"ಆಧುನಿಕ ವಿಜ್ಞಾನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

→‎ಭೂವಿಜ್ಞಾನ: 9th kannad ವಿಜ್ಞಾನ
ಟ್ಯಾಗ್: 2017 source edit
(→‎ಭೂವಿಜ್ಞಾನ: 9th kannad ವಿಜ್ಞಾನ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
19ನೇ ಶತಮಾನದ ಮಧ್ಯಭಾಗದುದ್ದಕ್ಕೂ, ಭೂವಿಜ್ಞಾನದ ಲಕ್ಷ್ಯವು ವಿವರಣೆ ಮತ್ತು ವರ್ಗೀಕರಣದಿಂದ ಭೂಮಿಯ ಮೇಲ್ಮೈ ''ಹೇಗೆ'' ಬದಲಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದತ್ತ ಹೊರಳಿತು. ಈ ಕಾಲದಲ್ಲಿ ಪರ್ವತ ರೂಪುಗೊಳ್ಳುವ ಕುರಿತು ಮೊದಲ ಸಮಗ್ರ ಸಿದ್ಧಾಂತಗಳು ಪ್ರಸ್ತಾಪಗೊಂಡವು, ಹಾಗೆಯೇ ಭೂಕಂಪ ಮತ್ತು ಜ್ವಾಲಾಮುಖಿಗಳ ಕುರಿತು ಮೊದಲ ಆಧುನಿಕ ಸಿದ್ಧಾಂತಗಳು ಪ್ರಸ್ತಾಪವಾದವು. ಲೂಯಿಸ್ ಅಗಾಸ್ಸಿಜ್ ಮತ್ತು ಇತರರು [[ಹಿಮಯುಗ|ಹಿಮ ಯುಗ(ಐಸ್‌ ಏಜ್)]] ಆವರಿಸಿದ್ದ ಖಂಡಗಳ ವಾಸ್ತವವನ್ನು ನಿರೂಪಿಸಿದರು. ಜೊತೆಗೆ "ಭೂವಿಜ್ಞಾನದ ವಿದ್ಯಮಾನಗಳನ್ನು ಪ್ರವಾಹಗಳಿಂದ ಉಂಟಾಗಿದ್ದು ಎಂದು ಪರಿಗಣಿಸುವ ಭೂವಿಜ್ಞಾನಿಗಳಾದ (ಫ್ಲುವಿಅಲಿಸ್ಟ್ಸ್‌‌)" ಆಂಡ್ರ್ಯೂ ಕ್ರಾಂಬೀ ರಾಮ್ಸೆ ಅಂತವರು ನದಿಗಳು ಲಕ್ಷಾಂತರ ವರ್ಷಗಳು ಹರಿಯುತ್ತ, ನಂತರ ನದೀಕಣಿವೆಗಳು ರೂಪುಗೊಂಡಿವೆ ಎಂದು ಪ್ರತಿಪಾದಿಸಿದರು. ವಿಕಿರಣ(ರೇಡಿಯೋಆಕ್ಟಿವಿಟಿ)ಯ ಶೋಧದ ನಂತರ ರೇಡಿಯೋಮೆಟ್ರಿಕ್ ಡೇಟಿಂಗ್(ವಿಕಿರಣ ಬಳಸಿ ಆಯುಷ್ಯ ಕಂಡುಹಿಡಿಯುವ ವಿಧಾನ) ವಿಧಾನಗಳನ್ನು 20ನೇ ಶತಮಾನದ ಆರಂಭದಲ್ಲಿ ಅಭಿವೃದ್ಧಿಗೊಳಿಸಲಾಯಿತು. ಅಲ್‌ಫ್ರೆಡ್ ವೆಗ್ನರ್‌ನ "ಖಂಡಾಂತರ ದಿಕ್ಚ್ಯುತಿ" (ಕಾಂಟಿನೆಂಟಲ್‌ ಡ್ರಿಫ್ಟ್‌) ಸಿದ್ಧಾಂತವನ್ನು 1910ರಲ್ಲಿ ಪ್ರಸ್ತಾಪಿಸಿದಾಗ ಅದನ್ನು ಮೊದಲು ವ್ಯಾಪಕವಾಗಿ ನಿರಾಕರಿಸಲಾಯಿತು. ಆದರೆ 1950 ಮತ್ತು 1960ರ ಸುಮಾರಿಗೆ ಸಂಗ್ರಹಿಸಿದ ಹೊಸ ದತ್ತಾಂಶಗಳು ಭೂಪದರಗಳ ರಾಚನಿಕ ಬದಲಾವಣೆಗಳ/ವಿರೂಪಗಳ(ಪ್ಲೇಟ್‌ ಟೆಕ್ಟೋನಿಕ್ಸ್‌) ಸಿದ್ಧಾಂತವನ್ನು ಮುಂದಿಟ್ಟವು ಮತ್ತು ಇದು ಖಂಡಾಂತರ ದಿಕ್ಚ್ಯುತಿಗೆ ಒಂದು ಸಂಭಾವ್ಯ ಕಾರ್ಯವಿಧಾನವನ್ನು ಒದಗಿಸಿತು. ಪ್ಲೇಟ್‌ ಟೆಕ್ಟೋನಿಕ್ಸ್‌ ಪರಸ್ಪರ ಸಂಬಂಧವಿಲ್ಲದಂತೆ ತೋರುವ ಅನೇಕ ಭೂವೈಜ್ಞಾನಿಕ ವಿದ್ಯಮಾನಗಳಿಗೆ ಒಂದು ವ್ಯಾಪಕವಾದ ಏಕೀಕೃತ ವಿವರಣೆಯನ್ನು ನೀಡಿತು. 1970ರಿಂದ ಭೂವಿಜ್ಞಾನದಲ್ಲಿ ಇದು ಒಂದು ಏಕೀಕೃತ ತತ್ವವಾಗಿದೆ.
ಭೂವಿಜ್ಞಾನಿಗಳು ಪ್ಲೇಟ್‌ ಟೆಕ್ಟೋನಿಕ್ಸ್‌ ಅನ್ನು ಬಂಡೆಗಲ್ಲುಗಳ ಅಧ್ಯಯನದಿಂದ ಭೂಮಿಯನ್ನು ಒಂದು ಗ್ರಹವಾಗಿ ಅಧ್ಯಯನ ಮಾಡುವ ನಿಟ್ಟಿನಲ್ಲಿ ವಿಸ್ತೃತಗೊಳಿಸಿದ್ದಾರೆ. ಈ ರೂಪಾಂತರದ ಇನ್ನಿತರ ಅಂಶಗಳು ಇವುಗಳನ್ನು ಒಳಗೊಂಡಿವೆ: ಭೂಮಿಯ ಒಳಭಾಗದ ಭೂಭೌತಿಕ ಅಧ್ಯಯನ, ಪವನಶಾಸ್ತ್ರ (ಮೀಟರಾಲಜಿ) ಮತ್ತು ಸಮುದ್ರಶಾಸ್ತ್ರ (ಓಶನೋಗ್ರಫಿ)ಗಳನ್ನು "ಭೂಮಿ ವಿಜ್ಞಾನ"ಗಳಲ್ಲಿ ಒಂದು ಎಂದು ಪರಿಗಣಿಸಿ ಭೂವಿಜ್ಞಾನವನ್ನು ವರ್ಗೀಕರಿಸಿರುವುದು ಮತ್ತು ಸೌರಮಂಡಲದ ಬೇರೆ ಬಂಡೆಗಲ್ಲುಗಳ ಗ್ರಹಗಳೊಂದಿಗೆ ಭೂಮಿಯ ಹೋಲಿಕೆಗಳು.
 
====ಖಗೋಳಶಾಸ್ತ್ರ====
{{Main|History of astronomy}}
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/851756" ಇಂದ ಪಡೆಯಲ್ಪಟ್ಟಿದೆ