ಶ್ರೌತ
ಶ್ರೌತ ಸಂಪ್ರದಾಯಗಳು ಶ್ರುತಿ ಸಾಹಿತ್ಯದ ಮಂಡಲದ ಮೇಲೆ ಆಧಾರಿತವಾದ, ಹಿಂದೂ ಧರ್ಮದಲ್ಲಿನ ಐತಿಹಾಸಿಕ ವೈದಿಕ ಧರ್ಮದ ಸಂಪ್ರದಾಯವಾದಿ ಶಾಸ್ತ್ರೀಯ ಸಂಪ್ರದಾಯಗಳಾಗಿವೆ. ಅವು ಹಿಂದೂ ಧರ್ಮದಲ್ಲಿ ಸಣ್ಣ ಅಲ್ಪಸಂಖ್ಯೆಯನ್ನು ರೂಪಿಸುತ್ತವಾದರೂ ಅವನ್ನು ಭಾರತದಲ್ಲಿ ಈಗಲೂ ಆಚರಿಸಲಾಗುತ್ತದೆ. ಶ್ರೌತ ಸಂಪ್ರದಾಯವು ನಂಬಿಕೆಗಳ ಸಮೂಹವನ್ನು ಹೊಂದಿರುವುದರ ಬದಲು ಕ್ರಿಯಾವಿಧಿಗಳ ಆಚರಣೆಯ ಮೇಲೆ ಹೆಚ್ಚು ಒತ್ತು ಇಡುತ್ತದೆ.