ಗುವಾಹಟಿ (Assamese: গুৱাহাটী) ಪೂರ್ವ ಭಾರತದಲ್ಲಿರುವ ಒಂದು ಪ್ರಮುಖ ನಗರ ಹಾಗು ಈಶಾನ್ಯ ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ದಿಸ್ಪುರ್ ಈ ನಗರದಲ್ಲಿ ಸ್ಥಿತವಾಗಿದೆ.. ಬ್ರಹಪುತ್ರ ನದಿಯು ಗುವಾಹಟಿಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತದೆ. ಅದೆಂದರೆ ಉತ್ತರ ಗುವಾಹಟಿ ಅಥವಾ ದುರ್ಜಯ ಮತ್ತು ದಕ್ಷಿಣ ಗುವಾಹಟಿ. ಉತ್ತರ ಗುವಾಹಟಿಯು ದೇಶದ ಪ್ರಮುಖ ಶಕ್ತಿಪೀಠವಾದ ಕಾಮಾಕ್ಯ ದೇವಾಲಯ, ಉಮಾಶಂಕರ ದೇವಾಲಯಗಳಿಂದ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡರೆ, ದಕ್ಷಿಣ ಗುವಾಹಟಿಯು ವಾಣಿಜ್ಯಿಕ ಕೇಂದ್ರವಾಗಿದೆ. ಶ್ರೀಮಂತ ಸರ್ಕಾರ ಕಲಾಕ್ಷೇತ್ರ, ಆಸ್ಸಾಂ ರಾಜ್ಯ ವಸ್ತು ಸಂಗ್ರಹಾಲಯ, ಅಸ್ಸಾಂ ತಾರಾಲಯ ಇವು ಗುವಾಹಟಿಯ ಪ್ರಮುಖ ಆಕರ್ಷಣೆಗಳು.

ಗುವಾಹಾಟಿ
ಗುವಾಹಟಿ
Government
 • ಮೇಯರ್ಮೃಗೇನ್ ಸರನೀಯಾ
Population
 (೨೦೦೧)
 • Total೮,೦೮,೦೨೧
Websitewww.guwahatimunicipalcorporation.com

ಬಾಹ್ಯ ಸಂಪರ್ಕಗಳು

ಬದಲಾಯಿಸಿ