ಶ್ರೀ ಭಾರತಿ ತೀರ್ಥ ಸ್ವಾಮಿಗಳು

ತಂಗಿರಾಲ ಸೀತಾರಾಮ ಆಂಜನೇಯುಲು, ಭಕ್ತವೃಂದಕ್ಕೆ 'ಭಾರತೀ ತೀರ್ಥ ಸ್ವಾಮಿ'ಗಳೆಂದು ಪರಿಚಿತರಾದರು.

Sri Bharati Tirtha Swaminah
[ಶ್ರೀ ಭಾರತೀ ತೀರ್ಥ ಸ್ವಾಮಿ] Error: {{Lang}}: unrecognized language tag: Kannada (help)
[శ్రీ భారతి తీర్థ స్వామి] Error: {{Lang}}: unrecognized language tag: Telugu (help)
[பாரதி தீர்த்த சுவாமிகள்] Error: {{Lang}}: unrecognized language tag: Tamil (help)
ಚಿತ್ರ:Bharathi.jpg
ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿನ:
ಜನನ೧೯೫೧|೦೪|೧೧|df=y
ಮಛಲಿ ಪಟ್ಣಮ್, ಮದ್ರಾಸ್ ಸ್ಟೇಟ್, ಭಾರತ, (ಈಗಿನ ಆಂಧ್ರಪ್ರದೇಶ), ಆಂಧ್ರಪ್ರದೇಶ, ಭಾರತ),
ಜನ್ಮ ನಾಮತಂಗಿರಾಲ ಸೀತಾರಾಮ ಆಂಜನೇಯುಲು
ಗೌರವಗಳು೩೬ ನೆಯ ಜಗದ್ಗುರು ಶ್ರೀ ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿಗಳು
ಗುರುಶ್ರೀ ಅಭಿನವ ವಿದ್ಯಾತೀರ್ಥ ಸ್ವಾಮಿನಃ
ತತ್ವಶಾಸ್ತ್ರಅದ್ವೈತ
ಸ್ಮಾರ್ತ ಸಂಪ್ರದಾಯದ ಬ್ರಾಹ್ಮಣರು
ಪ್ರಮುಖ ಶಿಷ್ಯರು/ಅನುಯಾಯಿಗಳುಶ್ರೀ ವಿಧುಶೇಖರ ಭಾರತಿ
ನುಡಿभारती करुणापात्रं भारती पदभूषणम् । भारती पदमारूढं भारती तीर्थमाश्रये ॥
'ಶ್ರೀ.ಶ್ರೀ.ಭಾರತಿ ತೀರ್ಥ ಮಹಾಸ್ವಾಮಿಗಳವರು'
'ಶ್ರೀ.ಭಾರತಿ ತೀರ್ಥ ಮಹಾಸ್ವಾಮಿಗಳು,ಬಾಲ್ಯಾವಸ್ಥೆಯಲ್ಲಿ'

ಬಾಲ್ಯ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

'ಸೀತಾರಾಮ ಆಂಜನೇಯಲು'ರವರ ತಂದೆ,ವೆಂಕಟೇಶ ಅವಧಾನಿಗಳು. ತಾಯಿ, ಶ್ರೀಮತಿ ಅನಂತ ಲಕ್ಷ್ಮಮ್ಮ ದಂಪತಿಗಳಮಗನಾಗಿ ೧-೦೪-೧೯೫೧ ರಂದು ಜನಿಸಿದರು. ಇವರ ಅಕ್ಕಂದಿರು ೪ ಜನ. ಮಗುವಿನ ತೊಟ್ಟಿಲ ಹೆಸರು, ಸೀತಾರಾಮ ಆಂಜನೇಯಲು. ತಂದೆಯವರ ಜೊತೆಯಲ್ಲಿ ದೇವರ ಪೂಜೆಮಾಡುವುದರಲ್ಲಿಯೇ ಅವರು ತಮ್ಮನ್ನು ತಾವು ಮರೆತುಬಿಡುತ್ತಿದ್ದರು. ಶಿವಭಕ್ತರಾಗಿದ್ದ ಅವರು ತಮ್ಮ ಹೆಚ್ಚಿನಸಮಯವನ್ನು ಸಂಸ್ಕೃತ ಅಭ್ಯಾಸಕ್ಕಾಗಿ ಮುಡುಪಾಗಿಟ್ಟಿದ್ದರು.

ಸಂಸ್ಕೃತಭಾಷೆ, ವೇದಶಾಸ್ತ್ರಗಳ ಬಗ್ಗೆ ವಿಶೇಷಾಸಕ್ತಿ

ಬದಲಾಯಿಸಿ

ತಮ್ಮ ೯ ನೆಯ ವಯಸ್ಸಿನಲ್ಲಿಯೇ ಸಂಸ್ಕೃತದಲ್ಲಿ ಸಾಕಷ್ಟು ಪ್ರಭುತ್ವವನ್ನು ಸಂಪಾದಿಸಿದ್ದರು. ಆಕಾಶವಾಣಿ ವಿಜಯವಾಡಕೇಂದ್ರದಲ್ಲಿ ಅವರು ಹಲವು ಸಂಸ್ಕೃತ ಕಾರ್ಯಕ್ರಮಗಳನ್ನು ಕೊಟ್ಟಿದ್ದರು. ಗುಂಟೂರುಜಿಲ್ಲೆಯ, ವೇದಪ್ರವರ್ಧಕ ಸಂಘದ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮಾತೃ ಭಾಷೆ,ತೆಲುಗು. ಆದರೆ ಸಂಸ್ಕೃತ, ಅವರ ಅತಿಪ್ರೀತಿಯ ಭಾಷೆಯಾಗಿತ್ತು. ವ್ಯಾಕರಣ, ಸಾಹಿತ್ಯ, ತರ್ಕ, ವೇದಾಂತಗಳ ಅಧ್ಯಯನ ಮುಗಿಸಿದರು. ಅನೇಕ ಸಂಸ್ಕೃತ ಪದ್ಯಗಳನ್ನು ಬರೆದಿದ್ದರು. ಆಟವಾಡುವಾಗಲೂ ಶ್ಲೋಕಗಳ ರೂಪದಲ್ಲಿ, ಸಂಸ್ಕೃತದಲ್ಲಿಯೇ ಮಾತಾಡುತ್ತಿದ್ದರು. ಆಗಲೂ, ಛಂದಸ್ಸಿನ ನಿಯಮಗಳನ್ನು ಅತ್ಯಂತ ಜಾಗರೂಕತೆಯಿಂದ ಪಾಲಿಸಿಕೊಂಡು ಬಂದಿದ್ದರು. ಪ್ರಶ್ನೆ, ಲಯ, ವ್ಯಂಗ್ಯ, ಧಾವನಿ, ಮತ್ತು ಎಲ್ಲಾ ಕಾವ್ಯ ಲಕ್ಷಣಗಳೂ ಸಹಜವಾಗಿಬಂದಿದ್ದು, ಜೀವನದ ಅತಿ ಸಾಧಾರಣ ಸಂಗತಿಗಳೂ, ಕಾವ್ಯರೂಪದಲ್ಲಿ ಅಭಿವ್ಯಕ್ತಿಪಡೆಯುತ್ತಿದ್ದವು.

ಶೃಂಗೇರಿ ಸಂಸ್ಥಾನದ, ೩೬ ನೆಯ ಜಗದ್ಗುರುಗಳಾದರು

ಬದಲಾಯಿಸಿ
ಚಿತ್ರ:Citra-3.jpg
ಮುಂಬಯಿನ ಚೆಂಬೂರಿನಲ್ಲಿರುವ,'ಶ್ರೀ ಶೃಂಗೇರಿ ಶಾರದಾ ವಿದ್ಯಾಕೇಂದ್ರ'

೧೯-೧೦-೧೯೮೯ ರಂದು, ಪರಂಪರೆಯ ಅನುಗುಣವಾಗಿ ಪರಮಪೂಜ್ಯ ಜಗದ್ಗುರುಗಳಾದ, ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು, ದಕ್ಷಿಣ ಭಾರತದ ವೈದಿಕ ಪೀಠದ ಅಧಿಪತಿಯಾಗಿ ಅಭಿಷಿಕ್ತರಾದರು. ಜಗದ್ಗುರುಗಳಾಗಿ ಅಭಿಷಿಕ್ತರಾದರು.

ಜಗದ್ಗುರುಗಳ ಮೊಟ್ಟಮೊದಲ ಅನುಗ್ರಹ ಭಾಷಣ ಕನ್ನಡದಲ್ಲಿ

ಬದಲಾಯಿಸಿ

೧೯೭೪ ರಲ್ಲಿ ಅವರು ಸಂನ್ಯಾಸ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಗೌರವಾರ್ಥ ಏರ್ಪಡಿಸಿದ್ದ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರು, ಮೊದಲ ಬಾರಿಗೆ ಕನ್ನಡದಲ್ಲಿ ಅನುಗ್ರಹ ಭಾಷಣಮಾಡಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಅಲ್ಲಿ ನೆರೆದಿದ್ದವರಲ್ಲಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು, ಶಾಸಕರು, ನ್ಯಾಯಾಲಯದ ನ್ಯಾಯಾಧೀಶರು, ಮಂತ್ರಿಮಹೋದಯರು ಇದ್ದರು. ಅಭಿನವ ವಿದ್ಯಾತೀರ್ಥರು ತಮ್ಮ ಶಿಷ್ಯನಾದ ಭಾರತೀತೀರ್ಥರನ್ನು, ಕರೆದುಕೊಂಡು ಉತ್ತರ ಭಾರತದ ಯಾತ್ರೆಮಾಡಿದರು. ಅಲ್ಲಿ ಹಿಂದಿಭಾಷೆಯಲ್ಲಿ ಉಪನ್ಯಾಸಗಳನ್ನು ಕೊಟ್ಟರು. ಶೃಂಗೇರಿಯಲ್ಲಿ ಅವರು, ಪಾಠಶಾಲೆಗಳ ಮೇಲ್ವಿಚಾರಣೆಯನ್ನು ನೋಡಿಕೊಳುವುದಲ್ಲದೆ, ಹಿರಿಯ ವಿದ್ಯಾರ್ಥಿಗಳಿಗೆ ಪಾಠಗಳನ್ನೂ ತೆಗೆದುಕೊಳ್ಳುತ್ತಾರೆ. ಅವರು ಮಠದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಈಗ ಶ್ರೀಮಠದಲ್ಲಿ ಯಾರುಬೇಕಾದರೂ ಭಾರತದ ಭಾಷೆಗಳಲ್ಲಿ ಮತ್ತು ಇಂಗ್ಲೀಷಿನಲ್ಲಿ ವ್ಯವಹರಿಸಬಹುದು.

ಗುರುಗಳ ಬಗ್ಗೆ ಅತೀವ ಭಕ್ತಿ, ಗೌರವ

ಬದಲಾಯಿಸಿ

ತಮ್ಮ ೧೫ ನೆಯ ವಯಸ್ಸಿನಲ್ಲಿಯೆ ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆಯಲು ಮತ್ತು ಶಾಸ್ತ್ರಗಳನ್ನು ಅಭ್ಯಸಿಸಲು ತಮ್ಮ ಬಾಲಾವ್ಯಸ್ಥೆಯಲ್ಲಿಯೆ ಬಂದವರು. ಆಚಾರ್ಯರು ಆಗ ಉಜ್ಜಯನಿಯಲ್ಲಿ ಚಾತುರ್ಮಾಸವ್ರತವನ್ನು ಕೈಗೊಂಡಿದ್ದರು. ಜದ್ಗುರುಗಳು ಸ್ನಾನಮಾಡಿ ಶಿಪ್ರಾನದಿಯಿಂದ ಹಿಂದಿರುಗುತ್ತಿದ್ದಾಗ, ಸೀತಾರಾಮ ಆಂಜನೇಯಲು, ಸಾಷ್ಟಾಂಗ ಪ್ರಣಾಮಮಾಡಿ ಅವರ ಶಿಷ್ಯವೃತ್ತಿಯನ್ನು ಬೇಡಿದಾಗ,ಗುರುಗಳು ಅದಕ್ಕೆ ಸಮ್ಮತಿ ನೀಡಿದರು. ಅತ್ಯಲ್ಪ ಕಾಲದಲ್ಲಿ ಅವರು ವಿದ್ವನ್ಮಣಿಯೂ, ಅಚ್ಚುಮೆಚ್ಚಿನ ಶಿಷ್ಯರೂ ಆದರು. ಪ್ರೌಢಶಾಲೆಯ ವ್ಯಾಸಂಗ ಮುಗಿದಿತ್ತು. ೮ ವರ್ಷಗಳಲ್ಲೇ ಅವರು ಕೃಷ್ಣಯಜುರ್ವೇದ, ಪೂರ್ವೋತ್ತರ ಮೀಮಾಂಸಗಳು, ನ್ಯಾಯಶಾಸ್ತ್ರ, ಮತ್ತಿತರ ಶಾಸ್ತ್ರಗಳನ್ನೂ ಟೀಕಾಗ್ರಂಥಗಳನ್ನೂ, ಓದಿಮುಗಿಸಿದರು. ಸಂಸ್ಕೃತದಲ್ಲಿ ಅವರೊಬ್ಬ ಕವಿಯಾದರು. ಈಗ ಭಾರತಿ ತೀರ್ಥರು, ಜನವರಿ ೨೦೧೫ ರಂದು ಆರಿಸಿರುವ ಹೊಸ ಯತಿವರ್ಯರ ಹೆಸರು, ವಿಧುಶೇಖರ ಭಾರತಿ ಸ್ವಾಮಿಗಳು ಅವರಿಗೆ ಶೃಂಗೇರಿ ಶಾರದಾ ಮಠದ ಜವಾಬ್ದಾರಿಗಳನ್ನು ಒಪ್ಪಿಸಿದ್ದಾರೆ. ಅವರ ಪೂರ್ವಾಶ್ರಮದ ಹೆಸರು, 'ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ'ರೆಂದು. ಶೃಂಗೇರಿಯ ಭವ್ಯ ಪರಂಪರೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

ಶೃಂಗೇರಿಯ ಮಹಾಸ್ವಾಮಿಗಳ ಪರಂಪರೆಯ ತರಹವೇ [] ಭಾರತೀ ತೀರ್ಥರೂ, ಅನೇಕ ಹೊಸ ಶಾಖೆಗಳನ್ನು, ಮತ್ತು ಹೊಸ ಸಭಾಗೃಹಗಳನ್ನು, ಆಸ್ಪತ್ರೆಗಳನ್ನೂ, ಪುಸ್ತಕ ಭಂಡಾರಗಳನ್ನೂ, ಕಲ್ಯಾಣ ಮಂಟಪಗಳನ್ನೂ, ಇನ್ನೂ ಅನೇಕ ಜನಹಿತ ಕಾರ್ಯಕ್ರಮಗಳನ್ನು, ದೇಶದಾದ್ಯಂತ, ತಪ್ಪದೆ ನಡೆಸಿಕೊಂಡು ಬಂದಿದ್ದಾರೆ.ಮುಂಬಯಿ ನ ಚೆಂಬೂರಿನಲ್ಲಿ, "ಶಾರದಾ ವಿದ್ಯಾ ಕೇಂದ್ರ ," ಅಂತಹ ಕೆಲವು ಪ್ರಮುಖ ಶಾಖೆಗಳಲ್ಲೊಂದು. ಇಲ್ಲಿ, ಮುಂಬಯಿನ ಭಕ್ತಗಣಕ್ಕೆ ಹಲವಾರು ಕಲ್ಯಾಣಕಾರ್ಯಕ್ರಮಗಳನ್ನು, ಹಮ್ಮಿಕೊಳ್ಳಲಾಗಿದೆ. ಅವರ ಶೃಂಗೇರಿ ಮಠದಲ್ಲೂ, ಹಾಗೂ ದೇಶದಲ್ಲಿ ಸ್ಥಾಪಿಸಿರುವ ಎಲ್ಲಾ ಮಠದ ಶಾಖೆಗಳಲ್ಲೂ, ವಿದ್ಯಾರ್ಥಿಗಳಿಗೆ ನಮ್ಮ ಭಾರತೀಯ ಪರಂಪರೆಯ ವೇದ ಶಾಸ್ತ್ರಾಧ್ಯಯನದ ಬಗ್ಗೆ,ವಿಶೇಷ ಸವಲತ್ತುಗಳನ್ನು ಕಲ್ಪಿಸಿಕೊಡಲಾಗಿದೆ.

ಶ್ರೀ ಶೃಂಗೇರಿ ಮಠದ ೩೭ ನೆಯ ಅಧಿಪತಿಗಳಾಗಿ

ಬದಲಾಯಿಸಿ

ಈಗ 'ಭಾರತಿ ತೀರ್ಥರು', ೨೩, ಜನವರಿ ೨೦೧೫ ರಂದು ಆರಿಸಿರುವ ಹೊಸ ಯತಿವರ್ಯರ ಹೆಸರು, ವಿಧುಶೇಖರ ಭಾರತಿ ಸ್ವಾಮಿಗಳು [] ಅವರಿಗೆ ಶೃಂಗೇರಿ ಶಾರದಾ ಮಠದ ಜವಾಬ್ದಾರಿಗಳನ್ನು ಒಪ್ಪಿಸಿದ್ದಾರೆ. ಅವರ ಪೂರ್ವಾಶ್ರಮದ ಹೆಸರು, 'ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮ'ರೆಂದು. ಶೃಂಗೇರಿಯ ಭವ್ಯ ಪರಂಪರೆಯನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಹೊಸ 'ಗುರುಪರಂಪರೆಯ ಇತ್ತೀಚಿನ ಅಧಿಕೃತ ವಾಲ್ ಪೇಪರ್' :[]

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ


<References /ref>