ಜಗದ್ಗುರು
ಜಗದ್ಗುರು ಪದದ ಅರ್ಥ ಅಕ್ಷರಶಃ ಜಗತ್ತಿನ ಗುರು. ಇದು ಸನಾತನ ಧರ್ಮದಲ್ಲಿ ಬಳಸಲ್ಪಡುವ ಒಂದು ಬಿರುದಾಗಿದೆ. ಸಾಂಪ್ರದಾಯಿಕವಾಗಿ, ಇದನ್ನು (ಹಿಂದೂ ಧರ್ಮದಲ್ಲಿ ಆರು ಸಾಂಪ್ರದಾಯಿಕ ತತ್ವ ಸಿದ್ಧಾಂತಗಳ ಪೈಕೆ ಒಂದಾದ) ವೇದಾಂತ ಪರಂಪರೆಗೆ ಸೇರಿದ, ಪ್ರಸ್ಥಾನತ್ರಯಿಗಳ (ಬ್ರಹ್ಮ ಸೂತ್ರ (ವೇದಾಂತದ ಮೂಲಗ್ರಂಥ), ಭಗವದ್ಗೀತೆ (ಮಹಾಭಾರತದ ಭಾಗ) ಮತ್ತು ಪ್ರಧಾನ ಉಪನಿಷತ್ತುಗಳು) ಮೇಲೆ ಸಂಸ್ಕೃತ ಭಾಷ್ಯಗಳನ್ನು ಬರೆದಿರುವ ಆಚಾರ್ಯರಿಗೆ ನೀಡಲಾಗಿದೆ ಅಥವಾ ಬಳಸಲಾಗಿದೆ. ಐತಿಹಾಸಿಕವಾಗಿ, ಜಗದ್ಗುರುಗಳು ಒಂದು ಪರಂಪರೆಯನ್ನು ಸ್ಥಾಪಿಸಿರುವವರು, ಧರ್ಮವನ್ನು ಪ್ರಸಾರಮಾಡಲು ಸಂಸ್ಥೆಯನ್ನು ಸ್ಥಾಪಿಸಿರುವವರು, ಸಂಸ್ಕೃತ ಅಧ್ಯಯನದ ಕೇಂದ್ರವಾಗಿರುವುದಕ್ಕೆ ಮತ್ತು "ಸರ್ವಜ್ಞಾನಕ್ಕೆ ರಾಜಧಾನಿ"ಯಾಗಿರುವುದಕ್ಕೆ ಪ್ರಸಿದ್ಧವಾಗಿರುವ ವಾರಾಣಸಿಯಲ್ಲಿ ನೆಲೆಸಿರುವವರು.