ಸೈಂಟ್ ಮೇರೀಸ್ ದ್ವೀಪ
ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‍ಲ್ಯಾಂಡ್ ಎಂದು ಇನ್ನೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ[೧]. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವೂ ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.
ಸೈಂಟ್ ಮೇರೀಸ್ ದ್ವೀಪ
ಸೈಂಟ್ ಮೇರೀಸ್ ದ್ವೀಪ. | |
---|---|
ದ್ವೀಪ | |
Four Islands -Coconut Island, the North Island, the Daryabahadurgarh Island and the South Island |
ಇತಿಹಾಸ
ಬದಲಾಯಿಸಿಇದರ ಮೊದಲ ಹೆಸರು ತೋನ್ಸೆ ಪಾರ್ ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಶಿಲುಬೆಯೊಂದನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದೂ ಹಾಗಾಗಿ ಈ ದ್ವೀಪ ಸೈಂಟ್ ಮೇರೀಸ್ ಎಂಬ ಹೆಸರನ್ನು ಪಡೆಯಿತು ಎಂದು ಹೇಳಲಾಗುತ್ತದೆ[೨].
ಭೂವಿಜ್ಞಾನ ಹಾಗು ಸ್ಥಳವಿವರಣೆ
ಬದಲಾಯಿಸಿಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ ಬಸಾಲ್ಟ್-ರಯೋಡೇಸೈಟು ವರ್ಗದ ಶಿಲೆ (ಬಸಾಲ್ಟಿಕ್-ರಿಯೋಡಾಸಿಟಿಕ್ ಬಂಡೆಗಳು) ಗಳಿಂದ ರಚನೆಯಾಗಿದ್ದು ಷಡ್ಭುಜ ಆಕೃತಿಯ ಶಿಲೆಗಳ ಸಮೂಹವಾಗಿದೆ. ಈ ಬಗೆಯ ಸುಂದರ ಷಡ್ಭುಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇವು ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ಸುಮಾರು ೫೦೦ ಮೀ (೧,೬೪೦.೪ ಅಡಿ). ಉದ್ದವಾಗಿದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ[೩][೪]. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಚಾಚಿಕೊಂಡಿರುವ ದ್ವೀಪಸಮೂಹವು ೪ ದೊಡ್ದ ದ್ವೀಪಗಳಿಂದ ಕೂಡಿದೆ. ಈ ೪ ದೊಡ್ದ ದ್ವೀಪಗಳೆಂದರೆ
- ನಾರಿಕೇಳ(ಕೊಕೊನೆಟ್) ದ್ವೀಪ
- ಉತ್ತರ ದ್ವೀಪ
- ದರಿಯಾ ಬಹದ್ದೂರ್ ದ್ವೀಪ
- ದಕ್ಷಿಣ ದ್ವೀಪ
ದ್ವೀಪದ ಛಾಯಾಚಿತ್ರಗಳು
ಬದಲಾಯಿಸಿ-
ದ್ವೀಪದ ಒಂದು ಸಮುದ್ರ ತಟ.
-
ದ್ವೀಪದ ಶಿಲಾಸ್ತರಗಳ ರಚನೆ.
-
ದ್ವೀಪದ ದೊರನೊಟ.
-
ದ್ವೀಪದಲ್ಲಿ ಸ್ಯಾಂಡ್ಪೈಪರ್ಗಳು
ಉಲ್ಲೇಖ
ಬದಲಾಯಿಸಿ- ↑ "Columnar Basalt". Geological Survey of India. Archived from the original on 2011-07-21. Retrieved 2008-07-26.
- ↑ Prabhu, Ganesh (2006-03-31). "A beach and an island to relax on". ದ ಹಿಂದು. Archived from the original on 2006-12-13. Retrieved 2008-10-28.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "St Mary's Island". Retrieved 2009-01-24.
- ↑ "Where rocks tell a tale". ದಿ ಹಿಂದೂ. 2002-09-16. Retrieved 2009-01-24.