ತೇರು ಅಂದರೆ ಕಟ್ಟಿಗೆಯಿಂದ ತಯಾರಿಸಲಾದ ಮತ್ತು ಚಕ್ರಗಳನ್ನು ಹೊಂದಿರುವ ರಥ ಅಥವಾ ಬಂಡಿ. ತೇರನ್ನು ಹಗ್ಗದ ಸಹಾಯದಿಂದ ಕೈಗಳಿಂದ ಎಳೆಯಬಹುದು, ಅಥವಾ ಕುದುರೆಗಳು, ಆನೆಗಳಿಂದ ಸಹಾಯದಿಂದ ಎಳೆಯಬಹುದು. ತೇರುಗಳನ್ನು ಬಹುತೇಕವಾಗಿ ದಕ್ಷಿಣ ಭಾರತದ ದೇವಸ್ಥಾನಗಳು ರಥೋತ್ಸವಕ್ಕೆ ಬಳಸುತ್ತವೆ. ಉತ್ಸವದ ಅವಧಿಯಲ್ಲಿ, ದೇವಸ್ಥಾನದ ದೇವತೆಗಳ ವಿಗ್ರಹಗಳನ್ನು ರಥದಲ್ಲಿ ಕೂಡಿಸಿಕೊಂಡು ಬೀದಿಗಳಲ್ಲಿ ಒಯ್ಯಲಾಗುತ್ತದೆ, ಜೊತೆಗೆ ಮಂತ್ರಗಳು, ಸೂಕ್ತಗಳು, ಶ್ಲೋಕ ಪಠನ ಅಥವಾ ಭಜನೆಗಳನ್ನು ಹಾಡಲಾಗುತ್ತದೆ.

ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ
ಉಡುಪಿಯ ಶ್ರೀ ಕೃಷ್ಣ ದೇವಸ್ಥಾನದ ಅಲಂಕೃತ ತೇರು

ರಥ ಯಾತ್ರೆ ಜಗನ್ನಾಥನೊಂದಿಗೆ ಸಂಬಂಧಿಸಲಾದ ಮತ್ತು ಪುರಿಯಲ್ಲಿ ಆಯೋಜಿಸಲಾದ ಒಂದು ಬೃಹತ್ ಹಿಂದೂ ಉತ್ಸವ. ಇದನ್ನು ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಸಲಾಗುತ್ತದೆ. ತಮಿಳು ನಾಡಿನ ತೇರುಗಳು ಬಹಳ ಪ್ರಸಿದ್ಧ. ಈ ತೇರುಗಳು ಬಹಳ ಎತ್ತರ ಮತ್ತು ತೂಕವನ್ನು ಹೊಂದಿರಬಹುದು. ಉಡುಪಿಯಲ್ಲಿ ಐದು ತೇರುಗಳಿವೆ. ಅವುಗಳೆಂದರೆ ಬ್ರಹ್ಮ ರಥ, ಮಧ್ಯ ರಥ, ಕಿನ್ಯೊ, ಬೆಳ್ಳಿಯ ಮತ್ತು ಚಿನ್ನದ ರಥಗಳು.

"https://kn.wikipedia.org/w/index.php?title=ತೇರು&oldid=799513" ಇಂದ ಪಡೆಯಲ್ಪಟ್ಟಿದೆ