ವೀಕಿಮ್ಯಾಪಿಯಾ
ವೀಕಿಮ್ಯಾಪಿಯಾ ಎಂಬುದು ಒಂದು ಆನ್‌ಲೈನ್ ಭೂಪಟ ಮತ್ತು ಉಪಗ್ರಹ ಚಿತ್ರಿತ Google Mapsಗಳನ್ನು ಮತ್ತು ವಿಕಿ ವ್ಯವಸ್ಥೆಯನ್ನು ಸಂಯೋಜಿಸಿ, ಒಂದು ಟಿಪ್ಪಣಿಯ ಮಾದರಿಯಲ್ಲಿ, ಭೂಮಿಯ ಮೇಲಿನ ಯಾವುದೇ ಸ್ಥಳದ ಬಗ್ಗೆ ಮಾಹಿತಿಯನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡುವ ವ್ಯವಸ್ಥೆ.[೧] Google Maps ಮತ್ತು ವೀಕಿಪೀಡಿಯಾಗಳ ಯಶಸ್ಸಿನಿಂದ ಪ್ರೇರೇಪಿತರಾಗಿ ಇಬ್ಬರು ರಷ್ಯನ್ ಅಂತರಜಾಲ ಉದ್ಯಮಿಗಳಾದ ಅಲೆಕ್ಸಾಂಡ್ರೆ ಕೊರಿಯಾಕಿನೆ ಮತ್ತು ಎವ್‌ಜಿನೈ ಸವ್‌ಲೆವ್ ಮೇ 24, 2006ರಂದು ಈ ಜಾಲತಾಣ ಆರಂಭಿಸಿದರು.[೨] ಇದರ ಉದ್ದೇಶವೆಂದರೆ ಇಡೀ ವಿಶ್ವವನ್ನೇ ವರ್ಣಿಸುವುದು . ಇದರಲ್ಲಿ ಪ್ರಸ್ತುತ 10,000,000ಕ್ಕೂ ಹೆಚ್ಚಿನ ಸ್ಥಳಗಳನ್ನು ಗುರುತಿಸಲಾಗಿದೆ.[೩] ವೀಕಿಮ್ಯಾಪಿಯಾಗೆ ಸೇರಿಸಲು ಇಲ್ಲವೇ ಸಂಪಾದಿಸಲು ನೋಂದಣಿಯಾಗುವುದು ಅಗತ್ಯವಿಲ್ಲದೇ ಇದ್ದರೂ ವಿಶ್ವಾದ್ಯಂತ, 387,000ಕ್ಕೂ ಹೆಚ್ಚಿನ ಬಳಕೆದಾರರು ಪ್ರಸ್ತುತ ನೊಂದಾಯಿತರಾಗಿದ್ದಾರೆ.[೪]
ಚಿತ್ರ:Wikimapia.png | |
URL | www.wikimapia.org |
---|---|
ಧ್ಯೇಯ | Let's describe the whole World! |
ವಾಣಿಜ್ಯದ? | Yes |
ತಾಣದ ಗುಂಪು | Collaborative mapping |
ದಾಖಲಿಸಿದ | Yes (not compulsory) |
ಲಭ್ಯವಾದlanguage(s) | 101 languages, including English |
ನಿರ್ಮಾತೃರು | Alexandre Koriakine and Evgeniy Saveliev |
ಪ್ರಾರಂಭಿಸಿದ | May 24, 2006 |
ಆದಾಯ | From AdSense |
ಸಧ್ಯದ ಸ್ತಿತಿ | Active |
ವೈಶಿಷ್ಟ್ಯಗಳು
ಬದಲಾಯಿಸಿಸ್ಥಳವನ್ನು ಗುರುತಿಸುವುದು
ಬದಲಾಯಿಸಿವೀಕಿಮ್ಯಾಪಿಯಾ ಯಾವುದೇ ಲೇಖನದಾತರಿಗೆ ಆಯಾ ಸ್ಥಳದ ಸುತ್ತ ಬಹುಭುಜಾಕೃತಿಯನ್ನು ಗುರುತಿಸಿ ಯಾವುದೇ ಸ್ಥಳಕ್ಕೆ “ಟ್ಯಾಗ್” (ಸ್ಥಳಗುರುತು) ಅನ್ನು ಸೇರಿಸಲು ಹಾಗೂ ನಂತರ ಸಾಮಾನ್ಯ ಭಾಷೆ, ಶೀರ್ಷಿಕೆ, ವಿವರ ಮತ್ತು ಒಂದು ಇಲ್ಲವೇ ಹೆಚ್ಚಿನ ವಿಭಾಗಗಳನ್ನು ದಾಖಲಿಸುವ ಅವಕಾಶ ನೀಡುತ್ತದೆ.[೫] ಸ್ಥಳದ ಮಾಹಿತಿ ವಿಂಡೋನ ಕೆಳಗೆ ಕಾಣಿಸುವ ಹಾಗೆ ಐಚ್ಛಿಕ ಟಿಪ್ಪಣಿಯನ್ನು, ಹಾಗೆಯೇ ಚಿತ್ರಗಳು ಹಾಗೂ YouTube ವಿಡಿಯೋಗಳನ್ನು ಲಗತ್ತಿಸಬಹುದಾಗಿದೆ.[೬]
ಯಾವುದೇ ಸ್ಥಳಗುರುತಿಗೆ ಅನೇಕ ವರ್ಗಗಳನ್ನು ವರ್ಗ ಸೇರಿಸು ಕೊಂಡಿಯನ್ನು ಕ್ಲಿಕ್ ಮಾಡಿ ಸೇರಿಸಿಕೊಳ್ಳಬಹುದು. ನಂತರ ಕಾಣಿಸುವ ಸಾಮಾನ್ಯ ವರ್ಗಗಳಲ್ಲಿ ಬೇಕಾದುದನ್ನು ಆಯ್ಕೆ ಮಾಡಿ ಇಲ್ಲವೇ ವರ್ಗದ ಮೊದಲ ಕೆಲವು ಅಕ್ಷರಗಳನ್ನು ನಮೂದಿಸಿ ಹುಡುಕಲು ಪ್ರಯತ್ನಿಸಬಹುದು. ಪ್ರತಿ ವರ್ಗದ ಮುಂದಿರುವ ಆವರಣ ಚಿಹ್ನೆಯೊಳಗಿರುವ ಸಂಖ್ಯೆಯು ಆಯಾ ವರ್ಗಕ್ಕೆ ಸೇರಿರುವ ಸ್ಥಳಗುರುತುಗಳ ಸಂಖ್ಯೆಯನ್ನು ತೋರಿಸುತ್ತವೆ. ಮೂಲ ಕಾರ್ಯಗಳು ಬಳಕೆದಾರರಿಗೆ ಸಂಬಂಧಿತ ವೀಕಿಪೀಡಿಯಾ ಲೇಖನಕ್ಕೆ ಸಂಪರ್ಕಿಸಲು, ವಿಳಾಸವನ್ನು ಸೇರಿಸಲು, ಅಥವಾ ಬಹುಭುಜಾಕೃತಿಯು ಕೇವಲ ಕಟ್ಟಡವೊಂದನ್ನು (ಭೂಭಾಗದ ಬದಲಿಗೆ) ಗುರುತಿಸುತ್ತಿದೆಯೇ ಎಂಬುದನ್ನು ಸೂಚಿಸಲು ಅವಕಾಶ ನೀಡುತ್ತವೆ.
ಚಿತ್ರಗಳು
ಬದಲಾಯಿಸಿಬಳಕೆದಾರರು ಪ್ರತಿ ಗುರುತಿಗೆ ಸ್ಥಳಟ್ಯಾಗ್‌ನ ಮೆನುವಿನ ಚಿತ್ರಗಳನ್ನು ಸೇರಿಸು/ನಿರ್ವಹಿಸು ಆದೇಶವನ್ನು ಆಯ್ಕೆ ಮಾಡುವ ಮೂಲಕ ಏಳು ಚಿತ್ರಗಳವರೆಗೆ ಸೇರಿಸಬಹುದು. ಈ ಆದೇಶವು ಕಿರುಫಲಕವೊಂದನ್ನು ತೆರೆದು, ಬಳಕೆದಾರರಿಗೆ ತಮ್ಮ ಗಣಕದಿಂದ ಇಲ್ಲವೇ ಅಂತರಜಾಲದಿಂದ ಚಿತ್ರಗಳನ್ನು ಊಡಿಸಲು ಅವಕಾಶ ನೀಡುತ್ತದೆ.
ಭಾಷೆಗಳು
ಬದಲಾಯಿಸಿಸ್ಥಳ ಗುರುತಿಸುವಿಕೆಯು ಸಂಪೂರ್ಣ ಬಹು-ಭಾಷೀಯ ಸೌಲಭ್ಯವಾಗಿದ್ದು, ವಿವಿಧ ಭಾಷೆಗಳಿಗೆ ಪ್ರತ್ಯೇಕ ಟ್ಯಾಗ್‌ಗಳನ್ನಳವಡಿಸುವ ಅವಶ್ಯಕತೆಯೇ ಇಲ್ಲ. ಯಾವುದೇ ಸ್ಥಳವನ್ನು ಬಹು ಭಾಷೆಗಳಲ್ಲಿ ವರ್ಣಿಸಲಾಗಿದ್ದರೆ, ಬಳಕೆದಾರ ವಿಂಡೋದ ಕೆಳಗಿರುವ ಕೊಂಡಿಯನ್ನು ಕ್ಲಿಕ್ ಮಾಡಿ ಇತರೆ ಭಾಷಾಪುಟಗಳನ್ನು ತೆರೆಯಬಹುದು. ಪ್ರಸ್ತುತ ಒಟ್ಟಾರೆ 101 ಭಾಷೆಗಳಿಗೆ ಬೆಂಬಲ ಕೊಡಲಾಗಿದ್ದು, ಅಂತವರ್ತನವನ್ನು 56 ಭಾಷೆಗಳಿಗೆ 100% ಭಾಷಾಂತರಿಸಲಾಗಿದೆ. ಬಹಳಷ್ಟು ಭಾಷೆಗಳು (ಚೀನೀಭಾಷೆಯನ್ನು ಹೊರತುಪಡಿಸಿ) ISO 639-1 ನಾಮಕರಣ ವ್ಯವಸ್ಥೆಯನ್ನು ಬಳಸುತ್ತವೆ.[೭] ನೊಂದಾಯಿತ ಬಳಕೆದಾರರು ವೀಕಿಮ್ಯಾಪಿಯಾ ಅಂತರ್ವರ್ತನವನ್ನು ವಿಶೇಷ ಪುಟವೊಂದರಲ್ಲಿ (http://wikimapia.org/translate/) ಭಾಷಾಂತರಿಸಲು ಸಹಾಯ ನೀಡಬಹುದಾಗಿದೆ.
ರೇಖಾ ವೈಶಿಷ್ಟ್ಯಗಳು
ಬದಲಾಯಿಸಿವೀಕಿಮ್ಯಾಪಿಯಾ "ರೇಖಾ ವೈಶಿಷ್ಟ್ಯಗಳು" ಎಂದು ಕರೆಯಲ್ಪಡುವ ವಿವರಗಳನ್ನು, ಎಂದರೆ ರಸ್ತೆಗಳು,ರೈಲುಮಾರ್ಗಗಳು, ನೌಕಾ ಮಾರ್ಗಗಳು ಹಾಗೂ ನದಿಗಳನ್ನು ಸೇರಿಸಲು ಅವಕಾಶ ನೀಡುತ್ತದೆ. ಈ ಅಂತರ್ವರ್ತನದಲ್ಲಿ ಬಳಕೆದಾರರಿಗೆ ರಸ್ತೆಯ ಗಾತ್ರವನ್ನು ಸೂಚಿಸಲು (ಪ್ರಮುಖ ಹೆದ್ದಾರಿ, ಬದಿಯ ಬೀದಿ, ಕಚ್ಚಾ ರಸ್ತೆ, ಇತ್ಯಾದಿ.), ಏಕ-ಮುಖ ಬೀದಿಗಳನ್ನು ಸೂಚಿಸಲು ಮತ್ತು ಸರಳ ವಿವರಗಳನ್ನು ಕೊಡಲು ಸೌಲಭ್ಯವಿದೆ. ಕೂಡುದಾರಿಗಳು ಮತ್ತು ಸುರಂಗಮಾರ್ಗಗಳನ್ನು ಸಹಾ ಸೂಚಿಸಬಹುದಾಗಿದೆ.
ರೈಲುಮಾರ್ಗ ಮತ್ತು ನೌಕಾ ಮಾರ್ಗವನ್ನು ಸೂಚಿಸಲು ಬಳಸುವ ಅಂತರ್ವರ್ತನವು ರಸ್ತೆಗೆ ಬಳಸುವ ರೀತಿಯಲ್ಲಿಯೇ ಇದೆ. ನದಿಯ ತೀರಪ್ರದೇಶವನ್ನು ಗುರುತಿಸಲು ಎರಡನೆಯ ಹಂತದ ಸಾಲುಗಳೂ ಲಭ್ಯವಿರುವುದರಿಂದ ನದಿಯನ್ನು ಗುರುತಿಸುವ ಸಾಧನವು ಸ್ವಲ್ಪ ಹೆಚ್ಚಿನ ಮಟ್ಟದ ಸಂಕೀರ್ಣತೆ ಹೊಂದಿದೆ.
ರಸ್ತೆಗಳನ್ನು ನಮೂದಿಸುವ ಸೌಲಭ್ಯದಲ್ಲಿ ಸ್ಥಳಗುರುತಿನ ವಿಳಾಸ ಪಟ್ಟಿಯಲ್ಲಿ ಹತ್ತಿರದ ರಸ್ತೆಗಳ ಹೆಸರನ್ನು ಸೇರಿಸುವ ಇಳಿಕೆಪಟ್ಟಿಯನ್ನು ಸಹಾ ನೀಡಲಾಗಿದೆ.
ಪಹರೆಪಟ್ಟಿಗಳು
ಬದಲಾಯಿಸಿನೊಂದಾಯಿತ ಬಳಕೆದಾರರು ಭೂಪಟದ ನಿಗದಿತ ಪ್ರದೇಶಗಳಲ್ಲಿನ ಬದಲಾವಣೆಗಳನ್ನು ಗಮನಿಸಲು ಪಹರೆಪಟ್ಟಿಗಳನ್ನು ವೀಕಿಮ್ಯಾಪಿಯಾನಲ್ಲಿ ಹೊಂದಿಸಿಕೊಳ್ಳಬಹುದಾಗಿದೆ. ಬಳಕೆದಾರರು ಗಮನಿಸಬೇಕಾದ ಪ್ರದೇಶದ ಗಾತ್ರ ಮತ್ತು ಸ್ಥಳವನ್ನು ಪ್ರತ್ಯೇಕ ಹೆಸರಿನೊಂದಿಗೆ ಉಳಿಸಿಕೊಳ್ಳಲೂ ಸಹಾ ಸಾಧ್ಯವಿದೆ.
ವೀಕಿಮ್ಯಾಪಿಯಾ ಚಾವಡಿ
ಬದಲಾಯಿಸಿಭೂಪಟ ಪರದೆಯಲ್ಲಿ ಲಭ್ಯವಿರುವ ಸಂದೇಶ ವ್ಯವಸ್ಥೆಯೊಂದಿಗೆ, ವೀಕಿಮ್ಯಾಪಿಯಾ ಅಕ್ಟೋಬರ್ 2007[೮] ರಲ್ಲಿ ಚಾವಡಿಯೊಂದನ್ನು ಸಹಾ ಪ್ರಾರಂಭಿಸಿದೆ. ಪ್ರತ್ಯೇಕ ವಿಕಿ ಬಳಕೆದಾರ ಕೈಪಿಡಿ ಇದ್ದರೂ, ವೀಕಿಮ್ಯಾಪಿಯಾದ ನೀತಿನಿಯಮಗಳ ಬಗ್ಗೆ ಬಹಳಷ್ಟು ಚರ್ಚೆಗಳು ಇಲ್ಲಿ ನಡೆಯುತ್ತವೆ.
ಮತ ಚಲಾವಣೆ ಮತ್ತು ಬಳಕೆದಾರ ಅಂಕಿಅಂಶಗಳು
ಬದಲಾಯಿಸಿಸಮುದಾಯದ ಇತರರ ಮಧ್ಯೆ ತಮ್ಮ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ಅನುವಾಗುವಂತೆ ಬಳಕೆದಾರರು ಇತರ ಬಳಕೆದಾರರ ಕೊಡುಗೆಗಳ ಪರ ಅಥವಾ ವಿರುದ್ಧ ತಮ್ಮ ಮತವನ್ನು ಚಲಾಯಿಸಬಹುದಾಗಿದೆ. ಬಳಕೆದಾರರ ಕೊಡುಗೆಯ ಮೇಲೆ ಆಧಾರಿತವಾಗಿ ಶ್ರೇಯಾಂಕವನ್ನು ಸ್ವಯಂಚಾಲಿತವಾಗಿ ನೀಡುವ ಶ್ರೇಯಾಂಕಗಳು ಹಾಗೂ ಬಳಕೆದಾರರ ಅಂಕಿಅಂಶಗಳನ್ನು ತೋರಿಸುವ ಫಲಕವಿದೆ. ಆದಾಗ್ಯೂ ಮತ ಹೊಂದಾಣಿಕೆ ಹಾಗೂ ಬಳಕೆದಾರ ಅಂಕಿಅಂಶಗಳು ಬಳಕೆದಾರರ ಬಳಕೆದಾರ-ಸ್ಥಿತಿಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ.
ಬಳಕೆದಾರ ಖಾತೆಗಳು ಮತ್ತು ಹಂತಗಳು
ಬದಲಾಯಿಸಿಐಚ್ಛಿಕ ಬಳಕೆದಾರ ಖಾತೆಗಳನ್ನು ಅಕ್ಟೋಬರ್ 2006[೯] ರಲ್ಲಿ ಪರಿಚಯಿಸಲಾಯಿತು. ದುರ್ಬಳಕೆ ಹಾಗೂ ದುಂಡಾವರ್ತಿಯನ್ನು ನಿಯಂತ್ರಿಸಲು ಅನುವಾಗುವಂತೆ ಬಳಕೆದಾರ ದರ್ಜೆ ಮತ್ತು ಅನುಮತಿಗಳ ವ್ಯವಸ್ಥೆಯು ಕಾಲಾಂತರದಲ್ಲಿ ವಿಕಸಿಸುತ್ತಾ ಬಂದಿದೆ. ವೀಕಿಮ್ಯಾಪಿಯಾ FAQನಲ್ಲಿ ವಿವರಿಸಿರುವ ಹಾಗೆ ಮೂರು ಬಳಕೆದಾರ ಹಂತಗಳಿವೆ.
- ಬಳಕೆದಾರರ ಹಂತ 0 (UL0) : ಹಂತ 0ಯು ಎಲ್ಲಾ ಹೊಸ ಬಳಕೆದಾರರಿಗೆ ಸರ್ವೇಸಾಧಾರಣವಾಗಿ ನಿಯೋಜಿಸಲಾಗುವ ಹಂತ. UL0 ಬಳಕೆದಾರರು ಸ್ಥಳಗಳನ್ನು ಸೇರಿಸಬಲ್ಲರು, ಇರುವ ಸ್ಥಳಗಳನ್ನು ಸಂಪಾದಿಸಬಲ್ಲರು ಮತ್ತು ಖಾಸಗಿ ಸಂದೇಶ ವ್ಯವಸ್ಥೆಯನ್ನು ಬಳಸಬಲ್ಲರು. ಹೊಸ ಬಳಕೆದಾರರಿಗೆ ತಾತ್ಕಾಲಿಕವಾಗಿ ಚಾವಡಿಯಲ್ಲಿ ತಮ್ಮ ದಾಖಲಾತಿಗಳನ್ನು ನೀಡಲು ಪ್ರತಿಬಂಧಿಸಲಾಗಿರುತ್ತದೆ.
- ಬಳಕೆದಾರರ ಹಂತ 1 (UL1) : ಕೆಲ ದಿನಗಳ ನಂತರ ಸ್ವಯಂಚಾಲಿತವಾಗಿ ಬಳಕೆದಾರರು UL1 ಹಂತಕ್ಕೆ ಬಡ್ತಿ ಪಡೆಯುತ್ತಾರೆ. ನಿಗದಿತ UL0 ಕಾರ್ಯಗಳೊಂದಿಗೆ, UL1 ಬಳಕೆದಾರರು ಬಹುಭುಜಾಕೃತಿಗಳನ್ನು ಬದಲಾಯಿಸುವಿಕೆ (ರೂಪರೇಖೆ ನಮೂದನೆ), ಸ್ಥಳಗಳ ಅಳಿಸುವಿಕೆಯನ್ನು ಮಾಡಬಲ್ಲರಲ್ಲದೇ ಚಾವಡಿಯಲ್ಲಿ ಸಹಾ ಭಾಗವಹಿಸಬಲ್ಲರು. ವಿಪುಲ ಸಂಖ್ಯೆಯ ವೀಕಿಮ್ಯಾಪಿಯಾ ಕೊಡುಗೆದಾರರು ಈ ವರ್ಗಕ್ಕೆ ಸೇರುತ್ತಾರೆ.
- ಬಳಕೆದಾರರ ಹಂತ 2 (UL2) : ನೊಂದಾಯಿತ ಬಳಕೆದಾರರಲ್ಲಿ ಕೆಲವು ನೂರು ವೀಕಿಮ್ಯಾಪಿಯಾ ಬಳಕೆದಾರರಿಗೆ ಮಾತ್ರವೇ 2ನೇ ಹಂತಕ್ಕೆ ಪ್ರವೇಶ ನೀಡಲಾಗಿದೆ. UL2 ಅನುಮತಿಗಳಲ್ಲಿ ಜಾಲತಾಣ ಸುರಕ್ಷತೆಯನ್ನು ಕಾಪಿಟ್ಟುಕೊಳ್ಳಲು ಬೇಕಾಗುವ (ದುಂಡಾವರ್ತಿ ನಡೆಸುವವರನ್ನು ನಿಷೇಧ ಹೇರುವ ಕಾರ್ಯಾಚರಣೆಯನ್ನು ಆರಂಭಿಸುವಂತಹಾ) ಮತ್ತು ಭೂಪಟದ ಮೇಲೆಯೇ ಆಗಬಲ್ಲ ದುಂಡಾವರ್ತಿ ತಡೆ ಪ್ರಯತ್ನ ಮಾಡಲು ಬೇಕಾಗುವ (ಹೆಚ್ಚಿನ ಸಂಖ್ಯೆಯ ಟ್ಯಾಗ್‌ಗಳನ್ನು ಅಳಿಸಬಲ್ಲ ಸಾಧ್ಯತೆ, ನೊಂದಾಯಿಸಿರದ ಬಳಕೆದಾರರಿಂದ ಸಂಪಾದಿಸಲಾಗದಂತೆ ಟ್ಯಾಗ್‌ಗಳ ಸಂರಕ್ಷಣೆ ಮತ್ತು ನಿಗದಿತ ಟ್ಯಾಗ್‌ಗಳನ್ನು ಶೀಘ್ರವಾಗಿ ಅಳಿಸಬಲ್ಲ ಸಾಮರ್ಥ್ಯ) ಪ್ರಮುಖ ಸಾಮರ್ಥ್ಯಗಳೂ ಸೇರಿವೆ.
UL2 ಸ್ಥಾನ ಮತ್ತು “ಧರಣಿ”
ಬದಲಾಯಿಸಿUL2 ಸ್ಥಾನಮಾನವು ಬಹುಶಃ ವೀಕಿಮ್ಯಾಪಿಯಾದ ಶ್ರೇಣಿವ್ಯವಸ್ಥೆಯಲ್ಲಿಯೇ ಅತ್ಯಂತ ಅಪಾರ್ಥಕ್ಕೊಳಗಾದ ವಿಚಾರವಾಗಿರುವುದಕ್ಕೆ ಬಹುಶಃ ಬಡ್ತಿಯ ವೈಖರಿಯನ್ನು ಬಹಳಷ್ಟು ಹೊಸ ಬಳಕೆದಾರರಿಂದ ರಹಸ್ಯವಾಗಿರಿಸಿರುವುದೇ ಕಾರಣವಿರಬಹುದು.[೧೦] 2ನೇ ಹಂತದ ಅನುಮತಿಗಳನ್ನು ವೀಕಿಮ್ಯಾಪಿಯಾ ಆಡಳಿತಗಾರರು (ಅಥವಾ ಜಾಲತಾಣ ಮಾಲೀಕರ) ವಿವೇಚನೆಯ ಮೇರೆಗೆ ಮಾತ್ರವೇ ನೀಡುವುದಾಗಿದ್ದು, ಕೆಲವು ಸಂದರ್ಭಗಳಲ್ಲಿ ಅದನ್ನು ವಾಪಸ್ ಪಡೆಯಲಾಗಿದೆ. ವೀಕಿಮ್ಯಾಪಿಯಾ ಆಡಳಿತಗಾರರು ಹೊಸ ಸದಸ್ಯರಿಗೆ ಬಡ್ತಿ ನೀಡಬೇಕಾದರೆ ಐತಿಹಾಸಿಕವಾಗಿ ಹಿರಿಯ ಸದಸ್ಯರ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡಿದ್ದರೂ,[೧೧] ಕೆಲವೊಮ್ಮೆ UL2 ಬಳಕೆದಾರರಿಗೆ ಹಿಂಬಡ್ತಿ ನೀಡುವಾಗ ಏಕಪಕ್ಷೀಯವಾಗಿ ನಡೆದುಕೊಂಡಿದ್ದೂ ಇದೆ. ಜುಲೈ 2009ರಲ್ಲಿ, ಕಂಠೋಕ್ತವಾಗಿ ಯೋಜನೆಯ ಬದಲಾವಣೆಗಳಿಗೆ ವಿರೋಧ ವ್ಯಕ್ತಪಡಿಸಿದ ಅನೇಕ ಬಳಕೆದಾರರ ಅಪ್ರಕಟಿತ ಹಿಂಬಡ್ತಿಯಿಂದಾಗಿ ಯೋಜನೆಯ ಅನೇಕ ಹಿರಿಯ ಬಳಕೆದಾರರಿಂದ ಬಿರುಸಿನ ಪ್ರತಿರೋಧ ಎದುರಾಗಿತ್ತು.[೧೨] ಈ ವಿರೋಧವು ಭಾಗವಹಿಸಿದ UL2ಗಳಿಂದ ವಿಶಾಲದೃಷ್ಟಿಯಲ್ಲಿ ಹೇಳುವುದಾದರೆ "ಪರಿಣತ" ಬಳಕೆದಾರ ಹಂತದ ಕಾರ್ಯಗಳ ನಿಲುಗಡೆಯಂತಹಾ ಸಾಧಾರಣ ಧರಣಿಯ ರೂಪದಲ್ಲಿತ್ತು.[೧೩]. ಆಡಳಿತಗಾರರು ನಿಯಂತ್ರಣಾಧಿಕಾರದ ಹೆಸರಿನಲ್ಲಿ ಕೆಲವು ಲೇಖನ ಸರಣಿಗಳನ್ನು ಅಳಿಸುವ ಮೂಲಕ ಅದಕ್ಕೆ ಉತ್ತರಿಸಿದರು [೧೪]
ವೀಕಿಮ್ಯಾಪಿಯಾ ಬೀಟಾ
ಬದಲಾಯಿಸಿಅಕ್ಟೋಬರ್ 2008ರಲ್ಲಿ, ನೊಂದಾಯಿತ ಬಳಕೆದಾರರಿಗೆ ಪರೀಕ್ಷಾ ದೃಷ್ಟಿಯಿಂದ ಬೀಟಾ ಆವೃತ್ತಿಗೆ ಪ್ರವೇಶ ನೀಡಲಾಯಿತು. ನವೀನ ಅಂತರ್ವರ್ತನವು “ಕ್ಷೇತ್ರ ಪ್ರದೇಶ”ದಂತಹಾ ಹೊಸ ಸೌಲಭ್ಯ ಹಾಗೂ "ವೀಕಿಮ್ಯಾಪಿಯಾ ಭೂಪಟ"ವೆಂದು ಕರೆಯಲಾಗಿರುವ ಹೊಸ ಪದರಗಳನ್ನೊಳಗೊಂಡಿದೆ. ವೀಕಿಮ್ಯಾಪಿಯಾ ಭೂಪಟ ಪದರವು ಬಹುಭುಜಾಕೃತಿ ಮತ್ತು ರಸ್ತೆಗಳಂತಹಾ ವೀಕಿಮ್ಯಾಪಿಯಾ ಬಳಕೆದಾರರಿಂದ ದಾಖಲಿಸಲ್ಪಟ್ಟ ಮಾಹಿತಿಗಳನ್ನು ಮಾತ್ರವೇ ತೋರಿಸುತ್ತದೆ, — ಟ್ಯಾಗ್‌ಗಳ ವರ್ಗಕ್ಕೆ ಅನುಸಾರವಾಗಿ ವಿವಿಧ ವರ್ಣಗಳ ಬಹುಭುಜಾಕೃತಿ e.g., ಸರೋವರ ಇಲ್ಲವೇ ಜಲಾಶಯವನ್ನು ಸೂಚಿಸಲು ನೀಲಿ, ಅಥವಾ ಉದ್ಯಾನವನ್ನು ಸೂಚಿಸಲು ಹಸಿರು ಇತ್ಯಾದಿ. ಬಳಕೆದಾರರು ವರ್ಗಗಳಿಗನುಸಾರವಾಗಿ ಯಾವ ಸ್ಥಳಗಳು ತೋರಿಸಬಹುದೆಂದು ಸೂಚಿಸಬಹುದು. ವೀಕಿಮ್ಯಾಪಿಯಾ ವಿಕಿ[೧೫] ಯನ್ನು ಸಹಾ ದಾಖಲೆಸಂಗ್ರಹ ಹಾಗೂ ಸಹಯೋಗಕ್ಕೆ ಸಹಾಯವಾಗಲೆಂದು ಆರಂಭಿಸಲಾಗಿದೆ.
ಕೆಲ ಬಳಕೆದಾರರು ಈ ತೀರ್ಮಾನಕ್ಕೆ ತಮ್ಮ ಅಸಮ್ಮತಿ ಸೂಚಿಸಿದ್ದಾಗ್ಯೂ (ಜುಲೈ 3, 2009ರಿಂದ) ವೀಕಿಮ್ಯಾಪಿಯಾ ಬೀಟಾವು ಈಗ ವೀಕಿಮ್ಯಾಪಿಯಾದ ಅಧಿಕೃತ ಆವೃತ್ತಿಯಾಗಿದೆ.[೧೬] ವಿಸ್ತೀರ್ಣ ಅಳತೆಯ ಸೌಲಭ್ಯದ ನಿಲುಗಡೆಗೆ ಟೀಕೆ ವ್ಯಕ್ತವಾಗುತ್ತಿದೆ. ಆದರೂ ಜಾಲಾಡುವಿನ/ಬ್ರೌಸರ್‌ನ URL ಸಾಲಿನಲ್ಲಿ ಈ ಕೆಳಕಂಡ ಜಾವಾ ಸ್ಕ್ರಿಪ್ಟ್‌ನ್ನು ಚಾಲಿತಗೊಳಿಸಿ ಮತ್ತೆ ತೊಡಗಿಸಿಕೊಳ್ಳಬಹುದಾಗಿದೆ javascript:loadjs('polynewa.js');loadjs('geotoolsa.js','if(is_addfn){cancelpoly();}mesarea();');jwindow3_menu(1); .
ಅಸ್ತವ್ಯಸ್ತತೆ ಮತ್ತು ಶೋಧಿಸುವಿಕೆ
ಬದಲಾಯಿಸಿಹಳೆಯ ಅಥವಾ ಅತಿ ಹೆಚ್ಚು ವೆಚ್ಚದ ನಕ್ಷೆರೂಪಿಸುವಿಕೆ ಇರುವ ಭಾರತದಂತಹಾ, ವಿಶ್ವದ ಕೆಲ ಪ್ರದೇಶಗಳಲ್ಲಿ ಅಪೂರ್ವ ರೀತಿಯಲ್ಲಿ ವೀಕಿಮ್ಯಾಪಿಯಾದ ಬೆಳವಣಿಗೆಯು ಅಭೂತಪೂರ್ವ ವೇಗ ಪಡೆದುಕೊಂಡಿತ್ತು. ಆದರೂ ಈ ವೇಗದ ಬೆಳವಣಿಗೆಯು ತನ್ನದೇ ಆದ ತೊಂದರೆಗಳನ್ನೂ ಹೊತ್ತು ತಂದಿತ್ತು. ಸಾರ್ವಜನಿಕ ಸ್ಥಳಗಳಿಂದ ಖಾಸಗಿ ಸ್ಥಳಗಳನ್ನು ಪ್ರತ್ಯೇಕಿಸುವ ಯಾವುದೇ ಸೌಲಭ್ಯವನ್ನು ವೀಕಿಮ್ಯಾಪಿಯಾ ಅಂತರ್ವರ್ತನವು ಹೊಂದಿರಲಿಲ್ಲವಾದುದರಿಂದ, ನಗರ ಪ್ರದೇಶಗಳು ಒಂದರಮೇಲೊಂದು ಖಾಸಗಿ ಗೃಹಗಳ ಸ್ಥಳಗಳನ್ನು ಗುರುತು ಮಾಡಿರುವ ಸಾವಿರಾರು ಚತುರ್ಭುಜಾಕೃತಿಗಳನ್ನು ಹೊಂದಿದ್ದವು. ಆದರೂ ಇತ್ತೀಚೆಗೆ, ಬಳಕೆದಾರರಿಗೆ ಯಾವ ವರ್ಗದ ಅಥವಾ ವರ್ಗಗಳ ಸೌಲಭ್ಯಗಳನ್ನು ಪ್ರದರ್ಶಿಸಬೇಕೆಂದು ಆಯ್ಕೆ ಮಾಡಬಲ್ಲ ಹಾಗೆ ವರ್ಗಾತ್ಮಕ ಜಾಲಾಡಿಕೆಯನ್ನು ಪರಿಚಯಿಸಲಾಗಿದೆ.
ಪರವಾನಗಿ ಪಡೆಯುವಿಕೆ
ಬದಲಾಯಿಸಿವೀಕಿಪೀಡಿಯಾದಂತಲ್ಲದೇ, ವೀಕಿಮ್ಯಾಪಿಯಾದ ಎಲ್ಲಾ ಬಳಕೆದಾರರ ವಿಷಯಗಳು ವೀಕಿಮ್ಯಾಪಿಯಾಗೆ ಪ್ರತ್ಯೇಕವಾಗಿ ಪರವಾನಗಿಯನ್ನು ಹೊಂದಿವೆ. ವೀಕಿಮ್ಯಾಪಿಯಾ GFDL ಪರವಾನಗಿಯನ್ನು ಬಳಸುವುದಿಲ್ಲವಾದುದರಿಂದ, ಸ್ವಾಮ್ಯತೆ ಹಾಗೂ ಅನೇಕ ಬಳಕೆದಾರ ಹಕ್ಕುಗಳು ವೀಕಿಮ್ಯಾಪಿಯಾಗೆ ಸಮರ್ಪಿಸಿದ ನಂತರ ಅದರ ಅಧೀನಕ್ಕೆ ಒಳಪಡುತ್ತವೆ. ಜಾಲತಾಣದ ಸೇವಾಶರ್ತುಗಳ ಪ್ರಕಾರ, ಬಳಕೆದಾರ ಸಮರ್ಪಣೆಗಳು ಜಾಲತಾಣದ ಮೂಲಕ ಖಾಸಗೀ ಅಥವಾ ಶೈಕ್ಷಣಿಕ ವಾಣಿಜ್ಯೇತರ ಉದ್ದೇಶಗಳಿಗೆ ಬಳಸಬಹುದಾಗಿದೆ.[೧೭]
ವ್ಯವಹಾರ ಮಾದರಿ
ಬದಲಾಯಿಸಿGoogle ಜಾಹಿರಾತುಗಳ ಮೂಲಕ ಈ ಜಾಲತಾಣವು ಕೆಲಮಟ್ಟಿಗೆ ವರಮಾನವನ್ನು ಗಳಿಸುತ್ತಿದೆ. ಜುಲೈ 2007ರಲ್ಲಿ, ವೀಕಿಮ್ಯಾಪಿಯಾದ ಸ್ಥಾಪಕರು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೂಡಿಕೆದಾರರ ಸಹಾಯವನ್ನು ಪಡೆಯಲು ಉದ್ದೇಶಿಸಿದ್ದರು.[೧೮]
ಪರಸ್ಪರ-ಕಾರ್ಯಾಚರಣೆಯ ಸಾಧ್ಯತೆಗಳು
ಬದಲಾಯಿಸಿGPS ಗ್ರಾಹಕದಲ್ಲಿ ಪ್ಲಗ್-ಇನ್ ತಂತ್ರಾಂಶದ ಸಹಾಯದೊಂದಿಗೆ ವೀಕಿಮ್ಯಾಪಿಯಾದ ಸಂಪರ್ಕ ಪಡೆಯಬಹುದಾಗಿದೆ (ವೀಕಿಮ್ಯಾಪಿಯಾ ಜಾಲತಾಣದಲ್ಲಿ ಲಭ್ಯವಿರುವ ವಿಂಡೋಸ್ OSನ ಬೀಟಾ ಆವೃತ್ತಿಯನ್ನು ಇಳಿಸಿಕೊಳ್ಳಬಹುದು [೧೯]).
ಸೀಮಿತ ವೀಕಿಮ್ಯಾಪಿಯಾ ಸೌಲಭ್ಯಗಳು ಇವುಗಳಲ್ಲಿ ಲಭ್ಯವಿವೆ:
- Google Earth, KML ಕಡತದಲ್ಲಿ Google Earthನ ಚೋದಕ/ಡೈನಮಿಕ್ ಪದರ ವನ್ನು ಬಳಸಿಕೊಳ್ಳಬಹುದು.
- Google Mapsನ ಭೂಪಟಚಿತ್ರಿಕೆಗಳ ವಿಶೇಷ ಸ್ತರದ ಕೆಳಕಂಡ ಕೊಂಡಿಯಲ್ಲಿ ವೀಕ್ಷಣೆ [೧] Archived 2010-04-10 ವೇಬ್ಯಾಕ್ ಮೆಷಿನ್ ನಲ್ಲಿ..
- ಯಾವುದೇ HTML ಜಾಲಪುಟದಲ್ಲಿ, "ವೀಕಿಮ್ಯಾಪಿಯಾ:ನಿಮ್ಮ ಪುಟದಲ್ಲಿ ಭೂಪಟ" ಎಂಬುದರ ಕೆಳಗಿರುವ ಮೇಲ್ಭಾಗದ ಮೆನುವಿನಲ್ಲಿರುವ ಭೂಪಟದ ಚೌಕಟ್ಟಿಗೆಂದು ಪ್ರೋಗ್ರಾಂ ಸಂಕೇತವನ್ನು ಬರೆದು ಅಳವಡಿಸಿಕೊಳ್ಳಬಹುದು
- ಬಹಳಷ್ಟು ಜಾವಾ-ಸಶಕ್ತ ಸಂಚಾರಿ ದೂರವಾಣಿಗಳಲ್ಲಿ ಮೊಬೈಲ್ ಜಿಮ್ಯಾಪ್ಸ್ನಂತಹಾ ಪ್ರತ್ಯೇಕ ತಂತ್ರಾಂಶದೊಂದಿಗೆ ಬಳಸಿಕೊಳ್ಳಬಹುದು.
- ವಿಕಿಪ್ಲೇಸಸ್ Archived 2009-11-28 ವೇಬ್ಯಾಕ್ ಮೆಷಿನ್ ನಲ್ಲಿ. ಎಂಬ iPhone ತಂತ್ರಾಂಶದಲ್ಲಿ.
ವಿವರಗಳಿಗಾಗಿ ನೋಡಿ
ಬದಲಾಯಿಸಿಆಕರಗಳು
ಬದಲಾಯಿಸಿ- ↑ Bear, David (2007-01-07). "Getting a bird's-eye view of any place on Earth". Archived from the original on 2008-03-02. Retrieved 2007-11-13.
- ↑ Mount, Nick (2008). Representing, Modeling, and Visualizing the Natural Environment. CRC Press. p. 271. ISBN 1420055496.
{{cite book}}
: Unknown parameter|coauthors=
ignored (|author=
suggested) (help) - ↑ "Wikimapia Main Page". Retrieved 2009-05-06.
{{cite web}}
: Cite has empty unknown parameter:|1=
(help) (ಎಡ ಮೇಲ್ಭಾಗದ ತುದಿಯನ್ನು ನೋಡಿ) - ↑ http://www.wikimapia.org/sys/user_stats/?order=rating&sort=desc
- ↑ Koriakine, Alexandre (2006-12-04). "Place types, etc". Retrieved 2007-11-14.
- ↑ Jones, Matt (2007-01-11). "How To #5: YouTube in Wikimapia!". Archived from the original on 2009-02-20. Retrieved 2007-11-14.
- ↑ "Wikimapia forum: ISO letters". wikimapia.org. Retrieved 2009-05-12.
- ↑ "WikiMapia FAQ". 2006-10-08. Archived from the original on 2007-11-18. Retrieved 2007-11-14.
- ↑ Koriakine, Alexandre (2006-10-08). "Registration started". Retrieved 2007-11-14.
- ↑ "Forum Topic: Pitr". Retrieved 2009-07-18.
- ↑ "Wikimapia forum: Good users". Retrieved 2009-07-18.
- ↑ "Wikimapia forum: Final appeal". Retrieved 2009-07-18.
- ↑ "Wikimapia forum: General strike". Retrieved 2009-07-18.
- ↑ http://wikimapia.org/forum/?t=4733&last=1#last
- ↑ ವೀಕಿಮ್ಯಾಪಿಯಾ ವಿಕಿ
- ↑ http://wikimapia.org/forum/?t=4621&last=1#last
- ↑ "Wikimapia Terms of Service". 2007-10-27. Retrieved 2008-06-24.
- ↑ "ವೀಕಿಮ್ಯಾಪಿಯಾ ಬ್ಲಾಗ್‌ಸ್ಪಾಟ್ ದಾಖಲಾತಿ". Archived from the original on 2007-10-31. Retrieved 2007-10-31.
- ↑ GPSನಿಂದ ವೀಕಿಮ್ಯಾಪಿಯಾ (ಪ್ರಸ್ತುತ ವಿಂಡೋಸ್‌ಗೆ ಮಾತ್ರ)
ಹೊರಗಿನ ಕೊಂಡಿಗಳು
ಬದಲಾಯಿಸಿ- ವೀಕಿಮ್ಯಾಪಿಯಾ
- ಚರ್ಚೆಗಳಿಗಾಗಿರುವ ವೀಕಿಮ್ಯಾಪಿಯಾ ಚಾವಡಿ
- ವೀಕಿಮ್ಯಾಪಿಯಾ ಪೂರ್ಣ ಬಳಕೆದಾರ ಕೈಪಿಡಿ
- ವೀಕಿಮ್ಯಾಪಿಯಾ ವಿಕಿ
- WikiMapper Plus Firefox ಆಡ್-ಆನ್
- ಅಧಿಕೃತ ವೀಕಿಮ್ಯಾಪಿಯಾ ಬ್ಲಾಗ್
- ಮ್ಯಾಟ್ ಜೋನ್ಸ್ರ ವೀಕಿಮ್ಯಾಪಿಯಾ ಬ್ಲಾಗ್ Archived 2007-10-19 ವೇಬ್ಯಾಕ್ ಮೆಷಿನ್ ನಲ್ಲಿ.
- ಮೆಟಾ.ವಿಕಿಮೀಡಿಯಾ / ವೀಕಿಪೀಡಿಯಾದೊಂದಿಗಿನ ಸಂಪರ್ಕದ ಬಗ್ಗೆ
- 'ಬಾರ್ಡರ್ಲೆಸ್' – ವೀಕಿಮ್ಯಾಪಿಯಾ ಸ್ತುತಿಗೀತೆ/ಧ್ಯೇಯವಾಣಿ