ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ.. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು "ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ" ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.
ಕನ್ನಡದ ಹಲವಾರು ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಕೆಲವು ಪ್ರಮುಖ ಚಿತ್ರಗಳೆಂದರೆ - ಪ್ರೇಮದ ಕಾಣಿಕೆ, ಆನಂದ್, ಪ್ರೀತಿ ಮಾಡು ತಮಾಷೆ ನೋಡು.
ಕೆಮ್ಮಣ್ಣುಗುಂಡಿಯಲ್ಲಿ ಯಥೇಚ್ಚವಾಗಿ ಕಬ್ಬಿಣದ ಅದಿರು ದೊರಕುತ್ತದೆ. ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಕೆಮ್ಮಣ್ಣುಗುಂಡಿಯಿಂದ ಅದಿರು ಸರಬರಾಜಾಗುತಿತ್ತು.
ಪ್ರೇಕ್ಷಣೀಯ ಸ್ಥಳಗಳುಸಂಪಾದಿಸಿ
ರಾಜ ಭವನಸಂಪಾದಿಸಿ
ರಾಜ ಭವನ ಕೆಮ್ಮಣ್ಣುಗುಂಡಿಯಲ್ಲಿರುವ ಒಂದು ಅತಿಥಿ ಗೃಹ. ಸುತ್ತಲ ಪರ್ವತಗಳ ಮತ್ತು ಸೂರ್ಯಾಸ್ತದ ದೃಶ್ಯಗಳು ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತವೆ. ಇಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಿದ ಹೂವಿನ ಉದ್ಯಾನಗಳೂ ಇವೆ.
ಜೆಡ್ ಪಾಯಿಂಟ್ಸಂಪಾದಿಸಿ
ಕೆಮ್ಮಣ್ಣುಗುಂಡಿಯಿಂದ ಬೆಟ್ಟದ ದಾರಿಯಲ್ಲಿ ಸುಮಾರು ೩೦ ನಿಮಿಷಗಳ ನಡಿಗೆಯ ದೂರದಲ್ಲಿರುವ ಸ್ಥಳ. ಇದೂ ಸಹ ಇಲ್ಲಿಂದ ಕಾಣುವ ಸೂರ್ಯಾಸ್ತದ ದೃಶ್ಯಕ್ಕೆ ಪ್ರಸಿದ್ಧ.
ಹೆಬ್ಬೆ ಜಲಪಾತಸಂಪಾದಿಸಿ
ರಾಜ ಭವನದಿಂದ ಸುಮಾರು ೮ ಕಿಮೀ ದೂರದಲ್ಲಿರುವ ಜಲಪಾತ. ಇಲ್ಲಿ ನೀರು ೧೬೮ ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.
ಶಾಂತಿ ಜಲಪಾತಸಂಪಾದಿಸಿ
ಇಲ್ಲಿರುವ ಮತ್ತೊಂದು ಜಲಪಾತವೆಂದರೆ ಶಾಂತಿ ಫಾಲ್ಸ್. ರುದ್ರರಮಣೀಯ ಪ್ರಪಾತಗಳನ್ನು ನೋಡುತ್ತ ಇಲ್ಲಿನ ಶಾಂತಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಮನಸೋಲುವಂತಾಗುತ್ತದೆ. ಎತ್ತರದ ಬೆಟ್ಟದಿಂದ ರಭಸದಿಂದ ಬೀಳುವ ನೀರನನ್ನು ನೋಡುವ ಪ್ರವಾಸಿಗರಿಗೆ ಇಲ್ಲಿಂದ ಕಾಣುವ ಅನೇಕ ಕಣಿವೆಗಳು ಪ್ರಕೃತಿಯ ವಿಸ್ಮಯವನ್ನು ಮನದಟ್ಟಾಗಿಸುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲುಗಳನ್ನು ಇಲ್ಲಿ ನೋಡುತ್ತ ಪ್ರವಾಸಿಗರು ಕೆಮ್ಮಣ್ಣುಗುಂಡಿಯ ಪ್ರವಾಸನ್ನು ಮರೆಯಲಾಗದ ಅನುಭವವಾಗಿಸಿಕೊಳ್ಳಬಹುದು.
ಚಲನಚಿತ್ರ ಶೂಟಿಂಗ್ ಸ್ಪಾಟ್ಸಂಪಾದಿಸಿ
ಇಲ್ಲಿ ಹಳೆಯ ಕಾಲದ ಭಾಗಶಃ ಚಿತ್ರಗಳು ಚಿತ್ರಿಸಲ್ಪಟ್ಟಿವೆ. ಹಳೆಯ ಪ್ರಖ್ಯಾತ ನಾಯಕರ ಚಿತ್ರಗಳು ಚಿತ್ರಿಸಲ್ಪಿಟ್ಟಿವೆ.
Wikimedia Commons has media related to Kemmangundi. |