ಕೀಟಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
 
== ಇತಿಹಾಸ ==
[[ಮಾನವ|ಮಾನವನಿಗೆ]] ಕೀಟಗಳ ಒಡನಾಟ ಆತನ ಇತಿಹಾಸದಷ್ಟೇ ಪುರಾತನವಾದುದಾದರೂ ಅವುಗಳ ಬಗ್ಗೆ ಬರೆಹಗಳಿರುವುದುಬರಹಗಳಿರುವುದು ಕೇವಲ ಕೆಲವೇ ಸಾವಿರ ವರ್ಷಗಳಿಂದ ಈಚೆಗೆ. ಹೆಚ್ಚು ಕಡಿಮೆ ಎಲ್ಲವೂ ಉಪಯುಕ್ತ ಕೀಟಗಳಾದ [[ಜೇನು]], [[ರೇಷ್ಮೆ|ರೇಷ್ಮೆಹುಳು]], [[ಅರಗು]] ಕೀಟಗಳು, ಅವುಗಳ ಸಾಕಣಿಸಾಕಣೆ ಇತ್ಯಾದಿಗಳಿಗೆ ಸಂಬಂಧಿಸಿದವು. ಪ್ರಾಚೀನ ಈಜಿಪ್ಪಿನಈಜಿಪ್ಟಿನ ದೇವಾಲಯಗಳ ಗೋಡೆಗಳ ಬರೆಹದಲ್ಲಿಬರಹದಲ್ಲಿ ಜೇನು ಸಾಕಣೆ (ಕ್ರಿ.ಪೂ.ಸು. 2600), ಕೀಟಗಳ ನಿಯಂತ್ರಣದಲ್ಲಿ ಬಳಸಲಾಗುವ ನಿರೋಧಕಗಳ ತಯಾರಿಕೆ (ಕ್ರಿ.ಪೂ.ಸು.1500) ಮುಂತಾದವುಗಳ ಬಗ್ಗೆ ಉಲ್ಲೇಖ ಉಂಟು. [[ಚೀನಾ|ಚೀನ]], ಅರೇಬಿಯಗಳಲ್ಲೂ ಇವುಗಳ ಅಧ್ಯಯನ ನಡೆದಿತ್ತು. [[ಭಾರತ|ಭಾರತದಲ್ಲಿ]] ಚರಕ (ಕ್ರಿ.ಪೂ.ಸು. 600) ಮತ್ತು ಉಮಸ್ವತಿ (ಕ್ರಿ.ಶ.ಎರಡನೆಯ ಶತಮಾನ) ಇವರಿಂದ ಕೀಟಗಳ ವರ್ಗೀಕರಣದ ಬಗ್ಗೆ ಅಭ್ಯಾಸ ನಡೆದಿತ್ತೆಂದು ತಿಳಿದಿದೆ. ಕೀಟಗಳ ಶಾಸ್ತ್ರೀಯ ಅಧ್ಯಯನ ಆರಂಭವಾದುದು [[ಅರಿಸ್ಟಾಟಲ್‌|ಅರಿಸ್ಟಾಟಲ್‍ನಿಂದ]] (ಕ್ರಿ.ಪೂ.384-322) ಎಂದು ಹೇಳಬಹುದು. ಅತಆತ ಕೀಟಗಳಿಗೆ ಎಂಟೋಮ ಎಂಬ ಗ್ರೀಕ್ ಹೆಸರು ಕೊಟ್ಟ<ref name="Liddell 1980">{{cite book | author = Henry George Liddell and Robert Scott (philologist)| year = 1980 | title = A Greek-English Lexicon (Abridged Edition) | publisher = Oxford University Press | isbn = 0-19-910207-4}}</ref>. ಕೀಟದ ದೇಹದಲ್ಲಿ ತಲೆ. ಎದೆ ಮತ್ತು ಹೊಟ್ಟೆ ಎಂಬ ಮೂರು ಭಾಗಗಳಿರುವುದನ್ನೂ ದೇಹದಲ್ಲಿ ಜಠರ, [[ಹೃದಯ]], ಶ್ರವಣ, ಘ್ರಾಣ ಹಾಗೂ ನೇತ್ರೇಂದ್ರಿಯಗಳಿರುವುದನ್ನೂ ಅವನು ಗಮನಿಸಿದ. ರೆಕ್ಕೆ ಇರುವ, ಇಲ್ಲದಿರುವ ಕೀಟಗಳನ್ನೂ ಅವುಗಳ ವದನಾಂಗಗಳನ್ನೂ ರೂಪಪರಿವರ್ತನೆಯನ್ನೂ ಕಂಡುಹಿಡಿದ. ಅನಂತರ ರೋಮಿನ ತತ್ತ್ವಜ್ಞಾನಿ ಪ್ಲಿನಿ (ಕ್ರಿ.ಶ. 24-79) ಕೀಟಗಳನ್ನು ಅಭ್ಯಸಿಸಿ ಇವುಗಳ ಉಸಿರಾಟವನ್ನು ವಿವರಿಸಿದ. ಅಲ್ಲದೆ ಅರಿಸ್ಟಾಟಲ್ ಕಂಡುಹಿಡಿಯದಿದ್ದ ಹಲವಾರು ಹೊಸ ಬಗೆಯ ಕೀಟಗಳನ್ನು ಇವನು ವಿವರಿಸಿದ. ಪ್ಲಿನಿಯ ಅನಂತರ 17ನೆಯ ಶತಮಾನದ ವರೆಗೂ ಗಮನಾರ್ಹವಾದ ಅಭ್ಯಾಸವೇನೂ ನಡೆಯಲಿಲ್ಲ. 1602ರಲ್ಲಿ ಆಲ್ಡ್ರೊವಾಂಡಿ ಎಂಬಾತ ಕೀಟ ವರ್ಗೀಕರಣದ ಬಗ್ಗೆ ಪುಸ್ತಕವೊಂದನ್ನು ಪ್ರಕಟಿಸಿ ಕೀಟಗಳನ್ನು ಗುರುತಿಸಲು ಸಹಾಯಕವಾದ ಕೆಲವು ವಿವರಗಳನ್ನು ತಿಳಿಸಿದ. 30 ವರ್ಷಗಳ ಅನಂತರ ಥಾಮಸ್ ಸೊಫೆಟ್ ಎಂಬುವನ ಸಚಿತ್ರ ಪುಸ್ತಕ ಪ್ರಕಟವಾಯಿತು. 17ನೆಯ ಶತಮಾನದಲ್ಲಿ ಮುದ್ರಣ ಕಲೆಯ ಪರಿಷ್ಕರಣ, ರಾಜಕೀಯ ಸ್ಥಿರತೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಹೊಸ ಖಂಡಗಳ ಪರಿಚಯ ಮತ್ತು ಫ್ರಾನ್ಸಿಸ್ ಬೇಕನ್, ಡೆಕಾರ್ಟ್ ಇವರಿಂದ ಆರಂಭವಾದ ಹೊಸ ವಿಚಾರ ದೃಷ್ಟಿ ಇವೆಲ್ಲ ಸೇರಿ ಕೀಟಶಾಸ್ತ್ರದ ಮೇಲೆ ಆಳವಾದ ಪ್ರಭಾವವನ್ನು ಬೀರಿದುವು. ಲೀವೆನ್‍ಹುಕ್‍ನಿಂದ ಸೂಕ್ಷ್ಮದರ್ಶಕದ ಆವಿಷ್ಕಾರವಾದ ಮೇಲೆ ಮಾಲ್ಪಿಗಿ, ಸ್ವಾಮರ್‍ಡ್ಯಾಮ್ ಮೊದಲಾದ ಖ್ಯಾತ ತಜ್ಞರು ತಮ್ಮ ದೃಷ್ಟಿಯನ್ನು ಕೀಟಗಳೆಡೆಗೆ ಹರಿಸಿದರು. ಮಾಲ್ಫಿಜಿ ಕೀಟಗಳ ಉಸಿರಾಟದ ಕ್ರಮ, [[ರೇಷ್ಮೆ]] ಗ್ರಂಥಿಗಳು, ಮಾಲ್ಫಿಜಿಯನ್ ಕೊಳವೆಗಳು, ಜನನಾಂಗ ವ್ಯವಸ್ಥೆ, ನರಮಂಡಲ, ರೆಕ್ಕೆಗಳ ಹುಟ್ಟುವಿಕೆ ಮೊದಲಾದ ಅಂಶಗಳ ಮೇಲೆ ಬೆಳಕು ಬೀರಿದ. ಸ್ವಾಮರ್‍ಡ್ಯಾಮ್ ಚಿಟ್ಟೆ, ಜೇನು, ಕೊಡತಿಕೀಟ ಮುಂತಾದುವುಗಳ ಜೀವನಚರಿತ್ರೆಯನ್ನು ಚಿತ್ರಸಹಿತವಾಗಿ ವಿವರಿಸಿದ. ಅಲ್ಲದೆ ಅವುಗಳ ಜೀವನಕ್ರಮಗಳಲ್ಲಿರುವ ಪರಸ್ಪರ ವ್ಯತ್ಯಾಸಗಳನ್ನು ಕಂಡುಹಿಡಿದು ಕೀಟಗಳನ್ನು ನಾಲ್ಕು ಮುಖ್ಯ ಪಂಗಡಗಳಾಗಿ ವಿಂಗಡಿಸಿದ. ಹದಿನೆಂಟನೆಯ ಶತಮಾನದಲ್ಲಿ ಕೀಟಶಾಸ್ತ್ರದ ಅಧ್ಯಯನದಲ್ಲಿ ನಿರತರಾದವರಲ್ಲಿ ಮುಖ್ಯರಾದವರು ಡಿ ರೇಮರ್, ಸ್ವೀಡನ್ನಿನ ಡಿ ಗೀರ್, ಗೆಡಾರ್ಟ್, ಮೇರಿಯ ಮೇರಿಯನ್, ಜೊಹಾನ್ ಫಿಶ್, ವಿಲಿಯಂ ಗೌಲ್ಡ್ ಮುಂತಾದವರು. ಡಿ ಗೀರ್ ಏಳು ಸಂಪುಟಗಳಲ್ಲಿ ಮೆಮಾಯರ್ಸ್ ಎಂಬ ಪುಸ್ತಕವನ್ನು ಪ್ರಕಟಿಸಿ ಕೀಟವರ್ಗೀಕರಣದ ಮೂಲತತ್ತ್ವಗಳನ್ನು ಪ್ರತಿಪಾದಿಸಿದ. ಅನಂತರ ಹೆಸರಿಸಬಹುದಾದವನು ಜಾನ್ ರೇ. ಇವನು ಸ್ವಾಮರ್‍ಡ್ಯಾಮಿನಂತೆ ಕೀಟಗಳ ರೂಪಪರಿವರ್ತನೆಗಳನ್ನೂ, ಇವನಿಗಿಂತ ಹಿಂದಿನವರಂತೆ ರೂಪರಚನೆಯನ್ನೂ ಕೀಟವರ್ಗೀಕರಣಕ್ಕೆ ಆಧಾರವಾಗಿ ತೆಗೆದುಕೊಂಡ. ಅನಂತರ ಲಿನಿಯಸ್‍ನ ಹೊಸ ದ್ವಿನಾಮ ಪದ್ಧತಿ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಕೀಟಗಳ ವರ್ಗೀಕರಣ ಹಾಗೂ ನಾಮಕರಣಕ್ಕೆ ಹೊಸ ರೂಪದೊರೆಯಿತು. 19ನೆಯ ಶತಮಾನದ ವೇಳೆಗೆ ಕೀಟಶಾಸ್ತ್ರಕ್ಕೆ ಒಂದು ಪ್ರಮುಖ ಸ್ಧಾನ ಲಭಿಸಿತ್ತು. ಕರ್ಬಿ, ಸ್ಪೆನ್ಸ್‍ರ್, ಬರ್ಮೆಯಿಸ್ಟರ್ ಮುಂತಾದವರ ಅಭ್ಯಾಸದ ಫಲವಾಗಿ ಕೀಟಗಳ ಬಗೆಗೆ ಹೆಚ್ಚಿನ ಅರಿವು ಮೂಡಲು ಅನುಕೂಲವಾಯಿತು. [[ಪ್ಯಾರಿಸ್]], [[ಲಂಡನ್]] ಮುಂತಾದೆಡೆ ಕೀಟಶಾಸ್ತ್ರ ಸಂಘಗಳು ಸ್ಧಾಪಿತವಾದುವು. ಈ ಕಾಲದ ಅತ್ಯಂತ ಪ್ರಮುಖ ಕೆಲಸ ಎಂದರೆ ಬ್ರಿಟಿಷ್ ಮ್ಯೂಸಿಯಂ ಕೀಟಗಳ ಬಗ್ಗೆ 20,000 ಪುಟಗಳ ಪುಸ್ತಕವನ್ನು ಪ್ರಕಟಿಸಿದ್ದು. ಅಲ್ಲಿಂದೀಚೆಗೆ ವ್ಯಾಲೇಸ್, ಬೇಟ್ಸ್, ಟ್ರೆಮನ್ ಮುಂತಾದವರು ಕೀಟಗಳ ಬಗ್ಗೆ ಹೆಚ್ಚಿನ ವ್ಯಾಸಂಗ ನಡೆಸಿ ಡಾರ್ವಿನ್ನನ ಜೀವಿ ವಿಕಾಸ ಸಿದ್ಧಾಂತಕ್ಕೆ ಹಲವಾರು ನಿದರ್ಶನಗಳನ್ನು ಒದಗಿಸಿದರು. ಅಲ್ಲದೆ ಕೀಟಶಾಸ್ತ್ರದಿಂದ ಜೀವಶಾಸ್ತ್ರದ ಹಲವು ವಿಭಾಗಗಳಿಗೆ ದೊರೆತ ಕೊಡುಗೆಗಳೂ ಅಪಾರ. ಅಬ್ರಾಕ್ಸಾಸ್ ಪತಂಗದ ಅದ್ಯಯನದಿಂದ ತಳಿಶಾಸ್ತ್ರದಲ್ಲಿ ಲಿಂಗ ಸಂಬಂದಿ ಜೀನ್‍ಗಳ ಬಗ್ಗೆ ಹೆಚ್ಚು ಅರಿಯಲು ಸಾದ್ಯವಾಯಿತು. ಹಾಗೆಯೆ ಡ್ರಾಸೋಫಿಲ ಎಂಬ ಹೆಣ್ನೊಣದಿಂದ ತಳಿಶಾಸ್ತ್ರಕ್ಕಾಗಿರುವ ಉಪಯೋಗ ಅಪಾರ. ಕೀಟಮನಶ್ಯಾಸ್ತ್ರದ ದಿಸೆಯಲ್ಲಿ ಜಾನ್ ಲಬಕ್, ಪೊರೆಲ್, ವ್ಯಾಸ್‍ಮ್ಯಾನ್, ಫೇಬರ್ ಮುಂತಾದವರು ಸಂಶೋಧನೆ ನಡೆಸಿ ಕೀಟಗಳ ವರ್ತನೆ ಮತ್ತು ಸಂಪರ್ಕ ವ್ಯವಸ್ಥೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಿದರು. ಹೀಗೆ ಕೀಟಶಾಸ್ತ್ರ ಮಾನವ ಕಲ್ಯಾಣದಲ್ಲಿ ತನ್ನದೇ ಆದ ವಿಶಿಷ್ಟ ಸ್ಧಾನವನ್ನು ಗಳಿಸಿದೆ.
 
== ಆಧುನಿಕ ಕೀಟಶಾಸ್ತ್ರ ==
"https://kn.wikipedia.org/wiki/ಕೀಟಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ