ಪರಮಹಂಸ ಯೋಗಾನಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ವಿವರ+++
೧ ನೇ ಸಾಲು:
[[ಚಿತ್ರ:Paramahansa_Yogananda_Standard_Pose.jpg|thumb]]
'''ಪರಮಹಂಸ ಯೋಗಾನಂದ''' (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ '''ಮುಕುಂದ ಲಾಲ್ ಘೋಷ್''', ತಮ್ಮ ಪುಸ್ತಕ ''[[ಯೋಗಿಯ ಆತ್ಮಕಥೆ]]''ಯ ಮೂಲಕ ಧ್ಯಾನ ಹಾಗು [[ಕ್ರಿಯಾಯೋಗ]]ದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ [[ಭಾರತ|ಭಾರತೀಯ]] [[ಯೋಗ|ಯೋಗಿ]] ಹಾಗು [[ಗುರು]]ಗಳಾಗಿದ್ದರು. ಯೋಗಾನಂದರು [[ಉತ್ತರ ಪ್ರದೇಶ]]ದ [[ಗೋರಖ್‍ಪುರ್]]‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬಕ್ಕೆಕುಟುಂಬದಲ್ಲಿ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ಅವರ ತಮ್ಮ ಮುಕುಂದರ ಅತ್ಯಂತ ಮುಂಚಿನ ವರ್ಷಗಳಿಂದಲೂ ಮುಕುಂದರ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯವನ್ನುಸಾಮಾನ್ಯ ಜನರ ಅನುಭವವನ್ನು ಬಹಳ ಮೀರಿತ್ತು.
==ಜನನ-ಬಾಲ್ಯ==
*1893ರ ಜನವರಿ 5 ರಂದು ಗೋರಖ ಪುರದಲ್ಲಿ ಜನಿಸಿದ ಇವರ ಹುಟ್ಟು ಹೆಸರು ಮುಕುಂದ. ಇವರ ತಂದೆ ಭಗವತೀ ಚರಣ ಘೊಷ್ (1853-1942) ದಯಾಮಯಿ, ತಾಯಿ ಜ್ಞಾನಪ್ರಭಾ ಘೊಷ್ (1868-1904). ಅವರು ಪ್ರೀತಿಯ ಸ್ವರೂಪವೇ ಆಗಿದ್ದರು. ಮುಕುಂದ ಅಣ್ಣಂದಿರ ಜತೆ ಹೊರಗೆ ಆಟವಾಡುತ್ತಲೇ, ಮನೆಯೊಳಗೆ ಆಗಾಗ್ಗೆ ಧ್ಯಾನಕ್ಕೆ ಕೂರುತ್ತಿದ್ದರು. ಮುಕುಂದ ಚಿಕ್ಕವನಿರುವಾಗಲೇ ತಾಯಿ ಅಕಾಲಿಕ ಮರಣಕ್ಕೀಡಾದಾಗ ಭಗವತೀ ಚರಣರು ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಆಗ ಇವರಿಗೆ ಆಧ್ಯಾತ್ಮಿಕವಾಗಿಯೂ ಮಾನಸಿಕವಾಗಿಯೂ ಒತ್ತಾಸೆಯಾದವರು ಯೋಗಿ ಲಾಹಿರೀ ಮಹಾಶಯರು. ಅವರಿಂದ ಕ್ರಿಯಾಯೋಗದ ದೀಕ್ಷೆ ಪಡೆದು ಭವದ ಸಾಗರವನ್ನು ಮುಕುಂದ ದಾಟಿದರು. ಮುಕುಂದ ಎಂಟು ವರ್ಷದವನಿದ್ದಾಗಲೇ ಲಾಹಿರೀ ಮಹಾಶಯರ ಭಾವಚಿತ್ರದ ಮೂಲಕ ಬೆಳಕಿನ ಅನುಗ್ರಹವಾಯಿತು. ಅವರಿಗೆ ಬಾಲ್ಯದಿಂದಲೂ ಒಂದಲ್ಲ ಒಂದು ರೋಗ ಕಾಡುತ್ತಿತ್ತು. ಒಮ್ಮೆ ಏಷ್ಯಾಟಿಕ್ ಕಾಲರಾ ಬಂದಾಗ, ತಾಯಿಯ ಸೂಚನೆಯಂತೆ ಲಾಹಿರಿ ಮಹಾಶಯರ ಭಾವಚಿತ್ರಕ್ಕೆ ತಲೆಬಾಗಿದ. ಅಲ್ಲಿಂದ ಬಂದ ಬೆಳಕು ಅವರನ್ನು ರೋಗಮುಕ್ತಗೊಳಿಸಿತು. ತಾಯಿ ಜ್ಞಾನಪ್ರಭಾ ತಮ್ಮ ಗುರುಗಳಲ್ಲಿಟ್ಟಿದ್ದ ಅಚಲನಿಷ್ಠೆಯ ಪರಿಣಾಮ ಹೀಗಿತ್ತು. ಮುಕುಂದ ಚಿಕ್ಕವನಾಗಿದ್ದಾಗ ವಾರಾಣಸಿಯಲ್ಲಿದ್ದ ಗುರುಗಳ ಮನೆಗೆ ಹೋದಾಗ ‘ಇವನು ಯೋಗಿಯಾಗಿ ಆಧ್ಯಾತ್ಮಿಕ ಶಿಖರವೇರುತ್ತಾನೆ. ಅನೇಕರನ್ನು ಭಗವಂತನ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದಿದ್ದರು. ಅದನ್ನು ಅವರ ತಾಯಿ ಮರಣದ ಕಾಲದಲ್ಲಿ ಮುಕುಂದನಿಗೆ ಹೇಳಿದರು.<ref>https://yssofindia.org/paramahansa-yogananda/Autobiography-of-a-Yogi Autobiography of a Yogi </ref>
==ವಿದ್ಯಾಭ್ಯಾಸ==
ಮುಕುಂದರ ತಂದೆ ಭಗವತೀ ಚರಣರು ಕಾಯಂ ನೌಕರರಾಗಿ ಕಲ್ಕತ್ತದಲ್ಲಿ ನೆಲೆಸಿದ್ದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮುಕುಂದನಿಗೆ ಹಿಮಾಲಯಕ್ಕೆ ಹೋಗಬೇಕೆಂಬ ಬಯಕೆಯಾಯಿತು. ಒಮ್ಮೆ ಕಂಬಳಿ, ಪಾದರಕ್ಷೆ, ಕೌಪೀನ, ಜಪಸರ, ಲಾಹಿರೀ ಮಹಾಶಯರ ಭಾವಚಿತ್ರ ಹಾಗೂ ಗೀತೆಯ ಪುಸ್ತಕಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೊರಡಲು ಯತ್ನಿಸಿದರು ಅದರೆ ಸಾಧ್ಯವಾಗಲಿಲ್ಲ. ತಂದೆಗೆ ಇದು ತಿಳಿಯಿತು. ಅವರು ಮಗನಿಗೆ ‘ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸು, ನಂತರ ನೋಡೋಣ’ ಎಂದು ಬುದ್ಧಿವಾದ ಹೇಳಿದರು. ಈ ನಡುವೆ ಮುಕುಂದನು ಗಂಧಬಾಬಾ, ಹುಲಿಸ್ವಾಮಿ, ನಾಗೇಂದ್ರನಾಥ ಬಾದುರಿ, ಮಾಸ್ಟರ್ ಮಹಾಶಯ, ವಿಜ್ಞಾನಿ ಜಗದೀಶ ಚಂದ್ರಬೋಸ್ ಇವರನ್ನು ಭೇಟಿಯಾದರು. ಮಾಸ್ಟರ್ ಮಹಾಶಯನ ಜತೆ ಕಾಳಿಘಾಟಿಗೆ ಹೋಗಿ ಕಾಳಿ ಆರಾಧನೆ ಮಾಡಿದ, ರಾಮಕೃಷ್ಣ ಪರಮಹಂಸರ ಬಗೆಗೆ ಕೇಳಿ ಕೆಲಹೊತ್ತು ಧ್ಯಾನಸ್ಥನಾದ. ಈ ನಡುವೆ ಪ್ರೌಢಶಾಲಾ ವ್ಯಾಸಂಗದ ಅಂತಿಮವರ್ಷದ ಪರೀಕ್ಷೆಗೆ ಕುಳಿತರು. ತರುವಾಯದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆಂದು ವಾರಾಣಾಸಿಯ ‘ಶ್ರೀ ಭಾರತಧರ್ಮ ಮಹಾಮಂಡಲ’ಕ್ಕೆ ಸೇರಿದರು. ಅಲ್ಲಿ ಉಪವಾಸ ಮಾಡುತ್ತ, ಸ್ವಾಮಿ ದಯಾನಂದ ಸರಸ್ವತಿಯವರ ಸೂಚನೆಯಂತೆ ಧ್ಯಾನ-ತಪಸ್ಸಿನ ಅಭ್ಯಾಸವನ್ನು ಮುಂದುವರಿಸಿದರು. ಒಮ್ಮೆ ಅವರಿಗೆ ಕಾಷಾಯವಸ್ತ್ರ ಧರಿಸಿದ್ದ ಸಂತರ ದರ್ಶನವಾಯಿತು. ಅವರು ಸೂಜಿಗಲ್ಲಿನಂತೆ ಇವರನ್ನು ಸೆಳೆದರು. ಅವರ ನಿರರ್ಗಳ ವಾಗ್ಝರಿ ಇವರ ಮನಸ್ಸಿಗೆ ನಾಟಿತು. ಅವರು ‘ನನ್ನ ಆಶ್ರಮ ಮತ್ತು ಸರ್ವಸ್ವವನ್ನು ಕೊಡುವೆ ಬಾ’ ಎಂದಿದ್ದಕ್ಕೆ ಮುಕುಂದ ‘ಜ್ಞಾನ ಮತ್ತು ದೈವಸಾಕ್ಷಾತ್ಕಾರ ಪಡೆಯುವುದಕ್ಕೆ ಮಾತ್ರ ಬರುತ್ತೇನೆ’ ಎಂದು ದೃಢವಾಗಿ ಹೇಳಿದ. ಆಗ ಆ ಯೋಗಿಗಳು ‘ನನ್ನ ಹೆಸರು ಸ್ವಾಮಿ ಶ್ರೀಯುಕ್ತೇಶ್ವರ ಗಿರಿ, ನನ್ನ ಆಶ್ರಮ ಕಲ್ಕತ್ತೆಗೆ ಸಮೀಪದ ಸಿರಾಂಪುರದಲ್ಲಿದೆ’ ಎಂದಾಗ ಮುಕುಂದನಿಗೆ ಅವರು ಲಹರಿಮಹಾಶಯರ ಶಿಸ್ಯರೆಂದು ತಿಳಿದು ಅಚ್ಚರಿಯಾಯಿತು.
==ಯುಕ್ತೇಶ್ವರ ಗುರುವಿನೊಡನೆ==
*ವಾರಾಣಸಿಯಲ್ಲಿ 27 ದಿನ ಇದು ರೈಲಿನಲ್ಲಿ ಸಿರಾಂಪುರಕ್ಕೆ ಹೋಗಿ, ಯುಕ್ತೇಶ್ವರರ ಆಶ್ರಮಕ್ಕೆ ಮುಕುಂದ ಬಂದರು. ಗುರುಗಳು ಕೆಲದಿನಗಳಲ್ಲಿ ಅವರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಅವರ ಆಣತಿಯಂತೆ ಕಲ್ಕತ್ತೆಗೆ ಹಿಂತಿರುಗಿ ಬಂದು ಕಾಲೇಜು ಸೇರಿಕೊಂಡರು. ಬಿಡುವಾದಾಗಲೆಲ್ಲಾ ಯುಕ್ತೇಶ್ವರರ ಆಶ್ರಮಕ್ಕೆ ಹೋಗುತ್ತಿದ್ದರು. ಗುರುಗಳ ಸಾನ್ನಿಧ್ಯ ಎಲ್ಲ ಸಂಶಯಗಳನ್ನು ನೀಗಿಸುತ್ತಿತ್ತು. ಗುರು-ಶಿಷ್ಯರು ಅನೇಕ ರಾತ್ರಿಗಳನ್ನು ಆಧ್ಯಾತ್ಮಿಕ ಚರ್ಚೆಯಲ್ಲಿ ಕಳೆಯುತ್ತಿದ್ದರು. ಗುರುಗಳ ಅಪೂರ್ವ ಆಧ್ಯಾತ್ಮಿಕ ಪ್ರಭಾವವನ್ನು ಮುಕುಂದ ಅನುಭವಿಸುತ್ತಿದ್ದರು. ಯುಕ್ತೇಶ್ವರರು ಯೌಗಿಕ ಸ್ಥಿತಿಯ ನೆಲೆಗಳನ್ನು ಪ್ರಯೋಗದ ಮೂಲಕ ಮುಕುಂದ ಅವರಿಗೆ ಮಾಡಿ ತೋರಿಸುತ್ತಿದ್ದರು. ಸವಿಕಲ್ಪ ಸಮಾಧಿಯಿಂದ ನಿರ್ವಿಕಲ್ಪ ಸಮಾಧಿಯನ್ನು ತಲುಪವವರೆಗೂ ಯೋಗಸಿದ್ಧಯನ್ನೂ ಅದರ ರಹಸ್ಯವನ್ನೂ ಮುಕುಂದ ಅವರಿಂದ ಪಡೆದರು. ಒಮ್ಮೆ ಸ್ವಾಮೀಜಿ ‘ಸೃಷ್ಟಿಯು ನಿಯಮಕ್ಕೆ ಬದ್ಧವಾದುದು. ವಿಜ್ಞಾನಿಗಳು ಹೊರಗಿನ ವಿಶ್ವದಲ್ಲಿ ಕಾರ್ಯಪ್ರವೃತ್ತವಾದ ನಿಯಮಗಳನ್ನು ತಿಳಿಯುತ್ತಾರೆ. ಅವು ಪ್ರಕೃತಿಸಹಜ ನಿಯಮಗಳಾಗಿವೆ. ಆದರೆ, ಜಗತ್ತನ್ನು ಮೀರಿ ಸುಪ್ತವಾದ ಆಧ್ಯಾತ್ಮಿಕ ಸ್ತರಗಳನ್ನು ಮತ್ತು ಪ್ರಜ್ಞೆಯ ಅಂತಃಸಾಮ್ರಾಜ್ಯವನ್ನು ಆಳುವುದಕ್ಕೆ ಸೂಕ್ಷ್ಮವಾದ ನಿಯಮಗಳಿವೆ. ಯೋಗದ ವಿಜ್ಞಾನದ ಮೂಲಕ ಮಾತ್ರಾ ಅವನ್ನು ತಿಳಿಯಲು ಸಾಧ್ಯ ಎಂದರು. ಇದು ಆತ್ಮಸಾಕ್ಷಾತ್ಕಾರ ಪಡೆದ ಯೋಗಿಯಾದ ವಿಜ್ಞಾನಿಗೆ ಮಾತ್ರ ಸಾಧ್ಯ’ವೆಂದು ಯೋಗವಿಜ್ಞಾನದ ರಹಸ್ಯಗಳನ್ನು ಮುಕಂದ ಅವರಿಗೆ ಯುಕ್ತೇಶ್ವರರು ತಿಳಿಸಿಕೊಟ್ಟರು. ಮುಕುಂದ 1915 ರ ಜೂನ್ನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಂಕಗಳೊಂದಿಗೆ ತತ್ತ್ವಶಾಸ್ತ್ರ ಪದವಿಯನ್ನು ಗಳಿಸಿದಾಗ ತಂದೆ ಘೋಷರಿಗೆ ಬಹಳ ಸಂತಸವಾಯಿತು.
==ಸಂನ್ಯಾಸ ದೀಕ್ಷೆ==
*ಮುಕುಂದ ಅವರು ಆಧ್ಯಾತ್ಮಿಕ ಸಾದನೆಯಲ್ಲ ನಿರುತರಾಗಿ ಇರುತ್ತಿದ್ದರು. ಪದವಿಯ ನಂತರ ಸಂನ್ಯಾಸದೀಕ್ಷೆಯನ್ನು ಪಡೆಯುವ ಬಯಕೆಯಾಯಿತು. ಅವರು ಯುಕ್ತೇಶ್ವರರಿಗೆ ಆ ದೀಕ್ಷೆಯನ್ನು ಸಕಾಲದಲ್ಲಿ ಕೊಡುತ್ತೇನೆಂದು ಹೇಳಿದ್ದ ಮಾತನ್ನು ನೆನಪಿಸಿದರು. ವಿಶೇಷ ಬಾಹ್ಯಾಚರಣೆಯಿಲ್ಲದೆ, ಯೋಗ ಮಾರ್ಗದಲ್ಲಿ ಮುಕುಂದ ಅವರನ್ನು ಸ್ವಾಮಿಯನ್ನಾಗಿ ಮಾಡಿ, ಅವನ ಅಪೇಕ್ಷೆಯಂತೆ ‘ಯೋಗಾನಂದ’ ಎಂಬ ಹೆಸರಿನ ಅಭಿಧಾನ ಕೊಟ್ಟರು. ‘ಯೋಗದ ಮೂಲಕ ಪರಮಾತ್ಮನನ್ನು ಸೇರುವ ಮೂಲಕ(ಸಾಯುಜ್ಯದಿಂದ) ಆನಂದ’ ಎಂಬುದು ಇದರ ಅರ್ಥವಾಗಿತ್ತ್ತು. ಯೋಗಿ ಯುಕ್ತೇಶ್ವರರು ಮಾಡಿದ ಪರಮಾಶೀರ್ವಾದದಲ್ಲಿ ಯೋಗಾನಂದರಿಗೆ ಕೆಲ ವಿಶಿಷ್ಟವಾದ ಅನುಭವಗಳಾದವು. ಯೋಗಾನಂದರು ಧ್ಯಾನದಲ್ಲಿದ್ದಾಗ ಅಂತರ್ವಾಣಿಯಿಂದ ಅಣ್ಣ ಅನಂತ ಕಾಯಿಲೆಯಿಂದ ಹಾಸಿಗೆ ಹಿಡಿದಿರುವುದು ತಿಳಿಯಿತು. ಅವರು ಮನೆಗೆ ಭೇಟಿಕೊಟ್ಟು ಅಣ್ನನಿಗೆ ಸಾಂತ್ವನ ಹೇಳಿದರು.
==ಕ್ರಿಯಾಯೋಗ==
*ಯುಕ್ತೇಶ್ವರರಿಂದ ಹರಿದುಬಂದ ಯೋಗವಿಜ್ಞಾನ ಯೋಗಾನಂದರಿಂದ ವ್ಯಾಪಕವಾಗಿ ಸುಪ್ರಸಿದ್ಧವಾಯಿತು. ‘ಕ್ರಿಯಾಯೋಗ’ ಎಂದರೆ ಗೊತ್ತಾದ ಕ್ರಿಯೆಯ ಮೂಲಕ ಅವ್ಯಕ್ತ ಪರಮಾತ್ಮನೊಡನೆ ಸೇರುವುದು. ಇದು ಮಾನವನ ರಕ್ತದಿಂದ ಇಂಗಾಲವನ್ನು ಹೊರಹಾಕಿ ಆಮ್ಲಜನಕವನ್ನು ಪೂರೈಸಿ ಶುದ್ಧೀಕರಿಸಿದಂತೆ ಮನಸ್ಸನ್ನೂ ಅಂತರಮಗವನ್ನೂ ಶುದ್ಧಗೊಳಿಸುವ ಒಂದು ಸರಳ ಶಾಸ್ತ್ರಪದ್ಧತಿ. ಈ ವಿಜ್ಞಾನ ಬಲು ಪುರಾತನವಾದುದು. ಭಗವದ್ಗೀತೆಯಲ್ಲಿ, ‘ಉಚ್ವಾಸದ ಉಸಿರನ್ನುನ್ನು ನಿಃಶ್ವಾಸದ ಗಾಳಿಗೆ ಅರ್ಪಿಸಿ, ನಿಃಶ್ವಾಸದ ಗಾಳಿಯನ್ನು ಉಚ್ವಾಸದ ಗಾಳಿಗೆ ಅರ್ಪಿಸಿ, ಯೋಗಿಯಾದವನು ಎರಡೂ ಉಸಿರಾಟಗಳನ್ನು ನಿಷ್ಪರಿಣಾಮಗೊಳಿಸುತ್ತಾನೆ. ತನ್ಮೂಲಕ ಹೃದಯದಿಂದ ‘ಪ್ರಾಣ’ವನ್ನು ಬಿಡುಗಡೆ ಮಾಡಿ ಪ್ರಾಣಶಕ್ತಿಯನ್ನು ತನ್ನ ಅಧೀನಕ್ಕೆ ತಂದುಕೊಳ್ಳುತ್ತಾನೆ’ ಎಂದು ಹೇಳಿದ ಕ್ರಮವನ್ನು ಅನುಸರಿಸಿದೆ ಎನ್ನುತ್ತಾರೆ.. ಕ್ರಿಯಾಯೋಗದಲ್ಲಿ ದೈಹಿಕ ಶಿಕ್ಷಣವೂ ಮನೋನಿಯಂತ್ರಣವೂ ಪ್ರಣವದ ಧ್ಯಾನ ಎಲ್ಲವೂ ಸೇರುತ್ತವೆ. ಕ್ರಿಯಾಯೋಗವು ದೇಹ-ಮನಸ್ಸುಗಳ ಮೇಲೆ ಪ್ರಭುತ್ವ ಸಾಧಿಸುವ ಮಾರ್ಗವಾಗಿದೆ. ಅಂತಿಮವಾಗಿ 'ಅದೇ ನಾನು' - 'ಸೋ ಹಂ'ಎಂಬುದು ಅರಿವಾಗುತ್ತದೆ. ಈ ಕ್ರಿಯಾಯೋಗವೇ ನಿಜವಾದ ಅಗ್ನಿಕಾರ್ಯ. ಹಿಂದಿನ ಮತ್ತು ಇಂದಿನ ಬಯಕೆಗಳೆಲ್ಲ ದೈವೀಪ್ರೇಮವೆಂಬ ಅಗ್ನಿಗೆ ಆಹುತಿಯಾಗುತ್ತದೆ. ಕೊಳೆ ಕಳೆದುಕೊಂಡ ಮಾನವ ಪರಿಶುದ್ಧನಾಗುತ್ತಾನೆ. ಯೋಗಾನಂದರು ಕ್ರಿಯಾಯೋಗ ವಿಜ್ಞಾನವನ್ನು ಸರಳವಾಗಿಯೂ ಶಾಸ್ತ್ರಬದ್ಧವಾಗಿಯೂ ವಿಶ್ವಕ್ಕೆ ಸಾರಿದರು. ಮೇಲಿನದೇ <ref>Autobiography of a Yogi</ref> <ref>ಕ್ರಿಯಾಯೋಗದ ಪಾಠಗಳು ಯೋಗದಾ ಆಶ್ರಮ</ref>
 
[[ವರ್ಗ:ಹಿಂದೂ ಗುರುಗಳು]]
"https://kn.wikipedia.org/wiki/ಪರಮಹಂಸ_ಯೋಗಾನಂದ" ಇಂದ ಪಡೆಯಲ್ಪಟ್ಟಿದೆ