ವೈಶೇಷಿಕ ದರ್ಶನ-ವೈಜ್ಞಾನಿಕ ಮುನ್ನೋಟ
ಪ್ರಾಚೀನ ಭಾರತದ ವೈಜ್ಞಾನಿಕ ಮತ್ತು ತಾತ್ವಿಕ ಸಂಪ್ರದಾಯಗಳಲ್ಲಿ ವೈಶೇಷಿಕವೆಂಬುದು ಕೂಡ ಒಂದಾಗಿದೆ. ವೈಶೇಷಿಕ ಸೂತ್ರಗಳನ್ನು ಋಷಿ ಕಣಾದ ರವರು ಸೃಷ್ಟಿಸಿದ್ದಾರೆ. ಇದು ಭೌತಿಕ ಶಾಸ್ತ್ರದ ಒಂದು ಗ್ರಂಥ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಲಾಗಿದೆ.ಸಕಲ ವಸ್ತುಗಳಲ್ಲೂ ಇರುವ ಅಣು ಎಂಬ ಮೂಲವಸ್ತುವಿನ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಾಡಲಾಗಿರುವುದರಿಂದ, ವಸ್ತುವಿನ ಪ್ರಪಂಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಗೊಂಡಿದೆ.ಮನಸ್ಸು-ಮೆದಳುನಿಂದ ಸಂಭಾವ್ಯವಾಗುವ ವಾಸ್ತವಿಕ ಸತ್ಯಗಳಿಗೆ ಒಂದು ಸೈದ್ಧಾಂತಿಕ ಸ್ವರೂಪವನ್ನು ರಚಿಸಿದರು.ದೃಷ್ಟಿ-ಸೃಷ್ಟಿಯ ನಡುವುನ ಆಂತರಂಗಿಕ ಸಂಬಂಧವನ್ನು ಈ ಸೂತ್ರಗಳಲ್ಲಿ ಒತ್ತಾಯಿಸಲಾಗಿದೆ.ಏಕಕಾಲದಲ್ಲಿ ಮನಸ್ಸನ್ನು ಮತ್ತು ಬಾಹ್ಯ ಭೌತಿಕ ಪ್ರಪಂಚವನ್ನು ಒಂದು ವೈಜ್ಞಾನಿಕ ದೃಷ್ಟಿಯಿಂದ ವಿವರಿಸುವುದು ಈ ಕೃತಿಯ ಪ್ರತ್ಯೇಕತೆಯಾಗಿದೆ.
ವೈಶೇಷಿಕ ಸೂತ್ರ | |
---|---|
ವಿಷಯ | ಭೌತಿಕ ಶಾಸ್ತ್ರ |
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ವೈಶೇಷಿಕ ದರ್ಶನ-ವೈಜ್ಞಾನಿಕ ಮುನ್ನುಡಿ
ಬದಲಾಯಿಸಿನಾಂದಿ
ಬದಲಾಯಿಸಿಸಮಯವನ್ನು ಮತ್ತು ಅದರ ಚರ್ಯೆಗಳನ್ನು ತಿಳಿದುಕೊಳ್ಳಲು ಬೇಕಾದ ಭೂತ-ಭವಿಷ್ಯ-ವರ್ತಮಾನ ಎಂಬ ಕಾಲ ವಿಂಗಡನೆಯಲ್ಲಿ ವೀಕ್ಷಕರ ಪ್ರಾಧಾನ್ಯತೆಯ ಬಗ್ಗೆ ಈ ಸೂತ್ರಗಳಲ್ಲಿ ಜ್ಞಾನ ಲಭ್ಯವಾಗಿದೆ.ವಿಶ್ವದ ಕೊಣೆ-ಕೋಣೆಯಲ್ಲಿರುವ ಪದಾರ್ಥಗಳ ಬಗ್ಗೆ ಮತ್ತು ಕಾಲಚಕ್ರ-ವಿಶ್ವದ ಮೇಲೆ ಅದರ ಪ್ರಭಾವದ ಕುರಿತು ಮಾಹಿತಿ,ಆ ವಸ್ತುಗಳ ಅವಲೋಕನೆಯ ಮೂಲಕ ಈ ಸೂತ್ರಗಳಲ್ಲಿ ದೊರೆಯುತ್ತದೆ.
ವೈಶೇಷಿಕ ಸೂತ್ರವು ಬಾಹ್ಯಾಕಾಶ-ಸಮಯ-ವಿಷಯಗಳನ್ನು ಒಳಗೊಂಡ ಗ್ರಹಿಕೆಯಾಗಿ ಸಚೇತನ ಕಾರ್ಯಕರ್ತರನ್ನು ಹೊಂದಿದೆ.ಋಷಿ ಕಾನಡರ, ಹೆಸರಿಸಬಹುದಾದ ಆರು ವಿಭಾಗಗಳನ್ನು ಹೊಂದಿರುವ ಈ ಸೂತ್ರವು ಮೂರ್ತರೂಪ ವಸ್ತುವಿನಿಂದ ಅಮೂರ್ತ ಅಣುವಿನವರೆಗೂ ಎಲ್ಲಾ ವಿಷಯಗಳನ್ನೂ ವಿವರಿಸಲು ಸಮರ್ಥವಾಗಿದೆ.ಸೂತ್ರದ ಆರು ವಿಂಗಡನೆಗಳು ಹೀಗಿವೆ: ದ್ರವ್ಯ,ಗುಣ,ಕರ್ಮ,ಸಾಮಾನ್ಯ,ವಿಶೇಷ ಮತ್ತು ಸಮವಾಯ.
ಈ ಬ್ರಹ್ಮಾಂಡವು ಅಂತ್ಯ ಸ್ಥಿತಿಯನ್ನು ತಲುಪಿದಾಗ,ಅದರ ಪದಾರ್ಥವೆಲ್ಲವು,ಅಂದರೆ ಅಣುಗಳೆಲ್ಲವೂ, ಸಹ ನಾಶ ಆಗುವುದಿಲ್ಲ,ಅವು ಒಂದು ನಿಶ್ಚಲ ಮತ್ತು ನಿಶ್ಚೀಷ್ಟ ಸ್ಥಾನಕ್ಕೆ ಬರುತ್ತದೆ,ಹೀಗೆ ಅದು ಒಂದು ಅಗೋಚರ ವಸ್ತು ಆಗುತ್ತದೆ, ಎಂಬುದನ್ನು ಈ ಸೂತ್ರಗಳಲ್ಲಿ ವಿಚಾರಿಸಿದರು.ಮಾನವನು, ತಾನು ಈ ವಿಶ್ವದ ಕುರಿತು, ತುಲನೆ ಮತ್ತು ವ್ಯತ್ಯಾಸ ಮಡುವುದರಿಂದ ಸಂಗ್ರಹಿಸಬಹುದಾದ ಎಲ್ಲಾ ಸಮಾಚಾರವನ್ನು,ಹೀಗೆ ತಯಾರಾಗಿದ್ದ ಮಾಹಿತಿಯನ್ನು ಪರಿಕಲ್ಪಿಸಬಹುದಾದ ಮತ್ತು ವ್ಯಾಖ್ಯಾನಿಸಬಹುದಾದ ಜ್ಞಾನವನ್ನು, ಶೋಧನೆ ಮಾಡುವುದರ ಸಾಧಕಗಳನ್ನು ವೈಶೇಷಿಕ ಸೂತ್ರಗಳೆಂದು ಕರೆಯಳಾಗಿದೆ. ಮನಸ್ಸು ಮತ್ತು ಇಂದ್ರಿಯಗಳ ಮೂಲಕ ಪ್ರಕೃತಿಯ ವಿವಿಧ ಘಟಕಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ವೀಕ್ಷಕನು ಈ ವಿಶ್ವದಲ್ಲಿ ಕೇಂದ್ರ ಪಾತ್ರ ವಹಿಸುತ್ತನೆ.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದವು,ಇದರಿಂದ ಇದು ಒಂದು ದರ್ಶನವಾಗಿದೆ. [೧]
ಸಂಕ್ಷಿಪ್ತ ವಿವರಣೆ
ಬದಲಾಯಿಸಿಪ್ರಕೃತಿ ಒಳಗೆ ಇರುವ ಪದಾರ್ಥಗಳನ್ನು ಅದರ ಅಸ್ತಿತ್ವದ ಮೂಲಕ, ಅದರ ಚಲನದ ಮೂಲಕ, ಋಷಿ ಕಣಾದ ರವರು ಆ ವಸ್ತುವಿನ ಲಕ್ಷಣದ ಪ್ರಕಾರ,ಕೆಲವು ಗುಣಗಳನ್ನು,ರೂಪ,ರಸ,ಗಂಧ,ಸ್ಪರ್ಶ ಮುಂತಾದವುಗಳಂತಹ ಆ ಗುಣಗಳು ಪದಾರ್ಥದ ಮೇಲೆ ತೋರಿಸುವ ಪರಿಣಾಮವನ್ನು, ಪಟ್ಟಿ ಮಾಡಿದರು ಮತ್ತು ಆ ವಸ್ತುವಿನ ನಿರ್ದಿಷ್ಟ ವರ್ತನೆಗೆ ಸೂಚಕಗಳನ್ನು ನೀಡಿದರು. ಮತ್ತು ಈ ಗುಣಗಳನ್ನು ಅರ್ಥಮಾಡಿಕೊಳ್ಳಲು ೯ ದ್ರವ್ಯಗಳೆಂಬ ಪದಾರ್ಥಗಳ ಪರಿಕಲ್ಪನೆಯ ಅವಶ್ಯಕತೆ ಇದೆ ಎಂದು ಈ ಸೂತ್ರಗಳು ತಿಳಿಸುತ್ತದೆ.ಈ ೯ ದ್ರವ್ಯಗಳಲ್ಲಿ ಮೂಖ್ಯವಾದ ಆಕಾಶಕ್ಕೆ ಸಹ ಒಂದು ಗುಣ ಮತ್ತು ಅದರ ಚಲನಕ್ಕೆ ಬೇಕಾದ ಉಗಮದ ಬಗೆಗಿನ ವಿಚಾರ, ಮತ್ತು ಈ ಆಕಾಶಕ್ಕೆ ಒಂದು ಖಚಿತವಾದ,ಸ್ವಾತಂತ್ರ್ಯವಾದ ಇರುವಿಕೆ ಇದೆ ಎಂಬ ಸಂಗತಿ ಇಲ್ಲಿ ಪ್ರತಿಬಿಂಬಿಸುತ್ತದೆ.
ಪ್ರತಿಯೊಂದು ದ್ರವ್ಯಕ್ಕೂ ಸಹ ಒಂದು ಲಿಂಗ,ಅಂದರೆ ವಿಶ್ವದ ಗುಣಗಳನ್ನು ತಾದಾತ್ಮ್ಯಗೊಳಿಸಲು ಒಂದು ಗುರುತು, ಇದೆ.ಈ ಲಿಂಗಗಳಿಗೆ ಅಥವಾ ಗುರುತುಗಳಿಗೆ, ಕೆಲವು ಅನನ್ಯವಾದ ಗಣಗಳಿರುತ್ತೆ ಎಂದು ಋಷಿ ಕಾನಡರವರು ಹೀಳಿದ್ದಾರೆ.ಈ ೯ ದ್ರವ್ಯಗಳ ವಿವರಣೆ ಹೀಗೆ ಇದೆ, ಅವು ಪೃಥ್ವಿ, ಆಪಸ್ಸು, ತೇಜಸ್ಸು, ವಾಯು,ಆಕಾಶ,ಕಾಲ,ದಿಕ್ಕು,ಆತ್ಮ ಮತ್ತು ಮನಸ್ಸು. ಹೀಗೆ ಇಡೀ ಸೃಷ್ಟಿಯ ಗುಣಲಕ್ಷಣಗಳು ಸಂಶೋಧಿಸಲು ಒಂದು ಚೌಕಟ್ಟನ್ನು ಕಾಣಡರವರು ನಿರ್ಮಿಸಿದರು.ಈ ತರಹದ ವಿಂಗಡನೆಯಿಂದ, ಪ್ರಕೃತಿಯನ್ನು ಒಂದು ಪ್ರಾಯೋಗಿಕ ಮತ್ತು ಭೌತವಾದ ದೃಷ್ಟಿಯಿಂದ ಮಾತ್ರ ನೋಡುವುದಲ್ಲದೆ,ಒಂದು ರೂಪಕ,ತಾರ್ಕಿಕ,ಅನುಭವಪೂರ್ವಕ ಮತ್ತು ತುಲನಾತ್ಮಕ ದೃಷ್ಟಿಕೋಣದಿಂದ ನೋಡುವುದಕ್ಕೆ ಅವಕಾಶ ನೀಡುತ್ತದೆ.ಈ ದ್ರವ್ಯಗಳಲ್ಲಿ ಮೊದಲ ೪ ದ್ರವ್ಯಗಳು ಅಶಾಶ್ವತವಾಗಿರುತ್ತದೆ, ಮನಸ್ಸು ಶಾಶ್ವತವಗಿರುವುದ್ದೂ ನಿರಾಕಾರವಗಿರುತ್ತದೆ,ಉಳಿದ ೪ ದ್ರವ್ಯಗಳು ಶಾಶ್ವತವಗಿರುವುತ್ತದೆ ಮತ್ತು ನಿಶ್ಚಲವಾಗುತ್ತದೆ.
ಇಂಥಹ ದ್ರವ್ಯಗಳ ಮೂಲಕ ವರ್ಗೀಕರಣ ಮಾಡುವುದರಿಂದ, ಮಾನವನ ಮನಸ್ಸು, ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧಿತವಾಗಿ ಚಲಿಸಿದರೆ ಮಾತ್ರ ಆಕಾಶವನ್ನು ಗುರಿತುಸುತ್ತದೆ ಎಂಬ ಸತ್ಯವನ್ನು ಋಷಿ ಕಾನಡರವರು ತಿಳಿಸಿದ್ದಾರೆ.ಒಂದು ಅಣು ಇನ್ನುಂದು ಅಣುವಿನ ಜೊತೆ ಸೇರಿದಾಗ ಉಂಟಾಗುವ ರಾಸಾಯನಿಕ ಚರ್ಯೆಗಳ ಬಗ್ಗೆ, ಮತ್ತು ಹೀಗೆ ಸೇರಿದ ಅಣುಗಳ ರೂಪ,ಭೌತಿಕ ಗುಣಲಕ್ಷಣಗಳು,ವಿವಿಧ ಸಂಯೂಜನೆಯ ಮಾಧರಿಗಳನ್ನು ಸೂಕ್ತಗಳ ಮೂಲಕ ತಿಳಿಸಿದ್ದರೆ,ಮತ್ತು ಅಣುಗಳನ್ನು ತಾರ್ಕಿಕವಾಗಿ ವಿಂಗಡನೆ ಮಾಡಿದ್ದಾರೆ.ಹೀಗೆ,೨ ಅಣುಗಳ ಸಂಯೋಜನೆಯನ್ನು ದ್ವಯಾನುಕ,೩ ಅಣುಗಳ ಸಂಯೋಜನೆಯನ್ನು ತ್ರಯಾನುಕ,ಇತ್ಯಾದಿ ಹೆಸರುಗಳಿಂದ ಕರೆದಿದ್ದರೆ.
ಈ ಮೂಲಕ ವಿಶ್ವದ ಅಖಂಡವು ಅದರ ಭಾಗಗಳ ಜೊತೆ ಹೇಗೆ ಸಂವಹನ ಮಾಡುವುದೆಂದು ಪರಿಣಾಮಾತ್ಮಕವಾಗಿ ವಿವರಿಸಿದರು.ಒಂದು ಪದಾರ್ಥ ಉಷ್ಣ ಪ್ರಯೋಗ ಮಾಡಿದನಂತರ ಗುಣಾತ್ಮಕವಾಗಿ ಬದಲಾಗುತ್ತದೆ,ಮತ್ತು ಪರಮಾಣುಗಳಾಗಿ ವಿಘಟಿಸುವುದಕ್ಕೆ ಸಹ ಅವಕಾಶವಿರುತ್ತದೆ, ಹೀಗೆ ಒಂದು ಪದಾರ್ಥವು ಬೇರೆಯದಾಗಿ ರೂಪಗೊಂಡಿದ್ದನಂತರ ಅದರ ಮೂಲ ಗುಣಗಳು ಸಹ ಬದಲಾಗುತ್ತದೆ ಎಂದು ವೈಶೇಷಿಕ ಸೂತ್ರಗಳು ಪ್ರತಿಪಾದಿಸುತ್ತವೆ. [೨]
೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು, ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ ಪ್ರಾಶಷ್ತಪಾದ ಭಾಷ್ಯ ಎಂಬ ಕ್ರುತಿಯನ್ನು ಋಷಿ ಕಾಣಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಗಿ ರಚಿಸಿದರು.
ವೈಶೇಷಿಕ ಸೂತ್ರದ ಕೆಲವು ಪ್ರಮುಖ ತೀರ್ಮಾನಗಳು
ಬದಲಾಯಿಸಿ೧) ಕರ್ಮಮ್ ಕರ್ಮಸಾಧ್ಯಮ್ ನ ವಿಧ್ಯತೆ : ಅಂತಸ್ಥ ಚಲನೆಯು ಬಾಹ್ಯ ಚಲನೆಯ ಕಾರಣವಾಗಿರುವ ಅವಶ್ಯಕತೆಯಿಲ್ಲ.
೨) ಕಾರಣಾಭಾವಾತ್ಕಾರ್ಯಭಾವಃ : ಕಾರಣದ ಅಸ್ತಿತ್ವವಿಲ್ಲದೆ ಪರಿಣಾಮವು ಸಿದ್ದಿಸದು.
೩) ಸಾಮಾನ್ಯಮ್ ವಿಶೇಷ ಇತಿ ಬುದ್ರಧ್ಯಪೇಕ್ಷಮ್ : ಬ್ರಹ್ಮಾಂಡ ಮತ್ತು ವಿಷ್ಯಾಸ್ಪದಗಳ ಗುಣಗಳು ಬುದ್ದಿಗೆ ಸಂಭಂಧಿಸಿರುವುವು.
೪) ಸದಿತಿ ಯತೋದ್ರವ್ಯಗುಣಕರ್ಮಸು ಸಾ ಸತ್ತಾ : ವಸ್ತು, ಗುಣಲಕ್ಷಣ ಮತ್ತು ಚಲನೆಗಳು, ಸಂಭಾವ್ಯದಿಂದ ಸೃಷ್ಟಿಸಲ್ಪಡುತ್ತವೆ.
೫) ಸದಕಾರಣವನ್ನಿತ್ಯಮ್ : ಕಾರಣರಹಿತವಾದುದು ಸನಾತನವಾಗಿರುವುದು.
ಇದರ ಕೆಲವು ಸೂತ್ರಗಳನ್ನು ಆರಿಸಿ, ಅವುಗಳ ಆಧಾರದ ಮೇಲೆ ವಸ್ತುಗಳ ಚಲನೆಗಳನ್ನು ಅಧ್ಯಯನ ಮಾಡಲು ಸಹಕಾರಿಯಾಗುವ ಕೆಲವು ಭೌತಿಕ ವಿಧಿಗಳನ್ನು ಈ ಕೃತಿಯಲ್ಲಿ ಕಾನಡರವವರು ಸ್ಪಷ್ಟೀಕರಿಸಿದ್ದರೆ. ಇದರ ಪ್ರಕಾರ ಪರಮಾಣುಗಳು ದೀರ್ಘಕಾಲಿಕ ಚಲನೆಯಲ್ಲಿರುವ ಕಾರಣದಿಂದಾಗಿ, ಅವುಗಳನ್ನು ಬಾಹ್ಯ ಮತ್ತು ಅಂತಸ್ಥ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರಕೃತಿಯಲ್ಲಿನ ಸಮ್ಮಿತಿಯೆಂಬ ಆಲೋಚನೆಯಿಂದ ಪರಮಾಣುವಿನ ವರ್ತುಲತೆಯನ್ನು ಮಹರ್ಷಿ ಕಾನಡರವರು, ತಮ್ಮ ನಿತ್ಯ ಎಂಬ ಸಿದ್ಧಾಂತದಲ್ಲಿ ಸ್ಪಷ್ಟಿಸಿದ್ದಾರೆ. [೩]
ಇದರ ಸಿದ್ಧಾಂತಗಳು
ಬದಲಾಯಿಸಿಕಣಾದರವರು ತಮ್ಮ ವೈಶೇಷಿಕ ಸೂತ್ರಗಳಲ್ಲಿ ಪರಮಾಣು ಸಿದ್ಧಾಂತಗಳನ್ನು ಕೆಳಗಿನ ಕೆಲವು ಮೂಖ್ಯ ಸೂತ್ರಗಳ ಮೂಲಕ ವಿವರಿಸಿದ್ದಾರೆ:
೧) ಸಂಯೋಗಾಭಾವೆ ಗುರುತ್ವಾತ್ ಪತನಮ್ : ಕ್ರಿಯೆಯ ಅನುಪಸ್ಥಿತಿಯಲ್ಲಿ, ವಸ್ತು ಗುರುತ್ವಾಕರ್ಷಣೆಯಿಂದ (ಕೆಳಗೆ)ಬೀಳುತ್ತದೆ.
೨) ನೋದನವಿಶೇಷಾಭಾವಾನ್ನೋರ್ದ್ವಂ ತಿರ್ಯ್ಯನ್ನಮನಮ್ : ಬಲದ ಅನುಪಸ್ಥಿತಿಯಲ್ಲಿ, ಯಾವುದೇ ತರಹದ ಚಲನೆಯು ಸಹ ಇರುವುದಿಲ್ಲ.
೩)ನೋದನಾದಾಧ್ಯಮಿಷೋಃ ಕರ್ಮ ತತ್ಕರ್ಮಕಾರಿತಾಚ್ಚ ಸಂಸ್ಕಾರಾದುತ್ತರಂ ತತೋತ್ತರಮುತ್ತರಞಚ್ :ಬಾಣದ ಪ್ರಥಮ ಗತಿಯು ಬಲದ ಕಾರಣದಿಂದಾಗಿ ಚಲಿಸುತ್ತದೆ. ಈ ಚಲನೆಯಿಂದ ಸಂಸ್ಕಾರ(ಸಾಮರ್ಥ್ಯ) ಉಧ್ಭವವಾಗಿ ಚಲನೆಯನ್ನು ಮುಂದುವರೆಸುತ್ತದೆ.
೪)ಕಾರ್ಯವಿರೋಧಿ ಕರ್ಮಾ :ಕರ್ಮವು ಕಾರ್ಯದ ವಿರುದ್ಧವಾಗಿ ನಿರ್ವಹಿತಗೊಳ್ಳುತ್ತದೆ.
ಉಲ್ಲೇಖಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ [ http://www.researchgate.net/publication/281863959_Particle_Physics_and_the_Vaisheshika_System_A_Comparative_Analysis, 22/11/2015 ] (english)
- ↑ [ http://arxiv.org/ftp/physics/papers/0702/0702012.pdf 22/11/2015] (english)
- ↑ [ http://swarajyamag.com/ideas/ka%E1%B9%87ada-the-greatest-unsung-indian/ Archived 2016-01-21 ವೇಬ್ಯಾಕ್ ಮೆಷಿನ್ ನಲ್ಲಿ. 22/11/2015] (english)