ವೀರ ಅರಸ ಹನುಮಪ್ಪ ನಾಯಕ

ವೀರ ಅರಸ ಹನುಮಪ್ಪ ನಾಯಕ ಬಸವನಾಡಿನ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ನಾಡಗೌಡರ ಮನೆತನದಲ್ಲಿ ಜನಿಸಿ, ಬಲಾಡ್ಯ ಹಾಗೂ ಬಹುವೀರ ಪರಾಕ್ರಮಿಯಾಗಿದ್ದ. ವಿಜಯಪುರದ ಎರಡನೇ ಇಬ್ರಾಯಿಂ ಸುಲ್ತಾನ್‌ನ ಆಸ್ಥಾನದಲ್ಲಿ ಸರದಾರನಾಗಿ ಕೆಲವು ಪ್ರದೇಶಗಳಿಗೆ ಒಡೆಯನಾಗಿ ಸುಲ್ತಾನ್‌ ಪ್ರೀತಿಗೆ ಪಾತ್ರರಾಗಿದ್ದ ನಾಯಕನಿಗೆ ೧೧ ಪರಗಣಗಳಿಗೆ ಒಡೆತನ ನೀಡಿ ಬಾದಶಾ ವಜೀರ ಎಂಬ ಬಿರುದು ನೀಡಿದ್ದನು. ಮುಂದೆ ೩೦ ವರ್ಷಗಳ ಕಾಲ ರಾಜ್ಯಭಾರ ಮಾಡಿ ಬಳ್ಳಾರಿ ಕೊಟ್ಟೂರ ಮಠಕ್ಕೆ ೧೧೦೦ ಎಕರೆ ಜಮೀನು ದಾನವಾಗಿ ನೀಡಿದ್ದ ಎಂದರು.

ಸುಕ್ಷೇತ್ರ ಕರಿಭಂಟನಾಳ ಗ್ರಾಮ ೧೮೫೦ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಬೇಕಾಗುವ ಸೈನ್ಯ ಕಟ್ಟಲು ಈ ಗ್ರಾಮ ಪ್ರಮುಖ ಪಾತ್ರ ವಹಿಸಿದೆ. ಅಂದು ಈ ಗ್ರಾಮ ಸಾವಿರಾರು ಹಂಡೆವಜೀರ ಸಮಾಜಕದ ಯುವಕರನ್ನು ವೀರ ಯೋಧರನ್ನು ತಯಾರು ಮಾಡಿ ಇತಿಹಾಸ ಪುಟಗಳಲ್ಲಿ ದಾಖಲೆ ಬರೆಯಲು ಹಂಡೆವಜೀರ ಸಮಾಜದ ಕೊಡುಗೆಂದಿಗೂ ಮರೆಯಲು ಸಾಧ್ಯವಿಲ್ಲ. ಸುಮಾರು ೩೧೬ ವರ್ಷಗಳ ಕಾಲ ಆಳಿದ ಹಂಡೆ ಪಾಳೆಗಾರರು ಉದಾರ ನೀತಿ ಪರೋಪಕಾರಿ ಕಾರ್ಯಗಳಿಂದ ಈ ಅರಸರು ನಾಯಕ ಜನಾಂಗ ದವರಾಗಿದ್ಧದರು ಶೈವ ಧರ್ಮದವರಾಗಿದ್ದರೂ ಇತರ ಧರ್ಮಗಳನ್ನು ಗೌರವಿಸಿ ಕರ್ನಾಟಕದ ಪಾಳೆಗಾರರಲ್ಲಿ ಐತಿಹಾಸಿಕ ಕೀರ್ತಿ ಗೌರವಗಳನ್ನು ಗಳಿಸಿದ್ದಾರೆ.

ಹನುಮಪ್ಪನು ಸಾಮಂತ ಅರಸನಾಗಿ ಸನ್ಮಾನನಿತಗೊಂಡು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಗಳಿಗೆ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿ ೧೫೬೫ ರಲ್ಲಿ ಬಳ್ಳಾರಿ ಗುಡ್ಡದ ಮೇಲೆ ಬಲಿಷ್ಠ ಐತಿಹಾಸಿಕ ಕೋಟೆ ನಿರ್ಮಾಣ ಮಾಡಿ ಕಲ್ಯಾಣ ಕಾರ್ಯಕ್ರಮ ಕೈಗೊಂಡು ೧೫೮೫ ರಲ್ಲಿ ಮರಣ ಹೊಂದಿದ ಇವರ ಸಮಾಧಿ ಆಂಧ್ರ ಪ್ರದೇಶ ರಾಜ್ಯದ ಅನಂತಪುರದ ನಿಡುಮಾಮಿಡಿ ಮಠದಲ್ಲಿ ಕಾಣಬಹುದು ಎಂದರು.