ಶಿಂಜೋ ಅಬೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಶಿಂಜೋ ಅಬೆ''' (ಜನನ: ೨೧ ಸೆಪ್ಟೆಂಬರ್ ೧೯೫೪) ಜಪಾನ್ ದೇಶದ ಪ್ರಸಕ್ತ ಪ್ರಧಾನಮಂತ...
 
No edit summary
೧೦ ನೇ ಸಾಲು:
ಟೋಕಿಯೋದಲ್ಲಿ ಶಾಲೆ ಓದಿದ ಶಿಂಜೋ, ಸೈಕಿಯೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದರು. ೧೯೭೭ರಲ್ಲಿ ಪದವಿ ಪಡೆದು, ಅಮೇರಿಕೆಗೆ ತೆರಳಿದ
ಶಿಂಜೋ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲಿ ಸಾರ್ವಜನಿಕ ಆಡಳಿತದ ಅಧ್ಯಯನ ನಡೆಸಿದರು.
==ವೃತ್ತಿ==
೧೯೭೯ರ ಏಪ್ರಿಲ್ ನಲ್ಲಿ ಕೊಬೆ ಸ್ಟೀಲ್ ಕಂಪನಿ ಸೇರಿದ ಶಿಂಜೋ, ೧೯೮೨ರವರೆಗೆ ಅಲ್ಲಿ ಕಾರ್ಯನಿರ್ವಹಿಸಿದರು.
==ರಾಜಕೀಯ==
ರಾಜಕೀಯ ಕುಟುಂಬದಲ್ಲಿ ಜನಿಸಿದ ಅಬೆರಿಗೆ, ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಆಸಕ್ತಿಗಿಂತಲೂ ರಾಜಕೀಯದತ್ತ ಹೆಚ್ಚು ಒಲವು ಇತ್ತು.
ವಿದೇಶಾಂಗ ಸಚಿವರಿಗೆ ಆಪ್ತ ಸಹಾಯಕನಾಗುವ ಅವಕಾಶ ೧೯೮೨ರಲ್ಲಿ ಒದಗಿಬಂತು. ಅಬೆ, ಕೆಲಸಕ್ಕೆ ರಾಜೀನಾಮೆಯಿತ್ತು ಪೂರ್ಣಪ್ರಮಾಣದ ರಾಜಕೀಯ ಬದುಕಿಗೆ ಹೊರಳಿದರು.
==ರಾಜಕೀಯ ಬದುಕು==
೧೯೮೨ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಅಬೆ, ಮೊದಲಿಗೆ ವಿದೇಶಾಂಗ ಇಲಾಖೆ, ನಂತರ ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ೯ ವರ್ಷ ದುಡಿದರು. ಸಂಘಟನೆ ಮತ್ತು ಸರ್ಕಾರದ ಹಲವು ಬಗೆಗಳನ್ನು ಅರಿತ ಅಬೆ, ಈ ಕಾಲದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತರು.
ಯೋಷಿರೋ ಮೋರಿ ಮತ್ತು ಜುನಿಚಿರೋ ಕೊಯಿಜುಮಿ ರೊಂದಿಗೆ ಮೋರಿ ಪಂಗಡದಲ್ಲಿ ಗುರುತಿಸಿಕೊಂಡ ಅಬೆ,
೨೭ ನೇ ಸಾಲು:
ಜುಲೈ ೨೦೦೬ರಲ್ಲಿ, ೫೨ ವರ್ಷದ ಅಬೆ, ದ್ವಿತೀಯ ಯುದ್ಧಾನಂತರದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
==ಮೊದಲ ಪ್ರಧಾನಿ ಅವಧಿ ೨೦೦೬-೦೭==
ತಮ್ಮ ಮುಂಚಿನ ಪ್ರಧಾನಿ ಕೊಯಿಜುಮಿರ ಆರ್ಥಿಕ ನೀತಿಗಳನ್ನು ಮುಂದುವರಿಸಿಕೊಂಡು ನಡೆದ ಅಬೆ, ತೆರಿಗೆ ಸುಧಾರನೆಗೆ ಒತ್ತು ನೀಡಿದರು. ತೆರಿಗೆಗಳನ್ನು ಹೆಚ್ಚಿಸದೆಯೇ, ಪೋಲುವೆಚ್ಚ್ಚಗಳನ್ನು ನಿಲ್ಲಿಸಿದ ಜಾಣತನದಿಂದ ಅಬೆ, ಜನಪ್ರಿಯರಾದರು.
೩೮ ನೇ ಸಾಲು:
೨೦೦೭ರ ಚುನಾವಣೆಯಲ್ಲಿ ೫೨ ವರ್ಷದಲ್ಲಿ ಮೊದಲ ಬಾರಿಗೆ ಲಿಬರಲ್ ಡೆಮಾಕ್ರಟಿಕ್ ಪಕ್ಷ ಜಪಾನ್ ಸಂಸತ್ತಿನ ಹಿರಿಮನೆಯಲ್ಲಿ ಬಮತ ಕಳೆದುಕೊಂಡಿತು. ಹಲಮಂದಿ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದ್ದು ಅಬೆರನ್ನು ನಿರಾಶರನ್ನಾಗಿಸಿತು. ಇದೇ ಸಮಯಕ್ಕೆ ತೀಕ್ಷ್ಣ ಅಲ್ಸರ್ ರೀಗಕ್ಕೆ ಗುರಿಯಾದ ಅಬೆ, ೨೬ ಸೆಪ್ಟೆಂಬರ್ ೨೦೦೭ರಂದು ಪ್ರಧಾನಿ ಪದವಿಗೆ ರಾಜೀನಾಮೆ ಇತ್ತರು. ಯಾಸುವೋ ಫುಕುಡ ಪ್ರಧಾನಿಯಾದರು.
==೨೦೦೭-೧೨==
ಅಸಾಕೊಲ್ ಎಂಬ ಔಷಧದಿಂದ ಅಬೆ, ತಮ್ಮ ಅಲ್ಸರ್ ರೋಗದಿಂದ ಪಾರಾದರು. ವಿ~ಗ್ಞಾನ ಮತ್ತು ಔಷಧ ಸಂಶೋಧನೆಗೆ ಒತ್ತು ನೀಡುವುದರ ಮಹತ್ವ ಅಬೆರಿಗೆ ಆಯಿತು.
೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.
==ಮರಳಿ ಪ್ರಧಾನಿ==
೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು.
"https://kn.wikipedia.org/wiki/ಶಿಂಜೋ_ಅಬೆ" ಇಂದ ಪಡೆಯಲ್ಪಟ್ಟಿದೆ