ಶತಪಥ ಬ್ರಾಹ್ಮಣ

ಬ್ರಾಹ್ಮಣ ಸಂಪ್ರದಾಯ

ಶತಪಥ ಬ್ರಾಹ್ಮಣ ವೈದಿಕ ಕ್ರಿಯಾವಿಧಿಗಳು, ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಪೌರಾಣಿಕ ಕಥೆಗಳನ್ನು ವರ್ಣಿಸುವ ಒಂದು ಗದ್ಯ ಪಠ್ಯ.[]

ಈ ಪಠ್ಯವು ಬಹಳ ವಿವರವಾಗಿ ಬಲಿಪೀಠಗಳ ಸಿದ್ಧತೆ, ವಿಧ್ಯುಕ್ತ ವಸ್ತುಗಳು, ಕ್ರಿಯಾವಿಧಿಗಳ ಪಠಣಗಳು, ಮತ್ತು ಸೋಮ ತರ್ಪಣ, ಜೊತೆಗೆ ಧರ್ಮಾಚರಣೆಗಳ ಪ್ರತಿ ಅಂಶದ ಸಾಂಕೇತಿಕ ಗುಣಲಕ್ಷಣಗಳನ್ನು ವರ್ಣಿಸುತ್ತದೆ.

ಭಾಷಿಕವಾಗಿ, ಶತಪಥ ಬ್ರಾಹ್ಮಣವು ವೈದಿಕ ಸಂಸ್ಕೃತದ ಬ್ರಾಹ್ಮಣ ಕಾಲದ ನಂತರ ಭಾಗಕ್ಕೆ ಸೇರಿದೆ (ಅಂದರೆ ಸರಿಸುಮಾರು ಕ್ರಿ.ಪೂ. ೮ ರಿಂದ ೬ನೇ ಶತಮಾನ, ಕಬ್ಬಿಣ ಯುಗದ ಭಾರತ). ಈ ಪಠ್ಯದ ಅಂತಿಮ ಆವೃತ್ತಿಯನ್ನು ಕ್ರಿ.ಪೂ. ೩೦೦ರಲ್ಲಿ ಬರೆದಿಡಲಾಯಿತು, ಆದರೆ ಅದರ ಕೆಲವು ಭಾಗಗಳು ಹೆಚ್ಚು ಹಳೆಯದಾಗಿವೆ, ಮತ್ತು ಬಾಯಿಮಾತಿನ ಮೂಲಕ ಅಪರಿಚಿತ ಪ್ರಾಚೀನತೆಯಿಂದ ಸಾಗಿಸಲಾಗಿದೆ.

ಈ ಪಠ್ಯ ಎರಡು ಪರಿಷ್ಕರಣೆಗಳಲ್ಲಿ ಉಳಿದುಕೊಂಡಿದೆ - ವಾಜಸನೇಯಿ ಮಾಧ್ಯಂದಿನ ಶಾಖೆ ಮತ್ತು ಕಣ್ವ ಶಾಖೆ. ಮೊದಲಿನ ಶಾಖೆಯು ನಾಮಸೂಚಕ ೧೦೦ ಅಧ್ಯಾಯಗಳು, ೧೪ ಕಾಂಡಗಳಲ್ಲಿ ೭,೨೬೪ ಕಾಂಡಿಕಾಗಳನ್ನು ಹೊಂದಿದೆ. ಎರಡನೇ ಶಾಖೆಯು ೧೦೪ ಅಧ್ಯಾಯಗಳು, ೧೭ ಕಾಂಡಗಳಲ್ಲಿ ೬,೮೦೬ ಕಾಂಡಿಕಾಗಳನ್ನು ಹೊಂದಿದೆ. ಅದರ ಮೂಲವು ಯಾಜ್ಞವಲ್ಕ್ಯ ವಾಜಸನೇಯನಿಗೆ ಆರೋಪಿಸಲಾದ ಕಾರಣ ವಾಜಸನೇಯಿ ಮಾಧ್ಯಂದಿನ ಶಾಖೆಗೆ ಆ ಹೆಸರು ಬಂದಿದೆ. ಯಾಜ್ಞವಲ್ಕ್ಯನ ಅಭಿಪ್ರಾಯಗಳನ್ನು ವಿಶ್ವಾಸಾರ್ಹವೆಂದು ಪರಿಗಣಿಸಲಾಗಿದೆ ಮತ್ತು ಶಾಂಡಿಲ್ಯನ ಅಭಿಪ್ರಾಯಗಳ ಜೊತೆಗೆ ಇವನ ಅಭಿಪ್ರಾಯಗಳನ್ನು ಶತಪಥ ಬ್ರಾಹ್ಮಣದಲ್ಲಿ ಸಮೃದ್ಧವಾಗಿ ಉಲ್ಲೇಖಿಸಲಾಗಿದೆ. ಮಾಧ್ಯಂದಿನ ಪರಿಷ್ಕರಣೆಯ ೧೪ ಕಾಂಡಗಳನ್ನು ಎರಡು ಪ್ರಧಾನ ಭಾಗಗಳಾಗಿ ವಿಭಜಿಸಬಹುದು. ಮೊದಲ ೯ ಕಾಂಡಗಳು ಯಜುರ್ವೇದದ ಅನುಗುಣವಾದ ಸಂಹಿತೆಯ ಮೊದಲ ೧೮ ಪುಸ್ತಕಗಳ ನಿಕಟ ಪಠ್ಯ ಭಾಷ್ಯಗಳನ್ನು ಹೊಂದಿವೆ, ಹಲವುವೇಳೆ ಸಾಲು ಸಾಲಾಗಿ. ನಂತರದ ೫ ಕಾಂಡಗಳು ಪೂರಕ ಮತ್ತು ಧಾರ್ಮಿಕವಾಗಿ ಹೊಸ ವಸ್ತುವನ್ನು ಚರ್ಚಿಸುತ್ತವೆ, ಜೊತೆಗೆ ೧೪ನೇ ಹಾಗೂ ಕೊನೆ ಕಾಂಡದ ಬಹುತೇಕ ಭಾಗವಾಗಿ ಪ್ರಖ್ಯಾತ ಬೃಹದಾರಣ್ಯಕ ಉಪನಿಷತ್ತನ್ನು ಸೇರಿಸಿಕೊಳ್ಳುತ್ತದೆ. ಈ ಪಠ್ಯದ ಆಸಕ್ತಿಯ ಅಂಶಗಳಲ್ಲಿ ಪೌರಾಣಿಕ ವಿಭಾಗಗಳಿವೆ, ಸೃಷ್ಟಿಯ ಪುರಾಣಗಳು ಮತ್ತು ಮನುವಿನ ಮಹಾಪೂರ ಸೇರಿದಂತೆ. ಸೃಷ್ಟಿಯ ಪುರಾಣ ಇತರ ಸೃಷ್ಟಿಯ ಪುರಾಣಗಳೊಂದಿಗೆ ಹಲವು ಹೋಲಿಕೆಗಳನ್ನು ಹೊಂದಿದೆ, ಆದಿಸ್ವರೂಪದ ಜಲದ ಬಳಕೆ, ಬೆಳಕು ಮತ್ತು ಕತ್ತಲೆಯ ವಿವರಣೆ, ಒಳ್ಳೆಯದು ಮತ್ತು ಕೆಟ್ಟದ್ದರ ವಿಭಜನೆ, ಮತ್ತು ಕಾಲದ ವಿವರಣೆ ಸೇರಿದಂತೆ.

ಉಲ್ಲೇಖಗಳು

ಬದಲಾಯಿಸಿ
  1. Jones, Constance (2007). Encyclopedia of Hinduism. New York: Infobase Publishing. p. 404. ISBN 0816073368.


ಬಾಹ್ಯ ಕೊಂಡಿಗಳು

ಬದಲಾಯಿಸಿ