ಈ ವಂಶದ ಪ್ರಾಣಿಗಳು ತಮ್ಮ ದೇಹದ ಒಳಗೆ ಜೀರ್ಣಕ್ರಿಯೆಗೆ ಸಹಕರಿಸುವ ಜಠರಾವಕಾಶ ವನ್ನು ಹೊಂದಿರುವುದರಿಂದ ಇವುಗಳನ್ನು ಸೀಲೆಂಟಾರೇಟಾ ಎಂದು ಕರೆಯಲಾಗುತ್ತದೆ.ಶತ್ರುಗಳಿಂದ ರಕ್ಷಣೆ ಪಡೆಯಲು ಮತ್ತು ಆಹಾರವನ್ನಾಗಿ ಬಳಸುವ ಪ್ರಾಣಿಗಳನ್ನು ಕೊಲ್ಲಲು ಕುಟುಕು ಕಣಗಳನ್ನು ಹೊಂದಿರುವುದರಿಂದ ಇವುಗಳನ್ನು ಕುಟುಕು ಕಣಗಳೆಂದು ಕರೆಯಲಾಗುತ್ತದೆ.

ಕುಟುಕು ಕಣವಂತಗಳು ಜಲವಾಸಿಗಳಾಗಿದ್ದು ಹೆಚ್ಚಾಗಿ ಸಮುದ್ರದಲ್ಲಿ ಕಾಣಸಿಗುತ್ತದೆ. ಇವುಗಳು ಒಂಟಿಯಾಗಿ ಅಥವಾ ವಸಾಹತುಗಳಲ್ಲಿ ವಾಸಿಸುತ್ತದೆ.ಇವುಗಳು ಸ್ಥಾನ ಬಂಧಿತವಾಗಿರಾಗಬಹುದು ಅಥವಾ ಮುಕ್ತವಾಗಿ ಈಜುವ ಪ್ರಾಣಿಗಳಾಗಿರಬಹುದು.

ಇವುಗಳು ಬಹುಕೋಶಿಯ ಇಪ್ಪದರದ ಜೀವಿಗಳಾಗಿದ್ದು,ಅಂಗಾಂಶ ಹಂತದ ಸಂಯೋಜನೆಯನ್ನು ಪ್ರರ್ದಶಿಸುತ್ತವೆ ಮತ್ತು ತ್ರಿಜ್ಯೀಯ ಸಮ್ಮಿತಿಯ ದೇಹವನ್ನು ಹೊಂದಿರುತ್ತದೆ.ಉರುಳೆ ಅಥವಾ ದುಂಡನೆಯ ಆಕಾರದ ಬಿಲ್ಲೆಯಂತಹ ದೇಹವನ್ನು ಹೊಂದಿವೆ.ದೇಹವು ಸೀಲೆಂಟರಾನ್ ಎಂಬ ಚೀಲದಂತಹ ಜಠರಾವಕಾಶವನ್ನು ಹೊಂದಿರುತ್ತದೆ.ಇದು ಬಾಯಿಯ ಮೂಲಕ ಹೊರಗಿನ ಪರಿಸರಕ್ಕೆ ತೆರೆದುಕೊಳ್ಳತ್ತದೆ.ಕಲವು ಕುಟುಕು ಕಣವಂತಗಳು ಕ್ಯಾಲ್ಸಿಯಂ ಕಾರ್ಬೋನೇಟ್ ನಿಂದ ಮಾಡಿದ ಹೊರಕವಚವನ್ನು ಸ್ರವಿಸುತ್ತದೆ.ಇಂತಹ ಪ್ರಾಣಿಗಳನ್ನು ಹವಳದ ಪ್ರಾಣಿಗಳೆಂದು ಕರೆಯುತ್ತಾರೆ.ಗ್ರಹಣಾಂಗಗಳು ಎಂದು ಕರೆಯಲ್ಲಡುವ ಮೃದುವಾದ,ಉದ್ದನೆಯ,ಬೆರಳಿನ ರೀತಿಯ,ನಮ್ಯ ರಚನೆಗಳು ಇವುಗಳ ಬಾಯಿಯನ್ನು ಸುತ್ತುವರಿದಿರುತ್ತದೆ.ಗ್ರಹಣಾಂಗಗಳು ಆಹಾರವನ್ನು ಹಿಡಿಯಲು ಮತ್ತು ಸ್ವರಕ್ಷಣೆಗೆ ಸಹಾಯ ಮಾಡುತ್ತವೆ.ಕುಟುಕುವ ಕ್ಯಾಪ್ಸೂಲ್ ಗಳು ಅಥವಾ ನೆಮಾಟೋಸಿಸ್ಟ್ ಗಳನ್ನು ಹೊಂದಿರುವ ನೀಡೋಬ್ಲಾಸ್ಟ್ ಅಥವಾ ನೀಡೋಸಿಸ್ಟ್ ಅಥವಾ ನೆಮಾಟೊಸೈಟ್ ಎಂಬ ವಿಶೇಷ ಕುಟುಕು ಕೋಶಗಳು ದೇಹ ಮತ್ತು ಗ್ರಹಣಾಂಗಗಳ ಮೇಲೆ ಕಂಡುಬರುತ್ತವೆ.

ಕುಟುಕು ಕಣವಂತಗಳು ನೀರಿನಿಂದ ಆಹಾರವನ್ನು ಪಡೆಯುತ್ತವೆ.ನೀಡೊಬ್ಲಾಸ್ಟ್ ಗಳು ಬೇಟೆಯನ್ನು ನಿಶ್ಚಲಗೊಳಿಸಲು ಸಹಾಯ ಮಾಡುತ್ತವೆ ಮತ್ತು ಗ್ರಹಣಾಂಗಗಳ ಬೇಟೆಯನ್ನು ಹಿಡಿದು ಜಠರಾವಕಾಶದ ಒಳಗೆ ಇಳಿಸುತ್ತವೆ.ಜೀರ್ಣ ಕ್ರೀಯೆಯು ಅಂತರ್ ಕೋಶಿಯ ಅಥವಾ ಬಹಿರ್ ಕೋಶಿಯವಾಗಿರುತ್ತದೆ. ಸಂತಾನೋತ್ಪತ್ತಿ: ಲೈಂಗಿಕ ಅಥವಾ ನಿರ್ಲಂಗ ರೀತಿಯ ಸಂತಾನೋತ್ಪತ್ತಿಯನ್ನು ಈ ಪ್ರಾಣಿಗಳಲ್ಲಿ ಕಾಣಬಹುದು.ನಿರ್ಲಂಗ ರೀತಿಯ ಸಂತಾನೋತ್ಪತ್ತಿಯು ಬಾಹ್ಯ ಮೊಳಕೆಯ ಮೂಲಕ ನಡೆಯುತ್ತದೆ.ಲೈಂಗಿಕ ಸಂತಾನೋತ್ಪತ್ತಿಯು ಗ್ಯಾಮಿಟ್ ಗಳ ಉತ್ಪಾದನೆಯಿಂದ ನಡೆಯುತ್ತದೆ.ಇವುಗಳು ಉಭಯ ಲಿಂಗಿಗಳು ಅಥವಾ ಏಕಲಿಂಗಿಗಳಾಗಿರುತ್ತದೆ.

ಆರ್ಥಿಕ ಪ್ರಾಮುಖ್ಯತೆ

ಬದಲಾಯಿಸಿ
  • ಕುಟುಕು ಕಣವಂತಗಳು ಕಡಿಮೆ ಆರ್ಥಿಕ ಮಹತ್ವವನ್ನು ಹೊಂದಿವೆ.ಇಟಲಿ ಮತ್ತು ಪೌರಸ್ತ್ಯ ವಲಯಗಳಲ್ಲಿ ಕೆಲವು ಅಂಬಲಿ ಮೀನುಗಳನ್ನು ಆಹಾರವನ್ನಾಗಿ ಬಳಸುತ್ತಾರೆ.
  • ಕುಟುಕು ಕಣವಂತಗಳು ಅನೇಕ ಮೀನುಗಳು,ಮೃದ್ವಂಗಿಗಳು ಮತ್ತು ಕಠಿಣಚರ್ಮಿಗಳಿಗೆ ಆಹಾರದ ಆಕರವಾಗಿದೆ.
  • ಕೆಲವು ಹವಳಗಳು ಆಕರ್ಷಕ ಬಣ್ಣಗಳನ್ನು ಹೊಂದಿರುವುದರಿಂದ ತುಂಬಾ ಸುಂದರವಾಗಿ ಕಾಣುತ್ತವೆ.ಇವುಗಳನ್ನು ವ್ಯಾಪಕವಾಗಿ ಆಭರಣಗಳನ್ನು ತಯಾರಿಸುವ ಉದ್ಯಮದಲ್ಲಿ ಬಳಸಲಾಗುತ್ತದೆ.ಕೆಲವು ಹವಳಗಳನ್ನು ಮನೆಗಳಲ್ಲಿ ಮತ್ತು ಮತ್ಸ್ಯಾಗಾರಗಳಲ್ಲಿ ಅಲಂಕಾರಿಕ ವಸ್ತುವನ್ನಾಗಿ ಇಡುವರು.

ಉದಾ:ಹೈಡ್ರಾ,ಅಂಬಲಿ ಮೀನು,ಹವಳ.

ಉಲ್ಲೇಖಗಳು

ಬದಲಾಯಿಸಿ