ಸಂಕೇತ ಕಲಿಕೆ
ಸಂಕೇತ ಕಲಿಕೆ : ಶ್ರವಣದೋಷವುಳ್ಳವರು ಕಲಿಯುವ ವ್ಯವಸ್ಥಿತ ಸಂವಹನ ವಿಧಾನ (ಸೈನ್ ಲರ್ನಿಂಗ್). ಭಾಷೆಯ ಲಕ್ಷಣಗಳಲ್ಲಿ ಮನಶ್ಶಾಸ್ತ್ರ ಸಂವಹನ ವ್ಯವಸ್ಥೆಯೂ ಒಂದು. ಸಂವಹನವೆಂದರೆ ತಲಪಿಸುವುದು. ಸಂವಹನದ ಉದ್ದೇಶ, ಮಾಧ್ಯಮ, ಸಂದರ್ಭ, ಭಾಗೀದಾರರು ಮುಂತಾದ ಸಂಗತಿಗಳನ್ನು ಅವಲಂಬಿಸಿ ಬೇರೆ ಬೇರೆ ಸಂವಹನ ವ್ಯವಸ್ಥೆಗಳು ರೂಪುಗೊಂಡಿವೆ. ಸಂಕೇತ, ನಿಶ್ಶಾಬ್ದಿಕ ಸಂವಹನ, ಸಂಜ್ಞೆ, ಚಿಹ್ನೆ ಮತ್ತು ಭಾಷೆಗಳನ್ನು ಈ ವ್ಯವಸ್ಥೆಯಲ್ಲಿ ಗುರುತಿಸಬಹುದು. ಪರಿಣಾಮ ಕಾರಿ ಸಂವಹನಕ್ಕೆ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಹೇಳಬೇಕಾದ ಸಂಗತಿಯನ್ನು, ಅಭಿಪ್ರಾಯ-ಅನಿಸಿಕೆಗಳನ್ನು, ನೇರವಾಗಿ, ನಿಖರವಾಗಿ ಗೊಂದಲ ಇಲ್ಲದಂತೆ ಅಭಿವ್ಯಕ್ತಿಸುವ ಕಲೆಯನ್ನು ಪರಿಣಾಮಕಾರಿ ಸಂವಹನವೆನ್ನುವರು. ಇದಕ್ಕೆ ಸಾಮಾನ್ಯವಾಗಿ ಭಾಷೆಯನ್ನು ಬಳಸ ಲಾಗುತ್ತದೆ. ಭಾಷೆಯ ಬಳಕೆ ಸಾಧ್ಯವಿಲ್ಲದೆಡೆಗಳಲ್ಲಿ ಸಂಕೇತ ಭಾಷೆ ಬಳಕೆಯಾಗುತ್ತದೆ.
ಸಂಕೇತ ಭಾಷೆ
ಬದಲಾಯಿಸಿಶ್ರವಣ ದೋಷವಿರುವವರು ಅಭಿವ್ಯಕ್ತಿಯ ಉದ್ದೇಶಕ್ಕೆ ಸಂಕೇತಗಳನ್ನು ಬಳಸುತ್ತಾರೆ. ಇದು ಕೇವಲ ಭಾವಾಭಿನಯ ಮಾತ್ರವಲ್ಲ. ಲಿಪಿ ರಹಿತ ಮತ್ತು ಲಿಪಿ ಸಹಿತ ಭಾಷೆಗಳಲ್ಲಿ ವ್ಯಾಕರಣ ವಿರುವಂತೆಯೇ ಸಂಕೇತಗಳ ಬಳಕೆಗೂ ಒಂದು ನಿಯಮವಿರುತ್ತದೆ. ಆದ್ದರಿಂದ ಇದನ್ನು ಸಂಕೇತ ಭಾಷೆ ಎಂದು ಕರೆಯುತ್ತಾರೆ. ಸಂಕೇತ ಭಾಷೆಯ ಗಂಭೀರ ಅಧ್ಯಯನವನ್ನು ಸಂಕೇತ ಶಾಸ್ತ್ರ ಎಂದು ಕರೆಯಬಹುದು. ಈ ಭಾಷೆ ಸಂಜ್ಞೆ ಮತ್ತು ಕೈಗಳನ್ನು ಬಳಸಿ ಮಾಡುವ ಚಿಹ್ನೆಗಳಿಂದ ಕೂಡಿದೆ.
ಚರಿತ್ರೆ
ಬದಲಾಯಿಸಿಸಂಕೇತ ಭಾಷೆಯ ವ್ಯವಸ್ಥಿತವಾದ ಅಧ್ಯಯನ 1960ರ ವರೆಗೂ ನಡೆದಿರಲಿಲ್ಲ. ಪ್ರಾರಂಭದಲ್ಲಿ ಸಂಕೇತಗಳಿಗೆ ಭಾಷೆಯ ಅನಂತರದ ಸ್ಥಾನ ನೀಡಲಾಗಿತ್ತು. ಟೇಲರ್ (1878) ಎಂಬಾತ ಕಿವುಡರ ಶಿಕ್ಷಣದಲ್ಲಿ ಸಂಕೇತ ಭಾಷೆಯ ಪಾತ್ರವನ್ನು ದೀರ್ಘವಾಗಿ ಅಧ್ಯಯನ ಮಾಡಿದ, ಸ್ಕಾಟ್ ಎಂಬಾತ ಕಿವುಡರ ಸಂಕೇತಗಳನ್ನು ಸಾಕಷ್ಟು ಅಧ್ಯಯನ ಮಾಡಿ ಸಂಕೇತಗಳೇ ಭಾಷೆಯ ಉದಯಕ್ಕೆ ಮೂಲ ಹಾಗೂ ಸಂಕೇತದ ಮೂಲಕವೇ ಭಾಷೆ ಹುಟ್ಟಿರಬಹುದೆಂದು ಸಿದ್ಧಾಂತ ಮಂಡಿಸಿದ. ಸಂಕೇತ ಭಾಷೆಯಲ್ಲಿ ಸಂವಹನಕ್ಕಾಗಿ ಚಿಹ್ನೆಗಳನ್ನು ಬಳಸಲಾಗುತ್ತದೆ. ಈ ಚಿಹ್ನೆಗಳ ಮೂಲಕ ಮಾತನಾಡಬಹುದು. ಸಂದೇಶ ನೀಡಬಹುದು.
ಸಂಕೇತವೆಂದರೇನು?
ಬದಲಾಯಿಸಿಒಂದು ಸಂಗತಿ, ವಿಷಯ, ವಸ್ತು ಅಥವಾ ಘಟನೆಗಳ ಪರ್ಯಾಯ ಪ್ರತಿನಿಧಿತ್ವವನ್ನು ಸಂಕೇತವೆನ್ನುವರು. ಉದಾಹರಣೆಗೆ ರಾಷ್ಟ್ರಧ್ವಜ. ಒಂದು ರಾಷ್ಟ್ರದ ಸಂಕೇತ ಒಂದು ಸಂಗತಿ ಇನ್ನೊಂದು ಸಂಗತಿಯನ್ನು ಪರೋಕ್ಷವಾಗಿ, ಬಹಳ ಸಂಕೀರ್ಣ ರೂಪದಲ್ಲಿ ಚಿತ್ರಿಸುತ್ತದೆ; ಮತ್ತು ಆ ಸಂಕೇತ ಬಹುತೇಕ ಸುಪ್ತಚೇತನದಲ್ಲಿ ದಮನಕ್ಕೆ ಒಳಗಾಗಿರುವ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ಸಿಗ್ಮಂಡ್ ಫ್ರಾಯ್ಡ್ ಹೇಳುತ್ತಾನೆ.
ಸಂಕೇತ ಒಂದು ರೀತಿಯ ಸಂಕ್ಷೇಪಣಾ ತಂತ್ರ. ಅಂದರೆ ಅನೇಕ ಸಂಗತಿ, ವಿಷಯ ಭಾವ ಮುಂತಾದವು ಒಂದು ಸರಳ ಸಂಕೇತದಲ್ಲಿ ಅಡಕವಾಗಿರುತ್ತವೆ. ಉದಾಹರಣೆಗೆ ಭಾರತದ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿದ್ದು ನಡುವೆ ಚಕ್ರವಿದೆ. ಇವು ಅನೇಕ ಭಾವನೆಗಳ ಸಮೂಹವಾಗಿವೆ. ಇವುಗಳನ್ನು ಭಾಷೆಯ ಮೂಲಕ ಪ್ರಕಟ ಮಾಡಿದರೆ ದೀರ್ಘವಾಗುತ್ತವೆ.
ಸಂಕೇತ ಭಾಷೆಯಲ್ಲಿ ಅಂಗಾಂಗಳನ್ನು ಬಳಸಲಾಗುತ್ತದೆ. ಸಂಕೇತ ಭಾಷೆ ಮತ್ತು ಭಾವಾಭಿನಯಗಳೆರಡೂ ಒಂದೇ ಎಂಬ ತಪ್ಪು ಅಭಿಪ್ರಾಯವೂ ಇದೆ. ಭಾವಾಭಿನಯವನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಸಂಕೇತ ಭಾಷೆಯನ್ನು ಸಂವಹನಕ್ಕಾಗಿ ಬಳಸಲು ವಿಶೇಷ ತರಬೇತಿಯ ಅಗತ್ಯವಿರುತ್ತದೆ. ಭಾವಾಭಿನಯದಲ್ಲಿ ಇಡೀ ಶರೀರವನ್ನು ಬೇಕಾದ ಹಾಗೆ ಬಳಸಲು ಸಾಧ್ಯವಿದೆ. ಸಂಕೇತ ಭಾಷೆಯಲ್ಲಿ ತಲೆಯಿಂದ ಸೊಂಟದವರೆಗಿನ ಭಾಗಗಳನ್ನು ಮಾತ್ರ ಬಳಸಬೇಕಾಗುತ್ತದೆ. ಭಾವಾಭಿನಯಕ್ಕೆ-ಈ ಮಿತಿ ಇಲ್ಲ. ಸಂಕೇತ ಭಾಷೆಯನ್ನು ಕುಳಿತು ಅಥವಾ ನಿಂತು ಸಂವಹನ ಮಾಡಬಹುದು.
ಸಂಕೇತ ಭಾಷೆಯ ವಿಂಗಡಣೆ
ಬದಲಾಯಿಸಿಬೇರನ್ ಎಂಬಾತ ಸಂಕೇತ ಭಾಷೆಯನ್ನು 3 ರೀತಿಯಲ್ಲಿ ವಿಂಗಡಿಸಿದ್ದಾನೆ (1981).
- ಶ್ರವಣ ದೋಷವುಳ್ಳವರು
- ಸಾಮಾನ್ಯರು ಶ್ರವಣ ದೋಷವುಳ್ಳವರ ನಡುವೆ ಸಂವಹನ ಮಾಡಲು ಬಳಸುವ ವ್ಯವಸ್ಥೆ
- ಅಮೆರಿಕನ್ ಆಂಗ್ಲ ಸಂಕೇತ ಭಾಷೆ (ಎ.ಎಸ್.ಎಲ್.), ಬ್ರಿಟಿಷ್ ಆಂಗ್ಲ ಸಂಕೇತ ಭಾಷೆ (ಬಿ.ಎಸ್.ಎಲ್.) ಚೀನೀಸ್ ಸಂಕೇತ ಭಾಷೆ.
ಅಮೆರಿಕನ್ ಆಂಗ್ಲ ಸಂಕೇತ ಭಾಷೆ
ಬದಲಾಯಿಸಿಅಮೆರಿಕನ್ನರು ಬಳಸುವ ಸಂಕೇತ ಭಾಷೆಗೆ ಅಮೆರಿಕನ್ ಸಂಕೇತ ಭಾಷೆ ಎಂದು ಹೆಸರು. ಇದು ಪದಗಳಿಗಿಂತ ಇತರ ಸಂಜ್ಞೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇಲ್ಲಿ ಪ್ರತಿಯೊಂದು ಸಂಜ್ಞೆಗೂ ಒಂದು ನಿರ್ದಿಷ್ಟ ಅರ್ಥವಿದೆ. ಉದಾಹರಣೆಗೆ ಹಣ, ಕಾಲ, ಅಥವಾ ತಾಳ್ಮೆಯನ್ನು ಉಪಯೋಗಿಸಲಾಗಿದೆ ಎಂಬುದನ್ನು ತಿಳಿಸಬೇಕಾದರೆ ಒಂದೇ ಒಂದು ಸಂಜ್ಞೆಯನ್ನು ಬಳಸಿ ತಿಳಿಸಬಹುದು. ಈ ಭಾಷೆಯಲ್ಲಿ ಕೆಲವು ಪದಗಳಿಗೆ ಮತ್ತು ಹೆಸರುಗಳಿಗೆ ಸಮಾನಾರ್ಥಕವಾದ ಸಂಕೇತ ಗಳಿಲ್ಲ. ಒಂದು ಲಿಪಿ ಕೈಪಿಡಿ ಇದೆ. ಇದರಲ್ಲಿ ಕೈಯಿಂದ ಮಾಡುವ 26 ಚಿಹ್ನೆಗಳಿವೆ. ಇವು ಆಂಗ್ಲ ಭಾಷಾಲಿಪಿಯ ಅಕ್ಷರವನ್ನು ಪ್ರತಿನಿಧಿಸು ತ್ತವೆ. ಈ ಚಿಹ್ನೆಗಳನ್ನು ಮತ್ತು ಸಂಕೇತಗಳನ್ನು ಒಟ್ಟಾಗಿ ಒಂದು ನಿರ್ದಿಷ್ಟ ಪದ ಮತ್ತು ಹೆಸರುಗಳನ್ನು ಪ್ರಕಟಮಾಡಲು ಬಳಸಬಹುದು. ವಾಕ್‍ದೋಷ ಇರುವವರೊಂದಿಗಿನ ಸಂವಾದದಲ್ಲಿ ಈ ಭಾಷೆಯ ಬಳಕೆ ಹೆಚ್ಚು. ಅಮೆರಿಕದ ವಾಕ್ ಶ್ರವಣ ಶಾಲೆಗಳಲ್ಲಿ ಸಮಗ್ರ ಸಂವಹನ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದರಲ್ಲಿ ಅಮೆರಿಕನ್ ಸಂಕೇತ ಭಾಷೆಯೂ ಸೇರಿದಂತೆ ಎಲ್ಲ ರೀತಿ ಸಂವಹನ ವಿಧಾನವೂ ತುಟಿ ಚಲನೆಯ ಮೂಲಕವೇ ಅಭಿವ್ಯಕ್ತವಾಗುವುದು. ಇಲ್ಲಿಯ ಸಂಕೇತಗಳು ದೃಷ್ಟಿಗೆ ಸಂಬಂಧಿಸಿರಬಹುದು ಅಥವಾ ಶ್ರವಣಕ್ಕೆ ಸಂಬಂಧಿಸಿರಬಹುದು. ಆದರೆ ಈ ಸಂಕೇತಗಳು ಬಳಸುವವರ ಸಂಸ್ಕøತಿ, ಸಮಾಜ, ಭೌಗೋಳಿಕ ಪರಿಸರಗಳನ್ನು ಅವಲಂಬಿಸಿರುತ್ತವೆ.
- ಭಾಷೆಯ ಮೂಲಕ ಸಂವಹನ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಸಾಮಾನ್ಯರು ಬಳಸುವ ಸಂಕೇತ ವ್ಯವಸ್ಥೆಯೇ ಪರ್ಯಾಯ ಸಂಕೇತ ಭಾಷೆ. ಉದಾಹರಣೆಗೆ ಅವಿತಿಟ್ಟುಕೊಂಡಿರುವವರು ಶತ್ರುಗಳು ಹಾಗೂ ಕಾವಲುಗಾರರಿಂದ ಪಾರಾಗಲು ಹೊಂಚುಹಾಕುವವರು ಅನಿವಾರ್ಯವಾಗಿ ಸಂಕೇತ ಭಾಷೆಗೆ ಮೊರೆಹೋಗುತ್ತಾರೆ.
- ಬೇರೆಬೇರೆ ಭಾಷೆ ಮಾತನಾಡುವ ಜನ ಸಂವಹನಕ್ಕಾಗಿ ಬಳಸುವ ಸಂಕೇತ ವ್ಯವಸ್ಥೆ ಕೆಲವೊಂದು ಸನ್ನಿವೇಶಗಳಲ್ಲಿ ಬಳಸುವ ಪರ್ಯಾಯ ಸಂಕೇತ ಭಾಷೆ. ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಅಂದರೆ ಒಂದೇ ಭಾಷೆಯನ್ನು ಮಾತನಾಡದ ಜನರು ವ್ಯಾಪಾರ-ವ್ಯವಹಾರಕ್ಕೆ ಅನುಕೂಲವಾಗಲು ಸಂಕೇತ ಭಾಷೆಯನ್ನು ಬಳಸಬೇಕಾಗುತ್ತದೆ.
ಕೈ ಸಂಕೇತ
ಬದಲಾಯಿಸಿಸಂಕೇತ ಭಾಷೆಯಲ್ಲಿ ಬಳಸುವ ಕೈಕರಣ ಮತ್ತು ಚಲನೆಯಲ್ಲಿ ಭಿನ್ನತೆ ಗೋಚರವಾಗುತ್ತದೆ. ಬ್ರಿಟನ್‍ನಲ್ಲಿ ಎರಡೂ ಕೈಗಳನ್ನು ಬಳಸಿದರೆ ಅಮೆರಿಕದಲ್ಲಿ ಒಂದೇ ಕೈಯನ್ನು ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಕೈಕರಣ ಒಂದೇ ಆಗಿದ್ದರೂ ಎರಡರಲ್ಲೂ ಅರ್ಥ ವ್ಯತ್ಯಾಸವಿರುತ್ತದೆ. ಸಾರ್ವತ್ರಿಕ ಸಂಕೇತಗಳು ಹಾಗೂ ವೈಯಕ್ತಿಕ ಸಂಕೇತಗಳೆಂದು ಎರಡು ಗುಂಪುಗಳಲ್ಲಿ ಸಂಕೇತಗಳನ್ನು ವಿಂಗಡಿಸಬಹುದು. ಯಾವ ಸಂಕೇತ ಎಲ್ಲರಲ್ಲಿಯೂ ಒಂದೇ ಭಾವನೆಯನ್ನು ಮೂಡಿಸುತ್ತದೆಯೋ ಅದು ಸಾರ್ವತ್ರಿಕ ಸಂಕೇತ. ಆದರೆ ಯಾವ ಸಂಕೇತ ಆಯಾ ವ್ಯಕ್ತಿಗೆ ಮಾತ್ರ ಅರ್ಥವಾಗುತ್ತದೆಯೋ ಅದು ವೈಯಕ್ತಿಕ ಸಂಕೇತ.
ಸಂಕೇತ ಭಾಷೆ ಕಾಲ ಮತ್ತು ಶಕ್ತಿ ಬಳಕೆಯ ದೃಷ್ಟಿಯಿಂದ ಮಿತವ್ಯಯಕಾರಿ. ಅನಿರ್ವಚನೀಯವಾದ ಭಾವಾವೇಶ, ಗ್ರಹಿಕೆಗಳನ್ನು ಅಭಿವ್ಯಕ್ತಪಡಿಸಲು ಇದು ಸಹಕಾರಿಯಾದರೂ ಭಾಷೆಯಷ್ಟು ಸಾರ್ಥಕ ವಾಗಿ ಸಂವಹನ ಇದರಿಂದ ಸಾಧ್ಯವಿಲ್ಲವೆನ್ನಬಹುದು.
ಉಲ್ಲೇಖ
ಬದಲಾಯಿಸಿ