ವೈರಲ್ ನ್ಯುಮೋನಿಯ
ವೈರಲ್ ನ್ಯುಮೋನಿಯ ಎಂಬುದು ರೋಗಕಾರಕ ಸೂಕ್ಷ್ಮಜೀವಿಯಿಂದ ಉಂಟಾಗುವ ನ್ಯುಮೋನಿಯ.[೧] ರೋಗಕಾರಕ ಸೂಕ್ಷ್ಮಜೀವಿಗಳು ನ್ಯುಮೋನಿಯ ಉಂಟಾಗುವ ಎರಡು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಮತ್ತೊಂದು ಕಾರಣವೆಂದರೆ ಬ್ಯಾಕ್ಟೀರಿಯಾ; ಶಿಲೀಂಧ್ರಗಳು ಹಾಗೂ ಪರಾವಲಂಬಿಗಳು ಹೆಚ್ಚಿನ ಅಪಾಯವನ್ನು ಉಂಟುಮಾಡುವುದಿಲ್ಲ. ಮಕ್ಕಳಲ್ಲಿ ನ್ಯುಮೋನಿಯ ಉಂಟಾಗಲು ರೋಗಕಾರಕ ಸೂಕ್ಷ್ಮಜೀವಿಗಳು ಕಾರಣವಾಗುತ್ತದೆ, ಆದರೆ ವಯಸ್ಕರಲ್ಲಿ ಬ್ಯಾಕ್ಟೀರಿಯಾ ನ್ಯುಮೋನಿಯವನ್ನು ಉಂಟುಮಾಡುತ್ತದೆ. [೨]
Viral Pneumonia | |
---|---|
Classification and external resources | |
ICD-10 | J12 |
ICD-9 | 480 |
eMedicine | emerg/468 radio/539 |
MeSH | D011024 |
ಚಿಹ್ನೆಗಳು ಮತ್ತು ರೋಗಲಕ್ಷಣಗಳು
ಬದಲಾಯಿಸಿವೈರಲ್ ನ್ಯುಮೋನಿಯದ ರೋಗಲಕ್ಷಣಗಳಲ್ಲಿ ಜ್ವರ ಬರುವುದು, ಕಫಾ ಇರದ ಕೆಮ್ಮು, ನೆಗಡಿ, ಹಾಗೂ ದೇಹದ ಲಕ್ಷಣಗಳು (ಉದಾಹರಣೆಗೆ ಸ್ನಾಯು ನೋವು, ತಲೆನೋವು) ಸೇರಿರುತ್ತದೆ ವಿವಿಧ ರೋಗಕಾರಕ ಸೂಕ್ಷ್ಮಜೀವಿಗಳು ವಿವಿಧ ರೋಗಲಕ್ಷಣಗಳನ್ನೂ ಉಂಟುಮಾಡುತ್ತವೆ.
ಕಾರಣ
ಬದಲಾಯಿಸಿವೈರಲ್ ನ್ಯುಮೋನಿಯ ಉಂಟಾಗುವ ಸಾಮಾನ್ಯ ಕಾರಣಗಳೆಂದರೆ:
- ಇನ್ಫ್ಲುಯೆನ್ಜ ವೈರಸ್ A ಹಾಗು B[೩]
- ರೆಸ್ಪಿರೆಟರಿ ಸಿಂಟ್ಯಾಕ್ಟಿಕಲ್ ವೈರಸ್ (RSV)[೩]
- ಹ್ಯೂಮನ್ ಪ್ಯಾರಇನ್ಫ್ಲುಯೆನ್ಜ ವೈರಸಸ್ (ಮಕ್ಕಳಲ್ಲಿ)[೩]
ಸಾಮಾನ್ಯವಾಗಿ ನ್ಯುಮೋನಿಯವನ್ನು ಉಂಟುಮಾಡುವ ಅಪರೂಪದ ರೋಗಕಾರಕ ಸೂಕ್ಷ್ಮಜೀವಿಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
- ಅಡೆನೋವೈರಸ್ಗಳು (ಮಿಲಿಟರಿ ನಿಯೋಜನೆಗಳಲ್ಲಿ ಕಂಡುಬರುತ್ತದೆ)[೩]
- ಮೆಟಾನ್ಯುಮೋವೈರಸ್ [ಸೂಕ್ತ ಉಲ್ಲೇಖನ ಬೇಕು]
- ಸಿವಿಯರ್ ಆಕ್ಯೂಟ್ ರೆಸ್ಪಿರೆಟರಿ ಸಿಂಡ್ರೋಮ್ ವೈರಸ್ (SARS ಕಾರೋನವೈರಸ್) [೪]
ಪ್ರಾಥಮಿಕವಾಗಿ ಇತರ ಕಾಯಿಲೆಗಳನ್ನು ಉಂಟುಮಾಡುವ ರೋಗಕಾರಕ ಸೂಕ್ಷ್ಮ ಜೀವಿಗಳಾಗಿದ್ದು, ಕೆಲವೊಂದು ಬಾರಿ ನ್ಯುಮೋನಿಯವನ್ನು ಉಂಟುಮಾಡುತ್ತದೆ, ಅಂತಹವುಗಳಲ್ಲಿ ಈ ಕೆಳಕಂಡವುಗಳು ಸೇರಿವೆ:
- ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV), ಮುಖ್ಯವಾಗಿ ನವಜಾತ ಶಿಶುಗಳಲ್ಲಿ ಕಂಡುಬರುತ್ತದೆ
- ವಾರಿಸೆಲ್ಲ-ಜೋಸ್ಟರ್ ವೈರಸ್ (VZV)
- ಸೈಟೋಮೆಗಲೋವೈರಸ್ (CMV), ಪ್ರತಿರಕ್ಷಿತ ದೇಹದ ಲಕ್ಷಣಗಳನ್ನು ಹೊಂದಿರುವ ಜನರಲ್ಲಿ ಮುಖ್ಯವಾಗಿ ಕಂಡುಬರುತ್ತದೆ.
ರೋಗಶರೀರವಿಜ್ಞಾನ
ಬದಲಾಯಿಸಿಪುನರುತ್ಪಾದನೆಯಾಗಬೇಕಾದರೆ ರೋಗಕಾರಕ ಸೂಕ್ಷ್ಮಜೀವಿಗಳು ಕೋಶಗಳ ಮೇಲೆ ಆಕ್ರಮಣ ಮಾಡಬೇಕು. ಮಾದರಿಯಾಗಿ, ಒಂದು ರೋಗಕಾರಕ ಸೂಕ್ಷ್ಮಜೀವಿಯು ಉಸಿರೆಳೆತದೊಂದಿಗೆ ಬಾಯಿ ಹಾಗು ಮೂಗಿನ ಮೂಲಕ ಹನಿಹನಿಯಾಗಿ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ, ರೋಗಕಾರಕ ಸೂಕ್ಷ್ಮಜೀವಿಯು ಗಾಳಿಮಾರ್ಗಗಳು ಹಾಗೂ ವಾಯುಕೋಶದಲ್ಲಿ ಸಂಗ್ರಹವಾಗಿರುವ ಕೋಶಗಳ ಮೇಲೆ ಆಕ್ರಮಣ ಮಾಡುತ್ತದೆ. ಈ ಆಕ್ರಮಣವು, ರೋಗಕಾರಕ ಸೂಕ್ಷ್ಮಜೀವಿಯಿಂದ ಅಥವಾ ಅಪೋಪ್ಟೋಸಿಸ್ ನ ಮೂಲಕ ಸ್ವತಃ ನಾಶವಾಗುವ ಮೂಲಕ ಸಾಮಾನ್ಯವಾಗಿ ಕೋಶದ ನಾಶಕ್ಕೆ ಎಡೆ ಮಾಡಿಕೊಡುತ್ತದೆ.
ಸೋಂಕಿಗೆ ದೇಹದ ಪ್ರತಿರಕ್ಷಾ ವ್ಯವಸ್ಥೆಯು ಪ್ರತಿಕ್ರಯಿಸಿದರೆ ಶ್ವಾಸಕೋಶಕ್ಕೆ ಮತ್ತಷ್ಟು ಹಾನಿ ಉಂಟಾಗುತ್ತದೆ. ಬಿಳಿ ರಕ್ತ ಕಣಗಳು, ಅದರಲ್ಲೂ ವಿಶೇಷವಾಗಿ ದುಗ್ಧಕೋಶಗಳು ಹಲವಾರು ರಾಸಾಯನಿಕಗಳನ್ನು ಸಕ್ರಿಯಗೊಳ್ಳಲು ಕಾರಣವಾಗಿರುತ್ತದೆ(ಸೈಟೋಕಿನ್ ಗಳು) ಇದು ದ್ರವವು ವಾಯುಕೋಶದಲ್ಲಿ ಸೋರಲು ಕಾರಣವಾಗುತ್ತದೆ. ಕೋಶಗಳ ನಾಶ ಹಾಗೂ ದ್ರವ-ಭರಿತ ವಾಯುಕೋಶಗಳ ಸಂಯೋಜನೆಯು ರಕ್ತದ ಹರಿವಿನಲ್ಲಿ ಆಮ್ಲಜನಕದ ವರ್ಗಾವಣೆಗೆ ತಡೆಯನ್ನು ಉಂಟುಮಾಡುತ್ತದೆ.
ಇದು ಶ್ವಾಸಕೋಶದ ಮೇಲೆ ಪರಿಣಾಮಗಳನ್ನು ಬೀರುವುದರ ಜೊತೆಯಲ್ಲಿ, ಹಲವು ರೋಗಕಾರಕ ಸೂಕ್ಷ್ಮಜೀವಿಗಳು ಇತರ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತವೆ ಹಾಗೂ ಇದು ದೇಹದ ವಿವಿಧ ಅಂಗಗಳ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಮೂಲಕ ಕಾಯಿಲೆಯನ್ನು ಉಂಟುಮಾಡುತ್ತದೆ. ರೋಗಕಾರಕ ಸೂಕ್ಷ್ಮಜೀವಿಗಳು ಬ್ಯಾಕ್ಟೀರಿಯಾದ ಸೋಂಕಿಗೆ ದೇಹವು ಹೆಚ್ಚು ಗುರಿಯಾಗುವಂತೆ ಎಡೆ ಮಾಡಿಕೊಡುತ್ತದೆ; ಈ ಕಾರಣಕ್ಕೆ, ಬ್ಯಾಕ್ಟೀರಿಯಾ ಉಂಟುಮಾಡುವ ನ್ಯುಮೋನಿಯಾ ಸಾಮಾನ್ಯವಾಗಿ ವೈರಲ್ ನ್ಯುಮೋನಿಯಾವನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ.
ಚಿಕಿತ್ಸೆ
ಬದಲಾಯಿಸಿಇನ್ಫ್ಲುಯೆನ್ಜ A ಅಥವಾ B ಕಾರಣವಾಗುವ ವೈರಲ್ ನ್ಯುಮೋನಿಯದ ಪರಿಸ್ಥಿತಿಗಳಲ್ಲಿ, 48 ಗಂಟೆಗಳಲ್ಲಿ ರೋಗಲಕ್ಷಣ ಆರಂಭಗೊಂಡ ರೋಗಿಗಳಿಗೆ ಒಸೆಲ್ಟಮಿವಿರ್ ಅಥವಾ ಜನಮಿವಿರ್ ಔಷಧಗಳಿಂದ ಅನುಕೂಲ ಉಂಟಾಗಬಹುದು. ರೆಸ್ಪಿರೆಟರಿ ಸಿಂಟಾಕ್ಟಿಕಲ್ ವೈರಸ್ (RSV) ಗೆ ರಿಬವಿರಿನ್ ನೀಡುವ ಮೂಲಕ ಚಿಕಿತ್ಸೆ ಮಾಡಬಹುದು, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಹಾಗೂ ವಾರಿಸೆಲ್ಲ-ಜೋಸ್ಟರ್ ವೈರಸ್ ಸೊಂಕುಗಳಿಗೆ ಸಾಮಾನ್ಯವಾಗಿ ಅಸಿಕ್ಲೊವಿರ್ ನೀಡಲಾಗುತ್ತದೆ, ಈ ನಡುವೆ ಸೈಟೋಮೆಗಲೋವೈರಸ್ ನಿಂದ ಬಳಲುವ ರೋಗಿಗಳಿಗೆ ಗನ್ಸಿಕ್ಲೊವಿರ್ ನೀಡಿ ಚಿಕಿತ್ಸೆ ಮಾಡಲಾಗುತ್ತದೆ. SARS ಕಾರೋನವೈರಸ್, ಅಡೆನೋವೈರಸ್, ಹಂತಾವೈರಸ್, ಪ್ಯಾರಾಇನ್ಫ್ಲುಯೆಂಜ ಅಥವಾ H1N1ನಿಂದ ಉಂಟಾಗುವ ನ್ಯುಮೋನಿಯಕ್ಕೆ ಯಾವುದೇ ಪರಿಣಾಮಕಾರಿ ಚಿಕಿತ್ಸೆಗಳಿಲ್ಲ[ಸೂಕ್ತ ಉಲ್ಲೇಖನ ಬೇಕು]; ಚಿಕಿತ್ಸೆಯು ಬಹಳ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿರುತ್ತವೆ.
ಉಲ್ಲೇಖಗಳು
ಬದಲಾಯಿಸಿ- ↑ "viral pneumonia" at Dorland's Medical Dictionary
- ↑ ನ್ಯಾಷನಲ್ ಹಾರ್ಟ್, ಲಾಂಗ್, ಅಂಡ್ ಬ್ಲಡ್ ಇನ್ಸ್ಟಿಟ್ಯೂಟ್, U.S.A. ವಾಟ್ ಕಾಸಸ್ ನ್ಯುಮೋನಿಯ?
- ↑ ೩.೦ ೩.೧ ೩.೨ ೩.೩ ಕೋಷ್ಟಕ 13-7: Mitchell, Richard Sheppard; Kumar, Vinay; Abbas, Abul K.; Fausto, Nelson. Robbins Basic Pathology: With STUDENT CONSULT Online Access. Philadelphia: Saunders. ISBN 1-4160-2973-7.
{{cite book}}
: CS1 maint: multiple names: authors list (link) 8ನೇ ಆವೃತ್ತಿ. - ↑ http://www.cdc.gov/ncidod/sars/factsheet.htm