ಶಿವಾಲಯ, ಅರಸೀಕೆರೆ, ಹಾಸನ

ದೇವಸ್ಥಾನ ಕರ್ನಾಟಕ ರಾಜ್ಯದ, ಹಾಸನ ಜಿಲ್ಲೆಯ, ಅರಸೀಕೆರೆ ತಾಲ್ಲೂಕಿನಲ್ಲಿ ನೆಲೆಸಿದೆ. ಈ ದೇವಾಲಯವು ಪಟ್ಟಣದ ಈಶಾನ್ಯ ಭಾಗದಲ್ಲಿ ಸ್ಥಿತವಾಗಿದೆ. ದೇಣಿಗೆ ದೇವಸ್ಥಾನ ಹೊಯ್ಸಳ ಪ್ರದೇಶವನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ಕಲೆ ಮತ್ತು ವಾಸ್ತುಶಿಲ್ಪದ ಒಂದು ಸುಂದರ ಸಂಯೋಜನೆ. ಇದು ಕ್ರಿ.ಶ.೧೨೦೦-೧೨೨೧ ಅವಧಿಯಲ್ಲಿ ರಾಜ ನರಸಿಂಹ ಅವರ ರಾಜ್ಯಭಾರದ ಕಾಲದಲ್ಲಿ ಸಿದ್ಧಪಡಿಸಲಾಗಿದೆ. ಸುಂದರ ಶಿವಲಿಂಗ ಮತ್ತು ನವಗ್ರಹ ಗೋಜುಗೋಜಾಗಿ ಕೆತ್ತಿದ ಗೋಡೆಗಳು ಮತ್ತು ನಕ್ಷತ್ರ ಆಕಾರದ ಮಂಟಪ ತನ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಕೆಲವು. ಈ ದೇವಸ್ಥಾನವನ್ನು ಕೇಂದ್ರ ಸರ್ಕಾರವು ಮುಜರಾಯಿ ಇಲಾಖೆಗೆ ಸೇರಿಸಲಾಗಿದೆ ಆದರು ಸಹ ಇದು ಸರಿಯಾದ ಪರಿಹಾರ ಸಿಗದೆ ಅವನತಿಯ ಕಡೆಗೆ ಸಾಗುತ್ತಿದೆ. ಕೆಲವು ಸ್ಥಳೀಯ ವದಂತಿಗಳ ಪ್ರಕಾರ ಈ ದೇವಾಲಯವನ್ನು ಕೆಲ ಸ್ಥಳೀಯ ಶ್ರೀಮಂತ ವ್ಯಾಪಾರಿಗಳಿಂದ ನಿಮಿ೯ಸಲಾಗಿದೆ. ಈ ದೇವಾಲಯದಲ್ಲಿ "ಸುಂದರಶಿವ" ಪ್ರಮುಖವಾದ ದೇವರು, ಮತ್ತು ಆಂಜನೇಯ ದೇವರನ್ನು ಕಾಣಬಹುದು.

ಇತಿಹಾಸ ಬದಲಾಯಿಸಿ

ಇದು ಅರಸೀಕೆರೆಯಿಂದ ಹುಳಿಯೂರು ರಸ್ತೆಯಲ್ಲಿರುವ ಶಿವಾಲಯ, ಹೊಯ್ಸಳ ಕಾಲ-(೧೦೯೮-೧೧೦೦) ಹೊಯ್ಸಳ ವಿಷ್ಣುವರ್ಧನನ ತಂದೆ ಎರೆಯಂಗನ ಆಳ್ವಿಕೆ ಕಾಲ. ಇಲ್ಲಿ ಹಾರ‍್ನಹಳ್ಳಿಯಿಂದ ಬಾಣವಾರದ ತನಕ ಆಳ್ವಿಕೆ ಇತ್ತು. ಮುಂದೆ ಇಮ್ಮಡಿ ಬಲ್ಲಾಳನ (೧೧೭೩-೧೨೨೦) ಕಾಲದಲ್ಲಿ ಅರಸೀಕೆರೆ ತುಂಬ ಅಭ್ಯುದಯ ಹೊಂದಿತು. ಹೊಯ್ಸಳ ಸಾಮ್ರಾಜ್ಯದ ಹೆಸರಾಂತ ಕಲಾಕೃತಿಗಳನ್ನು ಒಳಗೊಂಡಿರುವ ಶಿವಾಲಯ. ಇದು ನಕ್ಷತ್ರ ಆಕಾರದಲ್ಲಿರುವ ತಳಮಟ್ಟದಲ್ಲಿ ಮೂರು ಅಡಿ ಎತ್ತರದವರೆಗೆ ಆನೆ, ಕುದುರೆ, ಯಕ್ಷ ಹಂಸ, ಗೋಪುರಗಳ ಕಳಸವಿದೆ. ಸೂಕ್ಷ್ಮ ಕಸುರಿ ಕೆತ್ತನೆಗಳಿದ್ದು, ಕಣ್ಮನ ಸೆಳೆಯುತ್ತದೆ. ೧೬೯೦ರಲ್ಲಿ ಮೈಸೂರು ಅರಸರಿಗೆ ಸೇರಿತು. ನವರಂಗ, ಸುಕನಾಸಿ, ಅಂತರಾಳ, ನಕನಾಸಿ, ಗರ್ಭಗುಡಿ, ನಾಟ್ಯರಂಗ, ಪ್ರಾರಂಭದ್ವಾರ, ಅಂತರಾಳದರ್ಶನ ಮಂಟಪ ನಂದಿ ಪ್ರತಿಷ್ಠಾಪನೆ ಮಾಡಲಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗ ಸ್ಥಾಪನೆ, ೪೬ ಕಂಬ ವಿಭಿನ್ನ ರೀತಿಯಿಂದ ಕೆತ್ತಲಾಗಿದೆ. ನವರಂಗದಲ್ಲಿ ಕೆಳಭಾಗದಲ್ಲಿ ಆನೆಗಳ ಸಾಲು ಮೇಲ್ಛಾವಣಿಯಲ್ಲಿ ಕೂರಲಿಕ್ಕೆ ಕಲ್ಲಿನ ಆಸನ ಮಾಡಲಾಗಿದೆ. ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗವಿದೆ. ಇದು ಚಂದ್ರ ಮೌಳೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಇದು ಜಿಲ್ಲಾ ಕೇಂದ್ರದಿಂದ ೪೫ ಕಿ.ಮೀ ಹಾಗು ತಾಲ್ಲೂಕು ಕೇಂದ್ರದಿಂದ ೧ ಕಿ.ಮೀ ದೂರವಿದೆ.