ಸಂಗೀತ ನಾಟಕ ಅಕಾಡೆಮಿ
ಸಂಗೀತ ನಾಟಕ ಅಕಾಡೆಮಿ (ಆಂಗ್ಲ: The National Academy for Music, Dance and Drama) ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ. [೧]
ಸಂಕ್ಷಿಪ್ತ ಹೆಸರು | ಎಸ್ಎನ್ಎ |
---|---|
ಸ್ಥಾಪನೆ | ಮೇ 31, 1952 |
ಪ್ರಧಾನ ಕಚೇರಿ | ರವೀಂದ್ರ ಭವನ್, ಫಿರೋಜ್ಶಾ ರಸ್ತೆ, ನವ ದೆಹಲಿ, ಭಾರತ |
ಪ್ರದೇಶ served | ಭಾರತ |
ಪೋಷಕ ಸಂಸ್ಥೆಗಳು | ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ |
ಅಧಿಕೃತ ಜಾಲತಾಣ | sangeetnatak.org |
ಇತಿಹಾಸ
ಬದಲಾಯಿಸಿ೧೯೫೨ರ ಮೇ ೩೧ರಂದು ಕೇಂದ್ರ ಸರಕಾರದ ಶಿಕ್ಷಣ ಮಂತ್ರಾಲಯವು ಹುಟ್ಟುಹಾಕಿದ ಈ ಸಂಸ್ಥೆ ಅದರ ಮುಂದಿನ ವರ್ಷದಿಂದ ಕೆಲಸ ಪ್ರಾರಂಭಿಸಿತು. ಡಾ. ಪಿ.ವಿ.ರಾಜಮನ್ನಾರ್ ಅದರ ಮೊದಲ ಅಧ್ಯಕ್ಷರಾಗಿದ್ದರು. ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಪಾರ್ಲಿಮೆಂಟ್ ಹೌಸಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಸಂಸ್ಥೆಯನ್ನು ಉದ್ಘಾಟಿಸಿದರು. [೨]
ಅಕಾಡೆಮಿ ಕೊಡಮಾಡುವ ಫೆಲೋಶಿಪ್ ಮತ್ತು ಪ್ರಶಸ್ತಿಗಳಿಗೆ ಅಪಾರ ಪ್ರತಿಷ್ಟೆಯಿದೆ.
ಕಾರ್ಯಗಳು
ಬದಲಾಯಿಸಿಸಂಗೀತ , ನಾಟಕ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಭಾರತದ ಶ್ರೀಮಂತ ಪರಂಪರೆಯನ್ನು ಕಾಪಾಡಿ , ಬೆಳೆಸುವ ಹೊಣೆ ಹೊತ್ತಿರುವ ಈ ಅಕಾಡೆಮಿ ಈ ಕ್ಷೇತ್ರದಲ್ಲಿ ಭಾರತದ ಅತ್ಯುಚ್ಚ ಸಂಸ್ಥೆ. ಇದು ರಾಜ್ಯ ಸರಕಾರಗಳು ಮತ್ತು ದೇಶಾದ್ಯಂತ ಹರಡಿರುವ ವಿವಿಧ ಕಲಾ ಅಕಾಡೆಮಿಗಳೊಂದಿಗೂ ಕೆಲಸ ಮಾವಡುತ್ತದೆ.
ಇದು ರಾಷ್ಟ್ರ ಮಟ್ಟದ ಸಂಸ್ಥೆಗಳನ್ನು ಹುಟ್ಟುಹಾಕಿ ನಡೆಸುತ್ತದೆ. ಇದರ ಆಶ್ರಯದಲ್ಲಿ ನಡೆಯುತ್ತಿರುವ ಕೆಲವು ಅಂಥಾ ಸಂಸ್ಥೆಗಳು
- ರಾಷ್ಟ್ರೀಯ ನಾಟಕ ಶಾಲೆ (National School of Drama (NSD), ನವದೆಹಲಿ ೧೯೫೯ .
- ಜವಹರಲಾಲ್ ನೆಹರೂ ಮಣಿಪುರ ನೃತ್ಯ ಅಕಾಡೆಮಿ , ಇಂಫಾಲ್
- ಕಥಕ್ ಕೇಂದ್ರ (National Institute of Kathak Dance), ನವದೆಹಲಿ ೧೯೬೪
- ಕೇರಳದ ಪುರಾತನ ಸಂಸ್ಕೃತ ರಂಗಭೂಮಿ "ಗುಡಿಯಾಟ್ಟಂ" ಬೆಂಬಲಕ್ಕಾಗಿ ರಾಷ್ಟ್ರೀಯ ಯೋಜನೆಗಳು.
- ಸಂಗೀತ, ನೃತ್ಯ ಮತ್ತು ನಾಟಕ ಕ್ಷೇತ್ರಗಳ ಶಿಕ್ಷಣ, ಪ್ರದರ್ಶನ ಅಥಾ ಪ್ರೋತ್ಸಾಹದ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆಗಳಿಗೆ ಸಹಾಯ ನೀಡುವುದು
- ಈ ಕ್ಷೇತ್ರಗಳಲ್ಲಿ ಸಂಶೋಧನೆ, ದಾಖಲಾತಿ ಮತ್ತು ಪ್ರಕಟಣೆಗಳಿಗೆ ಧನಸಹಾಯ ನೀಡುವುದು.
- ವಿದ್ವಾಂಸರಿಂದ ಸೆಮಿನಾರುಗಳನ್ನು ಸಮ್ಮೇಳನಗಳನ್ನು ಏರ್ಪಡಿಸುವುದು
- ದಾಖಲೆಗಳನ್ನು ಮತ್ತು ರೆಕಾರ್ಡುಗಳನ್ನು ತನ್ನ ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯದಲ್ಲಿ ಜೋಪಾನವಾಗಿಡುವುದು.
- ಈ ಕ್ಷೇತ್ಗಳಿಗೆ ಸಂಬಂಧಪಟ್ಟಂತೆ ನೀತಿನಿಯಮಗಳನ್ನು ರೂಪುಗೊಳಿಸಲು ಮತ್ತು ಜಾರಿಗೆ ತರಲು ಭಾರತ ಸರಕಾರಕ್ಕೆ ಸಹಾಯ ಮಾಡುವುದು.
- ದೇಶದ ವಿವಿಧ ಪ್ರದೇಶಗಳ, ಹಾಘೂ ಭಾರತ ಮತ್ತು ಹೊರ ದೇಶಗಳ, ಸಾಂಸ್ಕೃತಿಕ ಸಂಬಂದಗಳನ್ನು ಬಲಪಡಿಸುವುಧು ಈ ಸಂಸ್ಥೆಯ ಕಾರ್ಯದಲ್ಲಿ ಸ್ವಲ್ಪಮಟ್ಟಿಗೆ ಬರುತ್ತದೆ.[೩]
ಸೌಲಭ್ಯಗಳು
ಬದಲಾಯಿಸಿಅಕಾಡೆಮಿ ಈ ಮಾಹಿತಿಯ ಒಂದು ಬಹುಮುಖ್ಯ ಆಕರವಾಗಿದ್ದು ಈ ಕೆಳಕಂಡ ಸೌಲಭ್ಯಗಳನ್ನು ಹೊಂದಿದೆ.
ದೃಶ್ಯ ಶ್ರಾವ್ಯ ಮಾಧ್ಯಮ ಸಂಗ್ರಹಾಲಯ
ಬದಲಾಯಿಸಿಇಲ್ಲಿ ಅನೇಕ ದೃಶ್ಯ ಶ್ರಾವ್ಯ ಟೇಪುಗಳು , ಛಾಯಾಚಿತ್ರಗಳು, ಫಿಲಮ್ಮುಗಳ ಸಂಗ್ರಹವಿದೆ. ಭಾರತದಲ್ಲಿಯೇ ಅತಿ ದೊಡ್ಡದಾದ ಈ ಸಂಗ್ರಹಾಲಯವನ್ನು ಸಂಶೋಧನೆಗಳಿಗಾಗಿ ಉಪಯೋಗಿಸಲಾಗುತ್ತದೆ.
ಗ್ರಂಥಾಲಯ
ಬದಲಾಯಿಸಿಇಲ್ಲಿಯ ಗ್ರಂಥಾಲಯದಲ್ಲಿ ಸುಮಾರು ೨೨,೦೦೦ ಪುಸ್ತಕಗಳಿವೆ. ನೃತ್ಯ, ನಾಟಕ, ಸಂಗೀತ, ರಂಗಭೂಮಿ, ಸಮಾಜಶಾಸ್ತ್ರ, ಜಾನಪದ, ಆದಿವಾಸಿ ಅಧ್ಯಯನಗಳು, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ , ಭಾರತೀಯ ಕಲೆ, ಧರ್ಮ ಮತ್ತು ಪುರಾಣಗಳು , ಮಾನವ ವಂಶ ಶಾಸ್ತ್ರ , ಈ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳಲ್ಲದೆ, ವಿಶ್ವಕೋಶಗಳು, ಶಬ್ದಕೋಶಗಳು , ವಾರ್ಷಿಕ ಸಂಚಿಕೆಗಳು, ಪುಸ್ತಕಪಟ್ಟಿಗಳು, ಸೂಚಿಗಳು, ಮತ್ತು ಸಂಬಂಧಪಟ್ಟ ಪತ್ರಿಕೆಗಳ ಕಟಿಂಗುಗಳು ಮುಂತಾದ ಆಕರಗಳು ಸಹಾ ಇಲ್ಲಿವೆ.
ಇವಲ್ಲದೇ , ೧೯೫೩ರಿಂದ ಪ್ರಶಸ್ತಿ ವಿಜೇತರಾದವರ ಮತ್ತು ಇತರ ಪ್ರಸಿದ್ಧರ ಮಾಹಿತಿಗಳನ್ನೂ ಇದು ಕಲೆಹಾಕುತ್ತದೆ.[೪]
ಸಂಗೀತ ವಾದ್ಯಗಳ ಗ್ಯಾಲರಿ
ಬದಲಾಯಿಸಿನವದೆಹಲಿಯ ರವೀಂದ್ರ ಭವನದಲ್ಲಿರುವ ವಸ್ತುಸಂಗ್ರಹಾಲಯ ಮತ್ತು ಗ್ಯಾಲರಿಯಲ್ಲಿ ೨೦೦ಕ್ಕೂ ಹೆಚ್ಚು ಸಂಗೀತ ವಾದ್ಯಗಳ ಸಂಗ್ರಹವಿದೆ.
ದಾಖಲೆ ವಿಭಾಗ
ಬದಲಾಯಿಸಿಈ ವಿಭಾಗವು ಸಂಗೀತ , ನೃತ್ಯ ಮತ್ತು ನಾಟಕಕ್ಕೆ ಸಂಬಂಧಿಸಿದಂತೆ ದಿಗ್ಗಜರ ದಾಖಲೆಗಳನ್ನು, ರೆಕಾರ್ಡುಗಳನ್ನು ಕಲೆಹಾಕಿ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ. ಅಕಾಡೆಮಿ ತನ್ನದೇ ಆದ ಪುಸ್ತಕಗಳ ಪ್ರಕಟಣೆಯನ್ನೂ ಮಾಡುತ್ತದೆ.
ಪ್ರಶಸ್ತಿ ಮತ್ತು ಫೆಲೋಶಿಪ್
ಬದಲಾಯಿಸಿಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ಬದಲಾಯಿಸಿಈ ಪ್ರಶಸ್ತಿ ಈ ರಂಗಗಳಲ್ಲಿ ಭಾರತದಲ್ಲಿಯೇ ಅತ್ಯುಚ್ಚವಾದುದೆಂದು ಪರಿಗಣಿಸಲಾಗುತ್ತದೆ. ೫೦,೦೦೦ ಸಾವಿರ ರೂಪಾಯಿ, ಶಾಲು ಮತ್ತು ತಾಮ್ರ ಪತ್ರ ಈ ಪ್ರಶಸ್ತಿಯ ಭಾಗ.
ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ "ರತ್ನ ಸದಸ್ಯ"
ಬದಲಾಯಿಸಿಕಲೆ, ಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಮಹಾನ್ ಸೇವೆ ಸಲ್ಲಿಸಿದವರಿಗೆ ಅಕಾಡೆಮಿ ಪ್ರತಿವರ್ಷ ಈ ಸನ್ಮಾನವನ್ನು ನೀಡುತ್ತದೆ. [೫]
ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ
ಬದಲಾಯಿಸಿಸಂಗೀತ, ನೃತ್ಯ, ಮತ್ತು ನಾಟಕ ರಂಗಗಳಲ್ಲಿ ಹೆಸರು ಮಾಡುತ್ತಿರುವ್ ಯುವಕಲಾವಿದರಿಗೆ ಮೀಸಲಾದ ಈ ಪ್ರಶಸ್ತಿಯನ್ನು , ಖ್ಯಾತ ಶಹನಾಯ್ ವಾದಕ ಬಿಸ್ಮಿಲ್ಲಾ ಖಾನರ ನೆನಪಿನಲ್ಲಿ ೨೦೦೬ರಿಂದ ಕೊಡಲಾಗುತ್ತಿದೆ.[೬]
ಉಲ್ಲೇಖಗಳು
ಬದಲಾಯಿಸಿ- ↑ "Institutions of the Sangeet Natak Akademi". SNA. Archived from the original on 27 ಜುಲೈ 2011. Retrieved 8 November 2010.
- ↑ "Centres of the Akademi". SNA. Archived from the original on 27 ಜುಲೈ 2011. Retrieved 8 November 2010.
- ↑ Central stage Live Mint, 15 July 2009.
- ↑ "ಆರ್ಕೈವ್ ನಕಲು". Archived from the original on 2016-01-03. Retrieved 2017-07-09.
- ↑ "Ustad Bismillah Khan Yuva Puruskar". Archived from the original on 2007-07-02. Retrieved 2017-07-09.
- ↑ "ಆರ್ಕೈವ್ ನಕಲು". Archived from the original on 2013-10-14. Retrieved 2017-07-09.