ಗುಹಾಘರ್
ಗುಹಾಘರ (ಗುಹಾಗರ)
ಬದಲಾಯಿಸಿಇದು ಇದು ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿದೆ. ಗುಹಾಗರ್ ಎಂದರೆ ಗುಹೆಯೊಳಗಿನ ಮನೆ ಎಂದರ್ಥ. ಇದರ ಸಮೀಪ ದಾಭೋಲ್ ಪವರ್ ಕಂಪನಿ ಸ್ಥಾಪಿತವಾಗಿದೆ.ಇದು ವರ್ಜಿನ್ ಬೀಚ್,ತೆಂಗಿನಕಾಯಿ,ಅಡಿಕೆ ಬೀಜಗಳು ಹಾಗೂ ನಾರಿನ ಪದಾರ್ಥಗಳಿಗೆ ಹೆಸರುವಾಸಿಯಾಗಿದೆ ಇಲ್ಲಿನ ಅಲ್ಫಾನ್ಸೋ ಮಾವಿನ ಹಣ್ಣುಗಳು ಪ್ರಸಿದ್ದವಾಗಿವೆ. ಈ ಊರು ಸಮುದ್ರ ಮಟ್ಟದಿಂದ ೧೦ ಮೀಟರ್ (೩೩ ಅಡಿ) ಸರಾಸರಿ ಎತ್ತರದಲ್ಲಿದೆ. ಕೊಂಕಣ ಎಂಬ ಪ್ರದೇಶ ಇದನ್ನು ಸುತ್ತುವರೆದಿದೆ. ಕೇವಲ ಮಹಾರಾಷ್ಟ್ರದಲ್ಲಿರುವ ೭೨೦ ಕಿಲೋಮೀಟರ್ ಅರೇಬಿಯನ್ ಕರಾವಳಿಯ ಪಕ್ಕದಲ್ಲಿ ಇರುವ ಭೂಮಿ ಕಿರಿದಾದಪಟ್ಟಿಯನ್ನು ಕೊಂಕಣ ಎಂದು ಕರೆಯಲಾಗುತ್ತದೆ. ಗುಹಾಘರ್‍ನಲ್ಲಿ ಅನೇಕ ಚಿತ್ರಗಳಲ್ಲಿ ಚಿತ್ರಿಸಲಾಗಿದೆ, ಇತ್ತೀಚಿನ ಒಂದು ಚಿತ್ರ ಮರಾಠಿ ಚಿತ್ರ 'ಕಿಲ್ಲ'.
ಇಲ್ಲಿಯ ಪ್ರಮುಖ ಆಕರ್ಷಣೆಗಳು
ಬದಲಾಯಿಸಿ- ಸಮುದ್ರ ತೀರ
- ಶ್ರೀ ವ್ಯಾಡೇಶ್ವರ ಶಿವ ದೇವಾಲಯ.
- ಶ್ರೀ ದುರ್ಗಾದೇವಿಯ ಮಂದಿರ.