ಶ್ರೀ ವ್ಯಾಡೇಶ್ವರ ಶಿವ ದೇವಾಲಯ
ಶ್ರೀ ವ್ಯಾಡೇಶ್ವರ ಶಿವ ದೇವಾಲಯ
ಬದಲಾಯಿಸಿಇದು ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿರುವ ಗುಹಾಘರ್ ಎಂಬ ಊರಿನಲ್ಲಿದೆ. ಶ್ರೀ ವ್ಯಾಡೇಶ್ವರನು ಬಹಳಷ್ಟು ಚಿತ್ಪಾವನರ ಕುಲದೇವತೆ.
ಹಿನ್ನೆಲೆ
ಬದಲಾಯಿಸಿಹಿಂದೂಗಳ ನಂಬಿಕೆಯಂತೆ, ಭಗವಾನ್ ಶ್ರೀ ಪರಶುರಾಮರು ಕೊಡಲಿ ಬೀಸಿ ಸಮುದ್ರವನ್ನು ಹಿಂದೆ ಸರಿಯುವಂತೆ ಮಾಡಿ ಗಳಿಸಿದ ಭೂಮಿಯನ್ನು, ಕಶ್ಯಪರಿಗೆ ದಾನವಾಗಿ ಕೊಟ್ಟು, ಭಗವಾನ್ ಶಿವನನ್ನು ಈ ಜಾಗದಲ್ಲಿಯೇ ಇದ್ದು ದಿನಾಲೂ ತನಗೆ ದರ್ಶನ ನೀಡುವಂತೆ ಬೇಡಿಕೊಂಡಾಗ, ಶಿವನು ಒಪ್ಪಿದನಂತೆ. ತದನಂತರ, ಪರಶುರಾಮನು ಅರವತ್ತು ವಿಪ್ರರನ್ನು ಅಲ್ಲಿಗೆ ಕರೆಸಿಕೊಂಡರಂತೆ. ಅವರಲ್ಲಿ ವ್ಯಾಡ ಎಂಬ ವಿಪ್ರನು, ಶಿವಲಿಂಗವೊಂದನ್ನು ಇಲ್ಲಿ ಸ್ಥಾಪಿಸಿದನಂತೆ. ಮುಂದೆ ರಾಜ ಸಕುರಾನ್ ಎಂಬುವನು ಈ ಲಿಂಗಕ್ಕಾಗಿ ದೇವಾಲಯವೊಂದನ್ನು ಕಟ್ಟಿಸಿದನಂತೆ. ಅದೇ ಈಗ ನಾವು ನೋಡುತ್ತಿರುವ ದೇವಾಲಯ. ಅದೇನೇ ಇದ್ದರೂ, ಈ ದೇವಾಲಯವು ಅತ್ಯಂತ ಅದ್ಭುತವಾಗಿ ಕಟ್ಟಿಸಿದ್ದು, ಮಧ್ಯದಲ್ಲಿ ಶಿವ ಪ್ರತಿಷ್ಟಾಪನೆ ಯಾಗಿದ್ದು, ನಾಲ್ಕೂ ಮೂಲೆಗಳಲ್ಲಿ, ಸೂರ್ಯ, ಗಣೇಶ, ಪಾರ್ವತಿ, ವಿಷ್ಣು ಮತ್ತು ಲಕ್ಶ್ಮಿ ಪ್ರತಿಷ್ಟಾಪನೆ ಮಾಡಲಾಗಿದೆ. ಮಧ್ಯದಲ್ಲಿರುವ ಶಿವನ ಎದುರು ಭವ್ಯವಾದ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ. ಈ ದೇವಾಲಯಕ್ಕೆ ಪೂರ್ವ, ಪಶ್ಚಿಮ ಹಾಗೂ ದಕ್ಷಿಣದ ಕಡೆಯಿಂದ ಮೂರು ಬಾಗಿಲುಗಳಿವೆ. ಈ ಬಾಗಿಲುಗಳ ಮುಖಾಂತರ ಒಳಹೊಕ್ಕರೆ, ಮುಖ್ಯ ದ್ವಾರದ ಅಕ್ಕ ಪಕ್ಕದಲ್ಲಿ ಗರುಡ ಮತ್ತು ಮಾರುತಿಯ ವಿಗ್ರಹಗಳಿವೆ. ಅಂತೂ ರುದ್ರಗಂಭೀರ ಸುಂದರ ದೇವಾಲಯವಿದಾಗಿದ್ದು, ಸದಾ ಭಕ್ತಾದಿಗಳಿಂದ ತುಂಬಿಕೊಂಡಿರುತ್ತದೆ. ಇಲ್ಲಿ ಪ್ರಸಿದ್ಧ ಸಮುದ್ರ ತಟವೂ, ಶ್ರೀ ದುರ್ಗಾದೇವಿಯ ಮಂದಿರವೂ ಇದೆ.