ಷಷ್ಠಿ (ಛಠ್ ಎಂದೂ ಕರೆಯಲ್ಪಡುತ್ತದೆ) ಎಂದರೆ ಚಂದ್ರನ ಹದಿನಾಲ್ಕು ದಿನಗಳ ಹಂತವಾದ ಪಕ್ಷದ ಆರನೇ ದಿನ ಅಥವಾ ತಿಥಿ. ಆರನೇ ತಿಥಿಯು, ವಿಶೇಷವಾಗಿ ವರ್ಧಿಸುವ ಅವಧಿಯಲ್ಲಿ (ಶುಕ್ಲಪಕ್ಷ) ಹಲವಾರು ಧರ್ಮಾಚರಣೆಗಳಲ್ಲಿ ಮುಖ್ಯವಾಗಿದೆ. ಇದರಲ್ಲಿ ಈ ಕೆಳಗಿನವು ಸೇರಿವೆ:

  • ದುರ್ಗಾ ಪೂಜಾ (ಸೆಪ್ಟೆಂಬರ್–ಅಕ್ಟೋಬರ್, ಪೂರ್ವ ಭಾರತ, ಬಂಗಾಳ)
  • ಶೀತಲ ಷಷ್ಠಿ ಉತ್ಸವ[೧] (ಮೇ–ಜೂನ್, ಒರಿಸ್ಸಾ, ನೆರೆಯ ಪ್ರದೇಶಗಳು)
  • ಸ್ಕಾಂದ ಷಷ್ಠಿ ಅಥವಾ ಸುಬ್ರಹ್ಮಣ್ಯ ಷಷ್ಠಿ[೨] (ನವೆಂಬರ್–ಡಿಸೆಂಬರ್, ದಕ್ಷಿಣ ಭಾರತ, ತಮಿಳುನಾಡು)
  • ಛಠ್, ಹಿಂದೂಗಳ ಒಂದು ಪ್ರಮುಖ ಸೂರ್ಯ ಆರಾಧನೆಯ ದಿನ, ಕಾರ್ತೀಕ ಮಾಸದ ಶುಕ್ಲಪಕ್ಷದ ಆರನೇ ದಿನದಂದು ಆಚರಿಸಲ್ಪಡುತ್ತದೆ.

ಸ್ಕಾಂದ ಷಷ್ಠಿ ಅಥವಾ ಕಾಂದ ಷಷ್ಠಿ ವ್ರತವು ಒಂದು ಮುಖ್ಯ ಆಚರಣೆಯಾಗಿದೆ. ಇದು ಮುರುಗನ್ ದೇವತೆಗೆ ಸಮರ್ಪಿತವಾಗಿದೆ. ಈ ಆರು ದಿನಗಳಂದು ಭಕ್ತರು ಉಪವಾಸ ಮಾಡುತ್ತಾರೆ.

ಉಲ್ಲೇಖಗಳು ಬದಲಾಯಿಸಿ

  1. "Festivals of India : Sital Shashti". Aryabhatt.com. Retrieved 2017-07-29.
  2. Kannikeswaran, Kanniks. "Skanda Sashti". Indiantemples.com. Retrieved 29 July 2017.
"https://kn.wikipedia.org/w/index.php?title=ಷಷ್ಠಿ&oldid=922068" ಇಂದ ಪಡೆಯಲ್ಪಟ್ಟಿದೆ