ಸುಪ್ರಸಿದ್ದ ಧಾರ್ಮಿಕ ಕ್ಷೇತ್ರ ಉಡುಪಿಯಿಂದ ಕೇವಲ ೬ ಕಿ.ಮೀ ದೂರದಲ್ಲಿರುವ ಒಂದು ಸುಂದರ ಸಮುದ್ರ ತೀರದ ಪಟ್ಟಣ ಮಲ್ಪೆ. ಇದುವೇ ನೈಸರ್ಗಿಕ ಬಂದರು ಹಾಗೂ ಕರ್ನಾಟಕದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣ. ಅಲ್ಲದೆ ಇದು ಉದ್ಯಾವರ ನದಿಯ ದಂಡೆಯ ಮೇಲೆ ಇರುವುದರಿಂದ ಇದು ಬೆರಗುಗೊಳಿಸುವಷ್ಟು ಸುಂದರವಾದ ಪ್ರವಾಸಿ ಸ್ಥಳ

ಮಲ್ಪೆ
suburb
Nickname: 
ಮಲಪು
Country India
StateKarnataka
DistrictUdupi
CityUdupi
Languages
 • Officialತುಳು, ಕನ್ನಡ
Time zoneUTC+5:30 (IST)
PIN
576 108 (೫೭೬ ೧೦೮)
Vehicle registrationKA 20

ಮಲ್ಪೆಯಲ್ಲಿ ಪ್ರವಾಸಿಗರ ಆಯ್ಕೆಗಳು

ಬದಲಾಯಿಸಿ

ಮಲ್ಪೆಯ ಮುಖ್ಯ ಆಕರ್ಷಣೆಗಳೆಂದರೆ ಕರಾವಳಿಯಿಂದೀಚೆಗೆ ಇರುವ , ಅಗ್ನಿಪರ್ವತಗಳ ಬಂಡೆಗಳಿಂದಾದ ವಿಶಿಷ್ಟ ದ್ವೀಪಗಳು. ಅದರಲ್ಲೂ , ಸಂತ ಮೇರಿ ದ್ವೀಪಗಳಂತೂ ವಿಶಿಷ್ಟ ಆಕಾರವುಳ್ಳ ಕಡಿದಾದ ಬಂಡೆಗಳ ದ್ವೀಪವಾಗಿದ್ದು, ಇವುಗಳು ದಶಕಗಳ ಹಿಂದೆ ಹೊರ ಚಿಮ್ಮುವ ಲಾವಾಗಳಿಂದಾದ ಕಾಲಂನಾರ್ ಬಸಲ್ಟಿಕ್ ಲಾವಾ ದಿಂದ ರೂಪುಗೊಂಡಿವೆ.

ಮಲ್ಪೆ, ಭಾರತದ ಭೂ-ಪ್ರವಾಸೋದ್ಯಮದ ಒಂದು ಪ್ರಮುಖ ಆಕರ್ಷಣೆ ಹಾಗೂ ಈ ಸ್ಥಳದ ಮೇಲೆ ಭೌಗೋಳಿಕ ವಿಜ್ಞಾನಿಗಳಿಗೆ ಎಲ್ಲಿಲದ ಆಸಕ್ತಿ. ಈ ಸ್ಥಳದ ಇತರೆ ಆಕರ್ಷಣೆಗಳೆಂದರೆ ಇಲ್ಲಿರುವ ಬಲರಾಮನ ಹಾಗೂ ಅನಂತೇಶ್ವರನ ದೇವಾಲಯಗಳು. ಇಲ್ಲಿರುವ ದ್ವೀಪಗಳಲ್ಲೊಂದರ ಮೇಲೆ , ಒಂದು ಕೋಟೆ ಇದ್ದು ಅದನ್ನು ಬಸವಪ್ಪ ನಾಯಕರ್ ನಿರ್ಮಿಸಿರುವುದಾಗಿ ತಿಳಿದು ಬಂದಿದೆ.ನೀವು ಮಲ್ಪೆಗೆ ಹೋದಾಗ , ಸಂತ ಮೇರಿ ದ್ವೀಪಕ್ಕೆ ಹಾಯ್ಗಡ ಅಥವಾ ದೋಣಿ ವಿಹಾರದಲ್ಲಿ ಪ್ರಯಾಣಿಸಲು ಮರೆಯದಿರಿ : ಗೋಲ್ಡನ್ ಸ್ಯಾಂಡ್ಸ್ , ಪೃಸ್ಟೀನ್ ಬೀಚ್ ಗಳ ಸುತ್ತಲೂ ತೂಗಾಡುವ ತೆಂಗಿನ ಮರಗಳು, ಸ್ಫಟಿಕದಷ್ಟು ಸ್ಫುಟವಾದ ಮತ್ತು ನಿರ್ಮಲವಾದ ಸರೋವರವು ಕಣ್ಣುಗಳಿಗೆ ಹಬ್ಬದಂತಿರುತ್ತದೆ

ಸ್ಥಳೀಯ ಪ್ರದೇಶದ ಒಂದು ಪರಿಚಯ

ಬದಲಾಯಿಸಿ

ಮತ್ಸ್ಯ ಕೈಗಾರಿಕೆಯನ್ನು ಹೊರತುಪಡಿಸಿ, ಹೆಂಚು ತಯಾರಿಕೆ ಹಾಗೂ ತೆಂಗು ಕೃಷಿ ಮಲ್ಪೆಯ ಪ್ರಮುಖ ಕಸುಬುಗಳು. ಈ ಸ್ಥಳವು ತನ್ನ ನೆಲೆ ಹಾಗೂ ಭೌಗೋಳಿಕ ವೈಶಿಷ್ಟತೆಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರಿಂದಲೇ ಪ್ರವಾಸೋಧ್ಯಮ ಇಲಾಖೆಯು ಸಮಗ್ರ ಅಭಿವೃಧ್ಧಿ ಹೊಂದುತಲಿದೆ . ತುಳು, ಕೊಂಕಣಿ ಮತ್ತು ಕನ್ನಡ ಮಲ್ಪೆಯ ಪ್ರಮುಖ ಭಾಷೆಗಳಾಗಿವೆ.ಮಲ್ಪೆಯ ಸುತ್ತಮುತ್ತ ಹಲವು ಬೀಚ್ ರೆಸಾರ್ಟ್ ಗಳನ್ನು ಕಾಣಬಹುದು ಇವು ಪ್ರವಾಸಿಗರ ಅಗತ್ಯಗಳನ್ನು ನಿವಾರಿಸುತ್ತವೆ. ಮಲ್ಪೆಯು ಉಡುಪಿಯ ಒಂದು ಉಪನಗರವೂ ಹೌದು, ನಿಮಗೆ ಉಳಿದುಕೊಳ್ಳಲು ಇರುವ ಹಲವು ಆಯ್ಕೆಗಳಿಂದ ಸರಿಯಾದದ್ದನ್ನು ಆರಿಸಬಹುದು. ದಿ ಪ್ಯಾರಾಡೈಸ್ ಬೀಚ್ ರೆಸಾರ್ಟ್, ದಿ ಮಲ್ಪೆ ಬೀಚ್ ರೆಸಾರ್ಟ್ ಹಾಗೂ ದಿ ಪಾಮ್ ಗ್ರೂವ್ ಬೀಚ್ ರೆಸಾರ್ಟ್ ಇರುವುದರಲ್ಲಿ ಕೆಲವು ತಂಗುದಾಣಗಳು. ಮಲ್ಪೆ ತೀರವು , ಪ್ರಶಾಂತವಾದ ಸರೋವರಗಳ ಮತ್ತು ನಿರ್ಮಲ ನೀಲಾಕಾಶವನ್ನು ಹೊಂದಿದ್ದು ಕೆರೀಬಿಯನ್ ನ ಪಡಿರೂಪಗಳಷ್ಟೇ ರಮಣೀಯವಾಗಿದೆ. ನೀವು ಸಂತ ಮೇರಿ ದ್ವೀಪಕ್ಕೆ ದೋಣಿ ವಿಹಾರದಲ್ಲಿ ತೆರಳುವಾಗ ನಿಜವಾಗಿಯೂ ಈ ಸರೋವರದ ಚಿರಸೌಂದರ್ಯವು ಮೆಚ್ಚಿಕೊಳ್ಳುವಂತಹುದೇ. []

ತಲುಪುವುದು ಹೇಗೆ

ಬದಲಾಯಿಸಿ
  1. ಬೆ೦ಗಳೂರಿನಿ೦ದ ಉಡುಪಿಗೆ ದಿನ-ನಿತ್ಯ ಸರ್ಕಾರಿ ಬಸ್ /ಖಸಗಿ ಬಸ್ ಸ೦ಚರಿಸುತ್ತದೆ.
    1. ಉಡುಪಿಯಿ೦ದ ಮಲ್ಪೆಗೆ ತಲುಪಲು ಪ್ರತಿ ೫-೧೫ ನಿಮಿಷಕ್ಕೊಮ್ಮೆ ಬಸ್ ವ್ಯವಸ್ತೆ ಇದೆ.
    2. ಉಡುಪಿಯಿ೦ದ ಮಲ್ಪೆಗೆ ತಲುಪಲು ಆಟೋ ರಿಕ್ಷಾ ವ್ಯವಸ್ತೆ ಇದೆ.

ಛಾಯಾಚಿತ್ರ

ಬದಲಾಯಿಸಿ
 
ಮಲ್ಪೆ


ಉಲ್ಲೇಖನಗಳು

ಬದಲಾಯಿಸಿ



"https://kn.wikipedia.org/w/index.php?title=ಮಲ್ಪೆ&oldid=929187" ಇಂದ ಪಡೆಯಲ್ಪಟ್ಟಿದೆ