ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೨೩ ನೇ ಸಾಲು:
== ಹೈದರಾಬಾದ್‌ನಲ್ಲಿ ವಿಕಿ ಕಾನ್ಫರೆನ್ಸ್ ಇಂಡಿಯಾ 2020ರ ಪ್ರಸ್ತಾಪ ==
 
ಆತ್ಮೀಯರೇ, ನಾನು ಈ ಸಂದೇಶವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿಕಿಮೀಡಿಯನ್ನರ ಪರವಾಗಿ ಹಾಕುತ್ತಿದ್ದೇನೆ. ನಮ್ಮಲ್ಲಿ ಕೆಲವರು ಈಗಾಗಲೇ ತಿಳಿದಿರುವಂತೆ, ಅವರು ವಿಕಿ ಕಾನ್ಫರೆನ್ಸ್ ಇಂಡಿಯಾ 2020ಅನ್ನು ಹೈದರಾಬಾದ್‌ನಲ್ಲಿ ಆಯೋಜಿಸಲು ಮುಂದಾಗಿದ್ದಾರೆ. ರಾಷ್ಟ್ರೀಯ ಸಮ್ಮೇಳನವು ಇತರ ಸಮುದಾಯಗಳ ಜನರೊಂದಿಗೆ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು, ಹೊಸ ವಿಷಯಗಳನ್ನು ಕಲಿಯಲು ಮತ್ತು ವಿಕಿ-ಸಮುದಾಯಕ್ಕೆ ಹತ್ತಿರವಾಗಲು ನಮಗೆ ಸಹಾಯ ಮಾಡುತ್ತದೆ. ಕೊನೆಯ ಸಮ್ಮೇಳನ ನಡೆದದ್ದು 2016 ರಲ್ಲಿ, ಮತ್ತು ಕಳೆದ ಮೂರು ವರ್ಷಗಳಿಂದ ಇದರ ಬಗ್ಗೆ ಯಾವುದೇ ಚರ್ಚೆಗಳು ಇರಲಿಲ್ಲ. ಅಂತಹ ಚಟುವಟಿಕೆಗಳ ಕೊರತೆಯಿಂದಾಗಿ ವಿಕಿ ಸಮುದಾಯಗಳು ಇತರ ಸಮುದಾಯಗಳಿಂದ ಸಂಪರ್ಕ ಕಡಿತಗೊಳ್ಳುತ್ತವೆ ಮತ್ತು ಇದು ಒಟ್ಟಾರೆಯಾಗಿ ಭಾರತೀಯ ಸಮುದಾಯದ ಪ್ರಗತಿಗೆ ಅಡ್ಡಿಯಾಗುತ್ತದೆ. ನಾವು ಮುಂದಿನ ಸಮ್ಮೇಳನವನ್ನು ಆದಷ್ಟು ಬೇಗ ನಡೆಸುವ ಇರಾದೆಯನ್ನು ಇಟ್ಟುಕೊಂಡಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಈ ಸಮ್ಮೇಳನವನ್ನು ನಡೆಸಲು ಯಾರೂ ಮುಂದೆ ಬರಲಿಲ್ಲ, ಮತ್ತು ಹೈದರಾಬಾದ್ ಉತ್ತಮವಾಗಿ ರಸ್ತೆ, ರೈಲು ಹಾಗೂ ವಾಯು ಸಂಪರ್ಕ ಹೊಂದಿದೆ, ಹಾಗೂ ಉತ್ತಮ ಮೂಲ ಸೌಕರ್ಯಗಳನ್ನು ಹೊಂದಿದೆ. ಹಾಗಾಗಿ ಇಲ್ಲಿ ನಡೆಸುವುದು ಉತ್ತಮ ಎಂದು ಅವರು ಭಾವಿಸುತ್ತಾರೆ.
 
ಆದರೆ ಮುಂದುವರಿಯುವ ಮೊದಲು ಕೇವಲ ವೈಯಕ್ತಿಕ ಬೆಂಬಲವನ್ನುಬೆಂಬಲ ಅಲ್ಲದೆಯೇ ಒಟ್ಟಾರೆಯಾಗಿ ಎಲ್ಲಾ ಸಮುದಾಯಗಳಿಂದ ಬೆಂಬಲವನ್ನು ಸಂಗ್ರಹಿಸಲು ಅವರು ಬಯಸುತ್ತಾರೆ. ಇದರಿಂದ ಎಲ್ಲರನ್ನೂ ಒಗ್ಗೂಡಿಸಬಹುದು ಮತ್ತು ಹೆಚ್ಚಿನ ವಿಶ್ವಾಸಾರ್ಹತೆಯನ್ನು ಸೇರಿಸಲು ಸಾಧ್ಯ. ಆದ್ದರಿಂದ ಸಮ್ಮೇಳನವನ್ನು ಬೆಂಬಲಿಸಲು ಮತ್ತು ಅದನ್ನು ಅನುಮೋದಿಸಲು ನಮ್ಮ ನಡುವೆ ಒಮ್ಮತ ಇರುವುದು ಒಳ್ಳೆಯದು.
 
ಇದರ ಬಗ್ಗೆ ಒಂದು ಮೆಟಾ-ವಿಕಿ ಪುಟವಿದೆ, ಅದು ಪ್ರಸ್ತಾಪ ಮತ್ತು ಅವುಗಳ ಯೋಜನೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ, ದಯವಿಟ್ಟು [[m:WikiConference India 2020: Initial conversations|ಇದನ್ನು ನೋಡಿ]]. ಇತರ ಸಮುದಾಯಗಳ ಅನುಮೋದನೆಗಳನ್ನು [[:m:WikiConference_India_2020:_Initial_conversations#Community_endorsements|ಈ ವಿಭಾಗ]] ದಲ್ಲಿ ನೋಡಬಹುದು. ದಯವಿಟ್ಟು ಪುಟವನ್ನು ಪರಿಶೀಲಿಸಿ ಮತ್ತು ಕೆಳಗಿನ ವಿಭಾಗದಲ್ಲಿ ನಿಮ್ಮ ಬೆಂಬಲವನ್ನು ನೀಡಿ, ಇದರಿಂದ ನಾವು ಈ ಉಪಕ್ರಮದ ಭಾಗವಾಗಬಹುದು. ನಿಮ್ಮ ಸಮುದಾಯವು ಇದನ್ನು ಸಾಧ್ಯವಾದಷ್ಟು ಬೇಗ ಅನುಮೋದಿಸಿದರೆ ಅದು ತುಂಬಾ ಒಳ್ಳೆಯದು, ಇದರಿಂದಾಗಿ ಸಂಘಟಕರು ಹೆಚ್ಚಿನ ವಿಳಂಬವಿಲ್ಲದೆ ಮುಂದಿನ ಹಂತಗಳಿಗೆ 18 ಅಕ್ಟೋಬರ್ 2019 ರ ವೇಳೆಗೆ ಮುಂದುವರಿಯಬಹುದು. ಇದು ಡಿಸೆಂಬರ್ ವೇಳೆಗೆ ಇನ್-ಲೈನ್ ಅನುದಾನ ನಿಧಿಯ ಮಾರ್ಗಸೂಚಿಗಳು, ಹಾಗೂ ನವೆಂಬರ್‌ನಲ್ಲಿ ಅನುದಾನ ಪ್ರಸ್ತಾವನೆಯನ್ನು ಅಭಿವೃದ್ಧಿಪಡಿಸುವ ಮೊದಲು ಸಮುದಾಯದ ಸಮೀಕ್ಷೆಯನ್ನು ಮಾಡಬೇಕಾಗುತ್ತದೆ. --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]]) ೦೪:೧೪, ೯ ಅಕ್ಟೋಬರ್ ೨೦೧೯ (UTC)
:ಇದನ್ನು ವಿಕಾಸ್ ಅವರು ಇವತ್ತೇ ಹಾಕುವವರಿದ್ದರು. ವಿಷಯ ತಿಳಿದು ಹೆಚ್ಚಿನ ಉಲ್ಲಾಸದಿಂದ ನಾನು ಹಾಕಿದೆ. ಕ್ಷಮಿಸಿ {{User|Vikashegde}} ಅವರೇ --[[ಸದಸ್ಯ:Gopala Krishna A|ಗೋಪಾಲಕೃಷ್ಣ]] ([[ಸದಸ್ಯರ ಚರ್ಚೆಪುಟ:Gopala Krishna A|ಚರ್ಚೆ]])
 
=== ಬೆಂಬಲ ===
#{{Tick}}ಖಂಡಿತ ಇಂತಹ ಸಮ್ಮೇಳನ ನಡೆಯಬೇಕು ನನ್ನ ಬೆಂಬಲ ಇದೆ.--[[ಸದಸ್ಯ:Lokesha kunchadka|Lokesha kunchadka]] ([[ಸದಸ್ಯರ ಚರ್ಚೆಪುಟ:Lokesha kunchadka|ಚರ್ಚೆ]]) ೦೮:೦೧, ೯ ಅಕ್ಟೋಬರ್ ೨೦೧೯ (UTC)
#{{Tick}}-ಸ್ವಯಂಪ್ರೇರಣೆಯಿಂದ ರಾಷ್ಟ್ರೀಯ ಮಟ್ಟದ ವಿಕಿಸಮ್ಮೇಳನ ಅಯೋಜಿಸಲು ಆಂಧ್ರ-ತೆಲಂಗಾಣದ ವಿಕಿಮೀಡಿಯನ್ನರು ಉತ್ಸುಕರಾಗಿರುವುದು ಮೆಚ್ಚುವಂತಹ ವಿಚಾರ. ಹಿಂದೆ ಪಂಜಾಬಿನಲ್ಲಿ ನಡೆದಿತ್ತು. ಈ ಬಾರಿ ದಕ್ಷಿಣಭಾರತದಲ್ಲಿ ನಡೆಸುವುದು ಸೂಕ್ತವಾಗಿದೆ. ಹೈದರಾಬಾದ್ ಉತ್ತಮ ಆಯ್ಕೆ ಅನಿಸುತ್ತದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೩:೫೭, ೧೪ ಅಕ್ಟೋಬರ್ ೨೦೧೯ (UTC)
 
=== ಚರ್ಚೆ ===