ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
'''ಗ''', [[ಕನ್ನಡ ವರ್ಣಮಾಲೆ|ಕನ್ನಡ ವರ್ಣಮಾಲೆಯ]] ಕ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು [[ವ್ಯಂಜನ]].
{{ಚುಟುಕು}}
 
ಕನ್ನಡ ವರ್ಣಮಾಲೆಯಲ್ಲಿನ ಕ ವರ್ಗದಲ್ಲಿ ಮೂರನೆಯದು. ಅಲ್ಪಪ್ರಾಣಾಕ್ಷರ. ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಕೆಳಭಾಗದ ರೇಖೆಯಿಲ್ಲದಿರುವ ಸಮಭುಜ ತ್ರಿಕೋಣದಂತೆ ಕಾಣುವ ಮೌರ್ಯರ ಕಾಲದ ಈ ಅಕ್ಷರದ ಸ್ವರೂಪ ಶಾತವಾಹನ ಕಾಲದಲ್ಲಿ ದುಂಡಗಾಗಿ ಹಿಡಿ ಮತ್ತು ನಾಲೆ ಇಲ್ಲದ ಘಂಟಾಕೃತಿಯನ್ನು ತಾಳುತ್ತದೆ. ಕದಂಬರ ಶಾಸನಗಳಲ್ಲಿ ಪೇಟಿಕಾಶಿರದ ತಲೆಕಟ್ಟು ಬಂದು ಸೇರುತ್ತದೆ. ಅಲ್ಲಿಂದ ಮುಂದೆ ಈ ಅಕ್ಷರ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿದು ಈಗಿರುವ ರೂಪವನ್ನು ತಾಳುತ್ತದೆ. ಪ್ರಾಚೀನ ಬ್ರಾಹ್ಮೀ ಲಿಪಿಯಿಂದ ಹೆಚ್ಚು ಬದಲಾವಣೆ ಹೊಂದದ ಅಕ್ಷರಗಳಲ್ಲಿ ಇದು ಮುಖ್ಯವಾದುದು. ಈ ಅಕ್ಷರ ಕಂಠ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. (ಎ.ವಿ.ಎನ್.)
 
 
[[ವರ್ಗ:ಕನ್ನಡ ಅಕ್ಷರ]]
"https://kn.wikipedia.org/wiki/ಗ" ಇಂದ ಪಡೆಯಲ್ಪಟ್ಟಿದೆ