ಶಾಮನೂರು ಶಿವಶಂಕರಪ್ಪ

ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ.

ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ

ಹಾಲಿ
ಅಧಿಕಾರ ಸ್ವೀಕಾರ 
೨೦೦೮
ಮತಕ್ಷೇತ್ರ ದಾವಣಾಗೆರೆ ದಕ್ಷಿಣ
ಅಧಿಕಾರ ಅವಧಿ
೨೦೧೩ – till date
ವೈಯಕ್ತಿಕ ಮಾಹಿತಿ
ಜನನ (೧೯೩೧-೦೬-೧೬)೧೬ ಜೂನ್ ೧೯೩೧
ದಾವಣೆಗೆರೆ, ಕರ್ನಾಟಕ
ರಾಜಕೀಯ ಪಕ್ಷ INC
ಸಂಗಾತಿ(ಗಳು) ಲೇಟ್ ಶ್ರೀಮತಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ
ಮಕ್ಕಳು S.S.Mallikarjun, ಎಸ್.ಎಸ್.ಗಣೇಶ್, ಎಸ್.ಎಸ್.ಬಕ್ಕೇಶ್
ವಾಸಸ್ಥಾನ ದಾವಣಗೆರೆ
ಧರ್ಮ ಹಿಂದು ಧರ್ಮ

ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್[೧] ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ರಾಜ್ಯದ ಮಾಜಿ ತೋಟಗಾರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು, ತಾವು ಅಧಿಕಾರವನ್ನು ಸ್ವೀಕರಿಸಿದ ಕೆಲ ದಿನಗಳಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಮಲಗಿರುವ 1,000 ಕೋಟಿ ರೂಪಾಯಿಗಳನ್ನು ರಾಜ್ಯದಲ್ಲಿನ ತೋಟಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ವ್ಯವಸ್ಥಿತವಾಗಿ ಬಳಸಿಕೊಳ್ಳುವುದಾಗಿ ನಿರ್ಧರಿಸಿ ಈ ವಿಚಾರವನ್ನು ಮುನ್ನಡೆಸಿದರು.

ಸಾಧನೆ ಬದಲಾಯಿಸಿ

ಶ್ಯಾಮನೂರ್ ಶಿವಶಂಕರಪ್ಪರವರು ದಾವಣಗೆರೆಯ ಅಂಗವಿಕಲರ ಆಶಕಿರಣ ಟ್ರಸ್ಟ್, ದಾವಣಗೆರೆ ಕ್ರಿಕೆಟ್ ಕ್ಲಬ್ ಮತ್ತು ದಾವಣಗೆರೆ ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷರು[೨].ಇವರು ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸೇರಿ ಸರಪಳಿಯಾಗಿರುವ, ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್‍ರ ಅಧ್ಯಕ್ಷರಾಗಿದ್ದಾರೆ. ಅವರು ಶಿಕ್ಷಣವಾದಿ ಮತ್ತು ಕೈಗಾರಿಕೋದ್ಯಮಿಯಾಗಿದ್ದು, ಸಕ್ಕರೆ ಮತ್ತು ಡಿಸ್ಟಿಲರೀಸ್‍ನ ವ್ಯಾಪಾರ ಮಾಡುವ ಶ್ಯಾಮನೂರ್ ಗ್ರೂಪ್ ಎಂದು ಕರೆಯಲ್ಪಡುವ ಒಂದು ಉದ್ಯಮದ ಗುಂಪನ್ನು ಹೊಂದಿದ್ದಾರೆ.

ಚುನಾವಣೆಗಳು ಬದಲಾಯಿಸಿ

ಶಿವಶಂಕರಪ್ಪನವರು ದಕ್ಶಿಣ ದಾವಣಗೆರೆ ಜಿಲ್ಲೆಯ ೨೦೦೮ ಹಾಗು ೨೦೧೩ರ ವಿಧಾನ ಸಭಾ ಚುನಾವಣೆಯಲ್ಲಿ ಜಯವನ್ನು ಸಾಧಿಸಿ ಕಾಂಗ್ರೆಸ್ ಪಕ್ಶದ ಅತ್ಯಂತ ಅನುಭವಿ ಪ್ರತಿನಿಧಿಯಾಗಿಯೂ ಹಾಗು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.[೩] ೨೦೦೮ರ ಚುನಾವಣೆಗಳಲ್ಲಿ ಶಿವಶಂಕರಪ್ಪನವರು ಬಿಜೆಪಿ ಪಕ್ಷದ ಯಶವಂತ ರಾವ್ ಜಾಧವ್ ಅವರನ್ನು ಸುಮಾರು ೫೫೦೦ ಮತಗಳಿಂದ ಸೋಲಿಸಿ ದಕ್ಶಿಣ ದಾವಣಗೆರೆ ಜಿಲ್ಲೆಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಅತ್ಯಂತ ಪ್ರಭಾವಶಾಲಿಯಾದ ರಾಜಕಾರಣಿ ೨೦೦೮ರಿಂದ ತಮ್ಮನ್ನು ತಾವೆ ತೊಡಗಿಸಿಕೊಂಡು ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಸಮಯ ಹಾಗು ಸಂಪನ್ಮೂಲವನ್ನು ಕೇಂದ್ರೀಕರಿಸಿದ್ದಾರೆ. ೨೦೧೩ರ ಚುನಾವಣೆಯಲ್ಲಿಯೂ ಸಹ ಶಿವಶಂಕರಪ್ಪನವರು ಮೇಲ್ಕಂಡ ಕ್ಶೇತ್ರದಿಂದ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸಿದರು.

ಉಲ್ಲೇಖಗಳು ಬದಲಾಯಿಸಿ

  1. [೧] Archived 2020-07-11 ವೇಬ್ಯಾಕ್ ಮೆಷಿನ್ ನಲ್ಲಿ.
  2. "Dr. Shamanur Shivashankarappa Janakalyan Trust (Regd.) Davangere – DRSSJKT SCHOLARSHIP 2020". ssjanakalyantrust.org.
  3. "Shamanur Shivashankarappa(Indian National Congress(INC)):Constituency- DAVANAGERE SOUTH(DAVANGERE) - Affidavit Information of Candidate:". myneta.info.