ಶಾಂತಿ ಜಲಪಾತ
ಶಾಂತಿ ಜಲಪಾತ ಚಿಕ್ಕಮಗಳೂರು ಜಿಲ್ಲೆಯ ಸುಪ್ರಸಿದ್ದ ಗಿರಿಧಾಮ ಕೆಮ್ಮಣ್ಣುಗುಂಡಿಯಲ್ಲಿದೆ. ಇದು ೨ ಹಂತಗಳಲ್ಲಿ ಬೀಳುತ್ತದೆ. ಮೊದಲನೆ ಹಂತವು ಸುಮಾರು ೧೦ ಅಡಿ ಎತ್ತರವಿದ್ದು ೨ ನೇ ಹಂತವು ಸುಮಾರು ೫೦-೬೦ ಅಡಿ ಎತ್ತರವಿದೆ. ಮೊದಲನೆ ಹಂತವನ್ನು ಸುಲಭವಾಗಿ ತಲುಪಬಹುದು, ಆದರೆ ೨ ಹಂತವು ನೇರವಾಗಿ ಕಣಿವೆಗೆ ಧುಮುಕುವುದರಿಂದ ಇದನ್ನು ದೂರದಿಂದ ನೋಡಲು ಮಾತ್ರ ಸಾದ್ಯ. ಈ ಜಲಪಾತವು ಕೆಮ್ಮಣ್ಣುಗುಂಡಿಯಿಂದ ಝಡ್ ಪಾಯಿಂಟ್‍ಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಇದು ಕೆಮ್ಮಣ್ಣುಗುಂಡಿ ಬೆಟ್ಟಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳದಿಂದ ನಿರ್ಮಿತವಾಗಿದೆ. ನಂತರ ಇದು ಭದ್ರಾ ನದಿಯ ಜೊತೆಗೆ ಸೇರುತ್ತದೆ. ಈ ಜಲಪತವು ಚಿಕ್ಕಮಗಳೂರೆನಿಂದ ಸುಮಾರು ೫೫ ಕಿ.ಲೋ.ಮಿಟರ್‌ಗಳ ದೂರದಲ್ಲಿ ಇದೆ. ಈ ಜಲಪಾತದ ನೀರು ಹಸಿರು ಕಾಡಿನಿಂದ ತುಂಬಿರುವ ಬೆಟ್ಟದ ಮೇಲಿನಿಂದ ಕೆಳಗೆ ಧುಮುಕುತ್ತದೆ. ಆಶ್ಚರ್ಯ ಸಂಗತಿ ಎಂದರೆ ಈ ಜಲಪಾತದ ನೀರು ಯಾವಾಗಲೂ ತಣ್ಣಗೆ ಇರುತ್ತದೆ. ಬೇಸಿಗೆ ಕಾಲದಲ್ಲೂ ನೀರು ತಣ್ಣಗೆ ಇರುವುದನ್ನು ಇಲ್ಲಿ ಕಾಣಬಹುದು.