ಅಂಕೋಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
ಚುNo edit summary
೨೦ ನೇ ಸಾಲು:
}}
 
'''ಅಂಕೋಲಾ''' [[ಕರ್ನಾಟಕ]] ರಾಜ್ಯದ[[ಉತ್ತರ ಕನ್ನಡ]] ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ''ಅಕೊಲಾ'' ಎನ್ನುವ ಮರದಿಂದ ಈ ಹೆಸರು ಬಂದಿದೆ. ಇದು ಸತ್ಯಾಗ್ರಹಿಗಳ ತವರೂರು. ''ಕರ್ನಾಟಕದ ಬಾರ್ಡೊಲಿ'' ಎಂದು ಸಹ ಕರೆಯುವರು. ಅಂಕೋಲಾ "ಕರಿ ಈಸಾಡ"(ಮಾವಿನ ಹಣ್ಣುಗಳ ರಾಜ)ಅತ್ಯಂತ ಪ್ರಸಿದ್ದಿ ಪಡೆದಿದೆ. "ಚುಟುಕಿನ ಬ್ರಹ್ಮ" ಎಂದು ಖ್ಯಾತಿ ಆದ [[ದಿನಕರ ದೇಸಾಯಿ]]ಯವರ ತವರೂರು. "ಅಂಕೋಲಾ [[ಬಂಡಿಹಬ್ಬ]]" ನಾಡಿನಾದ್ಯಂತ ಖ್ಯಾತಿ ಪಡೆದಿದೆ.
 
ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ಶಿರಸಿ, ದಕ್ಷಿಣದಲ್ಲಿ ಕುಮಟ, ಉತ್ತರದಲ್ಲಿ ಕಾರವಾರ ಮತ್ತು ಯಲ್ಲಾಪುರ ತಾಲ್ಲೂಕುಗಳು ಈ ತಾಲ್ಲೂಕನ್ನು ಸುತ್ತುವರೆದಿವೆ. ಬೇಲೆಕೇರಿ, ಬಾಳಲೆ ಮತ್ತು ಭಾಸಗೋಡ ಇದರ ಹೋಬಳಿಗಳು. ತಾಲ್ಲೂಕಿನಲ್ಲಿ 86 ಗ್ರಾಮಗಳಿವೆ. ವಿಸ್ತೀರ್ಣ 971 ಚ.ಕಿಮೀ. ಜನಸಂಖ್ಯೆ 1,01,540. ತಾಲ್ಲೂಕಿನ ತೀರಪ್ರದೇಶ ಮರಳು ಭೂಮಿ. ಉಳಿದ ಭೂಭಾಗ ಕೆಂಪು ಜಂಬುಮಣ್ಣಿನಿಂದ ಕೂಡಿದೆ. ಮಳೆ ಹೆಚ್ಚು. ವಾರ್ಷಿಕ ಸರಾಸರಿ 3,405ಮಿಮೀ. ಬೇಡ್ತಿ ಅಥವಾ ಗಂಗಾವಳಿ ನದಿ ಈ ತಾಲ್ಲೂಕಿನ ಮಧ್ಯದಲ್ಲಿ ಈಶಾನ್ಯದಿಂದ ನೈಋತ್ಯಕ್ಕೆ ಹರಿದು ಅಂಕೋಲದ ದಕ್ಷಿಣದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವುದು. ಅಂಕೋಲದ ಬಳಿ ಅಂಕೋಲ ನದಿ ಇದೆ.ಇದರ ಪೂರ್ವ ಭಾಗವನ್ನು ಶಂಕದ ಹೊಳೆ ಎಂದು ಕರೆಯುತ್ತಾರೆ. ಇದರ ಉತ್ತರದಲ್ಲಿ ಬೇಲೆಕೇರಿ ನದಿ ಹರಿಯುವುದು. ಈ ನದಿಗಳು ತಾಲ್ಲೂಕಿನ ಬಹುತೇಕ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹರಿಯುವುದರಿಂದ ನೀರಾವರಿಗೆ ಹೆಚ್ಚು ಉಪಯುಕ್ತವಾಗಿಲ್ಲ. ಮಳೆನೀರಿನಿಂದ ಆಬಾದಾಗುವ ಅನೇಕ ತೋಟ ಗದ್ದೆಗಳಿವೆ. ಇಲ್ಲಿರುವ ಕೆಲವು ಬಾವಿಗಳಿಂದಲೂ ವ್ಯವಸಾಯಕ್ಕೆ ನೀರು ಒದಗುತ್ತದೆ. ಬತ್ತ, ಅಡಕೆ ಇಲ್ಲಿಯ ಮುಖ್ಯ ಬೆಳೆಗಳು. ತಾಲ್ಲೂಕಿನ ತೀರ ಪ್ರದೇಶ ಬಿಟ್ಟು ಅದರ ಪಕ್ಕದಲ್ಲೆ ಸಾಗುವ ಸುಮಾರು 5ರಿಂದ 8ಕಿಮೀ ಅಗಲದ ಒಳನಾಡ ಪ್ರದೇಶ ಬತ್ತದ ಗದ್ದೆಗಳಿಂದ, ಮಾವಿನ ತೋಪುಗಳಿಂದ ಗೇರು ಹಲಸು ಮತ್ತು ಇತರ ಫಲವೃಕಗಳಿಂದ ಕೂಡಿದೆ. ಇದರ ಪಕ್ಕದ ಸಣ್ಣ ಗುಡ್ಡಪ್ರದೇಶದಲ್ಲಿ ಹುಲ್ಲು ಬೆಳೆಯುತ್ತದೆ. ಇವುಗಳ ಪೂರ್ವಕ್ಕೆ ಎತ್ತರವಾದ ದಟ್ಟ ಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶವಿದೆ. ಒಟ್ಟು 75,374 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿನ ಕಾಡುಗಳಲ್ಲಿ ಬೆಲೆಬಾಳುವ ಮತ್ತಿ, ಹೊನ್ನೆ, ನಂದಿ ಮುಂತಾದ ಮರಗಳು ಬೆಳೆಯುತ್ತವೆ. ತೀರಪ್ರದೇಶದಲ್ಲಿ ತೆಂಗಿನ ಮರಗಳಿವೆ. ಇಲ್ಲಿನ ಕೆಲವು ಗ್ರಾಮಗಳು ಆರೋಗ್ಯದಾಯಕವೆಂದು ಪರಿಗಣಿತವಾಗಿವೆ.ಗಂಗಾವಳಿ ನದಿಯಲ್ಲಿ ಕೆಲವು ಕಿಮೀ ದೂರ ಸಣ್ಣ ದೋಣಿಗಳ ಸಂಚಾರ ಉಂಟು. ಕಾರವಾರ, ಹೊನ್ನಾವರ, ಮಂಗಳೂರುಗಳೊಡನೆ ಈ ತಾಲ್ಲೂಕು ಸಂಪರ್ಕ ಹೊಂದಿದೆ. ಅಂಕೋಲ ಪಟ್ಟಣದ ಉತ್ತರಕ್ಕೆ 8ಕಿಮೀ ದೂರದಲ್ಲಿರುವ ಅವರ್ಸೆ ಗ್ರಾಮದಲ್ಲಿ ಕಾತ್ಯಾಯಿನಿ ದೇವಾಲಯವಿದೆ. ಇಲ್ಲಿಯ ವಿಗ್ರಹ ಸಮುದ್ರದಲ್ಲಿ ದೊರೆತದ್ದೆಂದು ಪ್ರತೀತಿಯುಂಟು. ನವರಾತ್ರಿಯ ಒಂಬತ್ತು ದಿನಗಳೂ ಇಲ್ಲಿ ಜಾತ್ರೆ ನಡೆಯುವುದು. ಅಂಕೋಲದ ಉತರಕ್ಕೆ ಸುಮಾರು 6ಕಿಮೀ ದೂರದೆಲ್ಲಿ ಬೇಲೆಕೇರಿ ನದಿಯ ದಡದಲ್ಲಿರುವ ಬಂದರು, ಬೇಲೆಕೇರಿ ಗ್ರಾಮ. ಇದೊಂದು ಆರೋಗ್ಯಧಾಮವೆಂದು ಪ್ರಸಿದ್ಧವಾಗಿದೆ. ಅಂಕೋಲದ ದಕಿಣಕ್ಕೆ 8ಕಿಮೀ ದೂರದಲ್ಲಿರುವ ಗಂಗಾವಳಿ ಗ್ರಾಮ ಗಂಗಾವಳಿ ನದಿಯ ದಡದಲ್ಲಿದೆ. ಇಲ್ಲಿರುವ ಗಂಗೆ ದೇವಾಲಯ ಪ್ರಸಿದ್ಧ. ಗಂಗಾಷ್ಟಮಿಯಂದು ಇಲ್ಲಿ ಜಾತ್ರೆ ನಡೆಯುವುದು. ಗಂಗಾವಳಿ ಗ್ರಾಮಕ್ಕೆದುರಾಗಿ ನದಿಯ ಉತ್ತರ ದಂಡೆಯ ಮೇಲೆ ಪ್ರಕೃತಿ ಸೌಂದರ್ಯದಿಂದ ಕೂಡಿದ [[ಮಂಜಗುಣಿ]] ಗ್ರಾಮವಿದೆ.
"https://kn.wikipedia.org/wiki/ಅಂಕೋಲಾ" ಇಂದ ಪಡೆಯಲ್ಪಟ್ಟಿದೆ