ವೇದಿ
ವೈದಿಕ ಧರ್ಮದಲ್ಲಿ, ವೇದಿ ಪದವು ಬಲಿಪೀಠವನ್ನು ಸೂಚಿಸುತ್ತದೆ. ಅಂತಹ ಬಲಿಪೀಠಗಳು ಎತ್ತರಿಸಿದ ಆವರಣಗಳಾಗಿರುತ್ತಿದ್ದವು. ಇವುಗಳಲ್ಲಿ ಸಾಮಾನ್ಯವಾಗಿ ಕುಶ ಹುಲ್ಲನ್ನು ಹರಡಿರಲಾಗುತ್ತಿತ್ತು, ಮತ್ತು ಯಾಗದ ಅಗ್ನಿಗೆ ಕುಳಿಯನ್ನು ಹೊಂದಿರುತ್ತಿದ್ದವು; ಇದು ವಿವಿಧ ಆಕಾರಗಳದ್ದಾಗಿರುತ್ತಿತ್ತು, ಆದರೆ ಸಾಮಾನ್ಯವಾಗಿ ಮಧ್ಯದ ಭಾಗದಲ್ಲಿ ಕಿರಿದಾಗಿರುತ್ತಿತ್ತು.
- ಮಹಾವೇದಿ, ಬೃಹತ್ ಅಥವಾ ಸಂಪೂರ್ಣ ವೇದಿ
- ಉತ್ತರವೇದಿ, ಪವಿತ್ರ ಅಗ್ನಿಗಾಗಿ ನಿರ್ಮಿಸಲಾಗಿರುವ ಉತ್ತರ ದಿಕ್ಕಿನ ಬಲಿಪೀಠ (ಅಗ್ನ್ಯಾಯತನ)
- ಧಿಷ್ಣ್ಯ, ಒಂದು ಬಗೆಯ ಅಮುಖ್ಯ ಅಥವಾ ಬದಿಯ ಬಲಿಪೀಠ, ಸಾಮಾನ್ಯವಾಗಿ ಮರಳಿನಿಂದ ಮುಚ್ಚಿದ ಮಣ್ಣಿನ ರಾಶಿಯಾಗಿರುತ್ತದೆ, ಇದರ ಮೇಲೆ ಅಗ್ನಿಯನ್ನು ಇರಿಸಲಾಗುತ್ತದೆ
- ದ್ರೋಣ, ತೊಟ್ಟಿಯಂತೆ ಆಕಾರವುಳ್ಳ ಬಲಿಪೀಠ (ಶುಲ್ಭಸೂತ್ರ. 3.216)
- ಅಧ್ವರಧಿಷ್ಣ್ಯ, ಸೋಮಯಜ್ಞದಲ್ಲಿ ಎರಡನೇ ವೇದಿ
ವೈದಿಕ ಬಲಿಪೀಠಗಳನ್ನು ಕಲ್ಪದ (ಯಜ್ಞವನ್ನು ಸರಿಯಾಗಿ ಮಾಡುವುದನ್ನು ತಿಳಿಸುತ್ತವೆ) ಬಗ್ಗೆ ಇರುವ ವೇದಗಳಿಗೆ ಸಂಬಂಧಿಸಿದ ಪಠ್ಯಗಳಲ್ಲಿ ವರ್ಣಿಸಲಾಗಿದೆ. ಇದರಲ್ಲಿ ಗಮನಾರ್ಹವಾದವುಗಳೆಂದರೆ ಶತಪಥ ಬ್ರಾಹ್ಮಣ ಮತ್ತು ಸುಲ್ಬಸೂತ್ರಗಳು. ಋಗ್ವೇದವು ಮಂತ್ರಗಳ ವೇದಿಗೆ ಸಮಾನವಾಗಿವೆ ಎಂದು ಸುಲ್ಬಸೂತ್ರಗಳು ಹೇಳುತ್ತವೆ.[೧]
ಉಲ್ಲೇಖಗಳು
ಬದಲಾಯಿಸಿ- ↑ BSS 7, ASS 14.