ವಿಶ್ಲೇಷಣೆ

ಸ್ವಯಂ ಚರ್ಚೆ

ವಿಶ್ಲೇಷಣೆಯು ಒಂದು ಸಂಕೀರ್ಣ ವಿಷಯ ಅಥವಾ ವಸ್ತುವಿನ ಬಗ್ಗೆ ಹೆಚ್ಚು ಉತ್ತಮ ತಿಳುವಳಿಕೆ ಪಡೆಯಲು ಅದನ್ನು ಹೆಚ್ಚು ಸಣ್ಣ ಭಾಗಗಳಾಗಿ ಒಡೆಯುವ ಪ್ರಕ್ರಿಯೆ. ಈ ತಂತ್ರವನ್ನು ಗಣಿತ ಮತ್ತು ತರ್ಕಶಾಸ್ತ್ರದ ಅಧ್ಯಯನದಲ್ಲಿ ಅರಿಸ್ಟಾಟಲ್‌‍ಗಿಂತ (ಕ್ರಿ.ಪೂ. ೩೮೪-೩೨೨) ಹಿಂದಿನ ಕಾಲದಿಂದ ಅನ್ವಯಿಸಲಾಗಿದೆ. ಆದರೆ ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ ವಿಶ್ಲೇಷಣೆಯು ತುಲನಾತ್ಮಕವಾಗಿ ಇತ್ತೀಚಿನ ಬೆಳವಣಿಗೆಯಾಗಿದೆ.[]

ಒಂದು ವಿಧ್ಯುಕ್ತ ಪರಿಕಲ್ಪನೆಯಾಗಿ, ಈ ವಿಧಾನಕ್ಕೆ ನಾನಾ ಬಗೆಯಾಗಿ ಅಲ್ಹೇಜ಼ನ್, ರೆನೆ ಡೆಸ್ಕಾರ್ಟೆ ಮತ್ತು ಗೆಲಿಲಿಯೋ ಗೆಲಿಲಿರನ್ನು ಹೊಣೆಮಾಡಲಾಗಿದೆ. ಇದಕ್ಕೆ ಸರ್ ಐಸಾಕ್ ನ್ಯೂಟನ್‍‍ರನ್ನೂ ಹೊಣೆಮಾಡಲಾಗಿದೆ, ಭೌತಿಕ ಪರಿಶೋಧನೆಯ ವ್ಯಾವಹಾರಿಕ ವಿಧಾನದ ರೂಪದಲ್ಲಿ (ಇದನ್ನು ಅವರು ಹೆಸರಿಸಲಿಲ್ಲ).

ರಸಾಯನಶಾಸ್ತ್ರದ ಕ್ಷೇತ್ರವು ವಿಶ್ಲೇಷಣೆಯನ್ನು ಕನಿಷ್ಠಪಕ್ಷ ಮೂರು ರೀತಿಗಳಲ್ಲಿ ಬಳಸುತ್ತದೆ: ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತದ ಘಟಕಗಳನ್ನು ಗುರುತಿಸಲು (ಗುಣಾತ್ಮಕ ವಿಶ್ಲೇಷಣೆ), ಒಂದು ಮಿಶ್ರಣದಲ್ಲಿನ ಘಟಕಗಳ ಪ್ರಮಾಣಗಳನ್ನು ಗುರುತಿಸಲು (ಪರಿಣಾಮಾತ್ಮಕ ವಿಶ್ಲೇಷಣೆ), ಮತ್ತು ರಾಸಾಯನಿಕೆ ಪ್ರಕ್ರಿಯೆಗಳನ್ನು ವಿಘಟಿಸಿ ದ್ರವ್ಯಮೂಲಧಾತುಗಳ ನಡುವಿನ ರಾಸಾಯನಿಕ ಕ್ರಿಯೆಗಳನ್ನು ಪರೀಕ್ಷಿಸುವುದು.

ಉಲ್ಲೇಖಗಳು

ಬದಲಾಯಿಸಿ
  1. Michael Beaney (Summer 2012). "Analysis". The Stanford Encyclopedia of Philosophy. Michael Beaney. Retrieved 23 May 2012.{{cite web}}: CS1 maint: year (link)