"ಕೋಲೆಬಸವ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ವಿಕೀಕರಣ)
ಚು (added Category:ಜಾನಪದ using HotCat)
 
ಸಾಮಾನ್ಯವಾಗಿ ಕೋಲೆಬಸವ ಆಡಿಸುವವರು ಕಡುಬಡವರು. ವಂಶಪಾರಂಪರ್ಯವಾಗಿ ತಮ್ಮ ಈ ಕಸಬನ್ನು ಅವರು ಮುಂದುವರಿಸಿಕೊಂಡು ಬಂದವರಾಗಿರುತ್ತಾರೆ. ಮನೆಮಠ ಇದ್ದರೂ ಅವರಿಗೆ ಅದರ ಕಡೆ ಗಮನವಿರುವುದಿಲ್ಲ. ವರ್ಷವೆಲ್ಲ ಊರಿಂದ ಊರಿಗೆ ವಲಸೆ ಹೋಗಿ ಬಸವನನ್ನು ಆಡಿಸಿ ಭಿಕ್ಷೆ ಬೇಡಿ ಜೀವನ ಸಾಗಿಸುವುದೇ ಇವರಿಗೆ ಪ್ರಿಯ. ಈ ಜನಾಂಗದವರಲ್ಲಿ ಕೆಲವರಿಗೆ ಈಗೀಗ ಅಲ್ಪ ಸ್ವಲ್ಪ ಜಮೀನು ಲಭ್ಯವಾಗಿದ್ದು ಅಂಥವರು ಬೇಸಾಯಕ್ಕೆ ಇಳಿದಿದ್ದಾರೆ. ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಕಸಬಿಗೆ ತಕ್ಕ ಮಾತಿನ ಚಮತ್ಕಾರ ಇವರಲ್ಲಿ ಬೆಳೆದುಬಂದಿದೆ. ಅದರಿಂದಾಗಿ ಇವರ ಜೀವನ ಇಂದಿಗೂ ಸುಗಮವಾಗಿ ಸಾಗುತ್ತಿದೆ. ಮೂಕಪ್ರಾಣಿಗಳನ್ನು ಜೊತೆ ಹಾಕಿಕೊಂಡು ರಾಮಸೀತೆಯರ ಹೆಸರಿಟ್ಟು ಆಡಿಸಿ ಜನರಲ್ಲಿ ಒಂದು ಕಡೆ ಪೌರಾಣಿಕ ಪ್ರಜ್ಞೆಯನ್ನು ಇವರು ಎಚ್ಚರಿಸುತ್ತಾರಲ್ಲದೆ ಸಾಮಾನ್ಯ ಜನರ ಮದುವೆ ಕಲಾಪವನ್ನು ಪ್ರಹಸನ ರೂಪದಲ್ಲಿ ಅಡಿ ತೋರಿಸಿ ಅವರನ್ನು ಸಂತೋಷಗೊಳಿಸುವ ಕೆಲಸವನ್ನೂ ಮಾಡುತ್ತಾರೆ. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/  ಕೋಲೆಬಸವ}}
 
[[ವರ್ಗ:ಜಾನಪದ]]
೯,೦೨೬

edits

"https://kn.wikipedia.org/wiki/ವಿಶೇಷ:MobileDiff/808329" ಇಂದ ಪಡೆಯಲ್ಪಟ್ಟಿದೆ