ ಅವರು ಯುಎನ್ ಅಗತ್ಯ ಸುಧಾರಣೆಗಳು ಅನುಷ್ಠಾನಕ್ಕೆ ವಿಫಲವಾಗಿದೆ ಎಂದು ಆರೋಪಿಸಿ, ಬುರ್ಟ್ರೋಸ್-ಗಾಲಿ ಮರು ಅಪಾಯಿಂಟ್ಮೆಂಟ್ ನ್ನು ವಿಟೊ ಮೂಲಕ ನಿಷೇಧಿಸಿದರು

೨೦ ನೇ ಶತಮಾನದ ಕಾರ್ಯದರ್ಶಿಗಳು

ಬದಲಾಯಿಸಿ
ಕ್ರ.ಸಂ. ಭಾವಚಿತ್ರ ಮಹಾಕಾರ್ಯದರ್ಶಿ((ಜನನ-ಮರಣ) ಸ್ಥಾನದಲ್ಲಿ-ದಿನಾಂಕ ಮೂಲ-ದೇಶ ಯುಎನ್ ಪ್ರಾದೇಶಿಕ ಗ್ರೂಪ್ ಹಿಂತೆಗೆ ಕಾರಣ ಆಧಾರ
7   ಕೋಫಿ ಅನ್ನಾನ್ ((1938 ಜನನ) 1 ಜನವರಿ 1997 -31 ಡಿಸೆಂಬರ್ 2006 ಘಾನಾ ಆಫ್ರಿಕನ್ ಎರಡು ಪೂರ್ಣ ಅವಧಿಗಳಲ್ಲಿ - ನಂತರ ನಿವೃತ್ತಿ
ಡಿಸೆಂಬರ್ 1996 13 ರಂದು ಭದ್ರತಾ ಮಂಡಳಿಯ ಅನ್ನಾನ್ ರನ್ನು ಶಿಫಾರಸು ಮಾಡಿತು. ಅವರ ಆಯ್ಕೆಯನ್ನು ಜನರಲ್ ಅಸೆಂಬ್ಲಿಯ ಮತದಿಂದ ನಾಲ್ಕು ದಿನಗಳ ನಂತರ ದೃಢೀಕರಿಸಲ್ಪಟ್ಟಿತು. ದಿ.1 ಜನವರಿ 2002 ರಂದು ಮಹಾಕಾರ್ಯದರ್ಶಿ ತಮ್ಮ ಎರಡನೇ ಅವಧಿಯನ್ನು ಆರಂಭಿಸಿದರು.
8   ಬಾನ್ ಕಿ ಮೂನ್ (ಜನನ 1944) 1 ಜನವರಿ 2007 - ಪ್ರಸ್ತುತ ದಕ್ಷಿಣ ಕೊರಿಯಾ ಏಷ್ಯಾ-ಪೆಸಿಫಿಕ್ ಎರಡು ಪೂರ್ಣ ಅವಧಿಗಳಲ್ಲಿ - ನಂತರ ನಿವೃತ್ತಿ
ಬಾನ್ ಪೂರ್ವ ಏಷ್ಯಾದ ಮೊದಲ ಮಹಾಕಾರ್ಯದರ್ಶಿ ಆಯ್ಕೆ ಕೂಡಾ ಆಗಿತ್ತು. ಅವರು ಸರ್ವಾನುಮತದಿಂದ 21 ಜೂನ್ 2011 ರಂದು ಜನರಲ್ ಅಸೆಂಬ್ಲಿ ಎರಡನೆಯ ಅವಧಿಗೆ ಆಯ್ಕೆಯಾದರು. ಇವರ ಎರಡನೇ ಅವಧಿಯು 1 ಜನವರಿ 2012 ರಂದು ಪ್ರಾರಂಭವಾಯಿತು. ತಮ್ಮ ಆಯ್ಕೆಯ ಮುನ್ನ, ಜನವರಿ 2004 ನವೆಂಬರ್ 2006 ರ ವರೆಗೆ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವರಾಗಿದ್ದರು.. ತಮ್ಮ ಎರಡನೇ ಅವಧಿಯು ಮುಗಿದಾಗ ಅವರು 31 ಡಿಸೆಂಬರ್ 2016 ರಂದು ಮಹಾಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳೀಯುವರು. ವರದಿಯಾಗಿರುವಂತೆ, 2017 ಯುಎನ್ ಚುನಾವಣೆಯಲ್ಲಿ ಬಾನ್ ಅವರ ಅವಧಿಯ ಮುಕ್ತಾಯವಾಗುತ್ತದೆ. ಸ್ವಲ್ಪ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಸ್ಥಾನಕ್ಕೆ ತನ್ನ ಉಮೇದುವಾರಿಕೆಗೆ ಘೋಷಿಸಲು ಉದ್ದೇಶಿಸಿದ್ದಾರೆ. .
9   ಅಂಟೊನಿಯೊ ಗುಟೆರಸ್‌ (1949 ಜನನ) 1 ಜನವರಿ 2017 ರಿಂದ ಪೋರ್ಚುಗಲ್ ಪಶ್ಚಿಮ ಯುರೋಪ್ - ಚುನಾಯಿತ 10
ಗುಟೆರಸ್‌ ಕರ್ಟ್ (ಕುರ್ಟ್ ವೆಲ್ಡಹ್ಯಾಮ್ (1972-1981 ನಂತರ ) . ಪಾಶ್ಚಿಮಾತ್ಯ ಯೂರೋಪಿನ ಮೊದಲ ಮಹಾಕಾರ್ಯದರ್ಶಿ. ಅವರು 1995 ರಿಂದ 2002 ವರೆಗೆ ಪೋರ್ಚುಗಲ್ ಪ್ರಧಾನ ಮಂತ್ರಿಯಾಗಿದ್ದರು. ಅವರು ಸೋಶಿಯಲಿಸ್ಟ್ ಇಂಟರ್ನ್ಯಾಶನಲ್ (1999-2005) ಅಧ್ಯಕ್ಷ ರಾಗಿದ್ದರು ಮತ್ತು ನಿರಾಶ್ರಿತರಿಗಾಗಿ ಯುನೈಟೆಡ್ ನೇಶನ್ಸ್ ಹೈ ಕಮಿಷನರ್ (2005-2015).ಆಗಿದ್ದರು.

ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಗಳು ಹುಟ್ಟಿದ ಪ್ರದೇಶಗಳು

ಬದಲಾಯಿಸಿ
 
A map showing what nations have had a national serving as Secretary-General of the United Nations
Birthplaces of Secretaries-General of the United Nations
  1. ೧.Stout, David (26 October 1996). "Lord Gladwyn Is Dead at 96; Briton Helped Found the UN". New York Times. Retrieved 31 October 2008.
  2. ೨. The United Nations: Trygve Haldvan Lie (Norway). Accessed 13 December 2006.
  3. )೧ ರಿಂದ ೯:Former Secretaries-General
  4. ೧೦.ಗುಟೆರಸ್

ಉಲ್ಲೇಖ

ಬದಲಾಯಿಸಿ
  1. ವಿಶ್ವಸಂಸ್ಥೆ: ಗುಟೆರಸ್‌ ಪ್ರಮಾಣವಚನ ಸ್ವೀಕಾರ;13 Dec, 2016
  2. New UN chief Guterres vows
  3. "ಆಂಟೊನಿಯೊ ಗುಟೆರಸ್‌ ಅಧಿಕಅರ ಸ್ವೀಕಾರ". Archived from the original on 2017-01-03. Retrieved 2017-01-03.