ಸಂಜಯ್ ಗಾಂಧಿ ಜೈವಿಕ ಉದ್ಯಾನ
ಸಂಜಯ್ ಗಾಂಧಿ ಜೈವಿಕ ಉದ್ಯಾನ (ಸಂಜಯ್ ಗಾಂಧಿ ಸಸ್ಯ ಮತ್ತು ಪ್ರಾಣಿ ಉದ್ಯಾನ ಅಥವಾ ಪಟ್ನಾ ಮೃಗಾಲಯ ಎಂದೂ ಪರಿಚಿತವಾಗಿದೆ) ಭಾರತದ ಬಿಹಾರ ರಾಜ್ಯದ ಪಟ್ನಾದಲ್ಲಿ ಸ್ಥಿತವಾಗಿದೆ.[೧][೨][೩] ಮೃಗಾಲಯವಾಗಿ ಈ ಉದ್ಯಾನವನ್ನು ಸಾರ್ವಜನಿಕರಿಗೆ ೧೯೭೩ರಲ್ಲಿ ತೆರೆಯಲಾಯಿತು. ಈ ಉದ್ಯಾನವು ಪಟ್ನಾದ ಅತ್ಯಂತ ಹೆಚ್ಚಾಗಿ ಭೇಟಿಕೊಡಲಾದ ಪಿಕ್ನಿಕ್ ತಾಣವಾಗಿದೆ.
ಈ ಉದ್ಯಾನವನ್ನು ಮೊದಲು ೧೯೬೯ರಲ್ಲಿ ಸಸ್ಯೋದ್ಯಾನವಾಗಿ ಸ್ಥಾಪಿಸಲಾಗಿತ್ತು.
೧೯೭೩ರಿಂದ ಈ ಉದ್ಯಾನವು ಜೈವಿಕ ಉದ್ಯಾನವಾಗಿದ್ದು ಒಂದು ಸಸ್ಯೋದ್ಯಾನವನ್ನು ಮೃಗಾಲಯದೊಂದಿಗೆ ವಿಲೀನಗೊಳಿಸಿದೆ.
ಮೃಗಾಲಯವು ಪ್ರಸಕ್ತವಾಗಿ ೮೦೦ ಕ್ಕಿಂತ ಹೆಚ್ಚು ಪ್ರಾಣಿಗಳಿಗೆ ಮನೆಯಾಗಿದೆ. ಹುಲಿ, ಚಿರತೆ, ಮೋಡದ ಚಿರತೆ, ಹಿಪಪಾಟಮಸ್, ಮೊಸಳೆ, ಆನೆ, ಹಿಮಾಲಯದ ಕಪ್ಪು ಕರಡಿ, ಗುಳ್ಳೆನರಿ, ಕೃಷ್ಣಮೃಗ, ಚುಕ್ಕೆಯುಳ್ಳ ಜಿಂಕೆ, ನವಿಲು, ಮೈನಾ, ಘಡಿಯಾಲ್, ಹೆಬ್ಬಾವು, ಘೇಂಡಾಮೃಗ, ಚಿಂಪಾಂಜ಼ಿ, ಜಿರಾಫ಼ೆ, ಝೀಬ್ರಾ, ಎಮು ಮತ್ತು ಬಿಳಿ ನವಿಲು ಸೇರಿದಂತೆ ಸುಮಾರು ೧೧೦ ಜಾತಿಗಳಿವೆ.
ಸಸ್ಯೋದ್ಯಾನವಾಗಿ ಆರಂಭವಾದ ಈ ಉದ್ಯಾನವು ಪ್ರಸಕ್ತ ೩೦೦ ಕ್ಕಿಂತ ಹೆಚ್ಚು ಜಾತಿಗಳ ಮರಗಳು, ಮೂಲಿಕೆಗಳು ಮತ್ತು ಪೊದೆಸಸ್ಯಗಳನ್ನು ಹೊಂದಿದೆ. ಪ್ರದರ್ಶಿತ ಸಸ್ಯವಸ್ತುಗಳಲ್ಲಿ ಔಷಧೀಯ ಸಸ್ಯಗಳಿಗಾಗಿ ಒಂದು ಸಸಿತೋಟ, ಆರ್ಕಿಡ್ ಮನೆ, ಜರೀಗಿಡಗಳ ಮನೆ, ಗಾಜಿನ ಮನೆ ಮತ್ತು ಒಂದು ಗುಲಾಬಿ ಹೂಗಳ ಮನೆ ಸೇರಿವೆ.
ಛಾಯಾಂಕಣ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Walk on Jan 1 not allowed in Patna zoo - The Times of India". The Times of India. Archived from the original on 29 May 2018.
- ↑ "Patna zoo to get 14 new animals - The Times of India". The Times of India. Archived from the original on 15 April 2014.
- ↑ "Lone Patna zoo elephant to be shifted to Valmikinagar Tiger Reserve - The Times of India". The Times of India. Archived from the original on 13 April 2014.