ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
೧೨೮೭ರಲ್ಲಿ , ತನ್ನ ಹನ್ನೆರಡನೆಯ ವಯಸ್ಸಿನಲ್ಲಿ , '''ಭಾವಾರ್ಥದೀಪಿಕಾ''' ಎಂಬ ಹೆಸರಿನ ಭಾಷ್ಯವನ್ನು ಬರೆಯಲು ಜ್ಞಾನದೇವ ಪ್ರಾರಂಭ ಮಾಡಿದ. ಎರಡೂವರೆ ವರ್ಷದ ನಂತರ , ೧೨೯೦ರಲ್ಲಿ ಅದನ್ನು ಪೂರೈಸಿದ. ಅಷ್ಟರಲ್ಲಿ ನಾಮದೇವನೊಂದಿಗೆ ಅವನ ಗೆಳೆತನ ಗಾಢವಾಗಿತ್ತು. ನಾಥಪಂಥ ಪ್ರತಿಪಾದಿಸುವ ಯೋಗಮಾರ್ಗವನ್ನು ಅನುಸರಿಸುವುದು ಸಾಮಾನ್ಯಜನರಿಗೆ ಅಸಾಧ್ಯವೆಂದು ಅವನಿಕೆ ಮನವರಿಕೆಯಾಗಿತ್ತು. ಯಾವುದೇ ಜಾತಿ, ಮತ, ಲಿಂಗವೇ ಇರಲಿ, ಜನಗಳಿಗೆ ಮೋಕ್ಷಸಾಧನೆಗೆ ಭಕ್ತಿಮಾರ್ಗದ ಅವಶ್ಯಕತೆಯಿದೆ ಎಂದೂ ಅವನಿಗೆ ಅರಿವಾಗಿತ್ತು. ಬಹುಶಃ ಅವನು , ಆಗ ಶೂದ್ರರೆಂದು ಪರಿಗಣಿಸಲಾದ ಸಿಂಪಿಗ ಜಾತಿಯವನಾದ, ನಾಮದೇವನಿಂದ ಪ್ರಭಾವಿತನಾಗಿರಲಿಕ್ಕೂ ಸಾಕು.
 
ಭಾವಾರ್ಥದೀಪಿಕೆ ಮುಗಿದ ಮೇಲೆ, ಜ್ಞಾನದೇವನು , ಬಹುಶಃ ನಾಮದೇವನ ಪ್ರಭಾವದಿಂದ , [[ವಾರಕರಿ ಪಂಥ]]ವನ್ನು ಸೇರಿ , ಅದರ ಮುಂದಾಳುವಾದ. [[ಪಂಢರಪುರ]]ದ ವಿಠ್ಠಲನ ಭಕ್ತರಾದ ವಾರಕರಿ ಪಂಥದವರು, ವರ್ಷಕ್ಕೆರಡು ಬಾರಿ , ಆಷಾಢೀ ಏಕಾದಶಿ ಮತ್ತು ಕಾರ್ತೀಕ ಏಕಾದಶಿ, ಪಂಢರಪುರದ ದರ್ಶನ ಮಾಡುತ್ತಾರೆ. ಪಂಢರಪುರದ ವಿಠ್ಠಲನ ವಿಶೇಷವೆಂದರೆ, ಮೂಲತಃ ಶ್ರೀಕೃಷ್ಣನ ರೂಪವಾಗಿದ್ದರೂ, ಮೂರ್ತಿಯ ತಲೆಯಲ್ಲಿರುವ ಕಿರೀಟದಲ್ಲಿ ಶಿವಲಿಂಗವಿದೆ. ಈ ಕಾರಣದಿಂದಾಗಿ ಈ ಕ್ಷೇತ್ರ ಶೈವ , ವೈಷ್ಣವರಿಬ್ಬರಿಗೂ ಪೂಜ್ಯವಾಗಿದೆ. ಮೂಲತಃ ಕರ್ನಾಟಕದಲ್ಲಿದ್ದ[[[ಕರ್ನಾಟಕ]]]ದಲ್ಲಿದ್ದ ಈ ಮೂರ್ತಿಯನ್ನು ನಂತರ [[ಪಂಢರಪುರ]]ಕ್ಕೆ ತರಲಾಯಿತು. ಜ್ಞಾನದೇವ ಭಕ್ತರಿಗಾಗಿ ಗೇಯರೂಪದಲ್ಲಿರುವ '''ಅಮೃತಾನುಭವ''' ಎಂಬ ಭಕ್ತಿ ,ಅಲೌಕಿಕ ವಿಷಯಗಳಬಗೆಗಿನ ಗ್ರಂಥವನ್ನು ಬರೆದ. ಮುಂದೆ ಭಾವಾರ್ಥದೇಪಿಕಾ ಗ್ರಂಥವು '''ಜ್ಞಾನೇಶ್ವರೀ''' ಎಂದು ಪ್ರಸಿದ್ಧವಾಯಿತು. ಜ್ಞಾನೇಶ್ವರೀ ಮತ್ತು ಅಮೃತಾನುಭವ ಗ್ರಂಥಗಳು ಇಂದಿಗೂ [[ವಾರಕರಿ ಪಂಥ]]ದವರಿಗೆ ಪೂಜ್ಯವಾಗಿವೆ.
 
ನಂತರ ನಾಮದೇವ, ಸಾವತಾ ಮಾಳಿ ಮತ್ತು ಇನ್ನೂ ಅನೇಕ ಭಕ್ತಿಮಾರ್ಗದ ಅನುಯಾಯಿಗಳೊಂದಿಗೆ , ಜ್ಞಾನದೇವ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾರತದ ತೀರ್ಥ ಕ್ಷೇತ್ರಗಳ ಯಾತ್ರೆ ಪ್ರಾರಂಭಿಸಿದ. ೧೨೯೬ರಲ್ಲಿ, ಯಾತ್ರೆಯಿಂದ ಮರಳಿದ ನಂತರ, ಜ್ಞಾನದೇವ ,ಸಮಾಧಿಯಲ್ಲಿ ದೇಹತ್ಯಾಗ ಮಾಡುವ ಇಚ್ಛೆಯನ್ನು ಪ್ರಕಟಪಡಿಸಿದ. ಅದಕ್ಕಾಗಿ ಕಾರ್ತೀಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯನ್ನು ಆರಿಸಿದ. ಭಜನೆಗಳ ನಡುವೆ, ತನ್ನ ಅಣ್ಣ , ತಂಗಿಯರನ್ನೂ, ನಾಮದೇವ ಮೊದಲಾದ ಆತ್ಮೀಯ ಗೆಳೆಯರನ್ನೂ ಆಲಂಗಿಸಿದ ಜ್ಞಾನದೇವ , ನೆರೆದಿದ್ದ ಜನಜಂಗುಳಿ ಕಣ್ಣೀರು ಹಾಕುತ್ತಿದ್ದಂತೆ, ಸಮಾಧಿಯನ್ನೇರಿ, ಯೋಗಮುದ್ರೆಯಲ್ಲಿ ಕುಳಿತು ದೇಹತ್ಯಾಗ ಮಾಡಿದ. ಸಮಾಧಿಯನ್ನು ಕಲ್ಲುಗಳಿಂದ ಮುಚ್ಚಲಾಯಿತು. ಆಗ ಜ್ಞಾನದೇವನ ವಯಸ್ಸು ಕೇವಲ ೨೧.
"https://kn.wikipedia.org/wiki/ಜ್ಞಾನೇಶ್ವರ" ಇಂದ ಪಡೆಯಲ್ಪಟ್ಟಿದೆ