ಶುಕ್ರೇಶ್ವರ ದೇವಾಲಯ

ಶುಕ್ರೇಶ್ವರ ದೇವಾಲಯವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಒಂದು ಪ್ರಮುಖ ಶಿವ ದೇವಾಲಯವಾಗಿದೆ. ಈ ದೇವಾಲಯವು ಗುವಾಹಾಟಿ ನಗರದ ಪಾನ್‍ಬಜ಼ಾರ್ ಪ್ರದೇಶದ ಶುಕ್ರೇಶ್ವರ್ ಅಥವಾ ಇಟಖುಲಿ ಗುಡ್ಡದ ಮೇಲೆ ಬ್ರಹ್ಮಪುತ್ರ ನದಿಯ ದಕ್ಷಿಣ ತಟದಲ್ಲಿ ಸ್ಥಿತವಾಗಿದೆ. ದೇವಾಲಯದ ಆವರಣದಿಂದ ಮೆಟ್ಟಿಲುಗಳ ಉದ್ದನೆಯ ಸಾಲು ನದಿಗೆ ಕರೆದೊಯ್ಯುತ್ತದೆ. ಶುಕ್ರೇಶ್ವರ್ ಘಾಟ್‍ನ ಮೆಟ್ಟಿಲುಗಳ ಮೇಲೆ ಕುಳಿತು ನದಿಯಲ್ಲಿ ಸೂರ್ಯ ಮುಳುಗುತ್ತಿರುವ ದೃಶ್ಯಾವಳಿ, ನದಿಯಲ್ಲಿ ದೋಣಿಗಳು ಚಲಿಸುತ್ತಿರುವುದು, ಈ ಜಗತ್ತನ್ನು ತೊರೆದಿರುವ ಸಂಬಂಧಿಕರ ಗೌರವವಾಗಿ ಪೂಜೆಯನ್ನು ಮಾಡುತ್ತಿರುವ ಜನರು ಮತ್ತು ಹಿರಿಯರು ಸ್ನಾನಮಾಡುತ್ತಿರುವುದನ್ನು ನೋಡಬಹುದು.

ಉಲ್ಲೇಖಗಳು

ಬದಲಾಯಿಸಿ

 

  • Baruah, S.L., Last Days of Ahom Monarchy—A History of Assam from 1769 to 1826, 1993
  • Barpujari, H.K., The Comprehensive History of Assam, p. 220, Volume Three, From Thirteenth Century A.D. to the Treaty of Yandabo (1826); Publication Board Assam, Guwahati-781 021.
  • Sarma, Pradip Chandra (1981). A study of the temple architecture of Assam from the Gupta period to the end of the Ahom rule (PhD). Retrieved May 29, 2020.