ಸಂನ್ಯಾಸಿ ನಳ್ಳಿಯು ಪರಾವಲಂಬಿ ಜೀವನಕ್ಕೆ ಮಾರ್ಪಾಡಾದ ಪ್ಯಾಗುರಿಡೇ ಕುಟುಂಬಕ್ಕೆ ಸೇರಿದ ಒಂದು ನಳ್ಳಿ (ಹರ್ಮಿಟ್ ಕ್ರ‍್ಯಾಬ್). ಚಿಪ್ಪಿಲ್ಲದ ದೇಹದ ಹಿಂಭಾಗವನ್ನು ರಕ್ಷಿಸಿಕೊಳ್ಳಲೋಸ್ಕರ ಉದರಪಾದಿಗಳ ಖಾಲಿ ಶಂಖಗಳಲ್ಲಿ ಇದರ ನೆಲೆ.[೧][೨][೩] ಸಮುದ್ರ ಹಾಗೂ ಮಹಾಸಾಗರದ ತೀರಪ್ರದೇಶಗಳು ವಾಸಸ್ಥಾನ. ನೂರೈವತ್ತಕ್ಕಿಂತಲೂ ಹೆಚ್ಚು ಪ್ರಭೇದಗಳಿವೆ. ಉದ್ದ ಕೇವಲ 2.5 ಸೆಂಮೀ.

ಸಂನ್ಯಾಸಿ ನಳ್ಳಿ
Temporal range: Hettangian–Present
ಡಾರ್ಡಾನಸ್ ಕ್ಯಾಲಿಡಸ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ವರ್ಗ: ಮ್ಯಾಲಕೊಸ್ಟ್ರಾಕಾ
ಗಣ: ಡೆಕಾಪೋಡಾ
ಉಪಗಣ: ಪ್ಲೀಯೊಸಯಿಮೇಟಾ
ಕೆಳಗಣ: ಅನೊಮೂರಾ
ಮೇಲ್ಕುಟುಂಬ: ಪ್ಯಾಗುರಾಯ್ಡೀ
Latreille, 1802
ಕುಟುಂಬಗಳು
  • ಕ್ಯಾಲ್ಸಿನಿಡೇ
  • ಸೀನೊಬೈಟಿಡೇ
  • ಡಯೊಜೆನಿಡೇ
  • ಪ್ಯಾಗ್ಯೂರಿಡೇ
  • ಪ್ಯಾರಾಪ್ಯಾಗ್ಯೂರಿಡೇ
  • ಪ್ಯಾರಾಪೈಲೊಚೆಲಿಡೇ
  • ಪೈಲೊಚೆಲಿಡೇ
  • ಪೈಲೊಜಾಕ್ವೆಸಿಡೇ

ದೇಹರಚನೆ ಬದಲಾಯಿಸಿ

ಶಂಖದ ಆಕಾರಕ್ಕೆ ತಕ್ಕಂತೆ ಇದರ ಉದರ ಒಳಭಾಗದಲ್ಲಿ ಸುತ್ತಿಕೊಂಡಿರುತ್ತದೆ. ಶರೀರದ ಬಲಭಾಗದ ಉಪಾಂಗಗಳು ಹೊರಕ್ಕೆ ಚಾಚಿಕೊಂಡು ಚಲನೆಗೆ ಸಹಕಾರಿಯಾಗುತ್ತವೆ. ತೋಳು, ರೆಕ್ಕೆ, ಈಜುರೆಕ್ಕೆ ಮೊದಲಾದ ಅಂಗಗಳು ಸಂಪೂರ್ಣ ಇಲ್ಲವಾಗಿವೆ. ಎಡಭಾಗದ ಉಪಾಂಗಗಳು ಅವನತವಾಗಿರುತ್ತವೆ. ಉದರದ ಉಪಾಂಗಗಳಲ್ಲಿ ಕೊನೆಯ ಜೋಡಿ ಮತ್ತು ಬಾಲದ ಬಳಿಯಿರುವ ಪಾದ ಗಾಳದ ಕೊಕ್ಕೆಯಂತೆ (ಮೀನುಗಾಳ) ಇವೆ. ಇವು ಶಂಖದ ಒಳಭಾಗಕ್ಕೆ ಚುಚ್ಚಿಕೊಂಡಿರುತ್ತವೆ. ಬಲಭಾಗದ ಮೊದಲನೆಯ ಕೊಂಡಿ ದೊಡ್ಡದು. ಅಪಾಯವುಂಟಾದಾಗ ಇಡೀ ಶರೀರವನ್ನು ಶಂಖದ ಒಳಭಾಗಕ್ಕೆ ಎಳೆದುಕೊಂಡು ಕೊಂಡಿಯಿಂದ ಅದರ ಬಾಯಿಯನ್ನು ಮುಚ್ಚುತ್ತದೆ.[೪]

ಕೆಲವು ಜಾತಿಗಳು ಬದಲಾಯಿಸಿ

ಕ್ಲೈಬನೇರಿಯಸ್ ಪ್ರಭೇದ ನಿಂತ ನೀರಿನಲ್ಲೂ ಡಯೋಜಿನಸ್ ಪ್ರಭೇದ ಸಮುದ್ರ ಮತ್ತು ನಿಂತ ನೀರಿನಲ್ಲೂ ಸಿಯೋನೊಬೈಟಾ ಕಡಲು ಮತ್ತು ನೀರಿನ ದಡಗಳಲ್ಲೂ ವಾಸಿಸುತ್ತವೆ. ಕ್ಲೈಬನೇರಿಯಸ್ ಪ್ರಭೇದದ ಕೊಂಡಿಗಳೆರಡೂ ಸಮಗಾತ್ರದವು.

ಕಡಲ ಪುಷ್ಪಕ್ಕೆ ಸಂಬಂ ಬದಲಾಯಿಸಿ

ಸಂನ್ಯಾಸಿ ಏಡಿಗಳಿಗೂ ಕಂಟಕ ಚರ್ಮಿಗಳ ವರ್ಗದ ಕಡಲ ಪುಷ್ಪಗಳಿಗೂ (ಸೀ ಅನಿಮೋನ್) ಸಂಬಂಧವಿದೆ. ಕಡಲಪುಷ್ಪಗಳು ಸಂನ್ಯಾಸಿ ಏಡಿ ವಾಸಿಸುವ ಶಂಖಕ್ಕೆ ಅಂಟಿಕೊಂಡಿದ್ದು ಏಡಿ ಚಲಿಸುವಾಗ ಇವು ಒಯ್ಯಲ್ಪಡುತ್ತವೆ. ಸಹಜವಾಗಿ ಕಡಲಪುಷ್ಪಕ್ಕೆ ಆಹಾರ ಸಂಗ್ರಹಕ್ಕೆ ಹೊಸಹೊಸ ತಾಣಗಳು ದೊರೆಯುತ್ತವೆ. ಕಡಲಪುಷ್ಪಗಳ ಕುಟುಕು ಕಣಗಳಿಂದ ನಳ್ಳಿಗೆ ರಕ್ಷಣೆಯೂ ದೊರೆಯುತ್ತದೆ. ಇಂಥ ಪರಸ್ಪರಾವಲಂಬೀ ಸಂಬಂಧಕ್ಕೆ ಸಹಭುಂಜನ (ಕಮ್ಮೆನ್ಸಲಿಸಮ್) ಎಂದು ಹೆಸರು.

ಉಲ್ಲೇಖಗಳು ಬದಲಾಯಿಸಿ

  1. Patsy McLaughlin & Michael Türkay (2011). Lemaitre R, McLaughlin P (eds.). "Paguroidea". World Paguroidea & Lomisoidea database. World Register of Marine Species. Retrieved November 25, 2011.
  2. ಉಲ್ಲೇಖ ದೋಷ: Invalid <ref> tag; no text was provided for refs named checklist
  3. Hazlett, B.A. (1981). "The Behavioral Ecology of Hermit Crabs". Annual Review of Ecology and Systematics. 12 (1): 1–22. doi:10.1146/annurev.es.12.110181.000245. ISSN 0066-4162.
  4. Ray W. Ingle (1997). "Hermit and stone crabs (Paguroidea)". Crayfishes, lobsters, and crabs of Europe: an illustrated guide to common and traded species. Cambridge University Press. pp. 83–98. ISBN 978-0-412-71060-5.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: