ಅರವೀಡು ಮನೆತನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q747828
೧ ನೇ ಸಾಲು:
'''ಅರವೀಡು ಮನೆತನ''ವು ವಿಜಯನಗರ ಸಂಸ್ಥಾನವನ್ನು ಆಳಿದ ಒಂದು ರಾಜವಂಶ. [[ವಿಜಯನಗರ]]ದ ಪತನಾನಂತರ ಹಿಂದೂಧರ್ಮ, ಸಾಹಿತ್ಯ, ಸಂಸ್ಕøತಿಗಳ ಬಗ್ಗೆ ಹೆಚ್ಚು ಕಳಕಳಿಯಿಂದ ಕೆಲಸಮಾಡಿದ ರಾಜವಂಶ.
 
[[en:Aravidu_dynasty]]
==ತಿರುಮಲ ರಾಯ==
ವಿಜಯನಗರದ ರಾಜ್ಯ 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದೊಡ್ಡ ಅನಾಹುತಕ್ಕೆ ಈಡಾದರೂ ಅರವೀಡು ಮನೆತನದ ಅರಸರು ರಾಜ್ಯವನ್ನು ಮತ್ತೊಮ್ಮೆ ಚೇತರಿಸಿಕೊಳ್ಳುವ ಹಾಗೆ ಮಾಡಿದರು. ರಾಮರಾಯನ ತಮ್ಮನಾದ ತಿರುಮಲ, ರಾಜಧಾನಿಯನ್ನು ಪೆನುಕೊಂಡೆಗೆ ವರ್ಗಾಯಿಸಿ (1570) ಹೆಸರಿಗೆ ಮಾತ್ರ ರಾಜನಾದ ಸದಾಶಿವನನ್ನು ಪದಚ್ಯುತನಾಗಿ ಮಾಡಿ ತಾನೇ ರಾಜನಾದ. ಮುಸಲ್ಮಾನರಲ್ಲಿ ಪರಸ್ಪರ ಅಸೂಯೆ, ವಿಚ್ಛೇದ ಉಂಟಾಗಿದ್ದರಿಂದ ತಿರುಮಲ ತನ್ನ ರಾಜ್ಯದ ಕೀರ್ತಿಯನ್ನು ಮತ್ತೊಮ್ಮೆ ಸ್ಥಾಪಿಸಲು ಸಾಧ್ಯವಾಯಿತು. ಉತ್ತರದ ಕೆಲವು ಪ್ರದೇಶಗಳು ಮುಸಲ್ಮಾನರ ವಶವಾದರೂ, ದಕ್ಷಿಣದ ಎಲ್ಲ ಪ್ರದೇಶಗಳನ್ನೂ ತಿರುಮಲ ತನ್ನ ಹತೋಟಿಯಲ್ಲಿಟ್ಟುಕೊಂಡು ಆಡಳಿತವನ್ನು ವ್ಯವಸ್ಥೆಗೊಳಿಸಿದ. ದಕ್ಷಿಣದ ಪ್ರದೇಶವನ್ನೆಲ್ಲ ಹೆಚ್ಚು ಕಡಿಮೆ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ ತನ್ನ ಮೂವರು ಮಕ್ಕಳನ್ನೇ ಮಾಂಡಲೀಕರನ್ನಾಗಿ ನಿಯಮಿಸಿದ. [[ಕನ್ನಡ]] ಪ್ರಾಂತ್ಯಕ್ಕೆ ಅವನ ಎರಡನೆಯ ಮಗನಾದ ರಾಮರಾಯ ಮಾಂಡಲೀಕನಾಗಿ ನಿಯಮಿತನಾದ. [[ಶ್ರೀರಂಗಪಟ್ಟಣ]] ಅವನ ರಾಜಧಾನಿ. ತಿರುಮಲನ ಪ್ರಯತ್ನದ ಫಲವಾಗಿ ವಿಜಯನಗರ ಸಾಮ್ರಾಜ್ಯ ಇನ್ನೂ ಒಂದು ಶತಮಾನ ಕಾಲ ನಿಲ್ಲುವಂತಾಯಿತು. <ref>https://www.britannica.com/topic/Aravidu-dynasty</ref>
"https://kn.wikipedia.org/wiki/ಅರವೀಡು_ಮನೆತನ" ಇಂದ ಪಡೆಯಲ್ಪಟ್ಟಿದೆ